• Home
  • »
  • News
  • »
  • jobs
  • »
  • PUC Marks: ಪಿಯು ಪರೀಕ್ಷಾ ಪದ್ಧತಿಯಲ್ಲಿ ಮಹತ್ತರ ಬದಲಾವಣೆ ತರಲು ರಾಜ್ಯ ಸರ್ಕಾರ ನಿರ್ಧಾರ

PUC Marks: ಪಿಯು ಪರೀಕ್ಷಾ ಪದ್ಧತಿಯಲ್ಲಿ ಮಹತ್ತರ ಬದಲಾವಣೆ ತರಲು ರಾಜ್ಯ ಸರ್ಕಾರ ನಿರ್ಧಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗೆಲ್ಲಾ ಪದವಿ ಕಾಲೇಜುಗಳ ಪ್ರವೇಶಕ್ಕೆ ಪಿಯುಸಿ ಫಲಿತಾಂಶವೇ ಮುಖ್ಯವಾಗಿರುತ್ತದೆ. ಆದ್ದರಿಂದ ಮಕ್ಕಳು ಹೆಚ್ಚಿನ ಅಂಕ ಗಳಿಸುವುದು ಮುಖ್ಯವಾಗುತ್ತದೆ. ಆದ್ರೆ ಇತ್ತಿಚಿನ ದಿನಗಳಲ್ಲಿ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ.

  • Share this:

ಪ್ರತಿ ವರ್ಷ ಪಿಯುಸಿ ಪರೀಕ್ಷೆ ವೇಳಾಪಟ್ಟಿ (PUC Exam Time Table) ಈಗಾಗಲೇ ಬಿಡುಗಡೆಗೊಂಡಿದೆ ಅದರ ಬೆನ್ನಲ್ಲೇ ಬಹು ಆಯ್ಕೆಯ ಪ್ರಶ್ನೆ ಪತ್ರಿಕೆ (Question Paper) ಇರಲಿದೆ ಎಂಬ ಮಾತೂ ಸಹ ಕೇಳಿಬರುತ್ತಿತ್ತು. ಆದರೆ ಈಗ ಈ ವಿಷಯದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ (Government) ನಿರ್ಧರಿಸಿದೆ. ಮಕ್ಕಳ ಉತ್ತಿರ್ಣತೆ ಹೆಚ್ಚಿಸಲು ಶಿಕ್ಷಣ (Education) ಇಲಾಖೆ ಹೊಸದೊಂದು ಮಾಸ್ಟರ್ ಪ್ಲಾನ್ ತಯಾರಿಸಿದೆ. ಈ ಕುರಿತು ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ.


ಪಿಯು ಪರೀಕ್ಷಾ ಪ್ರಶ್ನೆ ಪತ್ರಿಕೆ ಮಾದರಿ ಬದಲಿಸಲು ಹೊರಟ ಶಿಕ್ಷಣ ಇಲಾಖೆ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯಲ್ಲೂ 15ರಿಂದ 20 ಅಂಕಗಳ ಬಹು ಆಯ್ಕೆ ಪ್ರಶ್ನೆಗಳನ್ನು ಅಳವಡಿಸಲು ಚಿಂತನೆ ನಡೆಸುತ್ತಿದೆ. ಅಷ್ಟೇ ಅಲ್ಲ ಹೀಗೆ ಮಾಡುವುದರಿಂದಾಗಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಹ ತುಂಬಾ ಅನುಕೂಲವಾಗುತ್ತದೆ. ಮಕ್ಕಳು ಇನ್ನಷ್ಟು ನಿಖರ ಉತ್ತರಗಳನ್ನು ನೀಡುವಲ್ಲಿ ಸಿದ್ಧರಾಗುತ್ತಾರೆ ಎಂಬ ಅಂಶವನ್ನು ಪ್ರಸ್ಥಾಪ ಮಾಡಿದ್ದರು ಎಂದು ತಿಳಿದು ಬಂದಿದೆ.


ಪದವಿ ಕಾಲೇಜುಗಳ ಪ್ರವೇಶಕ್ಕೆ ಪಿಯುಸಿ ಫಲಿತಾಂಶವೇ ಮುಖ್ಯ
ಈಗೆಲ್ಲಾ ಪದವಿ ಕಾಲೇಜುಗಳ ಪ್ರವೇಶಕ್ಕೆ ಪಿಯುಸಿ ಫಲಿತಾಂಶವೇ ಮುಖ್ಯವಾಗಿರುತ್ತದೆ. ಆದ್ದರಿಂದ ಮಕ್ಕಳು ಹೆಚ್ಚಿನ ಅಂಕ ಗಳಿಸುವುದು ಮುಖ್ಯವಾಗುತ್ತದೆ. ಆದ್ರೆ ಇತ್ತಿಚಿನ ದಿನಗಳಲ್ಲಿ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ. ಅದರಲ್ಲೂ ಕರ್ನಾಟಕದ ಶೈಕ್ಷಣಿಕ ಪ್ರಗತಿ ಕುಂಠಿತವಾಗಿರುವುದು ತಿಳಿದುಬರುತ್ತಿದೆ. ಇದನ್ನು ಹೀಗೆ ಬಿಟ್ಟರೆ ಈ ವರ್ಷವೂ ಸಹ ಅದೇ ಪರಿಸ್ಥಿತಿ ಮರುಕಳಿಸಲಿದೆ ಆದ ಕಾರಣ ಕೆಲವೊಂದು ಬೆಳವಣಿಗೆ ಆಗಲೇ ಬೇಕು ಎಂದು ಈ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ.


ಇದನ್ನೂ ಓದಿ: Labour Card Scholarship: ಕಾರ್ಮಿಕರ ಮಕ್ಕಳಿಗೆ ಸಿಗಲಿದೆ 75 ಸಾವಿರ ವಿದ್ಯಾರ್ಥಿ ವೇತನ! ನೀವೂ ಅಪ್ಲೈ ಮಾಡಿ


ಬಹುಆಯ್ಕೆಯ ಪ್ರಶ್ನೆಗಳ ಅಳವಡಿಕೆ
ಹೌದು ಬಹುಆಯ್ಕೆಯ ಪ್ರಶ್ನೆಗಳ ಅಳವಡಿಕೆಯಿಂದ ಮಕ್ಕಳಿಗೆ ಪ್ರಶ್ನೆಯ ಯ್ಕೆ ಇರುತ್ತೆ. ಹಾಗಾದಾಗ ಮಕ್ಕಳು ಒಂದು ಪ್ರಶ್ನೆಗೆ ಉತ್ತರಗೊತ್ತಿಲ್ಲ ಎಂದಾದರೆ ಬೇರೆ ಅಲ್ಲಿಯೇ ಇರುವ ಉತ್ತರವನ್ನುಆಯ್ದು ಬರೆಯಲು ಅನುಕೂಲವಾಗುತ್ತದೆ ಎಂದು ಇಲ್ಲಿ ತಿಳಿಯುತ್ತದೆ. ಇದರಿಂದದ ಉತ್ತಮವಾಗಿ ಪರೀಕ್ಷೆ ಬರೆದರೆ ಪಿಯು ಫಲಿತಾಂಶ ದಲ್ಲಿ ಹೆಚ್ಚಳವಾದರೆ ಪದವಿ ಪ್ರವೇಶಕ್ಕೆ ಅನುಕೂಲವಾಗುತ್ತದೆ ಎಂಬುವುದು ಶಿಕ್ಷಣ ಇಲಾಖೆಯ ಪ್ಲಾನ್ ಆಗಿದ್ದು ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ.




ಒಂದು ಅಂಕದ ಪ್ರಶ್ನೆಗಳಿಗೂ ವಿವರಣಾತ್ಮಕ ಉತ್ತರ
ಹೌದು ಜೊತೆಗೆ ಈಗ ಸದ್ಯ ಒಂದು ಅಂಕದ ಪ್ರಶ್ನೆಗಳಿಗೂ ವಿವರಣಾತ್ಮಕ ಉತ್ತರಗಳನ್ನು ವಿದ್ಯಾರ್ಥಿಗಳು ಬರೆಯಬೇಕಿದೆ. ಹಾಗಾಗಿ, ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿ ಸಮಯದ ಅಭಾವ ಕಂಡುಬರುತ್ತಿತ್ತು. ಇದನ್ನು ತಪ್ಪಿಸಲು ಕೂಡ ಬಹು ಆಯ್ಕೆ ಪ್ರಶ್ನೆ ಮಾದರಿ ತರುವ ಸಾಧ್ಯತೆ ಹೆಚ್ಚಿದೆ ಎಂದೇ ಹೇಳಬಹುದು. ಕೇವಲ ಹದಿನೈದು ಅಂಕಗಳ ಹೆಚ್ಚೆಂದರೆ ಇಪ್ಪತ್ತು ಅಂಕಗಳ ಪ್ರಶ್ನೆಗಳಷ್ಟೇ ಬಹು ಆಯ್ಕೆಯ ಪ್ರಶ್ನೆಗಳಾಗಿದ್ದು ಸಂಪೂರ್ಣ ಪರೀಕ್ಷೆ ಬಹು ಆಯ್ಕೆ ಪ್ರಶ್ನೆಗಳಿಂದ ಕೂಡಿರುವುದಿಲ್ಲ ಗಮನದಲ್ಲಿರಲಿ. ಈ ನಿಟ್ಟಿನಲ್ಲಿ ಓದಿ ಆರಂಭಿಸಿ. ಹೆಚ್ಚಿನ ಅಂಕ ನಿಮ್ಮದಾಗಿಸಿ.


ಅಭ್ಯಾಸ ಆರಂಭಿಸಿ
ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚಾಗಿ ಅಭ್ಯಾಸ ನಡೆಸಬೇಕು. ಬಹು ಆಯ್ಕೆಯ ಪ್ರಶ್ನೆಗಳಿಗೂ ಸಹ ಉತ್ತರ ನೀಡಲು ಸಿದ್ಧರಾಗಬೇಕು ಹೀಗೆ ಸಿದ್ಧವಾದರೆ ಮಾತ್ರ ಹೆಚ್ಚಿನ ಅಂಕಗಳಿಸಲು ಸಹಾಯವಾಗುತ್ತದೆ. ಇಂದಿನಿಂದಲೇ ತಯಾರಿ ನಡೆಸಿ. ಅಂತಿಮ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು