ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (UGC) 2023 ರ ಜನವರಿ ಸೆಮಿಸ್ಟರ್‌ಗೆ ಆನ್‌ಲೈನ್ ಕೋರ್ಸ್‌ಗಳ (MOOCs) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಸ್ತುತ swayam.gov.in ನಲ್ಲಿ SWAYAM ಪೋರ್ಟಲ್‌ನಲ್ಲಿ ಈ ಆನ್ಲೈನ್ ಕೋರ್ಸ್ಗಳು ಲಭ್ಯವಿದೆ. ಜನವರಿ ಸೆಮಿಸ್ಟರ್‌ಗಾಗಿ ಸ್ವಯಂ ಪ್ಲಾಟ್‌ಫಾರ್ಮ್‌ನಲ್ಲಿ UGC, CEC, llM-B, NPTEL, IGNOU ಮೂಲಕ ನೀಡಲು ಸಿದ್ಧವಾಗಿರುವ MOOC ಗಳ ಪಟ್ಟಿಯನ್ನು ನೀವೇ ಸ್ವತಃ ನೋಡಬಹುದು SWAYAM ಪೋರ್ಟಲ್‌ನಲ್ಲಿಯೂ ಅಧಿಕೃತ ಮಾಹಿತಿ ಪಡೆದುಕೊಳ್ಳಬಹುದು.
ರಾಷ್ಟ್ರೀಯ ಸಂಯೋಜಕರು ನೀಡುವ MOOC ಗಳ ಪಟ್ಟಿಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಬಿಡುಗಡೆ ಮಾಡಿದೆ.Consortium for Educational Communication (CEC), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIM-B), ನ್ಯಾಷನಲ್ ಪ್ರೋಗ್ರಾಮ್ ಆನ್ ಟೆಕ್ನಾಲಜಿ ಎನ್ಹಾನ್ಸ್ ಲರ್ನಿಂಗ್ (NPTEL) ಮತ್ತು ಇಂದಿರಾ ಗಾಂಧಿ ಮುಕ್ತ ರಾಷ್ಟ್ರೀಯ ವಿಶ್ವವಿದ್ಯಾಲಯ (IGNOU) ಈ ಪಟ್ಟಿಯಲ್ಲಿದೆ.
MOOCಗಳು ದೇಶದ ಉನ್ನತ್ ಭಾರತ್ ಅಭಿಯಾನದ (UBA) ಭಾಗವಾಗಿದೆ. ಬೌದ್ಧರ ಪ್ರಮುಖ ಪ್ರವಾಸಿ ಮತ್ತು ಸಾಂಸ್ಕೃತಿಕ ತಾಣವಾಗಿ ಭಾರತವನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ . ಬೌದ್ಧ ಇತಿಹಾಸ, ಬೌದ್ಧ ತತ್ತ್ವಶಾಸ್ತ್ರ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆ ಅಥವಾ ನಾಗರಿಕ ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಜವಾಬ್ದಾರಿಯ ಕುರಿತು ಹೆಚ್ಚುವರಿ ಕೋರ್ಸ್ ಅನ್ನು ಸಹ ಒಳಗೊಂಡಿದೆ. SWAYAM ಬೋರ್ಡ್ ಒದಗಿಸಿದ ಮಾಹಿತಿಯ ಪ್ರಕಾರ ಕಳೆದ ಎರಡು ಶೈಕ್ಷಣಿಕ ವರ್ಷಗಳಿಂದ ಸುಮಾರು 2 ಲಕ್ಷ ವಿದ್ಯಾರ್ಥಿಗಳು SWAYAM ಕೋರ್ಸ್‌ಗಳ ಕ್ರೆಡಿಟ್ ವರ್ಗಾವಣೆಯಿಂದ ಪ್ರಯೋಜನ ಪಡೆದಿದ್ದಾರೆ.
ಇದನ್ನೂ ಓದಿ: ಈ ಅರ್ಹತೆಗಳಿದ್ರೆ CSIR Scientist Award ಸಿಗೋದು ಪಕ್ಕಾ!
ಈ ಮೇಲೆ ಪಟ್ಟಿ ಮಾಡಲಾಗಿರುವ ಉನ್ನತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸೇರಿಸಕೊಳ್ಳಲು ಹಲವಾರು ವಿದ್ಯಾರ್ಥಿಗಳು ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ಆದರೆ ಅಲ್ಲಿನ ಕೋರ್ಸ್ಗಳನ್ನು ಆನ್ಲೈನ್ ಮೂಲಕವಾದರೂ ವಿದ್ಯಾರ್ಥಿಗಳಿಗೆ ನೀಡುವ ಸಕ್ರಿಯ ಕಲಿಕೆಯ ಅಧ್ಯಯನ ವೆಬ್‌ಗಳ ಮೂಲಕ ಆನ್‌ಲೈನ್ ಕಲಿಕಾ ಕೋರ್ಸ್ಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಸಲುವಾಗಿ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ಆಯೋಗವು ವಿದ್ಯಾರ್ಥಿಗಳು ಮತ್ತು ಕಲಿಯುವವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಕೋರ್ಸ್‌ಗಳಿಗೆ ದಾಖಲಾಗುವಂತೆ ಮತ್ತು ಅವರ ಸಂಬಂಧಿತ HEI ಗಳಿಂದ ಕ್ರೆಡಿಟ್ ವರ್ಗಾವಣೆಯ ಪ್ರಯೋಜನವನ್ನು ಪಡೆಯುವಂತೆ ಕೇಳಿಕೊಂಡಿದೆ.
SWAYAM MOOCs ಕೋರ್ಸ್‌ಗಳ ವೇಳಾಪಟ್ಟಿ ಒಳಗೊಂಡಿದೆ:
ಭಾರತೀಯ ಬೌದ್ಧಧರ್ಮದ ಇತಿಹಾಸ: ದಾಖಲಾತಿಗೆ ಕೊನೆಯ ದಿನಾಂಕ ಮಾರ್ಚ್ 15. ಕೋರ್ಸ್ ಫೆಬ್ರವರಿ 6 ರಂದು ಪ್ರಾರಂಭವಾಗುತ್ತದೆ ಮತ್ತು ಮೇ 22 ರಂದು ಕೊನೆಗೊಳ್ಳುತ್ತದೆ. ಇದರ ನಡುವೆ ಅಭಿಧಮ್ಮ (ಪಾಲಿ) ಮತ್ತು ಬೌದ್ಧ ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಕೋರ್ಸ್ ಕೂಡಾ ಮಾಡಬಹುದು.
ಕಮ್ಯುನಿಟಿ ಎಂಗೇಜ್ಮೆಂಟ್ ಆ್ಯಂಡ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ: ದಾಖಲಾತಿ ಅಂತಿಮ ದಿನಾಂಕ ಮಾರ್ಚ್ 15. ಕೋರ್ಸ್ ಫೆಬ್ರವರಿ 6 ರಂದು ಪ್ರಾರಂಭವಾಗುತ್ತದೆ ಮತ್ತು ಕೋರ್ಸ್ ಏಪ್ರಿಲ್ 17 ರಂದು ಕೊನೆಗೊಳ್ಳುತ್ತದೆ. ಹೀಗೆ ನಾನಾ ರೀತಿಯ ಆನ್ಲೈನ್ ಕೋರ್ಸ್ಗಳು ಲಭ್ಯವಿದ್ದು ನೀವು ಇವುಗಳನ್ನು ಆಯ್ಕೆ ಮಾಡಿಕೊಂಡು ನಿಮ್ಮಿಷ್ಟದ ಕೋರ್ಸ್ ಮಾಡಬಹುದು.
ಪದವಿ ಹಾಗೂ ಸ್ನಾತಕೋತ್ತರ ಪದವಿ ಮಾಡಿರುವ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರ 4 ಆನ್ ಲೈನ್ ಕೋರ್ಸ್ ಗಳನ್ನು ಪರಿಚಯಿಸಿದೆ. ಎಲ್ಲರಿಗೂ ಸಮಾನ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಸ್ವಯಂ ಆನ್ಲೈನ್ ಪ್ಲಾಟ್ಫಾರ್ಮ್ ನಲ್ಲಿ ಈ ಕೋರ್ಸ್ ಗಳನ್ನು ಪ್ರಾರಂಭಿಸಲಾಗಿದೆ. ಈಗ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (UGC) ಸ್ವಯಂ ಮೂಲಕ ವಿದ್ಯಾರ್ಥಿಗಳಿಗೆ ನಾಲ್ಕು ಆನ್ ಲೈನ್ ಕೋರ್ಸ್ ಗಳನ್ನು ನೀಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ