• ಹೋಂ
  • »
  • ನ್ಯೂಸ್
  • »
  • Jobs
  • »
  • NEP: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಆರಂಭವಾಗಲಿದೆ NCERT ಪಠ್ಯಪುಸ್ತಕಗಳ ಪರಿಷ್ಕರಣೆ

NEP: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಆರಂಭವಾಗಲಿದೆ NCERT ಪಠ್ಯಪುಸ್ತಕಗಳ ಪರಿಷ್ಕರಣೆ

ಪುಸ್ತಕ

ಪುಸ್ತಕ

ಮೊದಲಿಗೆ ಪ್ರಿ-ಸ್ಕೂಲ್‌ನಿಂದ 2ನೇ ತರಗತಿ ಪುಸ್ತಕಗಳನ್ನು ಎನ್‌ಸಿಎಫ್ ಮುಂಬರುವ ತಿಂಗಳುಗಳಲ್ಲಿ ನವೀಕರಿಸಿ ಬಿಡುಗಡೆ ಮಾಡುತ್ತದೆ. ನಂತರ ಮುಂದಿನ ಹಂತದ ಪುಸ್ತಕಗಳ ನವೀಕರಣ ನಡೆಯುತ್ತದೆ. ಪುಸ್ತಕಗಳನ್ನು ಇಂಗ್ಲಿಷ್ ಜೊತೆಗೆ 22 ಭಾಷೆಗಳಲ್ಲಿ ಮುದ್ರಿಸಲಾಗುತ್ತದೆ

  • Share this:
  • published by :

ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP)ಗೆ ಅನುಗುಣವಾಗಿ ಪರಿಷ್ಕರಿಸಲಾದ ಹೊಸ ಎನ್‌ಸಿಇಆರ್‌ಟಿ (NCRT) ಪಠ್ಯಪುಸ್ತಕಗಳನ್ನು 2024-25ರ ಶೈಕ್ಷಣಿಕ ಅವಧಿಯಿಂದ ಶಾಲೆಗಳಲ್ಲಿ (School) ಪರಿಚಯಿಸುವ ಸಾಧ್ಯತೆಯಿದೆ ಎಂದು ಶಿಕ್ಷಣ (Education) ಸಚಿವಾಲಯದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಎನ್ಇಪಿ ಅನುಗುಣವಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (NCF) ಅಡಿಯಲ್ಲಿ ಪರಿಷ್ಕರಿಸಿರುವ ಹೊಸ ಪಠ್ಯಪುಸ್ತಕಗಳನ್ನು ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳಿಗೆ ಪರಿಚಯಿಸುವ ಯೋಜನೆಯನ್ನು (Plan) ಕಾರ್ಯಗತಗೊಳಿಸಲು ಶಿಕ್ಷಣ ಸಚಿವಾಲಯ ಸಿದ್ಧವಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.‌


ಪಠ್ಯಪುಸ್ತಕ ಪರಿಷ್ಕರಣೆ


ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (ಎನ್‌ಸಿಎಫ್) ಅಡಿಯಲ್ಲಿ ಈ ಪಠ್ಯಪುಸ್ತಕವನ್ನು ಪರಿಷ್ಕರಿಸಲಾಗುತ್ತಿದ್ದು, ಇದು ಪಠ್ಯಕ್ರಮದ ಮಾರ್ಗಸೂಚಿಗಳನ್ನು ನೀಡುವಲ್ಲಿ ಪ್ರಮುಖವಾಗಿದೆ.


ಮೊದಲಿಗೆ ಪ್ರಿ-ಸ್ಕೂಲ್‌ನಿಂದ 2ನೇ ತರಗತಿ ಪುಸ್ತಕಗಳನ್ನು ಎನ್‌ಸಿಎಫ್ ಮುಂಬರುವ ತಿಂಗಳುಗಳಲ್ಲಿ ನವೀಕರಿಸಿ ಬಿಡುಗಡೆ ಮಾಡುತ್ತದೆ. ನಂತರ ಮುಂದಿನ ಹಂತದ ಪುಸ್ತಕಗಳ ನವೀಕರಣ ನಡೆಯುತ್ತದೆ. ಪುಸ್ತಕಗಳನ್ನು ಇಂಗ್ಲಿಷ್ ಜೊತೆಗೆ 22 ಭಾಷೆಗಳಲ್ಲಿ ಮುದ್ರಿಸಲಾಗುತ್ತದೆ ಎಂಬುದಾಗಿ ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


ಕಸ್ತೂರಿರಂಗನ್‌ಗೆ ಪರಿಷ್ಕೃತ ಪಠ್ಯಪುಸ್ತಕದ ಹೊಣೆ


ಎನ್‌ಸಿಎಫ್ ಅನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ಎನ್‌ಇಪಿ 2020ರ ರೂವಾರಿ ಮಾಜಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಕೆ. ಕಸ್ತೂರಿರಂಗನ್ ಅವರೇ ವಹಿಸಿಕೊಳ್ಳಲಿದ್ದಾರೆ. ಇನ್ನು ಹೊಸ NCF ಅನ್ನು ವಿನ್ಯಾಸಗೊಳಿಸಲು ಸಹಾಯ ಮಾಡಲು 25 ನ್ಯಾಷನಲ್‌ ಫೋಕಸ್‌ ಗ್ರೂಪ್‌ಗಳೊಂದಿಗೆ ಇಲಾಖೆ ಸಮಾಲೋಚನೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.


"ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜಿಲ್ಲಾ ಮಟ್ಟದ ಸಮಾಲೋಚನೆಗಳು, ಮೊಬೈಲ್ ಅಪ್ಲಿಕೇಶನ್ ಸಮೀಕ್ಷೆಗಳು ಮತ್ತು 25 ಪ್ರದೇಶಗಳಲ್ಲಿ ಫೋಕಸ್ ಗ್ರೂಪ್‌ಗಳ ಮೂಲಕ ಪೇಪರ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯ ಮೂಲಕ ಪಠ್ಯಕ್ರಮ ಚೌಕಟ್ಟುಗಳನ್ನು ಸಿದ್ಧಪಡಿಸಲಾಗುವುದು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: School Bus ಯಾವಾಗ್ಲೂ ಹಳದಿ ಬಣ್ಣದಲ್ಲೇ ಇರುತ್ತೆ ಯಾಕೆ ಗೊತ್ತಾ? ಇಲ್ಲಿದೆ ಆನ್ಸರ್​


ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಈಗಾಗಲೇ 2023-24ನೇ ಶೈಕ್ಷಣಿಕ ವರ್ಷದಿಂದ ಅಡಿಪಾಯದ ಹಂತದಲ್ಲಿ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡಿರುವುದರಿಂದ ಮೊದಲಿಗೆ NCF ಆಧಾರದ ಮೇಲೆ, 1 ಮತ್ತು 2 ನೇ ತರಗತಿಗಳಿಗೆ ಪಠ್ಯಪುಸ್ತಕಗಳನ್ನು ತಿಂಗಳ ಅಂತ್ಯದೊಳಗೆ ಬಿಡುಗಡೆ ಮಾಡಲು ಇಲಾಖೆ ಯೋಜನೆ ಹಾಕಿಕೊಂಡಿದೆ.



ಇಲಾಖೆಗೆ ಮಾಹಿತಿ ನೀಡಿದ ರಾಜ್ಯಗಳು


ರಾಜ್ಯಗಳು ಯಾವ ರೀತಿ ಪಠ್ಯಕ್ರಮವನ್ನು ನಿರೀಕ್ಷಿಸುತ್ತಿವೆ ಎಂಬುದಾಗಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು ಇಲಾಖೆಗೆ ಪತ್ರಗಳನ್ನು ಕಳುಹಿಸಿವೆ.


“ನಾವು ಸದ್ಯಕ್ಕೆ ಆ ಪೇಪರ್‌ಗಳನ್ನು ಪರಿಶೀಲಿಸುತ್ತಿದ್ದೇವೆ. ಅದರ ಆಧಾರದ ಮೇಲೆ, ಎಲ್ಲಾ ರಾಜ್ಯಗಳ ಉತ್ತಮ ಅಭ್ಯಾಸಗಳನ್ನು ಎನ್‌ಸಿಎಫ್‌ನಲ್ಲಿ ಸೇರಿಸಲಾಗುತ್ತದೆ. ರಾಜ್ಯಗಳು ಎನ್‌ಸಿಎಫ್ ಅನ್ನು ಅಳವಡಿಸಿಕೊಳ್ಳಲು ಆಯ್ಕೆ ಮಾಡಬಹುದು ಅಥವಾ ತಮ್ಮದೇ ಆದ ತಿಳುವಳಿಕೆಯಂತೆ ಬದಲಾವಣೆಗಳನ್ನು ಮಾಡಬಹುದು” ಅಧಿಕಾರಿಗಳು ಹೇಳಿದರು.


ಹೇಗಿರಲಿದೆ ಹೊಸ ಪಠ್ಯಕ್ರಮ?


ಹೊಸ ಪಠ್ಯಕ್ರಮದಲ್ಲಿ ಭಾರತದ ಸಂಸ್ಕೃತಿ, ಹೆಮ್ಮೆ, ಲಿಂಗ ಸಮಾನತೆಯನ್ನು ಕಲಿಸುವ ಮತ್ತು ಮಕ್ಕಳನ್ನು ಸಹಾನುಭೂತಿಯುಳ್ಳ ಮನುಷ್ಯರನ್ನಾಗಿ ಮಾಡುವ ಪಠ್ಯಕ್ರಮಗಳನ್ನು ರೂಪಿಸುವ ಗುರಿಯನ್ನು ಶಿಕ್ಷಣ ಇಲಾಖೆ ಹೊಂದಿದೆ ಎನ್ನಲಾಗಿದೆ.


ಡಿಜಿಟಲ್‌ ಕಲಿಕೆಯು ಕೋವಿಡ್‌ ಸಂದರ್ಭದಲ್ಲಿ ಅರಿವಿಗೆ ಬಂದಿದೆ. ಹೀಗಾಗಿ ಎಲ್ಲಾ ಹೊಸ ಪಠ್ಯಪುಸ್ತಕಗಳನ್ನು ಏಕಕಾಲದಲ್ಲಿ ಡಿಜಿಟಲ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ ಆದ್ದರಿಂದ ಯಾರಾದರೂ ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.


ಪಠ್ಯಪುಸ್ತಕಗಳು ಸ್ಥಿರವಾಗಿರಬಾರದು. ಅವುಗಳನ್ನು ನಿಯಮಿತವಾಗಿ ಪರಿಷ್ಕರಿಸುವುದನ್ನು ಖಚಿತಪಡಿಸಿಕೊಳ್ಳಲು ಸಾಂಸ್ಥಿಕ ಚೌಕಟ್ಟನ್ನು ಅಭಿವೃದ್ಧಿಪಡಿಸಲಾಗುವುದು ಎಂದೂ ತಿಳಿಸಿದ್ದಾರೆ.


ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಿದ ನಂತರ, ಸರ್ಕಾರವು ಹೊಸ ಪಠ್ಯಕ್ರಮವನ್ನು PARAKH (ಸಮಗ್ರ ಅಭಿವೃದ್ಧಿಗಾಗಿ ಕಾರ್ಯಕ್ಷಮತೆಯ ಮೌಲ್ಯಮಾಪನ, ವಿಮರ್ಶೆ ಮತ್ತು ವಿಶ್ಲೇಷಣೆ) ನೊಂದಿಗೆ ಹೊಂದಿಸುತ್ತದೆ ಎಂದು ಶಿಕ್ಷಣ ಅಧಿಕಾರಿ ಹೇಳಿದರು.

First published: