• ಹೋಂ
  • »
  • ನ್ಯೂಸ್
  • »
  • Jobs
  • »
  • Achivememts: ವಿದ್ಯಾರ್ಥಿ ಜೀವನದ ಯಶಸ್ಸಿಗಾಗಿ ಈ ಟಿಪ್ಸ್​​ ಫಾಲೋ ಮಾಡ್ಲೇಬೇಕು

Achivememts: ವಿದ್ಯಾರ್ಥಿ ಜೀವನದ ಯಶಸ್ಸಿಗಾಗಿ ಈ ಟಿಪ್ಸ್​​ ಫಾಲೋ ಮಾಡ್ಲೇಬೇಕು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನೀವು ಇತರರೊಂದಿಗೆ ಎಂದಿಗೂ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಪ್ರತಿಯೊಬ್ಬರೂ ತಮ್ಮದೇ ಆದ ವೀಕ್‌ನೆಸ್‌ ಮತ್ತು ಸಾಮರ್ಥ್ಯಗಳನ್ನು ಹೊಂದಿರುತ್ತಾರೆ. ಉತ್ತಮ ವಿದ್ಯಾರ್ಥಿಗಳು ತಮ್ಮ ಸ್ವಂತ ಸಾಮರ್ಥ್ಯದಿಂದ ಯಶಸ್ವಿಯಾಗುತ್ತಾರೆ.

  • Share this:

ಕಲಿಕೆ ಎಂಬುದು ವಿದ್ಯಾರ್ಥಿ ಜೀವನದ ಬಹಳ ಮುಖ್ಯವಾದ ಅಂಗವಾಗಿದೆ. ಜೀವನದೂದ್ದಕ್ಕೂ ಪ್ರತಿಯೊಬ್ಬ ಮನುಷ್ಯ ಪ್ರತಿಕ್ಷಣ ಹೊಸದನ್ನ (New) ಕಲಿಯುತ್ತಿರುತ್ತಾನೆ. ಆದರೆ ಕಲಿಕೆ (Learning) ವಿದ್ಯಾರ್ಥಿಗಳಿಗೆ ಬಹಳಷ್ಟು ಸವಾಲೊಡ್ಡುವ ವಿಚಾರವೂ ಹೌದು. ಒಬ್ಬ ವಿದ್ಯಾರ್ಥಿಗೆ, ಯಶಸ್ವಿಯಾಗುವುದು ಎಂದರೆ ಅವನ ಗುರಿಗಳನ್ನು ಸಾಧಿಸುವುದು ಮತ್ತು ಉತ್ತಮ ಅಂಕಗಳನ್ನು (Marks) ಗಳಿಸುವುದೇ ಆಗಿರುತ್ತೆ. ಯಶಸ್ವಿ ವಿದ್ಯಾರ್ಥಿಗಳು (Students) ತಮ್ಮ ಅಧ್ಯಯನದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.


ವಿದ್ಯಾರ್ಥಿಯ ಮೊದಲ ಆದ್ಯತೆ ಅಧ್ಯಯನ ಆಗಿರಲಿ


ಒಬ್ಬ ಉತ್ತಮ ವಿದ್ಯಾರ್ಥಿ ತನ್ನ ಅಧ್ಯಯನವನ್ನು ಎಂದಿಗೂ ನಿರ್ಲಕ್ಷಿಸುವುದಿಲ್ಲ. ಆದ್ದರಿಂದ ನಿಮ್ಮ ಅಧ್ಯಯನವನ್ನು ಉನ್ನತ ಆದ್ಯತೆಯ ಪಟ್ಟಿಯಲ್ಲಿ ಇರಿಸಿಕೊಳ್ಳಿ. ಸ್ನೇಹಿತರು, ಸಂಬಂಧಿಕರು ಮತ್ತು ಕುಟುಂಬಕ್ಕಾಗಿ ಸಮಯವನ್ನು ನಿರ್ವಹಿಸುವುದು ಸಹ ಮುಖ್ಯವಾಗಿದೆ. ಆದರೆ ಅಧ್ಯಯನವೇ ನಿಮ್ಮ ಮೊದಲ ಆದ್ಯತೆ ಆಗಿರಲಿ.


ಸ್ಮಾರ್ಟ್‌ ಗುರಿಗಳನ್ನು ಇರಿಸಿಕೊಳ್ಳಿ


ವಿದ್ಯಾರ್ಥಿಗಳ ಜೀವನದಲ್ಲಿ, ಗುರಿಯನ್ನು ಇರಿಸಿಕೊಳ್ಳುವ ಮೊದಲ ಪ್ರಯೋಜನವೆಂದರೆ ಅವರು ತಮ್ಮ ಶೈಕ್ಷಣಿಕ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಇದು ಅವರ ಯಶಸ್ಸಿನ ಮೊದಲ ಹೆಜ್ಜೆಯನ್ನು ಸೂಚಿಸುತ್ತದೆ.


ಟೈಮ್‌ ಮ್ಯಾನೇಜ್‌ಮೆಂಟ್‌


ವಿದ್ಯಾರ್ಥಿಗಳ ಜೀವನದಲ್ಲಿ ಸಮಯ ನಿರ್ವಹಣೆ ಅತ್ಯಗತ್ಯ. ಸಮಯ ನಿರ್ವಹಣೆಯ ಉದ್ದೇಶವು ಕಡಿಮೆ ಸಮಯದಲ್ಲಿ ಹೆಚ್ಚು ಮತ್ತು ಉತ್ತಮವಾಗಿ ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ.


ಇದನ್ನೂ ಓದಿ: Drawing Competition: ಮಕ್ಕಳೇ, ಮಹಿಳಾ ದಿನಾಚರಣೆಯ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಗೆಲ್ಲಿ


ಯಾವಾಗಲೂ ಯಶಸ್ವಿ ವಿದ್ಯಾರ್ಥಿಗಳನ್ನು ನೆನಪಿಸಿಕೊಳ್ಳಿ. ಅವರು ಯಾವಾಗಲೂ ಎಲ್ಲ ಕೆಲಸಗಳಿಗೂ ಟೈಮ್‌ ಟೇಬಲ್‌ ಹಾಕಿಕೊಂಡು ಕೆಲಸ ನಿರ್ವಹಿಸುತ್ತಿರುತ್ತಾರೆ. ಇದುವೇ ಅವರ ಯಶಸ್ಸಿನ ಮೊದಲ ಮೆಟ್ಟಿಲಾಗಿರುತ್ತದೆ.


ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸಿ


ಶಾಲೆಯಲ್ಲಿ ನಡೆಸುವ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನೀವು ಶಾಲೆಯಲ್ಲಿ ಸಕ್ರಿಯ ವಿದ್ಯಾರ್ಥಿಯಾಗಿ ಹೊರಹೊಮ್ಮುತ್ತಿರಿ. ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ತರಗತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದು ನಿಮ್ಮ ಶಿಕ್ಷಕರು ಮತ್ತು ಇತರ ಸಹ ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಲು ಸಹಾಯ ಮಾಡುತ್ತದೆ.


ಪಾಠದ ಕಡೆಗೆ ಗಮನ ಕೊಡಿ


ಶಾಲೆಯಲ್ಲಿ ಶಿಕ್ಷಕರು ಯಾವೆಲ್ಲ ಪಾಠಗಳನ್ನು ಕಲಿಸುತ್ತಿದ್ದಾರೆ ಎಂಬುದರ ಕಡೆಗೆ ಗಮನ ನೀಡಿ. ಇದು ಅವರ ಬಗ್ಗೆ ನಿಮಗೆ ಇರುವ ಗೌರವವನ್ನು ಪ್ರತಿನಿಧಿಸುತ್ತದೆ.




ಹಾಗೆಯೇ ವಿದ್ಯಾರ್ಥಿಗಳು ಆ ಪಾಠವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ಗ್ರಹಿಸಲು ಉಪಯುಕ್ತವಾಗಿದೆ. ಇದು ಕೇಳುವ ಕೌಶಲ್ಯವನ್ನು ಸುಧಾರಿಸಲು ಸಹ ಅವರಿಗೆ ಸಹಾಯ ಮಾಡುತ್ತದೆ.


ಗುಂಪು ಅಧ್ಯಯನ ಕೈಗೊಳ್ಳಿ


ವಿದ್ಯಾರ್ಥಿಗಳು ಗುಂಪು ಅಧ್ಯಯನ ಮಾಡುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಕಲಿಯಲು ಸಹಾಯವಾಗುತ್ತದೆ. ಇದರ ಕುರಿತು ಶೈಕ್ಷಣಿಕ ಮನಶ್ಶಾಸ್ತ್ರಜ್ಞರು ತಮ್ಮ ಸಂಶೋಧನೆಯಲ್ಲಿ ಏಕಾಂಗಿಯಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಸ್ನೇಹಿತರ ಗುಂಪಿನಲ್ಲಿ ಅಧ್ಯಯನ ಮಾಡುವವರು ಹೆಚ್ಚು ಕಲಿಯುವುದು ಸಂಶೋಧನೆಗಳಿಂದ ವರದಿ ಆಗಿದೆ.


ಅಧ್ಯಯನಕ್ಕೆ ಬದ್ಧರಾಗಿರುವುದು ಉತ್ತಮ ವಿದ್ಯಾರ್ಥಿಯ ಲಕ್ಷಣ


ನಿಮ್ಮ ಅಧ್ಯಯನಕ್ಕೆ ಬದ್ಧರಾಗಿರುವುದು ನಿಜಕ್ಕೂ ಉತ್ತಮವಾದ ಕೆಲಸವಾಗಿದೆ. ನಿಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ವಿಯಾಗುವವರೆಗೆ ಕಷ್ಟಪಟ್ಟು ಶ್ರಮಿಸುವುದನ್ನು ಎಂದಿಗೂ ಬಿಡಬೇಡಿ. ನಿಮ್ಮ ಅಧ್ಯಯನದ ಕಡೆಗೆ ಹೆಚ್ಚು ಗಮನಹರಿಸಿ.


ಅಧ್ಯಯನಕ್ಕೆ ತೊಂದರೆಯಾಗುವ ವಿಷಯದಿಂದ ದೂರವಿರಿ


ಪ್ರತಿ ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನವು ಬಹಳಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ. ಆದರೆ ಅಧ್ಯಯನನ ಹಾದಿಯಲ್ಲಿ ಅನೇಕ ಗೊಂದಲಗಳು, ಅಡಚಣೆಗಳು ಬರುವುದು ಕೂಡ ಅಷ್ಟೇ ಸಾಮಾನ್ಯವಾದ ವಿಷಯವಾಗಿದೆ.


ಆದ್ರೆ ನಿಮ್ಮ ಗುರಿ ಅಧ್ಯಯನವೇ ಆಗಿದ್ರೆ ನಿಮ್ಮನ್ನು ಯಾವ ತೊಂದರೆಗಳು ಬಾಧಿಸುವುದಿಲ್ಲ. ನಿಮ್ಮ ಗುರಿಯನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಿ ಮತ್ತು ಅದಕ್ಕೆ ಅನುಗುಣವಾಗಿ ಕೆಲಸ ಮಾಡಿ ಅದು ನಿಮ್ಮ ಅಮೂಲ್ಯ ಸಮಯವನ್ನು ಉಳಿಸುತ್ತದೆ.


ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ


ನೀವು ಇತರರೊಂದಿಗೆ ಎಂದಿಗೂ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಪ್ರತಿಯೊಬ್ಬರೂ ತಮ್ಮದೇ ಆದ ವೀಕ್‌ನೆಸ್‌ ಮತ್ತು ಸಾಮರ್ಥ್ಯಗಳನ್ನು ಹೊಂದಿರುತ್ತಾರೆ. ಉತ್ತಮ ವಿದ್ಯಾರ್ಥಿಗಳು ತಮ್ಮ ಸ್ವಂತ ಸಾಮರ್ಥ್ಯದಿಂದ ಯಶಸ್ವಿಯಾಗುತ್ತಾರೆ. ಹಾಗೆಯೇ ಇತರರು ಮಾಡುವುದನ್ನು ಕಾಪಿ ಮಾಡಲೇಬೇಡಿ. ಇದರಿಂದ ನಿಮ್ಮತನ ಎಂಬುದು ಉಳಿಯುವುದೇ ಇಲ್ಲ.


ನಿಮ್ಮ ತಪ್ಪುಗಳಿಂದ ಕಲಿಯಿರಿ


ನಿಮ್ಮ ತಪ್ಪುಗಳಿಂದ ನೀವು ಕಲಿಯುವುದು ಬಹಳಷ್ಟು ಒಳ್ಳೆಯದು, ಏಕೆಂದರೆ ನಮ್ಮ ತಪ್ಪುಗಳನ್ನು ಸುಧಾರಿಸಿಕೊಳ್ಳುವ ಮೂಲಕ ಜೀವನದ ಪ್ರಮುಖ ಪಾಠಗಳನ್ನು ಕಲಿಯಬಹುದು. ಯಶಸ್ವಿ ವಿದ್ಯಾರ್ಥಿ ತನ್ನ ಸ್ವಂತ ತಪ್ಪುಗಳಿಂದ ಕಲಿಯುತ್ತಾನೆ ಮತ್ತು ಮತ್ತಷ್ಟು ಸುಧಾರಿಸಲು ಪ್ರಯತ್ನಿಸುತ್ತಾನೆ.


ಇವೆಲ್ಲವೂ ನೀವು ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿ ವಿದ್ಯಾರ್ಥಿಗಳಾಗಲು ಇರುವ ಪ್ರಮುಖ ಸಲಹೆಗಳಾಗಿವೆ. ಅತ್ಯಂತ ಯಶಸ್ವಿ ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಓದುವಿಕೆ ಕೇವಲ ಶಾಲೆಯಲ್ಲಿ ಮಾತ್ರವಲ್ಲದೇ, ಜೀವನದುದ್ದಕ್ಕೂ ಇರುವ ಒಂದು ವಿಶಿಷ್ಟ ಪ್ರಕ್ರಿಯೆಯಾಗಿದೆ.

First published: