ಯುಜಿಸಿ ಅಧ್ಯಕ್ಷ ಜಗದೇಶ್ ಕುಮಾರ್ (Jagadesh Kumar) ಮಾತನಾಡಿ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಹುದ್ದೆಗಳನ್ನು ಪಟ್ಟಿ ಮಾಡಲು ಕ್ರಮ ಕೈಗೊಂಡಿದ್ದಾರೆ. ಈ ಕಾರಣ ಯಾರೆಲ್ಲಾ ಯುಜಿಸಿ (UGC) ಶಿಕ್ಷಕರಾಗಿ ನೇಮಕವಾಗಲು ಹಂಬಲಿಸುತ್ತಿದ್ದಾರೋ ಅವರೆಲ್ಲರಿಗೂ ಇದೊಂದು ಶುಭ ಸಮಾಚಾರವಾಗಿದೆ. ನೇಮಕಾತಿಯನ್ನು ಆನ್ಲೈನ್ನಲ್ಲಿ ಹೊಸದೊಂದು ಪೋರ್ಟ್ಲ್ ಮೂಲಕ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ವಿಶ್ವವಿದ್ಯಾನಿಲಯ (University) ಧನಸಹಾಯ ಆಯೋಗವು ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಾಪಕರ ನೇಮಕಾತಿಗಾಗಿ ಏಕೀಕೃತ ನೇಮಕಾತಿ ಪೋರ್ಟಲ್, ಸಿಯು-ಚಾಯನ್ ಅನ್ನು ಪ್ರಾರಂಭಿಸಿದೆ ಎಂದು ಅದರ ಅಧ್ಯಕ್ಷ ಜಗದೇಶ್ ಕುಮಾರ್ ಮಂಗಳವಾರ ತಿಳಿಸಿದ್ದಾರೆ.
ಈ ಪೋರ್ಟಲ್ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳಿಗೆ ಒಂದೇ ವೇದಿಕೆಯನ್ನು ಒದಗಿಸುತ್ತದೆ. ಆ ಅಭ್ಯರ್ಥಿಗಳು ತಮ್ಮ ಹೆಸರನ್ನು ಆಲ್ಲೈನ್ ಮೂಲಕ ಅವರೇ ನೋಂದಾಯಿಸಿಕೊಳ್ಳಲು ಇದು ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ. ಯಾರೆಲ್ಲಾ ಈ ಪೋರ್ಟ್ಲ್ ಮೂಲಕ ಅರ್ಜಿ ಸಲ್ಲಿಸಿರುತ್ತಾರೋ ಅವರೆಲ್ಲರೂ ಸಹ ಅವರ ಅಪ್ಲೀಕೇಷನ್ಅನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಲಾಗಿದೆ.
ಅದರಲ್ಲಿ ತಿದ್ದುಪಡಿ ಅಥವಾ ನವೀಕರಣ ಮಾಡಲು ಕೂಡಾ ಸಾಧ್ಯವಾಗುತ್ತದೆ. ಯಾವ ಕಡೆ ಕೆಲಸ ಖಾಲಿ ಇದೆ ಎಂಬುದನ್ನು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೇಲ್ ಮಾಡಲಾಗುತ್ತದೆ. ಈ ಕಾರಣದಿಂದ ಅಭ್ಯರ್ಥಿಗಳಿಗೆ ಎಲ್ಲಿ ಯಾವ ಜಾಗಕ್ಕೆ ಅಪ್ಲೈ ಮಾಡಬೇಕು ಎಂಬುದು ಸುಲಭವಾಗಿ ಗೊಂದಲವಿಲ್ಲದೆ ಅರ್ಥವಾಗುತ್ತದೆ.
ಇದನ್ನೂ ಓದಿ: Mysore Universityಯಲ್ಲಿ ಲಭ್ಯವಿದೆ ಆನ್ಲೈನ್ ಕೋರ್ಸ್! ನೀವೂ ಅಪ್ಲೈ ಮಾಡಬಹುದು
ಪ್ಲಾಟ್‌ಫಾರ್ಮ್ ನೈಜ ಸಮಯದಲ್ಲಿ ಅಪ್ಲಿಕೇಶನ್‌ಗಳನ್ನು ಟ್ರ್ಯಾಕ್ ಮಾಡಲು ವಿಶ್ವವಿದ್ಯಾಲಯಗಳನ್ನು ಸಕ್ರಿಯಗೊಳಿಸುತ್ತದೆ. ಸಂಬಂಧಪಟ್ಟ ವಿಶ್ವವಿದ್ಯಾನಿಲಯದ ಸ್ಕ್ರೀನಿಂಗ್ ಸಮಿತಿಯು ಅರ್ಜಿದಾರರ ವಿವರಗಳನ್ನು ವೀಕ್ಷಿಸಬಹುದು ಮತ್ತು ಪ್ರತಿಯೊಬ್ಬರು ಅಪ್‌ಲೋಡ್ ಮಾಡಿದ ದಾಖಲೆಯನ್ನು ಪರಿಶೀಲಿಸಬಹುದು. ಸ್ಕ್ರೀನಿಂಗ್ ಕಮಿಟಿಯ ಮಾಹಿತಿ ಮತ್ತು ಕಾಮೆಂಟ್‌ಗಳನ್ನು ಸಹ ಪೋರ್ಟಲ್‌ನಲ್ಲಿ ದಾಖಲಿಸಬಹುದು ಎಂದು ಅವರು ಹೇಳಿದ್ದಾರೆ.
"CU-Chayan ಪೋರ್ಟಲ್‌ನಲ್ಲಿ ಬ್ಯಾಕೆಂಡ್ ಡೇಟಾ ಅನಾಲಿಟಿಕ್ಸ್ ಅನ್ನು ಬಳಸಿಕೊಂಡು, UGC ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ, ಎಷ್ಟು ಖಾಲಿ ಹುದ್ದೆಗಳಿವೆ, ನಿಯಮಗಳ ಪ್ರಕಾರ ಮೀಸಲಾತಿಗಳನ್ನು ಅನುಸರಿಸಲಾಗುತ್ತಿದೆಯೇ ಎಂಬುದಕ್ಕೆ ಡೇಟಾವನ್ನು ಸಂಗ್ರಹಿಸುತ್ತದೆ. ಇದು CU ಗಳನ್ನು ವೇಗವಾಗಿ ಕಂಡು ಹಿಡಿಯಲು UGC ಗೆ ಸಹಾಯ ಮಾಡುತ್ತದೆ.
46 ಕೇಂದ್ರೀಯ ವಿಶ್ವವಿದ್ಯಾಲಯಗಳ ಪೋರ್ಟಲ್
ಪ್ರಸ್ತುತ, ಎಲ್ಲಾ 46 ಕೇಂದ್ರೀಯ ವಿಶ್ವವಿದ್ಯಾಲಯಗಳು ತಮ್ಮ ವೈಯಕ್ತಿಕ ಪೋರ್ಟಲ್‌ಗಳ ಮೂಲಕ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುತ್ತವೆ. ತಮ್ಮ ಅಧಿಕೃತ ವೆಬ್‌ಸೈಟ್‌ಗಳು ಮತ್ತು ಪತ್ರಿಕೆಗಳಲ್ಲಿ ಕೂಡಾ ಜಾಹಿರಾತುಗಳನ್ನು ನೀಡುತ್ತವೆ ಎಂದು ತಿಳಿಸಿದ್ದಾರೆ. ಭವಿಷ್ಯದ ನೇಮಕಾತಿಗೂ ಸಹ ಈ ಪೋರ್ಟಲ್ ತುಂಬಾ ಸಹಾಯಕವಾಗಲಿದೆ. ದೆಹಲಿ ವಿಶ್ವವಿದ್ಯಾನಿಲಯದ ಮಿರಾಂಡಾ ಹೌಸ್ ಕಾಲೇಜಿನ ಸಹ ಪ್ರಾಧ್ಯಾಪಕ ಅಭಾ ದೇವ್ ಹಬೀಬ್, ಅರ್ಜಿದಾರರಿಗೆ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಲು ಮತ್ತು ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಪೋರ್ಟಲ್ ಸೀಮಿತವಾಗಿರಬೇಕು ಎಂದು ಹೇಳಿದರು.
ಅರ್ಜಿ ಪರೀಕ್ಷೆಯ ಪ್ರಕ್ರಿಯೆಯನ್ನು ಕೇಂದ್ರೀಕರಿಸುವ ಪ್ರಯತ್ನ ಮಾಡಬಾರದು. ಕೇಂದ್ರೀಕೃತ ವಿಭಾಗ ಸಮಿತಿಗಳನ್ನು ರಚಿಸುವ ಪ್ರಯತ್ನ ಮಾಡಬಾರದು. ಇಲ್ಲವಾದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಸಂದರ್ಶನ ಮಾಹಿತಿ
ಅರ್ಜಿದಾರರನ್ನು ಶಾರ್ಟ್‌ಲಿಸ್ಟ್ ಮಾಡುವುದು, ಸಂದರ್ಶನಗಳನ್ನು ನಡೆಸುವುದು ಮತ್ತು ಪ್ರಸ್ತುತ ಮಾಡುತ್ತಿರುವಂತೆಯೇ ಅಧ್ಯಾಪಕರ ನೇಮಕವನ್ನು ಮುಂದುವರಿಸುತ್ತೇವೆ ಎಂದೂ ಸಹ ಹೇಳಿದ್ದಾರೆ. ಇದರಿಂದ ಶಿಕ್ಷಕರಿಗೆ ಹಾಗೂ ಹೊಸದಾಗಿ ಅಪ್ಲೈ ಮಾಡುವ ಅಭ್ಯರ್ಥಿಗಳಿಗೆ ಇದು ತುಂಬಾ ಸಹಾಯವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ