• Home
  • »
  • News
  • »
  • jobs
  • »
  • Education System: ಅತ್ಯುತ್ತಮ ಶಿಕ್ಷಣ ನೀಡುವ ವಿಶ್ವದ ಐದು ಅಗ್ರ ದೇಶಗಳ ಪಟ್ಟಿ ಇಲ್ಲಿದೆ!

Education System: ಅತ್ಯುತ್ತಮ ಶಿಕ್ಷಣ ನೀಡುವ ವಿಶ್ವದ ಐದು ಅಗ್ರ ದೇಶಗಳ ಪಟ್ಟಿ ಇಲ್ಲಿದೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಿದೇಶದಲ್ಲಿ ಓದಲು ಬಯಸುವ ಪ್ರತಿಯೊಂದು ವಿದ್ಯಾರ್ಥಿಯು ಮೊದಲು ಯುಎಸ್‌ ದೇಶದಲ್ಲಿರುವ ವಿದ್ಯಾಸಂಸ್ಥೆಗಳಿಗೆ ಆದ್ಯತೆ ನೀಡುತ್ತಾರೆ. ಇನ್ನು ಹಲವು ದೇಶಗಳಲ್ಲಿ ಉತ್ತಮ ಶಿಕ್ಷಣ ಪದ್ದತಿ ಇದೆ. ವಿವರಗಳಿಗಾಗಿ ಮುಂದೆ ಓದಿ.

  • Share this:

ಜಗತ್ತು ಮುಂದೆ ಹೋಗುತ್ತಿದ್ದಂತೆ ಅದಕ್ಕೆ ತಕ್ಕನಾದ ಪೂರಕ ತಯಾರಿಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ. ಶಿಕ್ಷಣ (Education) ಸೇರಿ ಎಲ್ಲಾ ರೀತಿಯ ಕೌಶಲ್ಯಗಳು ಉತ್ತಮ ವೃತ್ತಿಜೀವನಕ್ಕೆ ಮುಂದೆ ಪ್ರಯೋಜನಕ್ಕೆ (Benifit) ಬರುವಂತದ್ದು. ಶಿಕ್ಷಣ ವ್ಯವಸ್ಥೆ ವಿಶ್ವದಾದ್ಯಂತ ಬೇರೆ ಬೇರೆ ದೇಶದಲ್ಲಿ ವಿಭಿನ್ನ ರೀತಿಯಲ್ಲಿದೆ. ಕೆಲವು ದೇಶಗಳು ವಿದ್ಯಾರ್ಥಿಗಳಿಗೆ ಉತ್ತಮ (Good) ಶಿಕ್ಷಣ ನೀಡುವಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿವೆ. ಉತ್ತಮ ಗುಣಮಟ್ಟದ ಜೀವನ, ಸಂಪನ್ಮೂಲಗಳ ಲಭ್ಯತೆ, ಅಧ್ಯಾಪಕರು, ಶಿಕ್ಷಣದ ಗುಣಮಟ್ಟ (Quality Education), ಕಡಿಮೆ ಶುಲ್ಕ ಈ ಎಲ್ಲಾ ಅಂಶಗಳನ್ನು ಆಧಾರಿಸಿ ನಾವಿಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿರುವ ದೇಶಗಳನ್ನು ಪಟ್ಟಿ ಮಾಡಿದ್ದೇವೆ ನೋಡಿ.


ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ವಿಶ್ವದ ಅಗ್ರ ಐದು ದೇಶಗಳು


* ಅಮೆರಿಕ ಸಂಯುಕ್ತ ಸಂಸ್ಥಾನಗಳು
ವಿದೇಶದಲ್ಲಿ ಓದಲು ಬಯಸುವ ಪ್ರತಿಯೊಂದು ವಿದ್ಯಾರ್ಥಿಯು ಮೊದಲು ಯುಎಸ್‌ ದೇಶದಲ್ಲಿರುವ ವಿದ್ಯಾಸಂಸ್ಥೆಗಳಿಗೆ ಆದ್ಯತೆ ನೀಡುತ್ತಾರೆ. ಅಮೆರಿಕಾದಲ್ಲಿ ಏನಿಲ್ಲ ಅಂದರೂ ಸುಮಾರು ಐವತ್ತು ಟಾಪ್ ವಿಶ್ವವಿದ್ಯಾಲಯಗಳನ್ನು ನೋಡಬಹುದಾಗಿದೆ. ಪ್ರತಿವರ್ಷ ಇಲ್ಲಿಗೆ ಮಿಲಿಯನ್‌ ಗಟ್ಟಲೇ ವಿದೇಶಿ ವಿದ್ಯಾರ್ಥಿಗಳು ಬರುತ್ತಾರೆ ಎಂದು ವರದಿಗಳು ಹೇಳುತ್ತವೆ.


ಉನ್ನತ ಗುಣಮಟ್ಟದ ಶಿಕ್ಷಣ, ವಿಶ್ವ-ಪ್ರಸಿದ್ಧ ಅಧ್ಯಾಪಕರು, ಮತ್ತು ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸೌಲಭ್ಯಗಳಿಂದಾಗಿ ಇಲ್ಲಿಗೆ ಓದಲು ಬರುತ್ತಾರೆ. ಮ್ಯಾನೇಂಜ್‌ಮೆಂಟ್‌, ಎಂಜಿನಿಯರಿಂಗ್‌, ಕಂಪ್ಯೂಟರ್‌ ಸೈನ್ಸ್‌, ಆರ್ಟ್ಸ್‌ ಮತ್ತು ಕಾನೂನು ಓದಲು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಾರೆ.


ಭಾರತದಿಂದ ಅಮೇರಿಕಾಕ್ಕೆ ಶಿಕ್ಷಣಕ್ಕಾಗಿ ವಲಸೆ ಹೋಗುವವರ ಸಂಖ್ಯೆಯಲ್ಲಿ ಈ ವರ್ಷ 19% ರಷ್ಟು ಹೆಚ್ಚಾಗಿದೆ ಎಂದು ವರದಿಗಳು ಹೇಳಿವೆ. ವಿದ್ಯಾಭ್ಯಾಸ ಮುಗಿದ ನಂತರವೂ ಈ ದೇಶ, ವಿದ್ಯಾರ್ಥಿಗಳಿಗೆ ಇಲ್ಲಿ ಉದ್ಯೋಗವಕಾಶ ನೀಡುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಾರೆ. ಹಾರ್ವರ್ಡ್ ವಿಶ್ವವಿದ್ಯಾನಿಲಯ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯ ಮುಂತಾದ ವಿಶ್ವದ ಕೆಲವು ಅತ್ಯುತ್ತಮ ವಿಶ್ವವಿದ್ಯಾನಿಲಯಗಳನ್ನು ದೇಶವು ಹೊಂದಿದೆ.


* ಯುನೈಟೆಡ್ ಕಿಂಗ್ಡಮ್ (ಯುಕೆ)
ಯುಕೆ ಶಿಕ್ಷಣ ವ್ಯವಸ್ಥೆಯು ಶೈಕ್ಷಣಿಕ ಯಶಸ್ಸು ಮತ್ತು ಅಂತರಾಷ್ಟ್ರೀಯ ಶ್ರೇಯಾಂಕಗಳ ವಿಷಯದಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಸುಮಾರು ಅರ್ಧ ಮಿಲಿಯನ್‌ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಹೋಸ್ಟ್ ಮಾಡುವ ವಿಶ್ವದ ಪ್ರಮುಖ ಅಧ್ಯಯನ ತಾಣ ಯುಕೆಯಾಗಿದೆ.


ಆರ್ಟ್ಸ್‌, ಡಿಸೈನ್‌, ಸಾಹಿತ್ಯ ವಿಭಾಗಗಳಲ್ಲಿ ಪ್ರಸಿದ್ಧಿ ಪಡೆದಿದೆ. ಉತ್ತಮ ಗುಣಮಟ್ಟದ ಶಿಕ್ಷಣ, ಜೀವನ ಶೈಲಿ ಎಲ್ಲವಕ್ಕೂ ಯುಕೆ ಹೆಸರುವಾಸಿಯಾಗಿದೆ. 76 ಯುಕೆ ವಿಶ್ವವಿದ್ಯಾಲಯಗಳು 'ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳು 2019' ನಲ್ಲಿ ಸಹ ಕಾಣಿಸಿಕೊಂಡಿವೆ. ಆಕ್ಸ್‌ಫರ್ಡ್‌, ಕೇಂಬ್ರಿಡ್ಜ್‌, ಯೂನಿವರ್ಸಿಟಿ‌, ಇಂಪೀರಿಯಲ್‌ ಕಾಲೇಜ್ ಇಲ್ಲಿ ಮುಖ್ಯವಾಗಿವೆ.


* ಆಸ್ಟ್ರೇಲಿಯಾ
ವಿಶ್ವದ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ನೀಡುವಲ್ಲಿ ಆಸ್ಟ್ರೇಲಿಯಾ ಪ್ರಮುಖ ಸ್ಥಾನವನ್ನು ಗಳಿಸಿದೆ. ಅನೇಕ ದೇಶಗಳ ವಿದ್ಯಾರ್ಥಿಗಳು ಪ್ರತಿವರ್ಷ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯುತ್ತಾರೆ. ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಕೋರ್ಸ್‌ಗಳನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯಾ ಉತ್ತಮ ಆಯ್ಕೆ.


ಇದನ್ನೂ ಓದಿ: ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಅಂಕ ಕಡಿಮೆ ಬರುತ್ತಾ? ಇಲ್ಲಿದೆ ಮಾಹಿತಿ


ಆರ್ಕಿಟೆಕ್ಚರ್‌, ಮಾಧ್ಯಮ, ಎಂಜಿನಿಯರ್‌, ಆಡಳಿತ ಈ ವಿಭಾಗಗಳಲ್ಲಿ ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳು ಉತ್ತಮವಾಗಿವೆ. ಪ್ರಮಾಣೀಕರಣ ಕೋರ್ಸ್‌ಗಳ ಜೊತೆಗೆ ಸ್ನಾತಕೋತ್ತರ, ಮತ್ತು ಡಾಕ್ಟರೇಟ್ ಕಾರ್ಯಕ್ರಮಗಳಿವೆ. ದೇಶದ ಕೆಲವು ಉನ್ನತ ವಿಶ್ವವಿದ್ಯಾಲಯಗಳೆಂದರೆ UNSW ಸಿಡ್ನಿ, ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ, ಮೆಲ್ಬೋರ್ನ್ ವಿಶ್ವವಿದ್ಯಾಲಯ, ಸಿಡ್ನಿ ವಿಶ್ವವಿದ್ಯಾಲಯ, ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯ, ಮತ್ತು ಇನ್ನೂ ಅನೇಕ ವಿಶ್ವವಿದ್ಯಾಲಯಗಳಿವೆ.


* ಜರ್ಮನಿ
ವಿಶ್ವದ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಜರ್ಮನಿ ವಿದೇಶಿ ವಿದ್ಯಾರ್ಥಿಗಳಿಗೆ ಹೆಚ್ಚು ಉತ್ತಮ ಆಯ್ಕೆಯ ದೇಶಗಳಲ್ಲಿ ಒಂದಾಗಿದೆ. ಕೋರ್ಸ್‌ಗಳೊಂದಿಗೆ ಹಲವು ಆಯ್ಕೆಗಳಿದ್ದು, ಇಲ್ಲಿನ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತವೆ. ಕಡಿಮೆ ಅಥವಾ ಶೂನ್ಯ ಬೋಧನಾ ಶುಲ್ಕದಲ್ಲಿ ಉತ್ತಮ ಶಿಕ್ಷಣವನ್ನು ನೀಡುವ ಏಕೈಕ ದೇಶ ಜರ್ಮನಿ.


ವಿದೇಶಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ ಶಿಪ್‌, ಉದ್ಯೋಗವಕಾಶ ಸೌಲಭ್ಯ ಸಹ ನೀಡುತ್ತದೆ. ಲಡ್‌ವಿಗ್‌ ಮ್ಯಾಕ್ಸಿಮಿಲಿಯನ್‌ ವಿಶ್ವವಿದ್ಯಾಲಯ, ಮುನಿಚ್‌ ಟೆಕ್ನಿಕಲ್‌ ವಿಶ್ವವಿದ್ಯಾಲಯ ಸೇರಿ ಇನ್ನೂ ಹಲವು ಹೆಸರಾಂತ ವಿದ್ಯಾಸಂಸ್ಥೆಗಳು ಇಲ್ಲಿವೆ.


* ಕೆನಡಾ
ಕೆನಡಾ ವಿಶ್ವದ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದನ್ನು ನೀಡುವ ಅತ್ಯಂತ ಜನಪ್ರಿಯ ಅಧ್ಯಯನ ತಾಣಗಳಲ್ಲಿ ಒಂದಾಗಿದೆ ಮತ್ತು ಅತಿ ಹೆಚ್ಚಿನ ಸಂಖ್ಯೆಯ ವಿದೇಶಿ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆಸ್ಟ್ರೇಲಿಯಾದಂತೆ ಆರ್ಕಿಟೆಕ್ಚರ್‌, ಮಾಧ್ಯಮ, ಎಂಜಿನಿಯರ್‌, ಆಡಳಿತ ವಿಭಾಗದಲ್ಲಿ ಅಭ್ಯಸಿಸುವವರು ಇಲ್ಲಿಗೆ ಬರಬಹುದು.


ಇಲ್ಲಿನ ಶಿಕ್ಷಣ ಸಂಸ್ಥೆಗಳು ವಿವಿಧ ವಿಭಾಗಗಳಲ್ಲಿ ಅಲ್ಪಾವಧಿ ಕೋರ್ಸ್‌ಗಳ ಜೊತೆಗೆ ಹಲವಾರು ಪದವಿಗಳನ್ನು ನೀಡುತ್ತವೆ. ಕೆಲವು ಪ್ರಸಿದ್ಧ ವಿಶ್ವವಿದ್ಯಾಲಯಗಳೆಂದರೆ ಟೊರೊಂಟೊ ವಿಶ್ವವಿದ್ಯಾಲಯ ಮತ್ತು ಕ್ವೀನ್ಸ್ ವಿಶ್ವವಿದ್ಯಾಲಯ, ಬ್ರಿಟಿಷ್‌ ಕೊಲಂಬಿಯಾ, ಇನ್ನೂ ಹಲವು ಸೇರಿವೆ.

First published: