• Home
  • »
  • News
  • »
  • jobs
  • »
  • TET Result 2023: TET ಫಲಿತಾಂಶದ ಬಗ್ಗೆ​ ಮಹತ್ವದ ಮಾಹಿತಿ ಹಂಚಿಕೊಂಡ ಬಿ ಸಿ ನಾಗೇಶ್​

TET Result 2023: TET ಫಲಿತಾಂಶದ ಬಗ್ಗೆ​ ಮಹತ್ವದ ಮಾಹಿತಿ ಹಂಚಿಕೊಂಡ ಬಿ ಸಿ ನಾಗೇಶ್​

ಬಿ.ಸಿ ನಾಗೇಶ್

ಬಿ.ಸಿ ನಾಗೇಶ್

TET ಪರೀಕ್ಷಾ ಫಲಿತಾಂಶದ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡ ಶಿಕ್ಷಣ ಸಚಿವರು. ಫಲಿತಾಶಂದ ದಿನಾಂಕ ಮತ್ತು ಇನ್ನಿತರ ಮಾಹಿತಿಗಾಗಿ ಮುಂದೆ ಓದಿ.

  • Share this:

35 ಶೈಕ್ಷಣಿಕ ಜಿಲ್ಲೆಗಳಲ್ಲಿ ಈಗಾಗಲೇ ಶೈಕ್ಷಣಿಕ ಅರ್ಹತಾ ಪರೀಕ್ಷೆ ನಡೆದಿದ್ದು ಇದರ ಫಲಿತಾಂಶಕ್ಕಾಗಿ ಹಲವಾರು ಅಭ್ಯರ್ಥಿಗಳು ಕಾದು ಕುಳಿತಿದ್ದಾರೆ. ಈ ಕುರಿತು ಈಗ ಒಂದು ಮುಖ್ಯ ಸಂದೇಶ ಹೊರಬಿದ್ದಿದೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh) ಅವರು ಫಲಿತಾಂಶದ (Result) ಕುರಿತು ಮಹತ್ವದ ಮಾಹಿತಿಯನ್ನು (Information) ಟ್ವೀಟ್​​ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಈ ಹಿಂದೆ ನವೆಂಬರ್ 06ರಂದು 35 ಶೈಕ್ಷಣಿಕ ಜಿಲ್ಲೆಗಳ 589 ಪರೀಕ್ಷಾ ಕೇಂದ್ರಗಳಲ್ಲಿ ಪತ್ರಿಕೆ-1 ಮತ್ತು 781 ಪರೀಕ್ಷಾ ಕೇಂದ್ರಗಳಲ್ಲಿ ಪತ್ರಿಕೆ-2 ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗಳು (Teachers Eligibility Test) ನಡೆದಿತ್ತು. 


ಅದಾದ ನಂತರ ನವೆಂಬರ್ 11ರಂದು ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿ ಆಕ್ಷೇಪಣೆಗಳಿದ್ದಲ್ಲಿ ಅದಕ್ಕೆ ಅವಕಾಶ ನೀಡಲಾಗಿತ್ತು.ಶಿಕ್ಷಕರ ಅರ್ಹತಾ ಪರೀಕ್ಷೆ (TET) ಭಾರತದಲ್ಲಿ ಯಾವುದೇ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಅರ್ಹತೆ ಹೊಂದಲು ಅಗತ್ಯವಿರುವ ಕನಿಷ್ಠ ಅರ್ಹತೆಯಾಗಿದೆ. ಶಿಕ್ಷಣ ಹಕ್ಕು ಕಾಯಿದೆಯ ಪ್ರಕಾರ, ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ರೂಪಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸರ್ಕಾರವು ನಡೆಸುವ ಟಿಇಟಿ ಪರೀಕ್ಷೆಯಲ್ಲಿ ಅಭ್ಯರ್ಥಿಯು ಉತ್ತೀರ್ಣರಾಗಿರಬೇಕು. TET 2022 ಅನ್ನು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಈಗಾಗಲೇ ನಡೆಸಲಾಗಿದೆ.


ಪರೀಕ್ಷೆ ವಿವರ
ರಾಜ್ಯಾದ್ಯಂತ ಶಿಕ್ಷಕರ ಅರ್ಹತಾ ಪರೀಕ್ಷೆ ನವೆಂಬರ್ 6ರಂದು ನಡೆದಿದ್ದವು. ಒಟ್ಟು 3, 32,913 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಟಿಟಿ ಪರೀಕ್ಷೆ ಪತ್ರಿಕೆ 1ಕ್ಕೆ 1,54,929 ಅರ್ಜಿಗಳ ಪೈಕಿ 1,40,801 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ರೆ, ಪ್ರತಿಕ್ರೆ-2ಕ್ಕೆ ಬಂದ 2,06,455 ಅರ್ಜಿಗಳಲ್ಲಿ 1,92,112 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇನ್ನು ಅರ್ಜಿ ಹಾಕಿದ್ದ ಒಟ್ಟು 28,471 ಅಭ್ಯರ್ಥಿಗಳು ಕಾರಣಾಂತರಗಳಿಂದ ಪರೀಕ್ಷೆಗೆ ಗೈರಾಗಿದ್ದರು.


ಇದನ್ನೂ ಓದಿ: TET Exam 2022: ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು ಇಲ್ಲಿದೆ ಲೇಟೆಸ್ಟ್ ಅಪ್​ಡೇಟ್ಸ್​​


ಶಿಕ್ಷಣ ಸಚಿವ ಬಿಸಿ ನಾಗೇಶ್​ ಟ್ವೀಟ್​ ಮಾಡುವ ಮೂಲಕ ಪರೀಕ್ಷಾ ಫಲಿತಾಂಶದ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.



ಟ್ವೀಟ್​ನಲ್ಲಿ ಹೇಳಿರುವುದೇನು? 


ಈ ರೀತಿಯಾಗಿ ಮಹತ್ವದ ಟ್ವೀಟ್​ ಮಾಡುವ ಮೂಲಕ TET ಬರೆದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮುಂದಿನ ವಾರಾಂತ್ಯದೊಳಗೆ ಪರೀಕ್ಷಾ ಫಲಿತಾಂಶ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ. ನಿಗದಿತ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಆದರೆ ಮುಂದಿನ ವಾರ ಫಲಿತಾಂಶ ಬರುವುದು ನಿಗದಿಯಾಗಿದೆ ಎಂದು ಈ ಮೂಲಕ ಸ್ಪಷ್ಟವಾಗಿದೆ.


ಈಗಾಗಲೇ ಕೀ ಉತ್ತರಗಳು ಪ್ರಕಟಗೊಂಡಿದ್ದವು
ಈಗಾಗಲೇ ಕೀ ಉತ್ತರಗಳು ಬಂದಿರುವುದರಿಂದ ತಮ್ಮ ಅಂಕದ  ಸ್ವಮೌಲ್ಯ ಮಾಪನ ಮಾಡಿಕೊಂಡಿರುತ್ತಾರೆ.  ಆದರೂ ಅಧಿಕೃತ ಫಲಿತಾಂಶ ಬಂದಾಗ ನೆಮ್ಮದಿಯಾಗುತ್ತದೆ.
ಟಿಇಟಿ ಪರೀಕ್ಷೆಗಳನ್ನು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನಡೆಯುತ್ತವೆ. ಇದಾದ ನಂತರ ಬಂದ ಫಲಿತಾಂಶ ಆಧರಿಸಿ ಮುಂದಿನ ವೃತ್ತಿ ಜೀವನ ನಿರ್ಧಾರವಾಘುತ್ತದೆ. ಆದ್ದರಿಂದ ಎಲ್ಲಾ ಅಭ್ಯರ್ಥಿಗಳೂ ಸಹ ಉತ್ತಮ ಫಲಿತಾಂಶಕ್ಕಾಗಿ ಕಾದು ಕುಳಿತಿರುತ್ತಾರೆ.


ಇದನ್ನೂ ಓದಿ: TET Key Answers: ಬಿಎಡ್​ ವಿದ್ಯಾರ್ಥಿಗಳ ಗಮನಕ್ಕೆ, ಶಿಕ್ಷಕರ ಅರ್ಹತಾ ಪರೀಕ್ಷೆ ಅಂತಿಮ ಕೀ ಉತ್ತರ ಪ್ರಕಟ


ಉತ್ತರಗಳು ಕೀ ಉತ್ತರಗಳ ಪಟ್ಟಿಯಲ್ಲಿ ತಪ್ಪಾಗಿದ್ದರೆ ಅದನ್ನು ತಿಳಿಸುವಂತೆ ಕೂಡ ಸೂಚಿಸಲಾಗಿತ್ತು. ಅದರಂತೆ ಅಭ್ಯರ್ಥಿಗಳು ಈಗಾಗಲೇ ಕೀ ಉತ್ತರದ ಮೂಲಕ ತಾಔಉ ಪರೀಕ್ಷೆಯಲ್ಲಿ ಬರೆದ ಉತ್ತರಗಳನ್ನು ಕೀ ಉತ್ತರಗಳೊಂದಿಗೆ ಹೊಂದಿಸಿ ನೋಡಿಕೊಂಡಿರುತ್ತಾರೆ. ಅದರೊಟ್ಟಿಗೆ ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

First published: