ಪೂರ್ವ ಬುರ್ದ್ವಾನ್‌ನ ಜಮಾಲ್‌ಪುರದಲ್ಲಿರುವ ಗೋಪಾಲ್‌ಪುರ ಮುಕ್ತಕೇಶಿ ಶಾಲೆಯು ಭಾನುವಾರದಂದು (Sun day) ತೆರೆದಿರುತ್ತದೆ. ಓದುವುದು ಕೂಡಾ ಇತರ ದಿನಗಳಂತೆ. ಸೋಮವಾರ ಇಲ್ಲಿ ರಜೆ (Holiday). ಇಲ್ಲಿ ಈ ನಿಯಮ ಹಲವಾರು ದಿನಗಳಿಂದ ನಡೆದುಕೊಂಡು ಬರುತ್ತಿದೆ. ಆದರೆ ಇದಕ್ಕೆ ಕಾರಣ ಏನು? ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ. ಶಾಲೆಯ (School) ಅಧಿಕಾರಿಗಳು ಭಾನುವಾರ ರಜೆ ಬೇಡ ಇದು ಇಂಗ್ಲೀಷ್ರು ಮಾಡಿ ಹೋದ ನಿಯಮ ಅದನ್ನು ಉಲ್ಲಂಘಿಸಿ ತಮ್ಮದೇ ಆದ ರಜಾ ದಿನವನ್ನು ನಿಗದಿಪಡಿಸಿಕೊಂಡಿದ್ದಾರೆ ಆದ್ದರಿಂದ ಈ ನಿಯಮವನ್ನು ಅಲ್ಲಿ ಅನುಸರಿಸಲಾಗುತ್ತಿದೆ.
ಗಾಂಧೀಜಿಯವರ ಅಸಹಕಾರ ಚಳವಳಿಗೆ ಬೆಂಬಲವಾಗಿ ಈ ಶಾಲೆಯನ್ನು ಸ್ಥಾಪಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರು ಸ್ಥಳೀಯ ಮಕ್ಕಳಿಗೆ ಶಿಕ್ಷಣ ನೀಡುವ ಸಂಕಲ್ಪದಿಂದ ಈ ಶಾಲೆಯನ್ನು ಸ್ಥಾಪಿಸಿದರು. ವಿದೇಶಿ ಸಂಸ್ಕೃತಿಗಳು ಮತ್ತು ಆಲೋಚನೆಗಳನ್ನು ಹೊರಗಿಡುವುದು ಇದರ ಉದ್ದೇಶವಾಗಿತ್ತು. ಅದಕ್ಕಾಗಿಯೇ ಈ ಶಾಲೆಗೆ ಸೋಮವಾರ ರಜೆ ನೀಡಲಾಗಿದೆ.
ಸಂಸ್ಥಾಪಕ ಸದಸ್ಯರ ಮೇಲಿನ ಗೌರವದಿಂದ ಶಾಲಾ ಅಧಿಕಾರಿಗಳು ಈ ನಿಯಮವನ್ನು ಉಳಿಸಿಕೊಂಡಿದ್ದಾರೆ. ನೂರು ವರ್ಷಗಳ ಹಿಂದೆ. ಆಗ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ವಿರೋಧಿಸಿ ದೇಶಾದ್ಯಂತ ಗಾಂಧೀಜಿಯವರ ನೇತೃತ್ವದಲ್ಲಿ ಅಸಹಕಾರ ಚಳವಳಿ ನಡೆಯುತ್ತಿತ್ತು. ಪೂರ್ವ ಬುರ್ದ್ವಾನ್‌ನ ಜಮಾಲ್‌ಪುರದ ಗೋಪಾಲ್‌ಪುರ ಗ್ರಾಮದಲ್ಲಿ ಆ ಚಳವಳಿಯ ಕಿಡಿ ಇನ್ನೂ ಉಳಿದಿದೆ.
ಇದನ್ನೂ ಓದಿ: Ballari: ವಿದ್ಯಾರ್ಥಿಗಳಿಗೆ ಗೇಟ್ಪಾಸ್ ನೀಡಿದ ಡಿಸಿಯನ್ನು ಅಮಾನತು ಮಾಡಿ; ಸಿದ್ದರಾಮಯ್ಯ ಆಗ್ರಹ
ಆ ಚಳುವಳಿಗೆ ಬೆಂಬಲವಾಗಿ 1922ರಲ್ಲಿ ಗೋಪಾಲಪುರ ಮುಕ್ತಕೇಶಿ ವಿದ್ಯಾಲಯ ಸ್ಥಾಪನೆಯಾಯಿತು. ಆದರೆ ಗೋಪಾಲಪುರ ಮುಕ್ತಕೇಶಿ ಶಾಲೆಯು ಸಂಸ್ಥಾಪಕರ ದೇಶಭಕ್ತಿಯನ್ನು ಗೌರವಿಸುವ ಮೂಲಕ ಹಳೆಯ ನಿಯಮಗಳನ್ನು ಅನುಸರಿಸುತ್ತಿದೆ. ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಹಾಲಿ ಶಿಕ್ಷಕ ಸಮೀರ್ ಕುಮಾರ್ ಘೋಷಾಲ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಗೋಪಾಲಪುರ ಗ್ರಾಮ ಅನಕ್ಷರತೆ ಹಾಗೂ ಅಭಿವೃದ್ಧಿ ಕಾಣದ ಕತ್ತಲೆಯಲ್ಲಿತ್ತು ಆದರೆ ಈಗ ಎಷ್ಟೋ ವಿಷಯದಲ್ಲಿ ಮುಂದುವರೆದಿದೆ ಎಂದು ಹೇಳಿದ್ದಾರೆ.
ಶಿಕ್ಷಣಕ್ಕಾಗಿ ಗ್ರಾಮದಲ್ಲಿ ಗ್ರಂಥಾಲಯವೂ ಇರಲಿಲ್ಲ
ಶಿಕ್ಷಣಕ್ಕಾಗಿ ಗ್ರಾಮದಲ್ಲಿ ಗ್ರಂಥಾಲಯವೂ ಇರಲಿಲ್ಲ. ಗೋಪಾಲಪುರ ಗ್ರಾಮದ ನಿವಾಸಿ, ದೇಶಭಕ್ತ ಅವಿನಾಶ್ಚಂದ್ರ ಹಲ್ದರ್ ಅವರು ತಮ್ಮ ಗ್ರಾಮದ ಜನರನ್ನು ಮಾತೃಭಾಷೆಯಲ್ಲಿ ಶಿಕ್ಷಣವನ್ನು ಬೆಳಕಿಗೆ ತರಲು ನಿರ್ಧರಿಸಿದರು. ಸ್ವಂತ ಜಮೀನಿನಲ್ಲಿ ಶಾಲೆ ನಿರ್ಮಿಸಲು ನಿರ್ಧರಿಸಿದರು. ತಾಳೆಮರದ ಬೇರು, ಬಿದಿರು, ಹುಲ್ಲಿನಿಂದ ಅಬಿನಾಶಬಾಬು ಶಾಲೆ ನಿರ್ಮಿಸಿದ್ದರಂತೆ. ಜನವರಿ 5, 1922 ರಂದು ಅಲ್ಲಿ ಅಧ್ಯಯನಗಳು ಪ್ರಾರಂಭವಾದವು ಎಂದು ಹೇಳಲಾಗುತ್ತದೆ.
ಮುಕ್ತಕೇಶಿ ವಿದ್ಯಾಲಯ ಸ್ಥಾಪನೆ
ಅವಿನಾಶ್ ಹಲ್ದಾರ್ ಅವರು ತಮ್ಮ ಪ್ರೀತಿಯ ದೇವತೆ ಮುಕ್ತಕೇಶಿಯ ನೆನಪಿಗಾಗಿ ಗೋಪಾಲಪುರ ಮುಕ್ತಕೇಶಿ ವಿದ್ಯಾಲಯವನ್ನು ಸ್ಥಾಪಿಸಿದರು. ಅನೇಕ ಪ್ರಯತ್ನಗಳ ನಂತರ ಶಾಲೆಯನ್ನು ನಿರ್ಮಿಸಲಾಗಿದ್ದರೂ, ಇಂಗ್ಲಿಷ್ ಬೋಧನಾ ಸೌಲಭ್ಯಗಳ ಕೊರತೆಯಿಂದಾಗಿ ಆ ಸಮಯದಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಶಾಲೆಗೆ ಮಾನ್ಯತೆ ಇರಲಿಲ್ಲ. ಆದರೆ, ಸಂಸ್ಥಾಪಕರು ಬಿಡಲಿಲ್ಲ. ಗ್ರಾಮದ ಸಮಾನ ಮನಸ್ಕರೊಂದಿಗೆ ಪ್ರಚಾರ ಆರಂಭಿಸಿದರು. ಕೊನೆಗೆ ಫಲಿತಾಂಶವೂ ಸಿಕ್ಕಿದೆ. ಎಲ್ಲರ ಸಾಮೂಹಿಕ ಪ್ರಯತ್ನಕ್ಕೆ ಸ್ಪಂದಿಸಿದ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ಆರಂಭಿಸಿದ್ದಾರೆ.
ಇಂದಿಗೂ ಈ ಶಾಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಮತ್ತು ಹಿಂದಿನಿಂದ ನಡೆದುಕೊಂಡು ಬಂದ ಪತ್ತದಿಯ ಪ್ರಕಾರ ಈ ಶಾಲೆಗೆ ಎಂದಿಗೂ ಭಾನುವಾರ ರಜೆ ನೀಡೋದಿಲ್ಲ. ಕೇವಲ ಸೋಮವಾರದಂದು ಮಾತ್ರ ರಜೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಈ ನಿಯಮದ ಪ್ರಕಾರ ಶಾಲೆಗೆ ಆಗಮಿಸಿ ವಿದ್ಯಾಭ್ಯಾಸ ನಡೆಸುತ್ತಾರೆ. ಈ ಶಾಲೆಯಲ್ಲಿ ಮಾತ್ರ ಈ ರೀತಿಯಾದ ಕ್ರಮ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ