• Home
  • »
  • News
  • »
  • jobs
  • »
  • Education: ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮವಾಗಿ 'ಥಾನಾಟಾಲಜಿ' ಸೇರ್ಪಡೆ ಮಾಡಲು ಚಿಂತನೆ

Education: ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮವಾಗಿ 'ಥಾನಾಟಾಲಜಿ' ಸೇರ್ಪಡೆ ಮಾಡಲು ಚಿಂತನೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಥಾನಾಟಾಲಜಿ ಎಂಬುವುದು ಸಾವಿನ ವಿಜ್ಞಾನ ಮತ್ತು ಅದರ ಬಾಹ್ಯ ಕ್ಷೇತ್ರಗಳ ವೈಜ್ಞಾನಿಕ ಅಧ್ಯಯನವಾಗಿದೆ. ಈ ವಿಷಯವು ಸಾವಿನ ಕಾರ್ಯವಿಧಾನಗಳು ಮತ್ತು ವಿಧಿವಿಜ್ಞಾನದ ಅಂಶಗಳನ್ನು ತನಿಖೆ ಮಾಡುವ ಗುರಿಯನ್ನು ಹೊಂದಿದೆ.

  • Share this:

ಭಾರತವು ಶಿಕ್ಷಣ ವ್ಯವಸ್ಥೆಯಲ್ಲಿ ಆದಷ್ಟು ಹೊಸ ವಿಷಯಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ (Students) ಹೊಸ ಪರಿಕಲ್ಪನೆಯನ್ನು ನೀಡುವ ಪ್ರಯತ್ನ ಮಾಡುತ್ತಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ, ಭಾರತವು (India) ತಮ್ಮ ವೃತ್ತಿಪರ ಮತ್ತು ಮಾಹಿತಿ ಅಧ್ಯಯನಗಳ ವಿಶಾಲವಾದ ಪರಿಸರ ವ್ಯವಸ್ಥೆಯಲ್ಲಿ ಅನೇಕ ಹೊಸ ವಿಷಯಗಳನ್ನು (Subject) ಸಂಯೋಜಿಸಲು ಪ್ರಾರಂಭಿಸಿದೆ. ವಿಶೇಷವಾಗಿ ಹೊಸ ಶಿಕ್ಷಣ ನೀತಿ (Education Policy) ಜಾರಿಗೆ ಬಂದ ನಂತರ ಈ ಹಲವು ಬದಲಾವಣೆಗಳು ಮತ್ತು ಸೇರ್ಪಡೆಗಳು ಬಂದಿವೆ.


ಶಿಕ್ಷಣ ವ್ಯವಸ್ಥೆಯಲ್ಲಿ 'ಥಾನಾಟಾಲಜಿ' ಸೇರ್ಪಡೆಗೆ ಚಿಂತನೆ


ವಿದ್ಯಾರ್ಥಿಗಳಿಗೆ ಹೆಚ್ಚಿನ ವಿಷಯದಲ್ಲಿ ಅರಿವು ಮೂಡಿಸಬೇಕಾದ ಅನ್ವೇಷಿಸದ ಕೋರ್ಸ್‌ಗಳಿವೆ ಇದೆ ಎಂದು ಅರಿತುಕೊಂಡ ಶಿಕ್ಷಣ ಇಲಾಖೆ ಪ್ರಸ್ತುತ "ಥಾನಾಟಾಲಜಿ" ಯನ್ನು ವಿದ್ಯಾರ್ಥಿಗಳ ಪಠ್ಯ ವಿಷಯವಾಗಿ ಅಳವಡಿಸಿಕೊಳ್ಳಲು ಯೋಜಿಸುತ್ತಿದೆ. ಥಾನಟಾಲಜಿಯನ್ನು ಒಂದು ವಿಷಯವನ್ನಾಗಿ ಈಗಾಗ್ಲೇ ಅನೇಕ ಪಾಶ್ಚಿಮಾತ್ಯ ದೇಶಗಳು ಪ್ರಚಲಿತ ಕೋರ್ಸ್ ಆಗಿ ಸೇರಿಸಿಕೊಂಡಿವೆ. ಈಗ ಅದೇ ಹಾದಿಯಲ್ಲಿರುವ ಭಾರತ ಪಠ್ಯವಾಗಿ ಥಾನಾಟಾಲಜಿ ಸೇರ್ಪಡೆಗೆ ಯೋಜಿಸುತ್ತಿದೆ.


ಏನಿದು ಥಾನಾಟಾಲಜಿ?
ಥಾನಾಟಾಲಜಿ ಎಂಬುವುದು ಸಾವಿನ ವಿಜ್ಞಾನ ಮತ್ತು ಅದರ ಬಾಹ್ಯ ಕ್ಷೇತ್ರಗಳ ವೈಜ್ಞಾನಿಕ ಅಧ್ಯಯನವಾಗಿದೆ. ಈ ವಿಷಯವು ಸಾವಿನ ಕಾರ್ಯವಿಧಾನಗಳು ಮತ್ತು ವಿಧಿವಿಜ್ಞಾನದ ಅಂಶಗಳನ್ನು ತನಿಖೆ ಮಾಡುವ ಗುರಿಯನ್ನು ಹೊಂದಿದೆ. ಇದು ಸಾವು ಮತ್ತು ಮರಣೋತ್ತರ ಅವಧಿಯೊಂದಿಗೆ ದೈಹಿಕ ಬದಲಾವಣೆಗಳು, ಹಾಗೆಯೇ ಸಾವಿಗೆ ಸಂಬಂಧಿಸಿದ ವ್ಯಾಪಕವಾದ ಮಾನಸಿಕ ಮತ್ತು ಸಾಮಾಜಿಕ ಅಂಶಗಳ ಬಗ್ಗೆ ತಿಳಿಸುತ್ತದೆ.


1950 ರ ದಶಕದಲ್ಲಿ ಥಾನಾಟಾಲಜಿ ಪರಿಚಯ
ಇದನ್ನು ಮೊದಲು 1950 ರ ದಶಕದ ಕೊನೆಯಲ್ಲಿ ಸ್ವಿಸ್ ವೈದ್ಯಕೀಯ ವಿದ್ವಾಂಸ ಎಲಿಸಬೆತ್ ಕುಬ್ಲರ್ ರಾಸ್ ಪರಿಚಯಿಸಿದರು. ಆಸ್ಪತ್ರೆಗಳು ಮಾರಣಾಂತಿಕ ಅಸ್ವಸ್ಥ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡುತ್ತವೆ ಎಂಬುದರ ಕುರಿತು ಅವರು ವಿಮರ್ಶೆ ಮಾಡಿದ್ದಾರೆ.


ಥಾನಟಾಲಜಿಯನ್ನು ವಿಷಯವನ್ನಾಗಿ ಸೇರಿಸಲು ಇವೆ ಹಲವಾರು ಸವಾಲು
ಈವರೆಗೂ ಭಾರತದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಯು ಥಾನಟಾಲಜಿ ವಿಷಯವನ್ನು ಪಠ್ಯವಾಗಿ ಅಳವಡಿಸಿಕೊಂಡಿಲ್ಲ. ಈ ವಿಷಯವು ಹೆಚ್ಚು ಸಾವಿನ ವಿಷಯಕ್ಕೆ ಸಂಬಂಧವನ್ನು ಹೊಂದಿರುವುದರಿಂದ ಈ ಕೋರ್ಸ್‌ಗೆ ಹೆಚ್ಚಿನ ಒತ್ತು ನೀಡಲಾಗುತ್ತಿಲ್ಲ. ಹಾಗೆಯೇ ಈಗ ಸಹ ಈ ವಿಷಯವನ್ನು ಅಳವಡಿಸುವುದು ಹಲವು ಸವಾಲುಗಳನ್ನು ಹೊಂದಿದೆ ಎನ್ನಲಾಗಿದೆ.


ಇದನ್ನೂ ಓದಿ: Karate Class: ಇನ್ಮುಂದೆ ಶಾಲೆಗಳಲ್ಲಿ ಯೋಗದ ಜೊತೆಗೆ ಕರಾಟೆ ಕೋರ್ಸ್​​!


ಥಾನಟಾಲಜಿಯನ್ನು ಒಂದು ವಿಷಯವನ್ನಾಗಿ ಸೇರಿಸಲು, ಸರಿಯಾದ ಅಡಿಪಾಯವನ್ನು ಶಿಕ್ಷಕರನ್ನು ಒಟ್ಟುಗೂಡಿಸುವುದರಿಂದ ಹಿಡಿದು ಗುಣಮಟ್ಟದ ಪಠ್ಯಕ್ರಮದ ಅಭಿವೃದ್ಧಿಯವರೆಗೆ ಹಲವು ಕೆಲಸಗಳನ್ನು ಮಾಡಬೇಕಿದೆ. ವಿಷಯವು ಸಂವೇದನಾಶೀಲವಾಗಿರುವುದರಿಂದ ಹೆಚ್ಚಿನ ಮೇಲ್ವಿಚಾರಣೆ ಮಾಡುವುದು ನಿರ್ಣಾಯಕವಾಗಿದೆ. ಅದರಲ್ಲೂ ಈ ವಿಷಯಕ್ಕೆ ಪರಿಚಯಿಸಬೇಕಾದ ವಿದ್ಯಾರ್ಥಿಗಳ ವಯಸ್ಸಿನ ಗುಂಪನ್ನು ಗುರುತಿಸುವುದು ಮುಖ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದ ನಂತರ ಮತ್ತು ಜೀವನ ಚಕ್ರದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿದ ನಂತರ ಈ ವಿಷಯವನ್ನು ಪರಿಚಯಿಸುವುದು ಸೂಕ್ತ ಎನ್ನಲಾಗಿದೆ.


ಕೋವಿಡ್‌ ಸಮಯದಲ್ಲಿ ತರಬೇತಿ


ಈ ಹಿಂದೆಯು ಕೋವಿಡ್‌ ಸಮಯದಲ್ಲಿ ವಿಪತ್ತು ನಿರ್ವಹಣೆಯಲ್ಲಿ ಮಾನಸಿಕ ಸಾಮಾಜಿಕ ಆರೈಕೆಗಾಗಿ ತರಬೇತಿ ನೀಡಲು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ (NIDM) ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸೈನ್ಸ್ (NIMHANS) ಸಹಯೋಗದೊಂದಿಗೆ ಕೆಲ ಯೋಜನೆಗಳನ್ನು ಹಮ್ಮಿಕೊಂಡಿತ್ತು. ಅದೇ ರೀತಿ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) HIV/AIDS ನೊಂದಿಗೆ ವಾಸಿಸುವ ಜನರೊಂದಿಗೆ ಕೆಲಸ ಮಾಡುವ ಆರೈಕೆ ಮಾಡುವವರಿಗೆ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಪರಿಚಯಿಸಿತ್ತು. ಇವುಗಳ ನಡುವೆ ಥಾನಾಟಾಲಜಿ ಕೂಡ ಪ್ರವೇಶ ಪಡೆದುಕೊಳ್ಳ ಬಹುದು ಎಂದು ನೀರೀಕ್ಷಿಸಲಾಗಿದೆ.


ಹೈಪರ್-ಗ್ಲೋಬಲೈಸೇಶನ್ ಯುಗದಲ್ಲಿ ಇದು ಕಲಿಕೆಗೆ ಸೂಕ್ತ ವಿಷಯ
ಭಾರತದ ಶಿಕ್ಷಣ ಸಂಸ್ಥೆಗಳು ಈ ಹಿಂದೆ ಲೈಂಗಿಕ ಶಿಕ್ಷಣದಂತಹ ಸೂಕ್ಷ್ಮ ಮತ್ತು ಸಾಮಾಜಿಕವಾಗಿ ಕಡ್ಡಾಯ ವಿಷಯಗಳ ಜಾರಿಗೆ ತರುವ ಪ್ರಯತ್ನ ಮಾಡಿದೆ. ಇದು ಇನ್ನೂ ಸಹ ಸಂಪೂರ್ಣವಾಗಿ ಜಾರಿಗೆ ಬರದಿದ್ದರೂ ಪ್ರಗತಿಯಲ್ಲಿರುವ ವಿಷಯವಾಗಿದೆ. ವಿದ್ಯಾರ್ಥಿಗಳಿಗೆ ಹೊಸ ಕಲಿಕೆಯ ಅನುಭವ ಮತ್ತು ಹೈಪರ್-ಗ್ಲೋಬಲೈಸೇಶನ್ ಯುಗದಲ್ಲಿ, ಥಾನಟಾಲಜಿಯಂತಹ ವಿದೇಶಗಳಲ್ಲಿ ವ್ಯಾಪಕವಾಗಿ ಕಲಿಸಲಾಗುವ ವಿಷಯಗಳು ಮತ್ತು ವಿಭಾಗಗಳಿಗೆ ಭಾರತೀಯ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡುವುದು ಉತ್ತಮ ಎನ್ನಲಾಗುತ್ತಿದೆ.

First published: