ಉಚಿತವಾಗಿ ಯಾವುದೇ ಶುಲ್ಕ ಪಾವತಿಸದೇ ನೀವು ಪರೀಕ್ಷೆಗಳಿಗೆ (Training) ತರಬೇತಿ ಪಡೆಯಲು ಸಹಾಯಕವಾಗುವ ಒಂದು ಆ್ಯಪ್ ಬಗ್ಗೆ ಇಲ್ಲಿದೆ ಮಾಹಿತಿ. ಈ ಮಾಹಿತಿ ಅನುಸಾರ ನೀವು ಈ ಆ್ಯಪ್ (App) ಉಪಯೋಗಿಸಬಹುದು. ಉಚಿತವಾಗಿ ಪ್ಲೇ ಸ್ಟೋರ್ನಲ್ಲಿ ನೀವಿದನ್ನು ಡೌನ್ಲೋಡ್ ಮಾಡಬಹುದು. ಇದು ನಿಮ್ಮ ಪರೀಕ್ಷಾ ತಯಾರಿಗೆ ತುಂಬಾ ಸಹಕಾರಿಯಾಗಿದೆ. ಹಲವಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ (Students) ಇದು ಪ್ರಯೋಜನ ಒದಗಿಸುತ್ತಿದೆ. ವಾರ್ಷಿಕ ಪರೀಕ್ಷೆಗಳು (Annual Exams) ಈಗ ಹತ್ತಿರ ಬರುತ್ತಿದ್ದು ಸಿದ್ಧತೆ ನಡೆಸುತ್ತಿದ್ದರೆ ಈ ಆ್ಯಪ್ನಿಂದಲೂ ಪ್ರಯೋಜನ ಪಡೆದುಕೊಳ್ಳಬಹುದು.
ನೀವು ನೇರವಾಗಿ ಪ್ಲೇಸ್ಟೋರ್ಗೆ ಭೇಟಿ ನೀಡಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಸಿಬಿಎಸ್ಇ ಮತ್ತು ಐಸಿಎಸ್ಇ ಪರೀಕ್ಷೆಗಳಿಗೆ ತಯಾರಿ ನಡೆಸಲು ನಿಮಗೆ ಇದು ಸೂಕ್ತವಾಗಿದೆ. ಟಾಪರ್ಲರ್ನಿಂಗ್ ಎಕ್ಸಾಮ್ ಪ್ರೆಪ್ ಅಪ್ಲಿಕೇಶನ್ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನಿಮಗೆ ಬೇಕಾದ ಎಲ್ಲಾ ರೀತಿಯ ಪಠ್ಯ ಪುಸ್ತಕದ ಮಾಹಿತಿಯೂ ಸಹ ಇದರಲ್ಲಿ ಲಭ್ಯವಿದೆ. ಆನ್ಲೈನ್ ಕ್ಲಾಸ್ ಕೂಡಾ ನೀವು ಇದರಲ್ಲಿ ಕೇಳಬಹುದು.
ಪರೀಕ್ಷೆ ಸಿದ್ಧತೆಗಳಿಗೆ ಇದು ತುಂಬಾ ಸಹಕಾರಿ
ಪರೀಕ್ಷೆಗೆ ತಯಾರಾಗಲು ಮತ್ತು ಉತ್ತಮ ಅಂಕಗಳಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಟಾಪರ್ಲರ್ನಿಂಗ್ನ ಪರೀಕ್ಷೆಯ ಅಪ್ಲಿಕೇಶನ್ ಓಪನ್ ಮಾಡಿ ನೀವು ಅಲ್ಲಿನ ಮಾಹಿತಿ ಪಡೆದುಕೊಳ್ಳಿ. ನಾವು ಇಲ್ಲಿ ನೀಡಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ನೀವು ಡೈರೆಕ್ಟ್ ಆಗಿ ಅಪ್ಲಿಕೇಶನ್ಗೆ ಭೇಟಿ ನೀಡಬಹುದು. ಹಾಗೆ ಮಾಡಲು ನೀವು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Reliance Scholarship: ವಾಟ್ಸಪ್ನಲ್ಲಿ ಹಾಯ್ ಎಂದು ಮೆಸೇಜ್ ಮಾಡಿದ್ರೆ ಸಾಕು 6 ಲಕ್ಷ ಸ್ಕಾಲರ್ಶಿಪ್ ಸಿಗುತ್ತೆ!
ಶಿಕ್ಷಕರಿಗೂ ಸಹ ಈ ಆ್ಯಪ್ ಸಹಾಯವಾಗುತ್ತದೆ. ಮಕ್ಕಳಿಗೆ ಕಲಿಸಲು ಬೇಕಾದ ಅಂಶಗಳು ಇಲ್ಲಿ ನಿಮಗೆ ಲಭ್ಯವಿದೆ. ಪ್ರಶ್ನೆ ಪತ್ರಿಕೆಗಳ ಬ್ಯಾಂಕ್ ಇಲ್ಲಿ ನಿಮಗೆ ಸಿಗುತ್ತದೆ. ಶಾಲೆಯಲ್ಲಿ ಕಲಿಸುವ ವಿಷಯಗಳ ಹೊರತಾಗಿ ಯಾವುದಾದರೂ ವಿಷಯದ ಬಗ್ಗೆ ತಿಳಿಯಬೇಕೆಂದರೂ ಸಹ ಇದು ನಿಮಗೆ ಸಹಕಾರಿಯಾಗಿದೆ.
ಎಲ್ಲಾ ವಿಷಯಗಳ ಪ್ರಶ್ನೆ ಪತ್ರಿಕೆ ಲಭ್ಯ
ಹೊಸ ಶಿಕ್ಷಣದ ಕೇಂದ್ರ ಬಿಂದುವಾಗಿರುವ ಈ ಆ್ಯಪ್ ನಿಮಗೆ ಹೊಸ ರೀತಿಯ ಪಠ್ಯಗಳನ್ನು ಅಪ್ಡೇಟೆಡ್ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ. ಪ್ರಶ್ನೆ ಪತ್ರಿಕೆಗಳು ಕೂಡಾ ನಿಮಗೆ ಇದರಲ್ಲಿ ಲಭ್ಯವಿದೆ. ಯಾವ ವಿಷಯ ಬೇಕೋ ಆವಿಷಯವನ್ನು ನೀವು ಇಲ್ಲಿ ಕಲಿಯಬಹುದು. ಅದಕ್ಕೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಯನ್ನು ಪಡೆಯಬಹುದು.
ಅನುಮಾನಗಳನ್ನು ಪರಿಹರಿಸಿಕೊಳ್ಳಿ
ನಿಮ್ಮ ಜ್ಞಾನವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ನಿಮಗೆ ಅಭ್ಯಾಸದ ವಿಷಯದಲ್ಲಿ ಅಥವಾ ಕರಿಯರ್ ವಿಷಯದಲ್ಲಿ ಇರುವ ಎಲ್ಲಾ ಅನುಮಾನಗಳನ್ನೂ ಸಹ ಇದು ಪರಿಹರಿಸುತ್ತದೆ. ವಿಜ್ಞಾನ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ, ಸಮಾಜ ವಿಜ್ಞಾನ, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ನಾಗರಿಕಶಾಸ್ತ್ರ, ಇಂಗ್ಲಿಷ್ ವ್ಯಾಕರಣ ಮತ್ತು ಹಿಂದಿ ವ್ಯಾಕರಣ ಈ ಎಲ್ಲಾ ವಿಷಯಗಳಿಗೂ ಸಂಬಂಧಿಸಿದ ಮಾಹಿತಿಯನ್ನು ಇದು ನೀಡುತ್ತದೆ.
TopperLearning Exam Prep App
ನೀವು ಇದರಲ್ಲಿ ಕೆಲವು ಆನ್ಲೈನ್ ಪರೀಕ್ಷೆಗಳನ್ನು ಬರೆಯಬಹುದು. ಹೀಗೆ ಮಾಡುವುದರಿಂದ ನೀವು ಪರೀಕ್ಷಾ ಭಯವನ್ನು ಕಡಿಮೆ ಮಾಡಿಕೊಳ್ಳಬಹುದು. ವಿಷಯದ ಟಿಪ್ಪಣಿಗಳು ಮತ್ತು ನಿಮ್ಮ ಪ್ರಶ್ನೆಗಳಿಗೆ ಸರಿಯಾದ ಉತ್ತರ ಪತ್ರಿಕೆಗಳೂ ಸಹ ಇದರಲ್ಲೇ ಲಭ್ಯವಿದೆ. ನಿಮ್ಮ ಅಂಕದ ಮೌಲ್ಯಮಾಪನವನ್ನೂ ಸಹ ಇದು ನೀಡುತ್ತದೆ. TopperLearning Exam Prep App ಅನ್ನು ಈಗಲೇ ಡೌನ್ಲೋಡ್ ಮಾಡಿ ನಿಮ್ಮ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ. ಅಷ್ಟೇ ಅಲ್ಲ ಈಗ ಹತ್ತಿರ ಬರುತ್ತಿರುವ ಪರೀಕ್ಷೆಗೆ ಸಿದ್ಧತೆ ನಡೆಸಿ ಉತ್ತಮ ಅಂಕಗಳಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ