UGC NET ಜೂನ್ ಸೆಷನ್ 2023 ನೋಂದಣಿ ಆರಂಭ ದಿನಾಂಕ ಬಿಡುಗಡೆಯಾಗಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ, NTA ಮೇ 10 ರಂದು NET ಜೂನ್ ಸೆಷನ್ 2023 ಗಾಗಿ ಆನ್‌ಲೈನ್ ನೋಂದಣಿಯನ್ನು ಆರಂಭವಾಗುತ್ತದೆ. ಈ ಸೂಚನೆಯ ಪ್ರಕಾರ ಸರಿಯಾದ ದಿನಾಂಕಕ್ಕೆ ನೋಂದಣಿ ಪ್ರಕ್ರಿ ನೋಂದಣಿ ಲಿಂಕ್ ಅನ್ನು ಸಕ್ರಿಯಗೊಳಿಸಿದ ನಂತರ, ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ನೋಂದಾಯಿಸಲು ಸಾಧ್ಯವಾಗುತ್ತದೆ. ugcnet.nta.nic.in ನಲ್ಲಿ NTA ಯ ಅಧಿಕೃತ ವೆಬ್‌ಸೈಟ್ ನೋಂದಣಿ ಆರಂಭಿಸಲಿದೆ. ಈ ಮಾಹಿತಿಯನ್ನು ಯುಜಿಸಿ ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್ ಮಂಗಳವಾರ ಹಂಚಿಕೊಂಡಿದ್ದಾರೆ.
ಆನ್‌ಲೈನ್ ಅರ್ಜಿ ನಮೂನೆಯ ಸಲ್ಲಿಕೆಯು 10 ಮೇ 2023 ರಿಂದ ಪ್ರಾರಂಭವಾಗುತ್ತದೆ ಮತ್ತು 31 ಮೇ 2023 ರಂದು ಈ ಪ್ರಕ್ರಿಯೆ ಸಂಜೆ 5 ಗಂಟೆಗೆ ಕೊನೆಗೊಳ್ಳುತ್ತದೆ. ಪರೀಕ್ಷೆಯ ದಿನಾಂಕಗಳು 13 ಜೂನ್ 2023 ರಿಂದ 22 ಜೂನ್ 2023 ರವರೆಗೆ ನೀಡಲಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ. NTA
ಇದನ್ನೂ ಓದಿ: Online App: ಉಚಿತ ಶಿಕ್ಷಣ ನೀಡುವ ಆ್ಯಪ್ ಇದು; ನೀವೂ ಇದನ್ನು ಯೂಸ್ ಮಾಡಬಹುದು
UGC ಮುಖ್ಯಸ್ಥರು ಹಂಚಿಕೊಂಡ ಮಾಹಿತಿಯ ಪ್ರಕಾರ, NET ಜೂನ್ ಸೆಷನ್ ನೋಂದಣಿಗಳನ್ನು ಮೇ 10 ರಿಂದ 31, 2023 ರವರೆಗೆ 05:00 PM ವರೆಗೆ ಕೈಗೊಳ್ಳಲಾಗುತ್ತದೆ. ಈ ಕುರಿತು ಸ್ವತಃ ಜಗದೇಶ್ ಕುಮಾರ್ ಅವರೇ ಟ್ವೀಟ್ ಹಂಚಿಕೊಂಡಿದ್ದಾರೆ. ಟ್ವೀಟ್ ಹೀಗಿದೆ.
The National Testing Agency (NTA) will conduct UGC – NET June 2023 for ‘Junior Research Fellowship’ and eligibility for ‘Assistant Professor’ in 83 subjects in Computer Based Test (CBT) mode.
— Mamidala Jagadesh Kumar (@mamidala90) May 9, 2023
ಪರೀಕ್ಷೆಯನ್ನು ಜೂನ್ 13 ರಿಂದ 22, 2023 ರವರೆಗೆ ನಡೆಸಲು ನಿರ್ಧರಿಸಲಾಗಿದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯುಜಿಸಿ - ನೆಟ್ ಜೂನ್ 2023 ರಂದು ಜೂನಿಯರ್ ರಿಸರ್ಚ್ ಫೆಲೋಶಿಪ್' ಮತ್ತು ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ 83 ವಿಷಯಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ.
ನೋಂದಾಯಿಸುವುದು ಹೇಗೆ ?
ಹಂತ 1. ugcnet.nta.nic.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2. ಮುಖಪುಟದಲ್ಲಿ, ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3. ಕೇಳಿರುವ ಮಾಹಿತಿ ನೀಡಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ
ಹಂತ 4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ
ಹಂತ 5. ಭವಿಷ್ಯದ ಉಪಯೋಗಕ್ಕಾಗಿ UGC NET/JRF ಗಾಗಿ ಅರ್ಜಿ ನಮೂನೆಯ ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ
NEET UG 2023ಪರೀಕ್ಷೆ ಮಾಹಿತಿ
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ,NEET UG 2023ಪರೀಕ್ಷೆಯನ್ನು ಇಂದು ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಯನ್ನು ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಬೆಂಗಳೂರಿನಲ್ಲೂ ಪರೀಕ್ಷೆ (Exam) ನಡೆಯುತ್ತಿದ್ದು ಪ್ರಧಾನಿ ರೋಡ್ ಶೋ ವಿಚಾರವಾಗಿ ವಿದ್ಯಾರ್ಥಿಗಳಲ್ಲಿ ಸ್ವಲ್ಪ ಆತಂಕ ಸೃಷ್ಟಿಯಾಗಿತ್ತು. ಆದರೆ ಇಂದೇ ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಈ ವಿಚಾರವಾಗಿ ಯಾವುದೇ ಗೊಂದಲ ಬೇಡ. ಆದರೆ ಅಭ್ಯರ್ಥಿಗಳು ಮಣಿಪುರದಲ್ಲಿ ಯಾರೆಲ್ಲಾ ಪ್ರವೇಶ ಪರೀಕ್ಷೆಯನ್ನು ಬರೆಯುತ್ತಿದ್ದಾರೋ ಅವರ ಪರೀಕ್ಷಾ ದಿನಾಂಕವನ್ನು ಬದಲು ಮಾಡಲಾಗಿದೆ. ಯಾಕೆ ಎಂಬ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ