• ಹೋಂ
  • »
  • ನ್ಯೂಸ್
  • »
  • Jobs
  • »
  • TS Inter Exam: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಇಂದೇ ಫಲಿತಾಂಶ ಪ್ರಕಟ

TS Inter Exam: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಇಂದೇ ಫಲಿತಾಂಶ ಪ್ರಕಟ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ನಿಮ್ಮ ಪರೀಕ್ಷೆಯ ಅಂಕಗಳನ್ನು ನೋಡಲು ನಾವು ನಿಮಗೆ ಸಹಾಯ ಮಾಡುತ್ತೇವೆ. ನೀವು ನಾವು ಹೇಳಿದ ಹಂತಗಳನ್ನು ಅನುಸರಿಸಿದರೆ ಸಾಕು ಸುಲಭವಾಗಿ ಫಲಿತಾಂಶ ಚೆಕ್ ಮಾಡಬಹುದು.

  • Share this:

ಈಗಾಗಲೇ ಎಪಿ ಮತ್ತು ಇಂಟರ್ ಫಲಿತಾಂಶ ಪ್ರಕಟವಾಗಿರುವ ಹಿನ್ನಲೆಯಲ್ಲಿ ತೆಲಂಗಾಣದ ಲಕ್ಷಾಂತರ ವಿದ್ಯಾರ್ಥಿಗಳು (Student) ಹಾಗೂ ಅವರ ಪೋಷಕರು ತೆಲಂಗಾಣ ಇಂಟರ್ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಅವರೆಲ್ಲರಿಗೂ ಇಲ್ಲಿ ಸಂತೋಷದ ವಿಚಾರವುದೆ. ಹಲವಾರು ದಿನ ಕಾದ ವಿದ್ಯಾರ್ಥಿಗಳಿಗೆ ಈಗ ಫಲಿತಾಂಶದ (Result) ಸಿಹಿ ಸಿಗಲಿದೆ. ಹನ್ನೊಂದು ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಲಾಗಿತ್ತು. ನಾವು ನೀಡಿರುವ ಅಧಿಕೃತ ಜಾಲತಾಣಕ್ಕೆ (Website) ಭೇಟಿ ನೀಡುವ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು. ಆದಷ್ಟು ಬೇಗ ನಿಮ್ಮ ಫಲಿತಾಂಶವನ್ನು ಚೆಕ್ ಮಾಡಲು ಈ ಕೆಳಗೆ ನಾವು ನೀಡಿರುವ ಹಂತಗಳನ್ನು ಪಾಲಿಸಿ. 


ನೀವು ನಿಮ್ಮ ಪರೀಕ್ಷೆಯ ಅಂಕಗಳನ್ನು ನೋಡಲು ನಾವು ನಿಮಗೆ ಸಹಾಯ ಮಾಡುತ್ತೇವೆ. ನೀವು ನಾವು ಹೇಳಿದ ಹಂತಗಳನ್ನು ಅನುಸರಿಸಿದರೆ ಸಾಕು. ಇಂದು ಬೆಳಗ್ಗೆ 11 ಗಂಟೆಗೆ ಫಲಿತಾಂಶ ಹೊರಬೀಳಲಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಈ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ. ವಿದ್ಯಾರ್ಥಿಗಳು ಅವರ ಫಲಿತಾಂಶಗಳನ್ನು https://tsbie.cgg.gov.in ಭೇಟಿ ನೀಡುವ ಮೂಲಕ ಚೆಕ್ ಮಾಡಬಹುದು.


ಇದನ್ನೂ ಓದಿ: NEET Exam: ವಿದ್ಯಾರ್ಥಿಗಳ ಒಳ ಉಡುಪು ಪರಿಶೀಲನೆ, ಸಮಯ ಮೀರಿದ್ದಕ್ಕೆ ಟಾಪ್ ಕಳಚಿಟ್ಟು ಪರೀಕ್ಷೆ ಬರೆದ ಮಕ್ಕಳು!


ನೀವು ಅದನ್ನು ವೆಬ್‌ಸೈಟ್‌ನಲ್ಲಿ ಚೆಕ್​ ಮಾಬಹುದು. ಈ ವೆಬ್‌ಸೈಟ್‌ಗಳ ಜೊತೆಗೆ ನಿಮಗೆ ನಿಮ್ಮ ಅಂಕಪಟ್ಟಿಯ ಸವಿವರ ಮಾಹಿತಿ ಕೂಡಾ ಲಭ್ಯವಾಗಲಿದೆ. ಹಲವು ದಿನಗಳಿಂದ ತೆಲಂಗಾಣ ಇಂಟರ್ ಫಲಿತಾಂಶ ಪ್ರಕಟವಾಗುವ ಕುರಿತು ವಿದ್ಯಾರ್ಥಿಗಳಿಗೆ ಭಾರಿ ಸಂಭ್ರಮವಿತ್ತು. ಈಗ ಆ ಸಂಭ್ರಮ ನನಸಾಗಲಿದೆ.


ಕೊನೆಗೂ ಇಂದು ಘೋಷಣೆ ಹೊರಬಿದ್ದಿದೆ. ಮಂಡಳಿಯ ಫಲಿತಾಂಶ ಬಿಡುಗಡೆ ದಿನಾಂಕದ ಬಗ್ಗೆ ಸ್ಪಷ್ಟನೆ ದೊರೆತ ನಂತರ ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಅಂತರ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿತ್ತು. ವಿವಿಧ ಮಾಧ್ಯಮಗಳಲ್ಲಿ ಹರಡುತ್ತಿರುವ ಸುಳ್ಳು ಪ್ರಚಾರಗಳನ್ನು ನಂಬಬೇಡಿ ಎಂದು ಮಂಡಳಿಯು ತನ್ನ ಪ್ರಕಟಣೆಯಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದೆ.




ಈ ಹಂತಗಳನ್ನು ಅನುಸರಿಸಿ ರಿಸಲ್ಟ್​ ಚೆಕ್ ಮಾಡಿ


ಹಂತ 1- ನಾವು ಇಲ್ಲಿ ನೀಡಿರುವ ಅಧಿಕೃತ ಜಾಲತಾಣ ತೆರೆಯಿರಿ


ಹಂತ 3- ಹಾಲ್ ಟಿಕೆಟ್ ಸಂಖ್ಯೆಯನ್ನು ನಮೂದಿಸಿ


ಹಂತ 4- ಫಲಿತಾಂಶಗಳು ಪರದೆಯ ಮೇಲೆ ಓಪನ್​ ಆಗುತ್ತದೆ


ಹಂತ 5- ಫಲಿತಾಂಶಗಳ ಪ್ರತಿಯನ್ನು PDF ರೂಪದಲ್ಲಿ ಮುದ್ರಿಸಬಹುದು ಮತ್ತು ಸೇವ್​ ಮಾಡಬಹುದು


ಇಂಟರ್ ಫಲಿತಾಂಶಗಳನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಈ ರೀತಿ ಪರಿಶೀಲಿಸಬಹುದು.


ಹಂತ 1: ಫಲಿತಾಂಶಗಳ ಬಿಡುಗಡೆಯ ನಂತರ ಅಭ್ಯರ್ಥಿಗಳು ಮೊದಲು ಇಂಟರ್ ಬೋರ್ಡ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://tsbie.cgg.gov.inತೆರೆಯಬೇಕು.


ಹಂತ 2: ಅದರ ನಂತರ ಇಂಟರ್ ಫಲಿತಾಂಶಗಳಿಗೆ ಸಂಬಂಧಿಸಿದ ಲಿಂಕ್ ಮುಖಪುಟದಲ್ಲಿ ಕಾಣಿಸುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ.

top videos


    ಹಂತ 3: ಹೊಸ ಪುಟ ತೆರೆಯುತ್ತದೆ. ಅಲ್ಲಿ ಹಾಲ್ ಟಿಕೆಟ್ ಸಂಖ್ಯೆಯನ್ನು ನಮೂದಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಈ ಮೇಲೆ ನಾವು ತಿಳಿಸಿದ ಹಂತಗಳನ್ನು ನೀವು ಅನುಸರಿಸಿದರೆ ಖಂಡಿತ ನಿಮಗೆ ಫಲಿತಾಂಶ ಲಭ್ಯವಾಗಿರುತ್ತದೆ.

    First published: