ಭಾರತದಲ್ಲಿ ವಿದೇಶಿ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಈಗಾಗಲೇ ಅನುಮತಿ ದೊರೆತಿದೆ. ಧನಸಹಾಯ ಆಯೋಗ (UGC) ಭಾರತದಲ್ಲಿ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ (FHEIs) ಕ್ಯಾಂಪಸ್‌ಗಳ ಸ್ಥಾಪನೆ ಮತ್ತು ಕಾರ್ಯಾಚರಣೆಯ ಕರಡು ಕುರಿತು ಕಾಮೆಂಟ್‌ಗಳು, ಸಲಹೆಗಳು ಮತ್ತು ಪ್ರತಿಕ್ರಿಯೆಯನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಿದೆ. ನೀವು ಈ ಕುರಿತು ನಿಮ್ಮ ಅಭಿಪ್ರಾಯಗಳಿದ್ದರೆ ಹಂಚಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಇತ್ತೀಚಿನ ನವೀಕರಣದ ಪ್ರಕಾರ ಮಧ್ಯಸ್ಥಗಾರರಿಂದ ಯುಜಿಸಿ ವಿನಂತಿಗಳನ್ನು ಸ್ವೀಕರಿಸಿದ ನಂತರ ಗಡುವನ್ನು ಫೆಬ್ರವರಿ 20 ರವರೆಗೆ ವಿಸ್ತರಿಸಲಾಗಿದೆ.
ಈ ಮೊದಲು ಅಭಿಪ್ರಾಯ ಸಲ್ಲಿಕೆಗೆ ಕೊನೆ ದಿನಾಂಕ ಇಂದು ಅಂದರೆ ಫೆಬ್ರವರಿ 3 ಕೊನೆಯ ದಿನಾಂಕವಾಗಿತ್ತು ಮತ್ತು ಅದಕ್ಕೂ ಮೊದಲು ಜನವರಿ 18 ಆಗಿತ್ತು. ಆದರೆ ಈ ದಿನಾಂಕವನ್ನು ಇನ್ನೂ ಹೆಚ್ಚಿನ ದಿನ ವಿಸ್ತರಿಸಲಾಗಿದೆ. 20 ಫೆಬ್ರವರಿ 2023 ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿಮ್ಮ ಸಲಹೆ ಹಾಗೂ ಸೂಚನೆಗಳಿದ್ದರೆ ugcforeigncollaboration@gmail.com ಗೆ ಕಳುಹಿಸಬೇಕು ಎಂದು ಆಯೋಗವು ಮತ್ತಷ್ಟು ಮಾಹಿತಿ ನೀಡಿದೆ.
ಈ ಪ್ರಕ್ರಿಯೆಯು ಮುಗಿದ ನಂತರವಷ್ಟೇ ಭಾರತದಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್ ಕೆಲವು ಮಾಹಿತಿ ಹಾಗೂ ಸೂಚನೆಗಳನ್ನು ಅನುಸರಿಸಲು ನಿರ್ಧಾರ ಕೈಗೊಂಡಿದ್ದಾರೆ. ವಿದೇಶಿ ವಿಶ್ವವಿದ್ಯಾನಿಲಯಗಳ ಮೇಲಿನ UGC ಮಾರ್ಗಸೂಚಿಗಳ ಪ್ರಕಾರ ವಿಶ್ವಾದ್ಯಂತ ಒಟ್ಟಾರೆ 500ರಲ್ಲಿ ಉತ್ತಮ ಶ್ರೇಣಿಯಲ್ಲಿರುವ ವಿದೇಶಿ ವಿಶ್ವವಿದ್ಯಾಲಯಗಳಿಗೆ ಮಾತ್ರ ಇಲ್ಲಿ ಸ್ಥಾಪನೆಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Education News: ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 1.12 ಲಕ್ಷ ಕೋಟಿ ಘೋಷಣೆ, ಕ್ರಾಂತಿಕಾರಕ ನಿರ್ಧಾರ ಎಂದ ತಜ್ಞರು
ಯಾವ ವಿಶ್ವವಿದ್ಯಾಲಯಗಳು ತಮ್ಮ ಅಸ್ಥಿತ್ವವನ್ನು ಭಾರತದಲ್ಲಿ ಸ್ಥಾಪಿಸಲು ಬಯಸುತ್ತಾರೋ ಅವರು ಈಗಾಗಲೇ ತಮ್ಮ ಅರ್ಜಿಯನ್ನು ಸಲ್ಲಿಸ ಬೇಕು ಎಂಬ ಮಾಹಿತಿಯನ್ನು ಯುಜಿಸಿ ಈಗಾಗಲೇ ನೀಡಿತ್ತು. ಅರ್ಜಿದಾರ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ತಮ್ಮ ಪ್ರಾಸ್ಪೆಕ್ಟಸ್ ಅನ್ನು ಬಿಡುಗಡೆ ಮಾಡಬೇಕು ಎಂದು ಯುಜಿಸಿ ಈ ಹಿಂದೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು.
ಮಾಹಿತಿ ಕರಪತ್ರ ಅಥವಾ ಪ್ರಾಸ್ಪೆಕ್ಟಸ್ ಪ್ರತಿ ಪ್ರೋಗ್ರಾಂನಲ್ಲಿನ ಸೀಟುಗಳ ಸಂಖ್ಯೆ, ಶುಲ್ಕ ರಚನೆ, ಅರ್ಹತಾ ಮಾನದಂಡಗಳು, ಪ್ರವೇಶ ವಿಧಾನ ಮತ್ತು ಅವರ ವೆಬ್‌ಸೈಟ್‌ನಲ್ಲಿ ಮರುಪಾವತಿ ನೀತಿಯ ಮಾಹಿತಿಯನ್ನು ಒಳಗೊಂಡಿರಬೇಕು ಎಂದು ತಿಳಿಸಲಾಗಿದೆ. ಪ್ರವೇಶ ಪ್ರಕ್ರಿಯೆಯು ಪ್ರಾರಂಭವಾಗುವ ಕನಿಷ್ಠ 60 ದಿನಗಳ ಮೊದಲು ಶೈಕ್ಷಣಿಕ ಪ್ರಾಸ್ಪೆಕ್ಟಸ್ ಲಭ್ಯವಿರಬೇಕು. ಭಾರತದಲ್ಲಿ ಕ್ಯಾಂಪಸ್‌ಗಳನ್ನು ಹೊಂದಿರುವ ವಿದೇಶಿ ವಿಶ್ವವಿದ್ಯಾಲಯಗಳು ಆಫ್‌ಲೈನ್ ಮೋಡ್‌ನಲ್ಲಿ ಮಾತ್ರ ಶಿಕ್ಷಣ ನೀಡಬೇಕು ಎಂದು ತಿಳಿಸಲಾಗಿತ್ತು.
ನಿರ್ದಿಷ್ಟ ಸಂಸ್ಥೆಗಳಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಆನ್‌ಲೈನ್ ಅಥವಾ ದೂರಶಿಕ್ಷಣ ಲಭ್ಯವಿರುವುದಿಲ್ಲ. ಆಯೋಗವು ನಿಗದಿಪಡಿಸಿದ ಎಲ್ಲಾ ಮಾನದಂಡಗಳನ್ನು ಪೂರೈಸುವ ಅರ್ಜಿದಾರ ವಿಶ್ವವಿದ್ಯಾಲಯಗಳು 10 ವರ್ಷಗಳವರೆಗೆ ಮಾತ್ರ ಅನುಮತಿಯನ್ನು ಪಡೆದಿರುತ್ತವೆ ಎಂದು ಹೇಳಲಾಗಿದೆ. ಕೆಲವು ಷರತ್ತುಗಳನ್ನು ಪೂರೈಸಿದ ನಂತರವೇ ಅದನ್ನು ಒಂಬತ್ತನೇ ವರ್ಷದಲ್ಲಿ ನವೀಕರಿಸಲಾಗುತ್ತದೆ.
ಸ್ಥಾಪನೆಯ ಕುರಿತು ಈ ಹಿಂದಿನ ಮಾಹಿತಿ
ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್ ವಿದೇಶದಲ್ಲಿ ಅಭ್ಯಾಸಮಾಡುವ ವಿದ್ಯಾರ್ಥಿಗಳ ಕುರಿತು ಮಾತನಾಡಿದ್ದಾರೆ. ಅವರು ಕೆಲವೊಂದು ಮುಖ್ಯ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಅಂತರರಾಷ್ಟ್ರೀಯ ಶಿಕ್ಷಣಕ್ಕೆ ಪ್ರವೇಶವನ್ನು ಒದಗಿಸಲಾಗುತ್ತದೆ. ಈ ಕುರಿತು ಕೆಲವು ನಿಯಮಗಳನ್ನು ಬಿಡುಗಡೆ ಮಾಡಲಾಗಿದೆ. ವಿದೇಶಿ ವಿಶ್ವವಿದ್ಯಾಲಯಗಳು ತಮ್ಮ ಪ್ರವೇಶ ಪ್ರಕ್ರಿಯೆಗಳು ಮತ್ತು ಶುಲ್ಕ ರಚನೆಯನ್ನು ನಿರ್ಧರಿಸುವಲ್ಲಿ ಸ್ವಾಯತ್ತತೆಯೊಂದಿಗೆ ಭಾರತದಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ