TSPSC ನಡೆಸುವ ಗ್ರೂಪ್ 1 ಮುಖ್ಯ ಪರೀಕ್ಷೆಯ ಪರೀಕ್ಷೆಯ ದಿನಾಂಕಗಳನ್ನು ಈಗಾಗಲೇ ಬಿಡುಗಡೆ (Release) ಮಾಡಲಾಗಿದೆ. ಈ ವೇಳಾಪಟ್ಟಿಯ ಪ್ರಕಾರ ಯಾವ ಪರೀಕ್ಷೆ ಯಾವ ದಿನಾಂಕದಂದು ನಡೆಯಲಿದೆ ಎನ್ನುವ ಮಾಹಿತಿ (Information) ನೀಡಿದ್ದೇವೆ ಗಮನಿಸಿ. ನೀವೂ ಕೂಡಾ ಈ ಪರೀಕ್ಷೆ ಬರೆಯಲು ಆಸಕ್ತರಾಗಿದ್ದರೆ. ಈ ವೇಳಾಪಟ್ಟಿ ಅನುಸಾರ ಪರೀಕ್ಷೆ ನಡೆಯುತ್ತದೆ ಗಮನಿಸಿ. ಅಧಿಕೃತ ಜಾಲತಾಣದಲ್ಲಿ ಬಿಡುಗಡೆಯಾದ ಮಾಹಿತಿ ಅನುಸಾರ ಈ ಕೆಳಗೆ ನೀಡಲಾದ ದಿನಾಂಕದಂದು ಪರೀಕ್ಷೆ ನಡೆಯುತ್ತದೆ. ಆದಷ್ಟು ಬೇಗ ಪರೀಕ್ಷಾ (Exam) ಸಿದ್ಧತೆ ಆರಂಭಿಸಿ ಇನ್ನೂ ಐದು ತಿಂಗಳ ಕಾಲಾವಕಾಶವಿದೆ. ಜೂನ್ ತಿಂಗಳಲ್ಲಿ ಪರೀಕ್ಷೆ ಆರಂಭವಾಗಲಿದೆ.
TSPSC ಬಿಡುಗಡೆ ಮಾಡಿದ ದಿನಾಂಕದ ಪ್ರಕಾರ ವೇಳಾಪಟ್ಟಿ ಮತ್ತದರ ದಿನಾಂಕವನ್ನು ನೀಡಲಾಗಿದೆ. ಈ ದಿನಾಂಕಗಳಂದೇ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಗಳು ಜೂನ್ 05 ರಿಂದ ಜೂನ್ 12 ರವರೆಗೆ ನಡೆಯಲಿದೆ.
ಜೂನ್ 05 ರಿಂದ ಜೂನ್ 12 ರವರೆಗೆ ಪರೀಕ್ಷೆ
ಮುಖ್ಯ ಪರೀಕ್ಷೆಗೆ ತಾತ್ಕಾಲಿಕವಾಗಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಜೂನ್ 05 ರಿಂದ ಜೂನ್ 12 ರವರೆಗೆಹೈದರಾಬಾದ್ ನಲ್ಲಿ ಮಾತ್ರ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಲಾಗಿದೆ. ಮುಖ್ಯ ಪರೀಕ್ಷೆಯನ್ನು ಇಂಗ್ಲಿಷ್, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ನಡೆಸಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಸಾಮಾನ್ಯ ಇಂಗ್ಲಿಷ್ ಹೊರತುಪಡಿಸಿ ಉಳಿದ 6 ಪತ್ರಿಕೆಗಳನ್ನು ಮೆರಿಟ್ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ.
ಇದನ್ನೂ ಓದಿ: Anganwadi Workers: ಅಕ್ಕಂದಿರ ಮೊರೆ ಕೇಳದ ಸರ್ಕಾರ! 10ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಜೂನ್ 06 ರಂದು - ಪೇಪರ್ 1 - ಜನರಲ್
ಜೂನ್ 07 ರಂದು - ಪೇಪರ್ 2- ಇತಿಹಾಸ, ಭೂಗೋಳ, ಸಂಸ್ಕೃತಿ
ಜೂನ್ 08 ರಂದು - ಪೇಪರ್ 3 - ಭಾರತೀಯ ಸಮಾಜ, ಸಂವಿಧಾನ, ಆಡಳಿತ
ಜೂನ್ 09 ರಂದು - ಪೇಪರ್ 4 - ಆರ್ಥಿಕತೆ ಮತ್ತು ಅಭಿವೃದ್ಧಿ
ಜೂನ್ 10 ರಂದು - ಪೇಪರ್ 5 - ವಿಜ್ಞಾನ ಮತ್ತು ತಂತ್ರಜ್ಞಾನ, ಡೇಟಾ ಇಂಟರ್ಪ್ರಿಟೇಶನ್
ಜೂನ್ 12 ರಂದು - ಪೇಪರ್ 6 - ತೆಲಂಗಾಣ ಚಳುವಳಿ ಮತ್ತು ರಚನೆಕುರಿತು
ಅರ್ಹತಾ ಪರೀಕ್ಷೆ ಸಾಮಾನ್ಯವಾಗಿ ಇಂಗ್ಲೀಷ್ ಭಾಷೆಯಲ್ಲಿ ನಡೆಯುತ್ತದೆ
ಅರ್ಹತಾ ಪರೀಕ್ಷೆ ಸಾಮಾನ್ಯವಾಗಿ ಇಂಗ್ಲೀಷ್ ಭಾಷೆಯಲ್ಲಿ ನಡೆಯುತ್ತದೆ. ಅಭ್ಯರ್ಥಿಗಳು ತಮ್ಮ ಆಯ್ಕೆಯ ಭಾಷೆಯಾಗಿ ಇಂಗ್ಲೀಷ್ - ತೆಲುಗು ಅಥವಾ ಉರ್ದು - ತೆಲುಗು ಆಯ್ಕೆ ಮಾಡಿಕೊಳ್ಳಬೇಕು. ಪತ್ರಿಕಾ ಟಿಪ್ಪಣಿಯಲ್ಲಿ TSPSC ಪತ್ರಿಕೆಯ ಒಂದು ಭಾಗವನ್ನು ಇಂಗ್ಲಿಷ್‌ನಲ್ಲಿ ಮತ್ತು ಒಂದು ಭಾಗವನ್ನು ತೆಲುಗು ಅಥವಾ ಉರ್ದುವಿನಲ್ಲಿ ಬರೆಯಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಯಾವುದಾದರೂ ಒಂದೇ ಭಾಷೆಯಲ್ಲಿ ಸಂಪೂರ್ಣ ಉತ್ತರ ಪತ್ರಿಕೆಯನ್ನು ಬರೆಯಲು ಸೂಚಿಸಲಾಗಿದೆ.
ಇಂಗ್ಲಿಷ್ ಪತ್ರಿಕೆ ಕೇವಲ ಅರ್ಹತಾ ಮಾನದಂಡದ ಪರೀಕ್ಷೆಯಾಗಿದೆ
ಸಾಮಾನ್ಯ ಇಂಗ್ಲಿಷ್ ಪತ್ರಿಕೆ ಕೇವಲ ಅರ್ಹತಾ ಮಾನದಂಡದ ಪರೀಕ್ಷೆಗಾಗಿ ನಡೆಸಲಾಗುವ ಪರೀಕ್ಷೆಯಾಗಿದ್ದು ಇದನ್ನು ನಂತರ ಕೊನೆಯ ಫಲಿತಾಂಶದ ಅಂಕಕ್ಕೆ ಸೇರಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಇದರಲ್ಲಿ ಮಾಧ್ಯಮಿಕ ಶಾಲಾ ಮಟ್ಟದ ಪ್ರಶ್ನೆಗಳು ಇರುತ್ತವೆ. ಈ ಪರೀಕ್ಷೆ ಪತ್ರಿಕೆಯಲ್ಲಿ ಪಡೆದ ಅಂಕಗಳನ್ನು ಶ್ರೇಯಾಂಕಕ್ಕೆ ಪರಿಗಣಿಸಲಾಗುವುದಿಲ್ಲ. ಇನ್ನೂ ಹಲವು ದಿನಗಳ ಕಾಲಾವಕಾಶವಿದೆ. ಈಗಿನಿಂದಲೇ ಓದಲು ಆರಂಭಿಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ.
ಆರು ಪತ್ರಿಕೆಗಳಿಗೆ 150 ನಿಗದಿಪಡಿಸಲಾಗಿದೆ
ಎಲ್ಲಾ ಪತ್ರಿಕೆಗಳ ಪರೀಕ್ಷೆಯ ಸಮಯವು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ ಇರುತ್ತದೆ. ಪ್ರತಿ ಪತ್ರಿಕೆಯು 3 ಗಂಟೆಗಳ ಅವಧಿಯದ್ದಾಗಿದೆ. ಆರು ಪತ್ರಿಕೆಗಳಿಗೆ 150 ಅಂಕಗಳನ್ನು ನಿಗದಿಪಡಿಸಲಾಗಿದೆ. ಇಂಗ್ಲಿಷ್‌ನಲ್ಲಿ ಅರ್ಹತೆ ಪಡೆದರೆ ಸಾಕು. ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಿ ಮೊದಲ ಹದಿನೈದು ನಿಮಿಷದಲ್ಲೇ ಪರೀಕ್ಷಾ ಕೊಠಡಿಗೆ ತೆರಳಿರುವಂತೆ ಸೂಚಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ