ದ್ವಿತೀಯ ಪಿಯುಸಿ (2nd PUC) ಮುಗಿಸಿದ ವಿದ್ಯಾರ್ಥಿಗಳು ಎಷ್ಟೋ ಜನ ಹೊಸದಾಗಿ ಎಂಜಿನಿಯರಿಂಗ್ ಸೇರಲು ಬಯಸುತ್ತಾರೆ. ಹಲವಾರು ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣಕ್ಕಾಗಿ ವಲಸೆ ಬರುತ್ತಾರೆ. ಒಂದು ಉತ್ತಮ ಕಾಲೇಜ್ನಲ್ಲಿ (College) ಅಡ್ಮಿಷನ್ ಪಡೆಯುವ ಬಯಕೆಯನ್ನು ಹೊಂದಿರುತ್ತಾರೆ. ಆ ವಿದ್ಯಾರ್ಥಿಗಳಿಗೆ ಇಲ್ಲಿ ಬೆಂಗಳೂರಿನ ಅತ್ಯತ್ತಮ ಕಾಲೇಜ್ಗಳ ಪಟ್ಟಿಯನ್ನು (List) ನೀಡಲಾಗಿದೆ. ವಿದ್ಯಾರ್ಥಿಗಳು (Students) ಈ ಮಾಹಿತಿಯನ್ನು ಉಪಯೋಗಿಸಿಕೊಂಡು ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮವಾಗಿದೆ. ನೀವು ಹೊಸದಾಗಿ ಎಂಜಿನಿಯರಿಂಗ್ ಕಾಲೇಜ್ ಅಡ್ಮಿಷನ್ ಮಾಡಿಸಲು ಬಯಸಿ ಉತ್ತಮ ಕಾಲೇಜ್ಗಾಗಿ ಹುಡುಕಾಟ ನಡೆಸುತ್ತಿದ್ದರೆ ಈ ಕಾಲೇಜ್ ಬೆಸ್ಟ್. 2023-24 ಪ್ರವೇಶಗಳು ಇಲ್ಲಿ ಈಗಾಗಲೇ ಆರಂಭವಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. NRI/PIO/FN ಕೋಟಾದಲ್ಲಿ ಎಲ್ಲಾ UG ಕೋರ್ಸ್‌ಗಳಿಗೆ 2023-24ಕ್ಕೆ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು.
ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ
ಇದು ಕೂಡಾ ಒಂದು ಉತ್ತಮ ವಿದ್ಯಾ ಸಂಸ್ಥೆಯಾಗಿದ್ದು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇಲ್ಲಿ ಅಡ್ಮಿಷನ್ ಮಾಡಿಸಬಹುದು. PhD ಅರ್ಜಿಗಳನ್ನು 2023-24 ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 26 ಕೊನೆದಿನವಾಗಿದೆ.
ಇದನ್ನೂ ಓದಿ: Education News: ಮತ್ತೆ ಮುನ್ನೆಲೆಗೆ ಬಂದ ಪಠ್ಯ ಪರಿಷ್ಕರಣೆ ವಿವಾದ!
RV ಕಾಲೇಜ್ ಆಫ್ ಇಂಜಿನಿಯರಿಂಗ್
RV ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ನೀವು ಎಂಜಿನಿಯರಿಂಗ್ ಮಾಡಬಹುದು.
ಒಟ್ಟು 214 ಕಂಪನಿಗಳು ಕ್ಯಾಂಪಸ್‌ಗೆ ಭೇಟಿ ನೀಡುತ್ತವೆ ಹಾಗಾಗಿ ಕಲಿಕೆಯ ನಂತರ ಉದ್ಯೋಗ ಪಡೆಯಲು ಈ ಕಾಲೇಜ್ನಲ್ಲಿ ಹೆಚ್ಚಿನ ಅವಕಾಶ ಇದೆ ಎಂದೇ ಹೇಳಬಹುದು.
PES ವಿಶ್ವವಿದ್ಯಾಲಯ
PES ವಿಶ್ವವಿದ್ಯಾಲಯದಲ್ಲಿ 2023 ಕ್ಕೆ ವಿವಿಧ ಕೋರ್ಸ್‌ಗಳಿಗೆ ಪ್ರವೇಶಗಳು ಆರಂಭವಾಗಿದೆ. ಇಲ್ಲಿ ಎಂಜಿನಿಯರಿಂಗ್ ಕೋರ್ಸ್ ಕೂಡಾ ಲಭ್ಯವಿದೆ. PESSAT 2023 ಪರೀಕ್ಷೆಯನ್ನು ಮೇ 17, 2023 ರಿಂದ ಜೂನ್ 6, 2023 ರವರೆಗೆ ನಡೆಸಲಾಗುವುದು ಈ ಅವಧಿಯ ಒಳಗೆ ನೀವು ಜಾಯ್ನ್ ಆಗಿ.
BMS ಕಾಲೇಜ್ ಆಫ್ ಎಂಜಿನಿಯರಿಂಗ್
BMS ಕಾಲೇಜ್ ಆಫ್ ಎಂಜಿನಿಯರಿಂಗ್ ಈ ಕಾಲೇಜ್ ಕೂಡಾ ತುಂಬಾ ಉತ್ತಮವಾಗಿದೆ. ವಿದ್ಯಾರ್ಥಿಗಳು ಹೆಚ್ಚಾಗಿ ಈ ಕಾಲೇಜ್ ಅಡ್ಮಿಷನ್ ಬಯಸುತ್ತಾರೆ. 2023-24ರ ಮೊದಲ ವರ್ಷದ ಬಿಇ ಕೋರ್ಸ್‌ಗೆ ಮ್ಯಾನೇಜ್‌ಮೆಂಟ್ ಕೋಟಾ ಸೀಟುಗಳಿಗೆ ಪ್ರವೇಶ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ನ್ಯೂ ಹೊರೈಜನ್ ಕಾಲೇಜ್ ಆಫ್ ಇಂಜಿನಿಯರಿಂಗ್
ನ್ಯೂ ಹೊರೈಜನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜ್ನಲ್ಲಿ ನೀವು ಅಡ್ಮಿಷನ್ ಮಾಡಿಸಬಹುದು. 2023 ಬ್ಯಾಚ್‌ಗೆ ಪ್ರವೇಶಗಳು ಆರಂಭವಾಗಿದೆ. ಇದಲ್ಲದೆ, 2023 ರಲ್ಲಿ ಉತ್ತೀರ್ಣರಾಗುವ ಬ್ಯಾಚ್‌ಗಾಗಿ ಪ್ಲೇಸ್‌ಮೆಂಟ್‌ಗಳು ನಡೆಯುತ್ತಿವೆ.
ಬೆಂಗಳೂರಿನಲ್ಲಿ ಜೈನ್ ಯುನಿವರ್ಸಿಟಿ
ಬೆಂಗಳೂರಿನಲ್ಲಿ ಜೈನ್ ಯುನಿವರ್ಸಿಟಿ ನೀವು ಅಡ್ಮಿಷನ್ ಪಡೆಯಬಹುದು. ಆದಷ್ಟು ಬೇಗ ಅಪ್ಲೈ ಮಾಡಿ. ಯುಜಿ ಮತ್ತು ಪಿಜಿ ಕೋರ್ಸ್‌ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 16, ಮತ್ತು ಪ್ರವೇಶ ಪರೀಕ್ಷೆಯನ್ನು ಜೂನ್ 25 ರಂದು ಆಫ್ಲೈನ್ ಮೋಡ್ನಲ್ಲಿ ಇದು ನಡೆಯಲಿದೆ.
ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್
ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜ್ನಲ್ಲಿ ನೀವು ಅಪ್ಲೈ ಮಾಡಬಹುದು. DSCE ಬೆಂಗಳೂರು BTech ಪ್ರವೇಶಗಳನ್ನು KCET 2023 ಮೂಲಕ ಮಾಡಲಾಗುತ್ತದೆ. KCET 2023 ಅರ್ಜಿ ಪ್ರಕ್ರಿಯೆಯನ್ನು ವಿಸ್ತರಿಸಲಾಗುತ್ತದೆ.
NITTE ಮೀನಾಕ್ಷಿ ಇನ್ಸಟಿಟ್ಯೂಟ್ ಆಪ್ ಟೆಕ್ನಾಲಜಿ
BMS ಇನ್ಸಟಿಟ್ಯೂಟ್ ಆಪ್ ಟೆಕ್ನಾಲಜಿ ಈ ಕಾಲೇಜುಗಳು ಟಾಪ್ 10 ಅತ್ತುತ್ತಮ ಕಾಲೇಜುಗಳಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ