ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (UGC) ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಸಾಲಿನಲ್ಲಿ ನವೀನ ಶಿಕ್ಷಣ ವಿಧಾನಗಳು ಮತ್ತು ಮೌಲ್ಯಮಾಪನ ಸುಧಾರಣೆಗಳಿಗಾಗಿ ಮಾರ್ಗಸೂಚಿಗಳನ್ನು (Guideline) ಬಿಡುಗಡೆ ಮಾಡಿದೆ. ಅನುಭವದ ಕಲಿಕೆ, ಅತ್ಯಾಧುನಿಕ ಶಿಕ್ಷಣ, ಕಲೆ ಹೀಗೆ ಹಲವಾರು ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಬೇಕು ಎಂದು ಈ ರೀತಿ ಯೋಜನೆ ಜಾರಿಗೊಳಿಸಲಾಗುತ್ತದೆ. ಶಾಲೆಗಳು (Schools) ಮತ್ತು ಕಾಲೇಜುಗಳು (College) ಕಲಿಕೆಯ ವಿಭಿನ್ನ ಮಾದರಿಗಳನ್ನು ಅಳವಡಿಸಿಕೊಂಡಿವೆ.
ಆಫ್ಲೈನ್, ಆನ್ಲೈನ್ ಮತ್ತು ಹೈಬ್ರಿಡ್ ವಿಶೇಷವಾಗಿ COVID-19 ಸಾಂಕ್ರಾಮಿಕದ ನಂತರ ಶಿಕ್ಷಣ ವ್ಯವಸ್ಥೆಯು ಅನುಭವಿಸಿದ ಹೊಡೆತದ ನಂತರ ಈ ರೀತಿ ಬೇರೆ ಬೇರೆ ಯೋಜನೆಗಳನ್ನು ಅಳವಡಿಸಲು ಯುಜಿಸಿ ಮುಂದಾಗಿದೆ. ಯುಜಿಸಿ ಮಾರ್ಗಸೂಚಿಗಳು ಕಲಿಕೆಯ ಅಗತ್ಯತೆಗಳು ಮತ್ತು ಬೋಧನಾ ವಿಧಾನಗಳಿಗೆ ಅನುಗುಣವಾಗಿ ರಾಷ್ಟ್ರೀಯ ಉನ್ನತ ಶಿಕ್ಷಣ ಅರ್ಹತಾ ಚೌಕಟ್ಟಿನಲ್ಲಿ (NHEQF) ಸೂಚಿಸಿದಂತೆ ನವೀನ ಶಿಕ್ಷಣ ಮತ್ತು ಪದವಿ ವಿಶೇಷತೆಗಳನ್ನು ಶಿಫಾರಸು ಮಾಡುವ ಗುರಿಯನ್ನು ಹೊಂದಿವೆ.
UGC ಮಾರ್ಗಸೂಚಿಗಳು ಹೀಗಿವೆ
UGC ಮಾರ್ಗಸೂಚಿಗಳು ತರಗತಿಗಳನ್ನು ವಿದ್ಯಾರ್ಥಿ ಕೇಂದ್ರಿತವಾಗಿಸುವ ನಿಟ್ಟಿನಲ್ಲಿ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಲು ಮುಂದಾಗಿದೆ. ಹೆಚ್ಚು ಸಂವಾದಾತ್ಮಕ ಮತ್ತು ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸುವಂತ ಮಾದರಿಯಲ್ಲಿ ಕಲಿಕೆಗೆ ಆದ್ಯತೆ ನೀಡಲು ಯೋಚಿಸಿದೆ.
ಇದನ್ನೂ ಓದಿ: PUC Exam Time Table: ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಯಾವ ದಿನ ಯಾವ ಎಕ್ಸಾಂ?
UGC ಮಾರ್ಗಸೂಚಿಗಳು ತರಗತಿಗಳನ್ನು ವಿದ್ಯಾರ್ಥಿ ಕೇಂದ್ರಿತವಾಗಿಸುವ ನಿಟ್ಟಿನಲ್ಲಿ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಲು ಮುಂದಾಗಿದೆ. ಹೆಚ್ಚು ಸಂವಾದಾತ್ಮಕ ಮತ್ತು ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸುವಂತ ಮಾದರಿಯಲ್ಲಿ ಕಲಿಕೆಗೆ ಆದ್ಯತೆ ನೀಡಲು ಯೋಚಿಸಿದೆ. ಈ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ. ಸರಿಯಾದ ರೀತಿಯಲ್ಲಿ ತರಬೇತಿ ನೀಡಿದರೆ ವಿದ್ಯಾರ್ಥಿಗಳು ಖಂಡಿತವಾಗಿಯೂ ಒಳ್ಳೆಯ ಭವಿಷ್ಯ ಹೊಂದುತ್ತಾರೆ.
ಅರ್ಥಪೂರ್ಣ ಬದಲಾವಣೆ ಅಗತ್ಯ
ವಿದ್ಯಾರ್ಥಿಗಳಿಗೆ ದಿನಿನಿತ್ಯದ ಪಾಠದ ಹೊರತಾಗಿ ಕೆಲವು ಪಾಠದ ಅಗತ್ಯವಿದೆ. ವಿದ್ಯಾರ್ಥಿಗಳು ಮುಂದಿನ ಉದ್ಯಮದಲ್ಲಿ ಎದುರಿಸಬೇಕಾದ ಸಮಸ್ಯೆಗಳನ್ನು ಈಗಲೇ ತಿಳಿಸಿ ಮುಂದೆ ಅವರಿಗೆ ಉದ್ಯೋಗದಲ್ಲಿ ಸಹಾಯ ಆಗುವಂತೆ ಮಾಡುವ ರೀತಿಯಲ್ಲಿ ಈ ಶಿಕ್ಷಣ ಇರಲಿದೆ ಎಂದು ತಿಳಿಸಲಾಗಿದೆ. ಹೊಸ ರೀತಿಯ ಪದವೀಧರರ ಅಗತ್ಯವಿರುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ಈ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಇಲ್ಲಿಯೇ ಬೆಳೆಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ವಿದ್ಯಾರ್ಥಿಗಳಿಗೆ ಕೌಶಲ್ಯ ಶಿಕ್ಷಣ
ಹೌದು ವಿಮರ್ಶಾತ್ಮಕ ಚಿಂತನೆ, ಸಮಸ್ಯೆ-ಪರಿಹರಿಸುವ ಕೌಶಲ್ಯಗಳು, ನೈತಿಕ ಶಿಕ್ಷಣ, ಕೌಶಲ್ಯಾಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಮೌಲ್ಯಮಾಪನದ ಸಂದರ್ಭದಲ್ಲೂ ಸಹ ವಿದ್ಯಾರ್ಥಿಗಳ ಕೌಶಲ್ಯವನ್ನು ಪರಿಶೀಲಿಸಲಾಗುತ್ತದೆ ಎಂದು ಸೂಚಿಸಲಾಗಿದೆ. ಒಟ್ಟಿನಲ್ಲಿ ಯೋಜನೆ ಹೊಸದಾಗಿದ್ದರು ವಿದ್ಯಾರ್ಥಿಗಳಿಗೆ ನೆರವಾಗುವ ರೀತಿಯಲ್ಲಿದೆ ಎಂದು ಹೇಳಬಹುದು.
ಆನ್ಲೈನ್ ಕಲಿಕೆ ಮತ್ತು ಮೌಲ್ಯಮಾಪನ
ಈ ಆನ್ಲೈನ್ ಕಲಿಕೆಯ ಕಾರ್ಯಕ್ರಮವು ಎರಡು ಉದ್ದೇಶವನ್ನು ಹೊಂದಿದೆ. ಮೊದಲನೆಯದಾಗಿ, ಇದು ಬಾಲ್ಯದಿಂದ ಉನ್ನತ ಶಿಕ್ಷಣದವರೆಗೆ ಕೈಗೆಟುಕುವ ಶೈಕ್ಷಣಿಕ ಆಯ್ಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಎರಡನೆಯದಾಗಿ, ಕೆಲಸ ಮಾಡುವ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನ ಮತ್ತು ಶೈಕ್ಷಣಿಕ ಪ್ರಗತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಹೊಸ ಶೈಕ್ಷಣಿಕ ನೀತಿ ಅಡಿಯಲ್ಲಿ ಹಲವಾರು ತರದ ಸುಧಾರಣೆ ಮಾಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಕಾರ ಪ್ರತಿಯೊಂದೂ ಶೈಕ್ಷಣಿಕ ವಲಯದಲ್ಲೂ ಉತ್ತಮ ಸುಧಾರಣೆ ತರಲು ಪ್ರಯತ್ನ ನಡೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ