ಕರ್ನಾಟಕ (Karnataka) ಸೇರಿದಂತೆ ವಿವಿಧ ಬಿಜೆಪಿ ಆಡಳಿತದ ರಾಜ್ಯಗಳು ಮದರಸಾಗಳಲ್ಲಿ ಪ್ರಚಲಿತ ಶಿಕ್ಷಣವನ್ನು (Education) ಪರಿಚಯಿಸಲು ಚಿಂತನೆ ನಡೆಸಿದೆ. ಬೀದರ್ ಮೂಲದ ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ (ಎಸ್‌ಜಿಐ) ಇತ್ತೀಚೆಗೆ ಮುಖ್ಯವಾಹಿನಿಯ ಶಿಕ್ಷಣವನ್ನು ನೀಡುವ ಮೂಲಕ 10,000 ಮದ್ರಸಾ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವನ್ನು (Job Opportunity) ಹೆಚ್ಚಿಸಲು ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
1,400 ವಿದ್ಯಾರ್ಥಿಗಳಿಗೆ ತರಬೇತಿ
ಕರ್ನಾಟಕದಲ್ಲಿ, ಸಂಸ್ಥೆಯು NIOS (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್) ಮತ್ತು ರಾಜ್ಯ ಬೋರ್ಡ್ ಪಠ್ಯಕ್ರಮದ ಆಧಾರದ ಮೇಲೆ 1,400 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ನಿರೀಕ್ಷೆಯಿದೆ.
ರಂಜಾನ್ ವಿರಾಮದ ನಂತರ ಮೇ 20 ರಂದು ತರಗತಿಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಕಳಪೆ ಗುಣಮಟ್ಟದ ಶಿಕ್ಷಣ ಎಂಬ ಕಾರಣಕ್ಕಾಗಿ ಪೋಷಕರಿಂದ ದೂರುಗಳನ್ನು ಸ್ವೀಕರಿಸಿದ ನಂತರ ರಾಜ್ಯ ಸರ್ಕಾರವು ಮದ್ರಸಾಗಳಲ್ಲಿ ಪ್ರಚಲಿತ ಶಿಕ್ಷಣವನ್ನು ಪರಿಚಯಿಸಲು ಯೋಜಿಸುತ್ತಿದೆ ಎಂದು ತಿಳಿಸಿದೆ.
SGI ಭಾರತದಾದ್ಯಂತ 50 ಮದ್ರಸಾಗಳಲ್ಲಿ 5,000 ಹಫಾಜ್ (ಮದ್ರಸಾ ಬಿಟ್ಟವರು) ಮತ್ತು 5,000 ಮದ್ರಸಾ ವಿದ್ಯಾರ್ಥಿಗಳಿಗೆ ಪ್ರಚಲಿತ ಶಿಕ್ಷಣವನ್ನು ಒದಗಿಸಲು ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದೆ.
ಮದ್ರಸಾ ಪ್ಲಸ್ ಎಂಬ ಯೋಜನೆ
'ಮದ್ರಸಾ ಪ್ಲಸ್' ಶೀರ್ಷಿಕೆಯಡಿಯಲ್ಲಿ ನಡೆಯುವ ಕಾರ್ಯಕ್ರಮವು 18-ತಿಂಗಳ ಕೋರ್ಸ್ ಆಗಿದ್ದು, ಶಾಲೆಯಿಂದ ಹೊರಗುಳಿಯುವವರಿಗೆ, ಎಂದಿಗೂ ಶಾಲೆಗೆ ಹೋಗದವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಗೆ ದಾಖಲಾಗಲು ಮತ್ತು ಉತ್ತೀರ್ಣರಾಗಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: Summer Vacationನಲ್ಲಿ ನಿಮ್ಮ ಮಕ್ಕಳನ್ನು ಈ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗಿ
ಆಧುನಿಕ ಶಿಕ್ಷಣ ನೀಡಲು ಆರು ಮದ್ರಸಾಗಳ ಆಯ್ಕೆ
SGI ಪ್ರಕಾರ, ಪ್ರೋಗ್ರಾಂ ಪ್ರಾಥಮಿಕವಾಗಿ ಬ್ರಿಡ್ಜ್ ಕೋರ್ಸ್‌ಗಳು ಮತ್ತು ವೈಯಕ್ತಿಕಗೊಳಿಸಿದ ಬೋಧನಾ ತರಗತಿಗಳ ಮೂಲಕ ಮದ್ರಸಾ-ವಿದ್ಯಾವಂತ ವಿದ್ಯಾರ್ಥಿಗಳನ್ನು ಪ್ರಮುಖ ಶಿಕ್ಷಣಕ್ಕೆ ಸಂಯೋಜಿಸುವ ಗುರಿಯನ್ನು ಹೊಂದಿದೆ.
ಕರ್ನಾಟಕದಲ್ಲಿ ಬೀದರ್, ತುಮಕೂರು, ರಾಮನಗರ, ಹಾಸನ, ಹುಬ್ಬಳ್ಳಿ ಮತ್ತು ಶ್ರೀರಂಗಪಟ್ಟಣದಲ್ಲಿ ಆರು ಮದ್ರಸಾಗಳನ್ನು ಆಧುನಿಕ ಶಿಕ್ಷಣ ನೀಡಲು ಗುರುತಿಸಲಾಗಿದೆ.
NIOS ಪಠ್ಯಕ್ರಮ ಕಡ್ಡಾಯ
ಎಸ್‌ಜಿಐನ ಸಿಇಒ ಡಾ. ತೌಸೆಫ್ ಮಡಿಕೇರಿ ತಿಳಿಸಿರುವಂತೆ, ಕರ್ನಾಟಕ ಮದ್ರಸಾ ವಿದ್ಯಾರ್ಥಿಗಳಿಗೆ ಎನ್‌ಐಒಎಸ್ ಮತ್ತು ಸ್ಟೇಟ್ ಬೋರ್ಡ್ ಪಠ್ಯಕ್ರಮದ ಆಧಾರದ ಮೇಲೆ ಕಲಿಸಲಾಗುತ್ತದೆ.
ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ಇತರೆ ರಾಜ್ಯಗಳ ವಿದ್ಯಾರ್ಥಿಗಳು ಮದ್ರಸಾಗಳಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ NIOS ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.
ಇಲ್ಲವಾದಲ್ಲಿ ಕನ್ನಡ ಕಡ್ಡಾಯವಾಗಿರುವ ಕಾರಣ ಈ ವಿದ್ಯಾರ್ಥಿಗಳು ರಾಜ್ಯ ಮಂಡಳಿಯ ಪಠ್ಯಕ್ರಮವನ್ನು ಓದುವುದು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ವಿದ್ಯಾರ್ಥಿಗಳು ಇರುವಲ್ಲಿ ಮಾತ್ರ ನಾವು ಅವರಿಗೆ ರಾಜ್ಯ ಮಂಡಳಿಯ ಪಠ್ಯಕ್ರಮವನ್ನು ಕಲಿಸುತ್ತಿದ್ದೇವೆ ಎಂದು ಮಡಿಕೇರಿ ತಿಳಿಸಿದ್ದಾರೆ. NIOS ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನವನ್ನು ಒಳಗೊಂಡಿದ್ದರೆ, ರಾಜ್ಯ ಬೋರ್ಡ್ ಪಠ್ಯಕ್ರಮವು ಕನ್ನಡ, ಹಿಂದಿ, ಇಂಗ್ಲಿಷ್, ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಗಣಿತವನ್ನು ಒಳಗೊಂಡಿದೆ.
500 ಶಿಕ್ಷಕರನ್ನು ನೇಮಿಸಿಕೊಳ್ಳಲು ಕ್ಯಾಂಪಸ್ ನೇಮಕಾತಿ
ವಾಸ್ತವವಾಗಿ, ಈ ಯೋಜನೆಗಾಗಿ 500 ಶಿಕ್ಷಕರನ್ನು ನೇಮಿಸಿಕೊಳ್ಳಲು ಕ್ಯಾಂಪಸ್ ನೇಮಕಾತಿ ಡ್ರೈವ್ ಅನ್ನು ಆಯೋಜಿಸಲು SGI ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದೊಂದಿಗೆ ಸಹ ಸಹಯೋಗಿಸುತ್ತಿದೆ.
ಆಯ್ಕೆಯಾದ ಶಿಕ್ಷಕರಿಗೆ ಆಹಾರ ಭತ್ಯೆಯೊಂದಿಗೆ ಮಾಸಿಕ ರೂ 15,000 ರೂ.ನಿಂದ 30,000 ರೂ ನೀಡಲಾಗುತ್ತಿದೆ. ಆದರೆ, ಮದ್ರಸಾ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ನೀಡುವುದಕ್ಕೆ ಕೆಲವು ಮೌಲಾನಾಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹತ್ತನೇ ತರಗತಿ ಪರೀಕ್ಷೆಗೆ ಹಾಜರಾಗುವ ಅವಕಾಶ
ಹತ್ತನೇ ತರಗತಿ ಉತ್ತೀರ್ಣರಾದ ನಂತರ ಡಿಪ್ಲೊಮಾ, ಪಾಲಿಟೆಕ್ನಿಕ್ ಮತ್ತು ಇತರ ಉನ್ನತ ಅಧ್ಯಯನಗಳನ್ನು ಮುಂದುವರಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ವಿದ್ಯಾರ್ಥಿಗಳು ಅಕ್ಟೋಬರ್ 2024 ರಲ್ಲಿ ಹತ್ತನೇ ತರಗತಿ ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ