UGC ಪ್ರಕಾರ ಕರಡು ಮಾರ್ಗಸೂಚಿಗಳು (GuIdelines) ಮತ್ತು ಪರಿಸರ ಶಿಕ್ಷಣದ ಪಠ್ಯಕ್ರಮದ ಚೌಕಟ್ಟಿನಲ್ಲಿ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಹೊಂದಿದೆ. (SDGs) ಆರು ನೇರವಾಗಿ ಪರಿಸರ ಸಂರಕ್ಷಣೆ ಮತ್ತು ಸಂಪನ್ಮೂಲ ಸಂರಕ್ಷಣೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಹೊಂದಿದೆ. ವಿಶ್ವವಿದ್ಯಾನಿಲಯ (University) ಧನಸಹಾಯ ಆಯೋಗ (ಯುಜಿಸಿ) ಮಂಗಳವಾರ ಪದವಿ ಮಟ್ಟದಲ್ಲಿ ಪರಿಸರ ಶಿಕ್ಷಣಕ್ಕಾಗಿ ಕರಡು ಮಾರ್ಗಸೂಚಿಗಳು ಮತ್ತು ಪಠ್ಯಕ್ರಮದ ಚೌಕಟ್ಟನ್ನು ಬಿಡುಗಡೆ ಮಾಡಿದೆ. 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ (Goal) (SDG) ಆರು ನೇರವಾಗಿ ಪರಿಸರ ಸಂರಕ್ಷಣೆ ಮತ್ತು ಸಂಪನ್ಮೂಲ ಸಂರಕ್ಷಣೆಗೆ ಸಂಬಂಧಿಸಿವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರಲ್ಲಿ ಪರಿಸರ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಪರಿಸರ ಅಧ್ಯಯನವನ್ನು ಪಠ್ಯಕ್ರಮದ ಅವಿಭಾಜ್ಯ ಅಂಗವನ್ನಾಗಿ ಮಾಡುವ ಗುರಿಯನ್ನೂ ಸಹ ಹೊಂದಿದೆ. ಪರಿಸರದ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು UGC ಅಧ್ಯಕ್ಷ ಜಗದೇಶ್ ಕುಮಾರ್ ತಿಳಿಸಿದ್ದಾರೆ.
ಮೌಲ್ಯಾಧಾರಿತ ಶಿಕ್ಷಣ, ಪರಿಸರ ಸೇವೆ
ಮೌಲ್ಯಾಧಾರಿತ ಶಿಕ್ಷಣ ಪರಿಸರ ಸೇವೆ, ಪರಿಸರ ಶಿಕ್ಷಣ, ಮತ್ತು ಇತರ ಕ್ಷೇತ್ರಗಳಲ್ಲಿ ಕ್ರೆಡಿಟ್ ಆಧಾರಿತ ಕೋರ್ಸ್‌ಗಳು ಮತ್ತು ಯೋಜನೆಗಳನ್ನು ಒಳಗೊಂಡಿರುತ್ತದೆ. ಇದಲ್ಲದೆ 2017 ರಲ್ಲಿ, ಯುಜಿಸಿ ಆಯ್ಕೆ ಆಧಾರಿತ ಕ್ರೆಡಿಟ್ ಸಿಸ್ಟಮ್ (CBCS) ಅಡಿಯಲ್ಲಿ ಸಾಮರ್ಥ್ಯ ವರ್ಧನೆ ಕಡ್ಡಾಯ ಕೋರ್ಸ್ ಅದರಲ್ಲೂ ಪರಿಸರಕ್ಕಾಗಿ ಎಂಟು ಘಟಕ ಮಾಡ್ಯೂಲ್ ಪಠ್ಯಕ್ರಮವನ್ನು ರೂಪಿಸಿತು.
ಇದನ್ನೂ ಓದಿ: MOOC Course: ಯುಜಿಸಿ ಬಿಡುಗಡೆ ಮಾಡಿದ ಆನ್ಲೈನ್ ಕೋರ್ಸ್ಗಳಿಗೆ ಹೀಗೆ ಅಪ್ಲೈ ಮಾಡಿ
ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿಗೊಳಿಸುವುದು UGC ಯ ಉಪಕ್ರಮದ ಫಲಿತಾಂಶವಾಗಿದೆ. ವಿದ್ಯಾರ್ಥಿಗಳಿಗೆ ಪರಿಸರದ ಪ್ರಾಮುಖ್ಯತೆಯನ್ನು ತಿಳಿ ಹೇಳುತ್ತಾ ಪಠ್ಯಕ್ರಮಗಳನ್ನೂ ಸಹ ಜಾರಿಗೊಳಿಸಿ ವಿದ್ಯಾರ್ಥಿಗಳನ್ನು ಪರಿಸರದ ಕುರಿತು ಜಾಗೃತರನ್ನಾಗಿ ಮಾಡುವ ಉದ್ದೇಶವನ್ನು ಯುಜಿಸಿ ಹೊಂದಿದೆ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿಗಳನ್ನು ಪರಿಸರದ ವಿಷಯದಲ್ಲಿ ಸಂವೇದನಾಶೀಲರನ್ನಾಗಿಸುವ ಹಂಬಲವನ್ನು ಯುಜಿಸಿ ಹೊಂದಿದೆ ಎಂದು ಕುಮಾರ್ ಅವರು ತಿಳಿಸಿದ್ದಾರೆ.
ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆದ ಯುಎನ್‌ಎಫ್‌ಸಿಸಿಸಿ ಸಿಒಪಿ 26 ಜಾಗತಿಕ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು 'ಪರಿಸರಕ್ಕಾಗಿ ಜೀವನಶೈಲಿ' ಎಂಬ ಮಂತ್ರವನ್ನು ಒತ್ತಿಹೇಳಿದ್ದಾರೆ ಮತ್ತು 2030 ರ ವೇಳೆಗೆ ಶೂನ್ಯ ಇಂಗಾಲದ ಪರಿಸರವನ್ನು ನಿರ್ಮಾಣ ಮಾಡುವ ವಿಶ್ವಾಸ ಹೊಂದಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.
ಪರಿಸರದ ಪಾಠ ಕಲಿಯಬೇಕು
ಹಾಗಾಗಿ ವಿದ್ಯಾರ್ಥಿಗಳಿಗೆ ಈಗಿನಿಂದಲೇ ಪರಿಸರದ ಪಾಠ ಕಲಿಯಬೇಕು ಮುಂದಿನ ಭವಿಷ್ಯ ನಿರ್ಮಾಣ ಮಾಡಲು ಈಗಿನ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಪರಿಸರ ಶಿಕ್ಷಣ ಮಕ್ಕಳಿಗೆ ಸಿಗಲಿದೆ. ಇಂದು ಎಲ್ಲೆಡೆ ನಗರೀಕರಣದ ಬಗ್ಗೆಯೇ ಹೆಚ್ಚಿನ ಒಲವಿದ್ದು, ಪರಿಸರದ ಬಗ್ಗೆ ಕಾಳಜಿ ಕ್ಷೀಣಿಸುತ್ತಿದೆ. ಹೈಟೆಕ್ ಕಟ್ಟಡಗಳಲ್ಲಿ ಕಲಿಯುವ ಇಂದಿನ ಮಕ್ಕಳಿಗೂ ಪರಿಸರ ಎನ್ನುವುದರ ಬಗ್ಗೆ ಅರಿವೇ ಇಲ್ಲದಂತಹ ಸ್ಥಿತಿಯೂ ನಿರ್ಮಾಣಗೊಂಡಿದೆ.ಆದರೆ ಇದನ್ನು ತಪ್ಪಿಸಿ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯವನ್ನು ಯುಜಿಸಿ ಮಾಡುತ್ತದೆ.
ಮಕ್ಕಳಿಗೆ ಎಳವೆಯಿಂದಲೇ ಪರಿಸರದ ಬಗ್ಗೆ ಕಾಳಜಿ ಮೂಡಬೇಕು ಎನ್ನುವ ಸದುದ್ಧೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ