• Home
 • »
 • News
 • »
 • jobs
 • »
 • Udupi: ಮಕ್ಕಳ‌ ಎದುರೇ ಕುಡಿದು ಮಲಗಿದ ಶಿಕ್ಷಕ, ಯಾವುದೇ ಕ್ರಮ ಕೈಗೊಳ್ಳದ ಬಿಇಓ

Udupi: ಮಕ್ಕಳ‌ ಎದುರೇ ಕುಡಿದು ಮಲಗಿದ ಶಿಕ್ಷಕ, ಯಾವುದೇ ಕ್ರಮ ಕೈಗೊಳ್ಳದ ಬಿಇಓ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶಾಲಾ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಮುಂದೆ ಕುಡಿದು ಮಲಗಿರುವ ಘಟನೆ ಉಡುಪಿಯ ಪೆರ್ಡೂರು ಗ್ರಾಮದ ಅಲಂಗಾರು ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

 • News18 Kannada
 • 4-MIN READ
 • Last Updated :
 • Udupi, India
 • Share this:

ಶಾಲೆಗಳಲ್ಲಿ ಶಿಕ್ಷಕರು (School Teachers) ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಶಿಕ್ಷಕರನ್ನು ವಿದ್ಯಾರ್ಥಿಗಳು ನೋಡಿ ಕಲಿಯುತ್ತಾರೆ ಆದರೆ ಇತ್ತೀಚಿಗೆ ಹಲವು ಶಿಕ್ಷಕರ ನಡವಳಿಕೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವಂತಿದೆ. ಅದೇ ರೀತಿಯ ಒಂದು ಘಟನೆ ಇದೀಗ ಉಡುಪಿಯಲ್ಲಿ ನಡೆದಿದೆ. ಶಾಲಾ ಅವಧಿಯಲ್ಲೇ (School Timing) ಕುಡಿದು ಶಾಲಾ ಆವರಣದಲ್ಲೇ ಮಲಗಿದ ಶಿಕ್ಷಕನ್ನು ಕಂಡು ಪಾಲಕರು ಕೋಪಗೊಂಡಿದ್ದಾರೆ. ಅವರನ್ನು ಅಮಾನತು ಮಾಡುವಂತೆ ಗ್ರಾಮಸ್ಥರು ಕೇಳಿಕೊಂಡಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.


ಕುಡಿದು ಶಾಲಾ ಜಗಲಿಯಲ್ಲೇ ಮಲಗಿದ ಶಿಕ್ಷಕ
ಶಾಲಾ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಮುಂದೆ ಕುಡಿದು ಮಲಗಿರುವ ಘಟನೆ ಉಡುಪಿಯ ಪೆರ್ಡೂರು ಗ್ರಾಮದ ಅಲಂಗಾರು ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಬ್ರಹ್ಮಾವರ ವಲಯ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಶಾಲೆ ಇದಾಗಿದ್ದು ಹಲವಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.


ಶಿಕ್ಷಕರೊಬ್ಬರು ಶಾಲೆಗೆ ಕುಡಿದು ಬರುವ ಕಾರಣದಿಂದಾಗಿ ತರಗತಿ ನಡೆಸಲು ಕಷ್ಟವಾಗುತ್ತದೆ. ಅಷ್ಟೇ ಅಲ್ಲ ಇದು ಶಾಲಾ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇನ್ನುಳಿದ ಶಿಕ್ಷಕರಿಗೂ ಸಹ ಇದೊಂದು ಇರುಸು ಮುರುಸಿನ ಸಂಗತಿಯಾಗಿ ಕಾಡುತ್ತದೆ. ಮಧ್ಯಪಾನ ಮಾಡುವುದೇ ತಪ್ಪು ಅಂತದ್ದರಲ್ಲಿ ಶಾಲಾ ಸಮಯದಲ್ಲಿ ಅದೂ ಶಾಲಾ ಆವರಣದಲ್ಲೇ ಈ ರೀತಿ ಕುಡಿದು ಮಲಗಿರುವುದು ಖಂಡಿತ ಅಕ್ಷಮ್ಯ ಅಪರಾಧವಾಗಿದೆ. ಇದನ್ನು ಊರಿನ ಜನರು ಖಂಡಿಸಿದ್ದಾರೆ.


ಇದನ್ನೂ ಓದಿ: Scholarship: ಡಿಸೆಂಬರ್​ 31ರ ಒಳಗೆ ಈ ಸ್ಕಾಲರ್​ ಶಿಪ್​ಗೆ ಅಪ್ಲೈ ಮಾಡಿ, ವಿದ್ಯಾರ್ಥಿ ವೇತನ ನಿಮ್ಮದಾಗಿಸಿಕೊಳ್ಳಿ


ಮಕ್ಕಳ‌ ಎದುರೇ ಕುಡಿದು ಮಲಗಿದ ಶಿಕ್ಷಕ
ಮಕ್ಕಳ‌ ಎದುರೇ ಕುಡಿದು ಶಾಲಾ ಆವರಣದಲ್ಲಿ ಮಲಗಿದ ಶಿಕ್ಷಕನ ಹೆಸರು ಕೃಷ್ಣಮೂರ್ತಿ, ಇವರು ಈ ಶಾಲೆಯ ಶಿಕ್ಷಕರಾಗಿದ್ದು ಶಾಲೆಗೆ ಬರುವ ಸಮಯದಲ್ಲೇ ಪಾನ ಮತ್ತರಾಗಿದ್ದರು. ನಂತರ ಕೂರಲೂ ಶಕ್ತಿ ಇಲ್ಲದಂತಾದ ಇವರು ಅಮಲಿನಲ್ಲಿ ಶಾಲಾ ಆವರಣದಲ್ಲೇ ಮಲಗಿಕೊಂಡಿದ್ದಾರೆ.


ಕುಡಿದು ಮಲಗಿದ ಶಿಕ್ಷಕ


ಶಿಕ್ಷಕನ ಕುಡಿದು ಮಲಗಿದ ವೀಡಿಯೋ ವೈರಲ್
ಕುಡಿದು ಮಲಗಿದ ಶಿಕ್ಷಕನ ವಿಡಿಯೋ ಮಾಡಿದ್ದಾರೆ ಆ ವಿಡಿಯೋ  ಇದೀಗ ವೈರಲ್ ಆಗಿದೆ. ಶಿಕ್ಷಕನನ್ನ ಅಮಾನತು ಮಾಡುವಂತೆ ಗ್ರಾಮದ ಪ್ರಮುಖರ ಒತ್ತಾಯಿಸುತ್ತಿದ್ದಾರೆ. ಈ ಘಟನೆ ನಡೆದು ಕೆಲವು ದಿನಗಳು ಕಳೆದರೂ ಸಹ ಈ ಕುರಿತು ಯಾರೂ ಸಹ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈ ಕಾರಣಕ್ಕಾಗಿ ಗ್ರಾಮಸ್ಥರು ಕೋಪ ಗೊಂಡಿದ್ದಾರೆ.


ವಲಯ ಶಿಕ್ಷಣಾಧಿಕಾರಿಗೆ ದೂರು ನೀಡಿರುವ ಗ್ರಾಮಸ್ಥರು
ಶಿಕ್ಷಕ ಮಾಡಿದ ತಪ್ಪನ್ನು ವಲಯ ಶಿಕ್ಷಣಾಧಿಕಾರಿಗಳಿಗೆ ಸಾಕ್ಷಿ ಸಮೇತವಾಗಿ ತೋರಿಸಿ ಅವರನ್ನು ಅಮಾನತು ಗೊಳಿಸುವಂತೆ ವಲಯ ಶಿಕ್ಷಣಾಧಿಕಾರಿಗಳ ಬಳಿ ಕೇಳಿಕೊಂಡಿದ್ದಾರೆ. ಅವರು ಇದನ್ನು ಗಮನಿಸಿ ಸುಮ್ಮನಾಗಿದ್ದಾರೆ ಹೊರತಾಗಿ ಯಾವ ಕ್ರಮವನ್ನೂ ಕೈಗೊಂಡಿಲ್ಲ.


ಶಿಕ್ಷಕನ ಮೇಲೆ ಇನ್ನೂ ಕ್ರಮ ಕೈಗೊಳ್ಳದ ಬಿಇಓ ರಂಗನಾಥ್ ಕೆ
ವಲಯ ಅಧಿಕಾರಿಗಳು ಇನ್ನೂ ಸಹ ಶಿಕ್ಷಕ ಕೃಷ್ಣಮೂರ್ತಿ ಅವರ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಊರಿನವರು ಹೇಳುತ್ತಿದ್ದಾರೆ. ಶಿಕ್ಷಕನನ್ನ ಕೂರಿಸಿ ವಿಚಾರಣೆ ಮಾಡುತ್ತಿರುವ ಬಿಇಓ ರಂಗನಾಥ್ ಕೇಲವ ವಿಚಾರಣೆಯಲ್ಲೇ ದಿನ ಕಳೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೂಡಲೇ ಕೃಷ್ಣಮೂರ್ತಿ ಯನ್ನ ಅಮಾನತು‌ ಮಾಡುವಂತೆ ಪಂಚಾಯತ್ ಅಧ್ಯಕ್ಷ ದೇವು ಪೂಜಾರಿ ಪಟ್ಟು ಹಿಡಿದಿದ್ದಾರೆ. ಆದರೆ ಅಮಾನತು ಭರವಸೆ ನೀಡಿ ಇನ್ನೂ  ಬಿಇಓ ರಂಗನಾಥ್ ಯಾವುದೇ ಕ್ರಮ ಕೈಗೊಂಡಿಲ್ಲ.

First published: