• Home
  • »
  • News
  • »
  • jobs
  • »
  • No Exams: ಈ ದೇಶದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯೇ ಇಲ್ಲ!

No Exams: ಈ ದೇಶದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯೇ ಇಲ್ಲ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಯಾವುದೇ ಪರೀಕ್ಷೆಗಳು ಮತ್ತು ಅಂಕಗಳ ಹೊರತಾಗಿಯೂ, ಫಿನ್‌ಲ್ಯಾಂಡ್ ವಿಶ್ವದ ಅತ್ಯುತ್ತಮ ಶಾಲಾ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇದಕ್ಕೆ ಕಾರಣ ಏನು ಗೊತ್ತಾ ಮುಂದೆ ಓದಿ.

  • Share this:

ಪ್ರಾಥಮಿಕ ಅಥವಾ ಕಾಲೇಜು (College) ವಿದ್ಯಾರ್ಥಿಗಳು ಯಾರೇ ಆಗಿರಲಿ  ಪ್ರತಿಯೊಬ್ಬರೂ ಭಾರತದಲ್ಲಿ ಪರೀಕ್ಷೆಗಳನ್ನು ಬರೆದು ಸುಸ್ತಾಗಿರುತ್ತಾರೆ. ಒಂದನೇ ತರಗತಿಯಿಂದ ಪಿಎಚ್‌ಡಿವರೆಗೆ, ಭಾರತದಲ್ಲಿ ಪ್ರತಿಯೊಬ್ಬರಿಗೂ ಪರೀಕ್ಷೆಗೆ ಕುಳಿತುಕೊಳ್ಳುವುದು ಕಡ್ಡಾಯವಾಗಿದೆ. ಸಾಮಾನ್ಯವಾಗಿ ಶಿಕ್ಷಣದಲ್ಲಿ ಪರೀಕ್ಷೆ(Exam)  ಎಂಬುದು ವಿದ್ಯಾರ್ಥಿಗಳ (Students) ಮೌಲ್ಯಮಾಪನಕ್ಕೆ ಮುಖ್ಯವಾದ ಅಂಶವಾಗಿರುತ್ತದೆ. ವಿದ್ಯಾರ್ಥಿಗಳ ಸಾಮರ್ಥ್ಯದ ಪರೀಕ್ಷೆ ಮಾಡಲಾಗುತ್ತದೆ. ಆದರೆ ಈ ಒಂದು ದೇಶದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯೇ ಇಲ್ಲ. ಇದರ ಕಾರಣ (Reason) ಕೇಳಿದ್ರೆ ನೀವೂ ಖುಷಿ (Happy) ಪಡೋದು ಖಂಡಿತ.


ಉದ್ಯೋಗಗಳು, ಶಾಲಾ ಬಡ್ತಿಗಳು ಅಥವಾ ಕಾಲೇಜಿನಲ್ಲಿ ಉತ್ತೀರ್ಣರಾಗಲು, ಪರೀಕ್ಷೆಯು ಭಾರತದಲ್ಲಿ ಕಡ್ಡಾಯವಾಗಿದೆ. ಪರೀಕ್ಷೆ ಮಾತ್ರ ಅಲ್ಲ ಹೋಮ್‌ವರ್ಕ್ ಕೂಡ ಮಾಡಬೇಕು ಎಂದಿಲ್ಲ ಅಂಥ ಒಂದು ದೇಶ ಇದೆ. ಇದು ಅಸಾಧ್ಯ ಎಂದು ನಿಮಗೆ ಅನಿಸಬಹುದು ಆದರೆ ಇದು ನಿಜವಾದ ಸಂಗತಿ. ಏಕೆಂದರೆ ಕೇವಲ ಜನತೆಯ ಖುಷಿಯನ್ನು ಬಯಸುವ ದೇಶ ಫಿನ್‌ಲ್ಯಾಂಡ್‌ ಆ ಕಾರಣದಿಂದ ಹೋಮ್​ವರ್ಕ್​ ಅಥವಾ ಪರೀಕ್ಷೆ ಯಾವುದನ್ನೂ ಸಹ ವಿದ್ಯಾರ್ಥಿಗಳಿಗೆ ನೀಡಿಲ್ಲ.


ವರ್ಷದ ಕೊನೆಗೆ ಒಂದೇ ಪರೀಕ್ಷೆ


ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಹಿರಿಯ ವರ್ಷದ ಕೊನೆಯಲ್ಲಿ ಒಂದು ಪರೀಕ್ಷೆಯನ್ನು ಹೊರತುಪಡಿಸಿ ಯಾವುದೇ ಶ್ರೇಯಾಂಕಗಳಿಲ್ಲ, ಹೋಲಿಕೆಗಳಿಲ್ಲ, ಯಾವುದೇ ಸ್ಪರ್ಧೆಗಳಿಲ್ಲ. ಅವರ ಏಕೈಕ ಅಪವಾದವೆಂದರೆ ರಾಷ್ಟ್ರೀಯ ಮೆಟ್ರಿಕ್ಯುಲೇಷನ್ ಪರೀಕ್ಷೆ ಮಾತ್ರ ಇರುತ್ತದೆ ಇದು ಉನ್ನತ-ಮಾಧ್ಯಮಿಕ ಶಾಲೆಯ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಯಂಪ್ರೇರಿತ ಪರೀಕ್ಷೆಯಾಗಿದೆ.


ಇದನ್ನೂ ಓದಿ: CBSE, UPMSP ಮತ್ತು ಇತರ ಬೋರ್ಡ್ ಪರೀಕ್ಷೆಗಳ ಇತ್ತೀಚಿನ ಅಪ್ಡೇಟ್ಸ್​ ಹೀಗಿದೆ


ಯಾವುದೇ ಪರೀಕ್ಷೆಗಳು ಮತ್ತು ಅಂಕಗಳ ಹೊರತಾಗಿಯೂ, ಫಿನ್‌ಲ್ಯಾಂಡ್ ವಿಶ್ವದ ಅತ್ಯುತ್ತಮ ಶಾಲಾ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ, US, UK ಮತ್ತು ಇತರ ಯುರೋಪಿಯನ್ ರಾಷ್ಟ್ರಗಳಿಗಿಂತ ಉತ್ತಮವಾಗಿದೆ. ಗ್ರೇಡ್‌ಗಳಿಗಾಗಿ ಸ್ಪರ್ಧಾತ್ಮಕ ಓಟದಲ್ಲಿ ವಿದ್ಯಾರ್ಥಿಗಳನ್ನು ಪರಸ್ಪರ ವಿರುದ್ಧವಾಗಿ ನಿಲ್ಲಿಸುವ ಬದಲು, ವಿದ್ಯಾರ್ಥಿಗಳನ್ನು ಸೃಜನಶೀಲರಾಗಿರಲು ಪ್ರೋತ್ಸಾಹಿಸುವುದರಲ್ಲಿ ಫಿನ್‌ಲ್ಯಾಂಡ್ ನಂಬಿಕೆ ಇಟ್ಟಿದೆ.


ಹೆಚ್ಚು ಆಸಕ್ತಿಕರ ಸಂಗತಿಯೆಂದರೆ ಫಿನ್‌ಲ್ಯಾಂಡ್‌ನಲ್ಲಿರುವ ಮಕ್ಕಳು 7 ವರ್ಷ ತುಂಬಿದ ನಂತರವೇ ಔಪಚಾರಿಕ ಶಿಕ್ಷಣವನ್ನು ಪ್ರಾರಂಭಿಸುತ್ತಾರೆ. ಅವರು 16 ವರ್ಷದವರೆಗೆ ಯಾವುದೇ ಮೌಲ್ಯಮಾಪನ ಪರೀಕ್ಷೆಗೆ ಕುಳಿತುಕೊಳ್ಳುವುದಿಲ್ಲ.


ನಿಮಗೂ ಬೇಕಾ ಇಂಥ ಕಲಿಕೆ? 


ಪ್ರಾಥಮಿಕ ಶಾಲಾ ಅವಧಿಯಲ್ಲಿ, ಅವರ ಶಿಕ್ಷಕರು ಬಲವಂತದ ಕಲಿಕೆ, ಕಂಠಪಾಠ ಮತ್ತು ಹಾರ್ಡ್ ಹೋಮ್‌ವರ್ಕ್ ಬದಲಿಗೆ ವಿದ್ಯಾರ್ಥಿಗಳ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸುತ್ತಾರೆ. ಭಾರತದಲ್ಲಿ, ನಾವು ನಿರ್ದಿಷ್ಟವಾಗಿ ಗ್ರೇಡ್‌ಗಳು ಮತ್ತು ಶೇಕಡಾವಾರುಗಳ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸಿದ್ದೇವೆ. ಇಲ್ಲಿ, 10 ನೇ ತರಗತಿ ಮತ್ತು 12 ನೇ ತರಗತಿಯ ನಂತರದ ಬೋರ್ಡ್ ಪರೀಕ್ಷೆಗಳು ಬಹಳ ಮುಖ್ಯವಾದ ಮೈಲಿಗಲ್ಲುಗಳಾಗಿವೆ.


ಪತ್ರ ಬರೆದ ಪುಟ್ಟ ಹುಡುಗಿ


ಕೆಲವು ತಿಂಗಳ ಹಿಂದೆ, ಕಾಶ್ಮೀರದ 6 ವರ್ಷದ ಬಾಲಕಿ ಮಹಿರು ಇರ್ಫಾನ್ ಅವರು ಆನ್‌ಲೈನ್ ಹೋಮ್‌ವರ್ಕ್ ಅನ್ನು ಕಡಿಮೆ ಮಾಡುವಂತೆ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ ಸಂಗತಿ ತಿಳಿದಿದೆ. ಇದರಿಂದ ಮಕ್ಕಳಿಗೂ ಸಹ ಆಟವಾಡಲು ಸಮಯ ಬೇಕು ಅವರಿಗೂ ಮಾನಸಿಕವಾಗಿ ಸಂತೋಷ ಬೇಕು ಎಂಬುದು ಭಾರತದಲ್ಲೂ ಸಾಬೀತಾಗಿದೆ.


ಎಲ್ಲರೂ ಇಷ್ಟಪಡುವ ಶಿಕ್ಷಣ ಪದ್ಧತಿ


ಅದೇ ರೀತಿ ಪ್ರತಿ ದಿನ ಪುಸ್ತಕ ತುಂಬಿದ ಬ್ಯಾಗ್ ಹೊತ್ತುಕೊಂಡು ಶಾಲೆಗೆ ಹೋಗುವುದು ಹೇಗೆ ಎಂದು ವಿದ್ಯಾರ್ಥಿಯೊಬ್ಬ ಆರೋಪಿಸಿದ್ದಾನೆ. ಆದ್ದರಿಂದ ಆ ದೇಶದಲ್ಲಿ ಇರುವ ಶಿಕ್ಷಣ ಪದ್ದತಿಯನ್ನು ಎಲ್ಲರೂ ಪ್ರೀತಿಸುತ್ತಾರೆ. ಮತ್ತು ಎಲ್ಲರೂ ಸಹ ಅದನ್ನು ಇಷ್ಟ ಪಡುತ್ತಾರೆ.

First published: