• ಹೋಂ
  • »
  • ನ್ಯೂಸ್
  • »
  • Jobs
  • »
  • UGC NET June 2023: ವಿದ್ಯಾರ್ಥಿಗಳೇ ಗಮನಿಸಿ! ಮೇ 15 ರಿಂದ ಆರಂಭವಾಗಲಿದೆ ನೋಂದಣಿ

UGC NET June 2023: ವಿದ್ಯಾರ್ಥಿಗಳೇ ಗಮನಿಸಿ! ಮೇ 15 ರಿಂದ ಆರಂಭವಾಗಲಿದೆ ನೋಂದಣಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 UGC NET ಪರೀಕ್ಷೆಯನ್ನು 83 ವಿಷಯಗಳಿಗೆ CBT ಮೋಡ್‌ನಲ್ಲಿ ನಡೆಸಲಾಗುತ್ತದೆ. ಆಬ್ಜೆಕ್ಟಿವ್ ಪ್ರಕಾರದ ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) 3 ಗಂಟೆಗಳ ಅವಧಿಯ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಸ್ವರೂಪದಲ್ಲಿ ಕೇಳಲಾಗುತ್ತದೆ.

  • Share this:

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ UGC NET ಜೂನ್ 2023ರ ಸುತ್ತನ್ನು ಬಿಡುಗಡೆ ಮಾಡಲಿದೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) 2023 ಗೆ ನೋಂದಾಯಿಸಲು ಬಯಸುವ ಅಭ್ಯರ್ಥಿಗಳುugcnet.nta.nic.inನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು UGC ಅಧ್ಯಕ್ಷರು ಈ ಹಿಂದೆ ವಿದ್ಯಾರ್ಥಿಗಳಿಗೆ ತಿಳಿಸಿದ್ದರು. UGC NET ಜೂನ್ 2023 ಸೆಷನ್​ ಪರೀಕ್ಷೆಗಳನ್ನು ಜೂನ್ 13 ಮತ್ತು 22, 2023 ರ ನಡುವೆ ನಡೆಸಲಾಗುವುದು ಎಂದು ತಿಳಿಸಲಾಗಿತ್ತು. ಆ ಪ್ರಕಾರ ಪೇಪರ್​ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 


ಪೇಪರ್ 1- ಟೀಚಿಂಗ್ ಮತ್ತು ರಿಸರ್ಚ್ ಆಪ್ಟಿಟ್ಯೂಡ್ - 100 ಅಂಕಗಳು


ಪೇಪರ್ 2- ವಿಷಯ-ನಿರ್ದಿಷ್ಟ ಪತ್ರಿಕೆ - 200 ಅಂಕಗಳು.


ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ಹೊಂದಿರುವ ಒಟ್ಟು 150 ಪ್ರಶ್ನೆಗಳನ್ನು ಕೇಳಲಾಗುತ್ತದೆ.


ಪೇಪರ್ ಒಂದರಲ್ಲಿರುವ  ಪ್ರಶ್ನೆಗಳು ಅಭ್ಯರ್ಥಿಯ ಬೋಧನೆ/ಸಂಶೋಧನಾ ಸಾಮರ್ಥ್ಯವನ್ನು ನಿರ್ಣಯಿಸುವ ಉದ್ದೇಶದಿಂದ ಮಾಡಲಾಗುತ್ತದೆ. ಇದು ಪ್ರಾಥಮಿಕವಾಗಿ ಅಭ್ಯರ್ಥಿಯ ತಾರ್ಕಿಕ ಸಾಮರ್ಥ್ಯ, ಓದುವ ಗ್ರಹಿಕೆ, ವಿಭಿನ್ನ ಚಿಂತನೆ ಮತ್ತು ಸಾಮಾನ್ಯ ಅರಿವಿನ ಪರೀಕ್ಷೆ ಮಾಡಲು ಬಳಸಲಾಗುತ್ತದೆ ಟ್ಟು 50 ಪ್ರಶ್ನೆಗಳಿರುತ್ತವೆ.


ಇದನ್ನೂ ಓದಿ: NEP ಪ್ರಕಾರ ನೀವು PHD ಮಾಡಲು ಸ್ನಾತಕೋತ್ತರ ಪದವಿ ಅಗತ್ಯವಿಲ್ಲ!


ಪೇಪರ್ 2 ಅಭ್ಯರ್ಥಿಯು ಆಯ್ಕೆ ಮಾಡಿದ ವಿಷಯವನ್ನು ಅವಲಂಬಿಸಿರುತ್ತದೆ. ಅದರಲ್ಲಿ ನಿಮ್ಮ ಜ್ಞಾನವನ್ನು ಮೌಲ್ಯಮಾಪನ ಮಾಡಲಾಗುತ್ತದೆ. 100 ಪ್ರಶ್ನೆಗಳಿರುತ್ತವೆ.


ಅರ್ಜಿ ಶುಲ್ಕದ ಮಾಹಿತಿ 


ಕಾಯ್ದಿರಿಸದ ವರ್ಗದ ಅಭ್ಯರ್ಥಿಗಳು ರೂ. 1100 ಪಾವತಿಸಬೇಕು. ಆದರೆ EWS, OBC-NCL ಅಭ್ಯರ್ಥಿಗಳಿಗೆ ಶುಲ್ಕ ರೂ. 550 ಪಾವತಿಸಬೇಕು. SC, ST, PWD, ತೃತೀಯಲಿಂಗಿ ವರ್ಗದ ಅಭ್ಯರ್ಥಿಗಳು ರೂ.275 ಶುಲ್ಕವನ್ನು ಪಾವತಿಸಬೇಕು.
UGC-NET ಎಂಬುದು ಭಾರತೀಯ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ 'ಸಹಾಯಕ ಪ್ರೊಫೆಸರ್' ಮತ್ತು 'ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್' ಅರ್ಹತೆಯನ್ನು ನಿರ್ಧರಿಸುವ ಪರೀಕ್ಷೆಯಾಗಿದೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಫೆಲೋಶಿಪ್ (NFSC), ಇತರ ಹಿಂದುಳಿದ ವರ್ಗಗಳಿಗೆ ರಾಷ್ಟ್ರೀಯ ಫೆಲೋಶಿಪ್ (NFOBC), ಅಲ್ಪಸಂಖ್ಯಾತರಿಗಾಗಿ ಮೌಲಾನಾ ಆಜಾದ್ ರಾಷ್ಟ್ರೀಯ ಫೆಲೋಶಿಪ್ ಯೋಜನೆ (MANF) 2022-23 ಹಣಕಾಸು ವರ್ಷದಿಂದ ಸ್ಥಗಿತಗೊಂಡಿದೆ.


ಫಲಿತಾಂಶಗಳು
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಏಪ್ರಿಲ್ 6 ರಂದು ರಾಷ್ಟ್ರೀಯ ಅರ್ಹತಾ ಪರೀಕ್ಷೆ-ಡಿಸೆಂಬರ್ 2022 ರ ಅಂತಿಮ ಕೀ ಆನ್ಸರ್​​ ಬಿಡುಗಡೆ ಮಾಡಿದೆ. ಅದು ಗುರುವಾರ ಸಂಜೆ ಫಲಿತಾಂಶಗಳನ್ನು ಪ್ರಕಟಿಸಿದೆ. ವಿಶ್ವವಿದ್ಯಾನಿಲಯಗಳಲ್ಲಿ ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಸ್ಪರ್ಧಿಸಲು ಬಳಸುವ ಈ ಪರೀಕ್ಷೆಯು ಫೆಬ್ರವರಿ 21 ರಿಂದ ಮಾರ್ಚ್ 16 ರವರೆಗೆ ನಡೆದಿರುವುದು ತಿಳಿದು ಬಂದಿದೆ. ದೇಶಾದ್ಯಂತ 663 ಪರೀಕ್ಷಾ ಕೇಂದ್ರಗಳಲ್ಲಿ 83 ವಿಷಯಗಳಲ್ಲಿ 8,34,537 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.


 UGC NET ಜೂನ್ 2023


NTA ಯುಜಿಸಿ NET ಅರ್ಜಿಗಳನ್ನು ಪರೀಕ್ಷೆಯ ದಿನಾಂಕಗಳನ್ನು ಮುಕ್ತಾಯಗೊಳಿಸಿದ ನಂತರ ಎರಡು ತಿಂಗಳ ಮೊದಲು ಬಿಡುಗಡೆ ಮಾಡುತ್ತದೆ. UGC NET ಜೂನ್ 2023 ರ ಪರೀಕ್ಷೆಗಳು ಜೂನ್ 13 ರಂದು ಪ್ರಾರಂಭವಾಗುವುದರಿಂದ NTA ಮೇ ಎರಡನೇ ವಾರದಲ್ಲಿ ಈ ಅಧಿಸೂಚನೆಯನ್ನು ಬಿಡುಗಡೆ ಮಾಡುತ್ತದೆ.


2022 ರ ಡಿಸೆಂಬರ್ ಸೆಷನ್​ ಎಲ್ಲಾ ಪ್ರಕ್ರಿಯೆಯು ಈಗಾಗಲೇ ಪೂರ್ಣಗೊಂಡಿದೆ. ಅಭ್ಯರ್ಥಿಗಳು ಜೂನ್ 2023 UGC NET ಅಧಿಸೂಚನೆಗಾಗಿ ಕಾಯುತ್ತಿದ್ದಾರೆ. UGC NET ಜೂನ್ 2023 ನೋಂದಣಿ ಒಂದು ವಾರದಲ್ಲಿ ಅಂದರೆ ಮೇ 15 ರ ಮೊದಲು ಪ್ರಾರಂಭವಾಗುವ ಸಾಧ್ಯತೆಯಿದೆ. UGC NET ಪರೀಕ್ಷೆಯನ್ನು 83 ವಿಷಯಗಳಿಗೆ CBT ಮೋಡ್‌ನಲ್ಲಿ ನಡೆಸಲಾಗುತ್ತದೆ. ಆಬ್ಜೆಕ್ಟಿವ್ ಪ್ರಕಾರದ ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) 3 ಗಂಟೆಗಳ ಅವಧಿಯ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಸ್ವರೂಪದಲ್ಲಿ ಕೇಳಲಾಗುತ್ತದೆ.

First published: