• ಹೋಂ
  • »
  • ನ್ಯೂಸ್
  • »
  • Jobs
  • »
  • BCA College: ಭಾರತದ ಟಾಪ್​ 5 ಬಿಸಿಎ ಕಾಲೇಜ್​ಗಳ ಲಿಸ್ಟ್​ ಇಲ್ಲಿದೆ

BCA College: ಭಾರತದ ಟಾಪ್​ 5 ಬಿಸಿಎ ಕಾಲೇಜ್​ಗಳ ಲಿಸ್ಟ್​ ಇಲ್ಲಿದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಭಾರತದಲ್ಲಿನ ಉನ್ನತ BCA ಕಾಲೇಜುಗಳು ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ವಿವಿಧ ಪದವಿಪೂರ್ವ ಮತ್ತು ಪದವಿ ಕೋರ್ಸ್‌ಗಳನ್ನು ನೀಡಲಾಗುತ್ತದೆ. ಭಾರತದಲ್ಲಿನ ಅತ್ಯುತ್ತಮ BCA ಕಾಲೇಜುಗಳ ಪಟ್ಟಿ ಮಾಡಲಾಗಿದೆ.

  • Share this:

ನೀವು ಕಾಮರ್ಸ್​​ ಕೋರ್ಸ್ ಅಥವಾ ಸೈನ್ಸ್​​ (Science)​ ಮಾಡುತ್ತಿದ್ದರೆ ಮುಂದೇನು ಎಂಬ ಚಿಂತೆ ಇರುತ್ತದೆ. ಆದರೆ ಮುಂದೇನು ಎಂದು ಚಿಂತಿಸುವುದನ್ನು ಬಿಟ್ಟು ನೀವು ಖಂಡಿತ ನಾವು ಇಲ್ಲಿ ನೀಡಿರುವ ಮಾಹಿತಿಯನ್ನು (Information) ಗಮನಿಸಿದರೆ ಸಾಕು. ನಿಮ್ಮ ಚಿಂತೆಗೆ ಮುಕ್ತಿ ಸಿಕ್ಕಿ ಬಿಡುತ್ತದೆ. ಬ್ಯಾಚುಲರ್​ ಆಪ್​ ಕಂಪ್ಯೂಟರ್​​ ಅಪ್ಲಿಕೇಷನ್ (Bachelor Of Computer Science)​ ಕೋರ್ಸ್​ಗೆ ನೀವು ಸೇರಿಕೊಳ್ಳಬಹುದು. ಸೈನ್ಸ್​​ ವಿದ್ಯಾರ್ಥಿಗಳು ಕೂಡಾ ಈ ಕೋರ್ಸ್​ ಆಯ್ಕೆ ಮಾಡಿಕೊಳ್ಳಬಹುದು. ಈ ಕೋರ್ಸ್​ ಹೇಳಿಕೊಡುವ ಹಲವಾರು ಕಾಲೇಜುಗಳು (College) ನಮ್ಮ ಹತ್ತಿರದಲ್ಲೇ ಇವೆ. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.


ಭಾರತದಲ್ಲಿನ ಉನ್ನತ BCA ಕಾಲೇಜುಗಳು ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ವಿವಿಧ ಪದವಿಪೂರ್ವ ಮತ್ತು ಪದವಿ ಕೋರ್ಸ್‌ಗಳನ್ನು ನೀಡಲಾಗುತ್ತದೆ. ಭಾರತದಲ್ಲಿನ ಅತ್ಯುತ್ತಮ BCA ಕಾಲೇಜುಗಳ ಪಟ್ಟಿ ಮಾಡಲಾಗಿದೆ. ಆ ಪ್ರಕಾರ ನೀವು ಕಾಲೇಜ್ ಆಯ್ಕೆ ಮಾಡಿಕೊಳ್ಳಬಹುದು.


ನಾವು ನೀಡಿರುವ ಈ ಕೆಳಗಿನ ಎಲ್ಲಾ ಕಾಲೇಜುಗಳು ಉತ್ತಮ ಶಿಕ್ಷಣ ನೀಡುವುದರೊಟ್ಟಿಗೆ ನಿಮಗೆ ಉತ್ತಮ ಕೆಲಸವೂ ಸಿಗುವಂತೆ ಮಾಡುತ್ತವೆ. ಹಾಗಾಗಿ ಈ ಕಾಲೇಜುಗಳಿಗೆ ನೀವು ಚಿಂತೆ ಇಲ್ಲದೆ ಸೇರಿಕೊಳ್ಳಬಹುದು ಹಾಗೂ ನಿಮ್ಮ ಶಿಕ್ಷಣವನ್ನು ಪಡೆದುಕೊಳ್ಳಬಹುದು.


ಇದನ್ನೂ ಓದಿ: Foreign Study: ಈ ದೇಶಕ್ಕೆ ಹೋದ್ರೆ ಕಡಿಮೆ ಹಣದಲ್ಲೂ ನೀವು ಹೈಯರ್​ ಸ್ಟಡಿ ಮಾಡ್ಬಹುದು


SRM ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ:
ಈ ಪದವಿಗೆ ಸಂಬಂಧಿಸಿದ 99% ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪದವಿಯ ನಂತರ ಉದ್ಯೋಗವನ್ನು ಪಡೆದುಕೊಳ್ಳುತ್ತಾರೆ. ಯಾವುದೇ ಪ್ರವೇಶ ಪರೀಕ್ಷೆಗಳಿಲ್ಲ, ಮತ್ತು ಯಾವುದೇ ವಿಶೇಷ ತಯಾರಿ ಇಲ್ಲದೆ ನೀವು ಪ್ರವೇಶ ಪಡೆಯಬಹುದು. 12 ನೇ ತರಗತಿಯಲ್ಲಿ ಉತ್ತಮ ಶೇಕಡಾವಾರು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರೆ ಸಾಕು. 400 ಎಕರೆ ವಿಸ್ತೀರ್ಣದ ಕ್ಯಾಂಪಸ್ ಅನ್ನು ಹೊಂದಿದೆ.


ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (IMS)
ನೋಯ್ಡಾ ಭಾರತದ ಅತ್ಯಂತ ಜನಪ್ರಿಯ ಬಿಸಿಎ UGC ಮತ್ತು NAAC ನಿಂದ ಉತ್ತಮ ಮಾನ್ಯತೆ ಪಡೆದ ಕಾಲೇಜಾಗಿದೆ. ಇಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯವಿದ್ದು ಹಲವಾರು ವಿದ್ಯಾರ್ಥಿಗಳು ಈ ಕಾಲೇಜ್ ಸೇರಲು ಬಯಸುತ್ತಾರೆ. ಕಾನೂನು ಮತ್ತು ಕಂಪ್ಯೂಟರ್ ಅಪ್ಲಿಕೇಶನ್‌ ಎರಡೂ ಸಹ ಈ ಕಾಲೇಜ್​ನಲ್ಲಿ ಉತ್ತಮವಾಗಿದೆ ಎಂಬುದು ಹಲವು ವಿದ್ಯಾರ್ಥಿಗಳ ಅಭಿಪ್ರಾಯ.


ನೋಯ್ಡಾದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌:
ನೋಯ್ಡಾದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು, ನೀವು ಮೊದಲು ನಿಮ್ಮ 10+2 ಪರೀಕ್ಷೆ ಅಥವಾ ತತ್ಸಮಾನವನ್ನು ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ. ನೀವು ಅರ್ಹತಾ ಪರೀಕ್ಷೆಯನ್ನುಬರೆದು ಅದರಲ್ಲಿ ಪಾಸ್​ ಆದರೆ ಮಾತ್ರ ಇಲ್ಲಿ ಕಲಿಯುವ ಅವಕಾಶ ನಿಮಗೆ ಸಿಗುತ್ತದೆ.




ಕ್ರೈಸ್ಟ್ ಯೂನಿವರ್ಸಿಟಿ CU ಬೆಂಗಳೂರು:
ಐಟಿ ಉದ್ಯಮದಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಆಯ್ಕೆಯ ಕಾಲೇಜಾಗಿದೆ. ಹಲವಾರು ವಿದ್ಯಾರ್ಥಿಗಳು ಈಗಾಗಲೇ ಈ ಕಾಲೇಜನ್ನೇ ಅರಸಿ ಬರುತ್ತಾರೆ. ಬಿಸಿಎ ಕೋರ್ಸ್ ಮಾಡುವವರಿಗೆ ಈ ಕಾಲೇಜ್ ಸೂಕ್ತವಾಗಿದೆ.  ವೃತ್ತಿಪರರ ಅಗತ್ಯತೆಗಳನ್ನು ಕಲಿಸಿಕೊಡುವಲ್ಲಿ ಈ ಕಾಲೇಜ್​ ಯಶಸ್ವಿಯಾಗಿದೆ. 


ಕ್ರೈಸ್ಟ್ ಯೂನಿವರ್ಸಿಟಿ


ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ:
ಬಿಸಿಎಗೆ ಅರ್ಜಿ ಸಲ್ಲಿಸಲು, ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಶುಲ್ಕವನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ವಿವಿಧ ಪ್ರವೇಶ ಪರೀಕ್ಷೆಗಳು ಇವೆ ನೀವು ಅವೆಲ್ಲವನ್ನು ಪಾಸ್ ಮಾಡಿದರೆ ಮಾತ್ರ ಇಲ್ಲಿ ಅಡ್ಮಿಷನ್​ ಮಾಡಲಾಗುತ್ತೆ.

First published: