• ಹೋಂ
 • »
 • ನ್ಯೂಸ್
 • »
 • Jobs
 • »
 • Education News: ಮತ್ತೆ ಮುನ್ನೆಲೆಗೆ ಬಂದ ಪಠ್ಯ ಪರಿಷ್ಕರಣೆ ವಿವಾದ!

Education News: ಮತ್ತೆ ಮುನ್ನೆಲೆಗೆ ಬಂದ ಪಠ್ಯ ಪರಿಷ್ಕರಣೆ ವಿವಾದ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ವರ್ಷ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಸಮಿತಿ ನಡೆಸಿದ್ದ ಪರಿಷ್ಕರಣೆ ವಿವಾದವಾಗಿತ್ತು. ಕೆಲ ಪಠ್ಯಗಳನ್ನ ಸಮಿತಿ ಕೈಬಿಡಲಾಗಿತ್ತು

 • Share this:

ಶುರುವಾಯ್ತು ಪಠ್ಯ ಪರಿಷ್ಕರಣೆ ಗುಮ್ಮ. ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದ್ದ ಪಠ್ಯ ಪುಸ್ತಕದ ಬದಲಾವಣೆ ಮಾಡಲಾಗುವುದು ಎಂಬ ಮಾತು (Talk) ಕೇಳಿ ಬರುತ್ತಿದೆ. ಈ ಕುರಿತು ಒಳಗೊಳಗೆ ಚರ್ಚೆಗಳು ಆರಂಭವಾಗುತ್ತಿದೆ. ಬಿಜೆಪಿ ಸರ್ಕಾರದ (BJP Government) ಅವಧಿಯಲ್ಲಿ ಮಾಡಿದ್ದ ಪಠ್ಯ ಪರಿಷ್ಕರಣೆ ಮಾಡಲಾಗುತ್ತಿದೆ. ಶೇ.95 ರಷ್ಟು ಪಠ್ಯ ಪರಿಷ್ಕರಣೆ ಮಾಡಿದ್ದ ಬಿಜೆಪಿ ಸರ್ಕಾರ ಆದರೆ ಈಗ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಪಠ್ಯ ಪುಸ್ತಕ (Note Book) ಪರಿಶ್ಕರಣೆಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ ನೋಡಿ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.


ಶುರುವಾಯ್ತು ಪಠ್ಯ ಪರಿಷ್ಕರಣೆ ಗುಮ್ಮ


ಸರ್ಕಾರ ಅಧಿಕಾರಕ್ಕೆ ಬಂದ್ರೆ ಪಠ್ಯ ಪರಿಷ್ಕರಣೆ ಮಾಡುವುದಾಗಿ ಘೋಷಣೆ ಮಾಡಿದ್ದ ಕಾಂಗ್ರೆಸ್. ಪ್ರಾಥಮಿಕ ‌ಮತ್ತು ಪ್ರೌಢಶಾಲಾ ಪಠ್ಯ ಪರಿಷ್ಕರಣೆ ಗೊಂದಲ ಸೃಷ್ಟಿ ಮಾಡಿದೆ. 2023-24 ನೇ ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಕೆಲವೇ ದಿನ ಮಾತ್ರ ಬಾಕಿ ಉಳಿದಿದೆ. ಈ ಹಂತದಲ್ಲಿ ಮತ್ತೆ ಗೊಂದಲ ಸೃಷ್ಟಿಯಾಗಿದೆ. ಶಾಲೆ ಪ್ರಾರಂಭಕ್ಕೂ‌ ಮುನ್ನವೇ ಶುರುವಾಯ್ತು ಪಠ್ಯ ಪರಿಷ್ಕರಣೆ ಗೊಂದಲ ಇದೀಗ ಆರಂಭವಾಗಿದೆ.


ಈಗಾಗಲೇ ಸರ್ಕಾರಕ್ಕೆ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಮನವಿ ಮಾಡಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲ ಪಠ್ಯವನ್ನ ಕೈಬಿಡಲಾಗಿತ್ತು ಆದರೆ ಮುಂದಿನ ನಿಲುವು ಏನಾಗಲಿದೆ ಎಂಬ ಅಂಶ ಮಾತ್ರ ತಿಳಿಯುತ್ತಿಲ್ಲ. ಆದರೆ ಇದೀಗ ಮತ್ತೊಮ್ಮೆ ಪರಿಷ್ಕರಣೆ ಮಾಡುವಂತೆ ಸರ್ಕಾರಕ್ಕೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿರುವುದು ತಿಳಿದು ಬಂದಿದೆ.


ಇದನ್ನೂ ಓದಿ: School Fees: ಮತ್ತೆ ಶುರುವಾಯ್ತು‌ ಖಾಸಗಿ ಶಾಲೆಗಳ ಲೂಟಿ ದಂದೆ; ಹೆಚ್ಚಾಯ್ತು ಪಠ್ಯ-ಪುಸ್ತಕದ ಬೆಲೆ


ಈಗಾಗಲೇ ಶಿಕ್ಷಣ ಇಲಾಖೆ ಪಠ್ಯ ಪರಿಷ್ಕರಣೆ ‌ಮಾಡಿ ಪಠ್ಯಪುಸ್ತಕ ಮುದ್ರಣಗೊಂಡಿದೆ
ಶಾಲೆಗಳಿಗೂ ಸರಬರಾಜು ಮಾಡಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಅದರಲ್ಲೂ ಈ ವರ್ಷ ಶಾಲೆ ಆರಂಭವಾದ ಮೊದಲ ದಿನವೇ ಪಠ್ಯ ಪುಸ್ತಕ ವಿತರಣೆ ಮಾಡುತ್ತೇವೆ ಎಂದು ಹೇಳಲಾಗಿತ್ತು. ಹಿಂದಿನ ವರ್ಷ ಪಠ್ಯ ಪುಸ್ತಕ ವಿತರಣೆಯಲ್ಲಿ ವಿಳಂಬವಾಗಿತ್ತು. ಸಮವಸ್ತ್ರ ನೀಡುವಾಗ ಕೂಡಾ ವಿಳಂಭವಾಗಿತ್ತು. ಈ ವರ್ಷ ಮತ್ತೆ ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ವಿದ್ಯಾರ್ಥಿಗಳಿಗೆ ಪಠ್ಯ ವಿತರಣೆ ಮಾಡುವಲ್ಲಿ ಮತ್ತೆ ವಿಳಂಬ ಆಗಬಹುದು ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿದೆ.


1 ಕೋಟಿಗೂ ಹೆಚ್ಚು ಮಕ್ಕಳಿಗೆ ಪುಸ್ತಕ


ರಾಜ್ಯದಲ್ಲಿ 72 ಸಾವಿರಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳಿವೆ
1 ಕೋಟಿಗೂ ಹೆಚ್ಚು ಮಕ್ಕಳು ಇದ್ದಾರೆ. ಈಗಾಗಲೇ ಶಿಕ್ಷಣ ಇಲಾಖೆ ಮುದ್ರಣಕ್ಕೆ 262 ಕೋಟಿ ರೂಪಾಯಿ ಖರ್ಚು ಮಾಡಿದೆ ಮತ್ತೆ ಪಠ್ಯಪರಿಷ್ಕರಣೆ ಮಾಡೋದು ಕಷ್ಟ ಸಾಧ್ಯ? ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಸಮಿತಿ ನಡೆಸಿದ್ದ ಪರಿಷ್ಕರಣೆ ವಿವಾದವಾಗಿತ್ತು. ಕೆಲ ಪಠ್ಯಗಳನ್ನ ಸಮಿತಿ ಕೈಬಿಡಲಾಗಿತ್ತು
ಮತ್ತೆ ಕೈ ಬಿಟ್ಟ ಪಠ್ಯಗಳಿಗೆ ಕಾಂಗ್ರೆಸ್ ಸರ್ಕಾರ ಜೀವ ತುಂಬುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

top videos


  ವರದಿ: ಶರಣು ಹಂಪಿ

  First published: