ತುಮಕೂರು: ಕಾಲೇಜು, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ (Students) ಬುದ್ದಿ ಹೇಳಿ ಜೀವನವನ್ನು ಸರಿದಾರಿಗೆ ತರುವ ಶಿಕ್ಷರೇ ಮಕ್ಕಳ ಜೀವನವನ್ನು ಹಾಳು ಮಾಡುತ್ತಾರೆ ಎಂದರೆ ಏನು ಹೇಳೋದು ನೀವೆ ನೋಡಿ. ಚಿಕ್ಕ ವಯಸ್ಸಿನಲ್ಲೇ ಪ್ರೀತಿ (Love) ಪ್ರೇಮದ ಬಲೆಗೆ ತಾವಾಗಿಯೇ ಬಿದ್ದು ಶೈಕ್ಷಣಿಕ ಜೀವನವನ್ನು ಹಾಳು ಮಾಡಿಕೊಂಡು ತಮ್ಮ ವೃತ್ತಿ (Career) ಜೀವನದಲ್ಲಿ (Life) ಕಷ್ಟ ಪಡುವ ಎಷ್ಟೋ ಜನರಿದ್ದಾರೆ. ಅಂತವರನ್ನು ರಿದಾರಿಗೆ ತರಯವುದು, ಯಾವುದು ಸರಿ? ಯಾವುದು ತಪ್ಪು? ಎಂದು ಹೇಳಿಕೊಡುವ ಶಿಕ್ಷರೇ (Teachers) ತಪ್ಪುದಾರಿ ಹಿಡಿದಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ಘಟನೆ ನಡೆದಿದೆ.
ತುಮಕೂರಿನ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯರ ಮೊಬೈಲ್ ಗೆ ಅಸಭ್ಯ ಸಂದೇಶ ಕಳಿಸಿದ್ದಾರೆ. ಇದು ಬೆಳಕಿಗೆ ಬಂದ ವಿಚಾರವಾಗಿ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಪಿ.ನಾಗಭೂಷಣ್ ಅಮಾನತುಗೊಂಡ ಶಿಕ್ಷಕ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ಕೊಟಗಾರಲಹಳ್ಳಿ ಸರ್ಕಾರಿ ಪ್ರೌಡ ಶಾಲೆಯ ಸಹ ಶಿಕ್ಷಕರಾಗಿ ಇವರು ಕೆಲಸ ಮಾಡುತ್ತಿದ್ದರು.
ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕ
ಕೊಟಗಾರಲಹಳ್ಳಿ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿನಿಯರೊಡನೆ ಈ ಶಿಕ್ಷಕ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಶಿಕ್ಷಕನೇ ಉತ್ತರ ಬರೆದುಕೊಟ್ಟು ಹೆಚ್ಚು ಅಂಕ ನೀಡುತ್ತಿದ್ದ ಎಂಬ ಆರೋಪ ಕೂಡಾ ಕೇಳಿ ಬಂದಿದೆ. ಶಿಕ್ಷಕನಿಗೆ ವಿದ್ಯಾರ್ಥಿನಿಯರ ಮೇಲಿದ್ದ ಕೆಟ್ಟ ದೃಷ್ಟಿಯೇ ಈ ಅಮಾನತಿಗೆ ಕಾರಣವಾಗಿದೆ.
ಇದನ್ನೂ ಓದಿ: Teacher: ಶಿಕ್ಷಕಿ ಜೊತೆ ವಿದ್ಯಾರ್ಥಿಗಳ ಅಸಭ್ಯ ವರ್ತನೆ! ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟ ಹುಡುಗರು
ಈ ಆರೋಪದ ವಿಚಾರವಾಗಿ ಕಾರಣ ಕೇಳಿ ಶಿಕ್ಷಕ ಪಿ.ನಾಗಭೂಷಣ್ ಗೆ ನೋಟಿಸ್ ನೀಡಿದ್ದ ಮುಖ್ಯ ಶಿಕ್ಷಕ ಸುಮಾರು ದಿನಗಳ ಕಾಲ ತನ್ನ ಮರ್ತನೆಯನ್ನು ಬದಲಾಯಿಸಿಕೊಳ್ಳಲು ಅವಕಾಶವನ್ನೂ ಸಹ ನೀಡಿದ್ದರು. ಆದರೂ ಸಹ ಅದೇ ರೀತಿ ಅಸಭ್ಯ ವರ್ತನೆಯನ್ನು ಮುಂದುವರಿಸಿದ ಕಾರಣ ವಿದ್ಯಾರ್ಥಿನಿಯರಿಗೆ ತೊಂದರೆಯಾಗಬಾರದು ಎಂದು ಅಮಾನತು ಮಾಡಲಾಗಿದೆ.
ತಪ್ಪೊಪ್ಪಿಗೆ ಪತ್ರ ಬರೆದಿದ್ದರೂ ತಿದ್ದಿಕೊಂಡಿಲ್ಲ
ತನ್ನ ತಪ್ಪನ್ನು ತಿದ್ದಿಕೊಳ್ಳುವುದಾಗಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದ ಶಿಕ್ಷಕ ಪಿ.ನಾಗಭೂಷಣ್ ಎಷ್ಟು ದಿನವಾದ್ರು ಇದನ್ನೇ ಮುಂದುವರಿಸಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಕನ ಈ ದುರ್ವರ್ತನೆ ವಿದ್ಯಾರ್ಥಿಗಳ ಕಲಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆ ಅಮಾನತು ಮಾಡಲಾಗಿದೆ ಎಂದು ಮುಖ್ಯೋಪಾದ್ಯಾಯರು ಹೇಳಿದ್ದಾರೆ. ಅಮಾನತು ಆದೇಶ ಹೊರಡಿಸಿದ ಮಧುಗಿರಿ ಡಿ.ಡಿ.ಪಿ.ಐ ಕೆ.ಜಿ.ರಂಗಯ್ಯ ಅವರನ್ನು ಕೆಲಸದಿಂದ ಹೊರನಡೆಯುವಂತೆ ಆದೇಶ ನೀಡಿದ್ದಾರೆ.
ಶಿಕ್ಷಕಿಗೆ ತರಗತಿಯಲ್ಲೇ ಐ ಲವ್ ಯೂ ಎಂದ ವಿದ್ಯಾರ್ಥಿಗಳು
ಇದುವರೆಗೆ ಟೀಚರ್ ಹೊಡೆದರೆಂದು ಮಕ್ಕಳು ಪೋಷಕರನ್ನು ಕರೆದುಕೊಂಡು ಬಂದು ಶಾಲೆಯಲ್ಲಿ ಗಲಾಟೆ ಮಾಡಿದ ಹಲವು ಘಟನೆಗಳನ್ನು ನೀವು ಗಮನಿಸಿರುತ್ತೀರಿ. ಆದರೆ ಈಗ ಉತ್ತರಪ್ರದೇಶದ ಮೀರತ್‌ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ತಮಗೆ ಪಾಠ ಮಾಡಿದ ಶಿಕ್ಷಕಿಯ ಜೊತೆಯೇ ವಿದ್ಯಾರ್ಥಿಗಳು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.
12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ
12ನೇ ತರಗತಿಯಲ್ಲಿ ಓದುತ್ತಿರುವ ಅಮನ್, ಕೈಫ್ ಹಾಗೂ ಅಮಲ್ತಾಸ್ ಎಂಬ ವಿದ್ಯಾರ್ಥಿಗಳು ತರಗತಿಯೊಳಗೆ ಶಿಕ್ಷಕಿ ಪಾಠ ಮಾಡುತ್ತಿದ್ದಾಗಲೇ ಅವರಿಗೆ ಐ ಲವ್‌ಯೂ ಹೇಳಿ ಮುಜುಗರಕ್ಕೀಡು ಮಾಡಿದ್ದಾರೆ. ನಂತರ ಶಾಲೆಯ ಪ್ರಾರ್ಥನಾ ಸಮಯದ ವೇಳೆ ಎಲ್ಲ ವಿದ್ಯಾರ್ಥಿಗಳು ಸೇರಿದ ವೇಳೆಯೂ ಕೆಟ್ಟ ಪದಗಳಿಂದ ಶಿಕ್ಷಕಿಗೆ ಕಾಮೆಂಟ್ ಮಾಡಿದ್ದಾರೆ. ಈ ಘಟನೆಯಿಂದ ಶಿಕ್ಷಕಿಯೇ ಖಿನ್ನತೆಗೊಳಗಾಗಿದ್ಧಾರೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ