• ಹೋಂ
  • »
  • ನ್ಯೂಸ್
  • »
  • Jobs
  • »
  • NEP: 12ನೇ ತರಗತಿಗೆ ಇನ್ಮುಂದೆ ಎರಡು ಬೋರ್ಡ್ ಪರೀಕ್ಷೆಗಳು; ಸಬ್ಜೆಕ್ಟ್​ಗಳನ್ನೂ ವಿದ್ಯಾರ್ಥಿಗಳೇ ಸೆಲೆಕ್ಟ್ ಮಾಡ್ಬಹುದು

NEP: 12ನೇ ತರಗತಿಗೆ ಇನ್ಮುಂದೆ ಎರಡು ಬೋರ್ಡ್ ಪರೀಕ್ಷೆಗಳು; ಸಬ್ಜೆಕ್ಟ್​ಗಳನ್ನೂ ವಿದ್ಯಾರ್ಥಿಗಳೇ ಸೆಲೆಕ್ಟ್ ಮಾಡ್ಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (NCF), ಶಿಕ್ಷಣ ಕ್ಷೇತ್ರದ ಪ್ರಖ್ಯಾತ ತಜ್ಞರ ಸಮಿತಿಯು, NEP ಅಡಿಯಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಬಹುದಾದ ವಿಷಯಗಳನ್ನು ಹಾಗೂ ಪರೀಕ್ಷೆಗಳನ್ನು ನಡೆಸುವ ಹೊಸ ವಿಧಾನಗಳ ಕುರಿತು ಕೇಂದ್ರ ಸರಕಾರಕ್ಕೆ ಶಿಫಾರಸುಗಳನ್ನು ಮಾಡಿದೆ.

  • Share this:

ದ್ವಿತೀಯ ಪಿಯುಸಿ ಪರೀಕ್ಷೆ (2nd PUC Exam) ಪ್ರತಿಯೊಬ್ಬರ ಜೀವನದ ನಿರ್ಣಾಯದ ಎಕ್ಸಾಂ ಆಗಿದೆ. ಆದ್ದರಿಂದ ಹೆಚ್ಚಿನವರು ಇದರ ಮಾರ್ಕ್ಸ್​​ ನೋಡಿ ಮುಂದಿನ ಶಿಕ್ಷಣದ ಬಗ್ಗೆ ಯೋಚಿಸುತ್ತಾರೆ. ಅದೇ ರೀತಿಯಲ್ಲಿ ತನ್ನ ಪರೀಕ್ಷೆಯ ಪೂರ್ವತಯಾರಿಯನ್ನೂ ಮಾಡುತ್ತಾರೆ. ಇದೀಗ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (NCF), ಶಿಕ್ಷಣ ಕ್ಷೇತ್ರದ ಪ್ರಖ್ಯಾತ ತಜ್ಞರ ಸಮಿತಿಯು, NEP ಅಡಿಯಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಬಹುದಾದ ವಿಷಯಗಳನ್ನು (Subject) ಹಾಗೂ ಪರೀಕ್ಷೆಗಳನ್ನು (Exams) ನಡೆಸುವ ಹೊಸ ವಿಧಾನಗಳ ಕುರಿತು ಕೇಂದ್ರ ಸರಕಾರಕ್ಕೆ (Central Government) ಶಿಫಾರಸುಗಳನ್ನು ಮಾಡಿದೆ.


12 ನೇ ತರಗತಿಗೆ ಎರಡು ಬೋರ್ಡ್ ಪರೀಕ್ಷೆಗಳು, ಯಾವುದಾದರೂ ಒಂದು ಅಥವಾ ಎರಡೂ ಪರೀಕ್ಷೆಗೆ ಹಾಜರಾಗಬಹುದು


ಈ ಸಲಹೆಗಳು ದ್ವಿತೀಯ ಪಿಯುಸಿ ತರಗತಿಯ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದನ್ನು ಒಳಗೊಂಡಿದೆ. ಎರಡೂ ಪರೀಕ್ಷೆಗಳಲ್ಲಿ ಉತ್ತಮವಾದ ಶೇಕಡಾವಾರು ಪ್ರಮಾಣವನ್ನು ಆಯ್ಕೆ ಮಾಡಲು ವಿದ್ಯಾರ್ಥಿಯು ಅವಕಾಶವನ್ನು ಪಡೆಯುತ್ತಾರೆ ಎಂಬುದನ್ನು ಈ ಪರೀಕ್ಷೆ ಖಚಿತಪಡಿಸುತ್ತದೆ.


ಇದಲ್ಲದೆ, ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾದಾಗ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಇದು ಮತ್ತೊಂದು ಅವಕಾಶವನ್ನು ನೀಡುತ್ತದೆ.


ಇದನ್ನೂ ಓದಿ: 10ನೇ ತರಗತಿ ಪರೀಕ್ಷೆ ಬರೆದ 6ನೇ ಕ್ಲಾಸ್​ ವಿದ್ಯಾರ್ಥಿನಿ!


ಉತ್ತರ ಪತ್ರಿಕೆಗಳ ಸಂಖ್ಯೆ ಹೆಚ್ಚಿಸುವ ಶಿಫಾರಸು


ಎರಡನೆಯದಾಗಿ, 9 ನೇ ತರಗತಿಯ ವಿದ್ಯಾರ್ಥಿಯು ಕ್ಲಿಯರ್ ಮಾಡಬೇಕಾದ ಉತ್ತರ ಪತ್ರಿಕೆಗಳ ಸಂಖ್ಯೆಯನ್ನು ಹೆಚ್ಚಿಸುವ ಶಿಫಾರಸನ್ನು ಸಮಿತಿ ಮಾಡಿದೆ.


ಮೊದಲಿನ ಐದು ವಿಷಯಗಳ ಪತ್ರಿಕೆಗಳ ಬದಲಿಗೆ, ಐದು ಅತ್ಯುತ್ತಮ ಯಾವುದೋ ಅದನ್ನು ಆಯ್ಕೆಮಾಡುವುದು. ಅಂತೆಯೇ 9 ಹಾಗೂ 10 ನೇ ತರಗತಿಗಳಿಗೆ ವಿಷಯ ಪತ್ರಿಕೆಗಳ ಸಂಖ್ಯೆ ಕೂಡ ಹೆಚ್ಚಲಿದೆ.


ವಿಷಯಗಳನ್ನು ಅಥವಾ ಸಬ್ಜೆಕ್ಟ್​​ಗಳನ್ನು ಮಿಶ್ರಗೊಳಿಸುವುದು


ಸಬ್ಜೆಕ್ಟ್​​ಗಳನ್ನು ಮಿಶ್ರ ಮಾಡುವುದು ಎಂದರೆ ವಿಜ್ಞಾನ, ಕಲೆ ಹಾಗೂ ವಾಣಿಜ್ಯ ಇವು ಮೂರಲ್ಲಿ ಒಂದನ್ನು ಆಯ್ಕೆಮಾಡುವ ಹಕ್ಕು ಹಿಂದೆ ವಿದ್ಯಾರ್ಥಿಗಳಿಗಿತ್ತು. ಆದರೆ ಈಗ ಸಮಿತಿ ಶಿಫಾರಸು ಮಾಡಲಾದ ಅಂಶಗಳಿಗೆ ಅನ್ವಯವಾದಂತೆ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಕಲಾ ವಿಭಾಗ ಇವೆರಡನ್ನೂ ಮಿಶ್ರ ಮಾಡಿಕೊಳ್ಳಬಹುದು.


ಹಿಂದೆ, ವಿಜ್ಞಾನ ಮತ್ತು ಗಣಿತವನ್ನು ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳು ಈ ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು. ಆದರೆ ವಾಣಿಜ್ಯವನ್ನು ಕಲಿಯಲು ಬಯಸುವವರು ಅರ್ಥಶಾಸ್ತ್ರ, ಅಕೌಂಟ್ಸ್​ ಮತ್ತು ಇತರ ಸಂಬಂಧಿತ ವಿಷಯಗಳನ್ನು ಮಾತ್ರ ಅಧ್ಯಯನ ಮಾಡಬಹುದಾಗಿತ್ತು. ಆದರೆ ಜೀವಶಾಸ್ತ್ರ, ರಸಾಯನಶಾಸ್ತ್ರದಂತಹ ಪ್ರಮುಖ ವಿಜ್ಞಾನ ವಿಷಯಗಳನ್ನು ಸೇರಿಸಲು ಸಾಧ್ಯವಾಗಿರಲಿಲ್ಲ.


ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆ ನೀಡುವುದು


ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಇಷ್ಟದ ವಿಷಯಗಳನ್ನು ಆಯ್ಕೆ ಮಾಡಲು ಹೆಚ್ಚಿನ ಆಯ್ಕೆಗಳನ್ನು ಮತ್ತು ಅಧಿಕಾರವನ್ನು ನೀಡಬೇಕೆಂದು NFC ಸೂಚಿಸಿದೆ.


ಉದಾಹರಣೆಗೆ, ರಾಜಕೀಯ ವಿಜ್ಞಾನ, ಇತಿಹಾಸ ಮತ್ತು ಭೂಗೋಳದಂತಹ ಕಲಾ ವಿಷಯಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಯು ಗಣಿತವನ್ನು ಅಧ್ಯಯನ ಮಾಡಲು ಬಯಸಿದರೆ, ವಿದ್ಯಾರ್ಥಿಗೆ ಆ ವಿಷಯವನ್ನು ಆಯ್ದುಕೊಳ್ಳಲು ಅವಕಾಶ ನೀಡಬೇಕು ಎಂದು NFC ತಿಳಿಸಿದೆ.


ಸಲಹೆ ಹಾಗೂ ಶಿಫಾರಸು ಮಾತ್ರವಾಗಿದೆ


ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಸಲಹೆ ಅಥವಾ ಶಿಫಾರಸುಗಳನ್ನು ಶಿಕ್ಷಣ ಸಚಿವಾಲಯ ಇನ್ನೂ ಅಂಗೀಕರಿಸಿಲ್ಲ. NFC ಕರಡು ಪ್ರತಿಯನ್ನು ಮಾತ್ರವೇ ಸಚಿವಾಲಯದ ಮುಂದಿರಿಸಿದೆ ಎಂಬುದು ವರದಿಯಾಗಿದೆ.


ಈ ಶಿಫಾರಸುಗಳನ್ನು ಹಾಗೂ ಸಲಹೆಗಳನ್ನು NFC ಸಚಿವಾಲಯದ ಮುಂದಿರಿಸಿದೆ. ಇನ್ನು ಇವುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು NCERT ಹಾಗೂ ಶಿಕ್ಷಣ ಸಚಿವಾಲಯಕ್ಕೆ ಬಿಟ್ಟದ್ದು ಎಂದು ವಿಷಯ ನಿರ್ವಾಹಕ ಸಮಿತಿಯ ಸದಸ್ಯರೊಬ್ಬರು ಸುದ್ದಿತಾಣಕ್ಕೆ ತಿಳಿಸಿದ್ದಾರೆ.




ಜನರಿಂದ ಪ್ರತಿಕ್ರಿಯೆಗಳಿಗೆ ಸ್ವಾಗತ


ಸಮಿತಿಯು ಮುಂದಿರಿಸಿರುವ ಈ ಸೂಚನೆ ಹಾಗೂ ಶಿಫಾರಸುಗಳಿಗೆ ಜನರು ಸಲಹೆಗಳನ್ನು ನೀಡಬಹುದು ಎಂದು NFC ತಿಳಿಸಿದೆ.


ಸಲಹೆಗಳು ಮತ್ತು ಕಾಮೆಂಟ್‌ಗಳಿಗಾಗಿ ಡ್ರಾಫ್ಟ್ ಅನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ. ಇದು ಹೊಸ ಪಠ್ಯಕ್ರಮದ ಡ್ರಾಫ್ಟ್ ಆಗಿದ್ದು ಇನ್ನೂ ಅಂತಿಮ ನಿರ್ಧಾರ ಹಾಗೂ ಪ್ರಕಟಣೆಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು NFC ತಿಳಿಸಿದೆ.

First published: