• Home
  • »
  • News
  • »
  • jobs
  • »
  • Telangana: ಶಾಲೆಗೆ ಬರದ 10ನೇ ಕ್ಲಾಸ್ ವಿದ್ಯಾರ್ಥಿಯ ಮನೆಗೇ ಹೋದ ಶಿಕ್ಷಕ!

Telangana: ಶಾಲೆಗೆ ಬರದ 10ನೇ ಕ್ಲಾಸ್ ವಿದ್ಯಾರ್ಥಿಯ ಮನೆಗೇ ಹೋದ ಶಿಕ್ಷಕ!

ಮನೆ ಮುಂದೆ ಧರಣಿ ಕುಳಿತ ಶಿಕ್ಷಕ

ಮನೆ ಮುಂದೆ ಧರಣಿ ಕುಳಿತ ಶಿಕ್ಷಕ

ಕಳೆದ 10 ದಿನಗಳಿಂದ ತರಗತಿಗೆ ಗೈರುಹಾಜರಾಗಿದ್ದ 10ನೇ ತರಗತಿ ವಿದ್ಯಾರ್ಥಿಯ ಮನೆಗೆ ತೆರಳಿದ ಪ್ರೌಢಶಾಲಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯ ಪೋಷಕರಿಗೆ ಶಿಕ್ಷಣದ ಮತ್ತು ಶಾಲೆಯ ಅಗತ್ಯದ ಕುರಿತು ಮನವರಿಕೆ ಮಾಡಿಕೊಟ್ಟು ಆ ವಿದ್ಯಾರ್ಥಿಯನ್ನು ಮತ್ತೆ ಮರಳಿ ಶಾಲೆಗೆ ಬರುವಂತೆ ಇವರು ಮಾಡಿದ್ದಾರೆ

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Telangana, India
  • Share this:

ಶಿಕ್ಷಕರಾದವರಿಗೆ ತಮ್ಮ ವಿದ್ಯಾರ್ಥಿಗಳ (Students) ಮೇಲೆ ತುಂಬಾ ಪ್ರೀತಿ ಇರುತ್ತದೆ. ಮತ್ತು ಅವರು ಏನಾದರು ಒಂದು ಸಾಧನೆ ಮಾಡಿದರೆ ಶಿಕ್ಷಕರು ಪಾಲಕರಿಗಿಂತ ಹೆಚ್ಚು ಸಂತೋಷ ಪಡುತ್ತಾರೆ. ಇಂತಹ ಎಷ್ಟೋ ಆದರ್ಶ ಶಿಕ್ಷಕರ (Teachers) ಬಗ್ಗೆ ನಾವು ಆಗಾಗಾ ಕೇಳಿರ್ತೀವಿ ಈಗ ಅಂತದ್ದೇ ಮತ್ತೊಬ್ಬ ಮಾದರಿ ಶಿಕ್ಷಕರು ತೆಲಂಗಾಣ ಶಾಲೆಯಲ್ಲಿ ಇವರು ಮಕ್ಕಳ ಶಿಕ್ಷಣದ (Education) ಸಲುವಾಗಿ ಏನು ಮಾಡಿದ್ದಾರೆ ಗೊತ್ತಾ? ಇಲ್ಲಿದೆ ಮಾಹಿತಿ. 10 ದಿನಗಳಿಂದ ಶಾಲೆಗೆ ಬರದೆ ಮನೆಯಲ್ಲೇ ಇದ್ದ ವಿದ್ಯಾರ್ಥಿಯನ್ನು ಮರಳಿ ಶಾಲೆಗೆ (School) ಕರೆತರುವ ಪ್ರಯತ್ನ ಮಾಡಿದ್ದಾರೆ.


ಗೈರು ಹಾಜರಾಗಿದ್ದ ವಿದ್ಯಾರ್ಥಿಯನ್ನು ಪೋಷಕರ ಮನವೊಲಿಸಿ ತೆಲಂಗಾಣ ಶಾಲೆಯ ಈ ಶಿಕ್ಷಕರು ಮರಳಿ ಅವರನ್ನು ಶಾಲೆಗೆ ಕರೆ ತಂದಿದ್ದಾರೆ.


ಗೈರು ಹಾಜಾರಾಗಿದ್ದ 10 ನೇ ತರಗತಿ ವಿದ್ಯಾರ್ಥಿ


ಕಳೆದ 10 ದಿನಗಳಿಂದ ತರಗತಿಗೆ ಗೈರುಹಾಜರಾಗಿದ್ದ 10ನೇ ತರಗತಿ ವಿದ್ಯಾರ್ಥಿಯ ಮನೆಗೆ ತೆರಳಿದ ಪ್ರೌಢಶಾಲಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯ ಪೋಷಕರಿಗೆ ಶಿಕ್ಷಣದ ಮತ್ತು ಶಾಲೆಯ ಅಗತ್ಯದ ಕುರಿತು ಮನವರಿಕೆ ಮಾಡಿಕೊಟ್ಟು ಆ ವಿದ್ಯಾರ್ಥಿಯನ್ನು ಮತ್ತೆ ಮರಳಿ ಶಾಲೆಗೆ ಬರುವಂತೆ ಇವರು ಮಾಡಿದ್ದಾರೆ. ಅಷ್ಟೇ ಅಲ್ಲ ಇವರು ತಮ್ಮ ಸ್ವಂತ ವಾಹನವಾದ ಒಂದು ಚಿಕ್ಕ ಮೊಪೆಡ್​ ಮೂಲಕ ವಿದ್ಯಾರ್ಥಿಯ ಮನೆಗೆ ತೆರಳಿ ನಂತರ ಅದೇ ಮೊಪೆಡ್​ನಲ್ಲಿ ವಿದ್ಯಾರ್ಥಿಯನ್ನು ಶಾಲೆಗೆ ಕರೆತಂದಿರುವುದು ಅಚ್ಚರಿಯ ಸಂಗತಿ.


ಪಾಲಕರ ಮನವೊಲಿಸುವ ಪ್ರಯತ್ನ


ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಬೆಜ್ಜಂಕಿ ಮಂಡಲ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಬೆಜ್ಜಂಕಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 64 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆರು ವಿದ್ಯಾರ್ಥಿಗಳು 10 ನೇ ತರಗತಿಯಲ್ಲಿದ್ದಾರೆ. ಶಾಲಾ ಅಧಿಕಾರಿಗಳು ತರಗತಿಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು 10 ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದು ವಿದ್ಯಾರ್ಥಿಗಳಿಗೆ ಅವರ ಭವಿಷ್ಯಕ್ಕೆ ಪೂರಕವಾಗಲಿದೆ.


ಇದನ್ನೂ ಓದಿ: Education Inflation: ಮಕ್ಕಳ ಕಲಿಕೆಗೆ ತೊಂದರೆ ಮಾಡುತ್ತಿದೆ ಶೈಕ್ಷಣಿಕ ಹಣದುಬ್ಬರ


ಇದೇ ವೇಳೆ 10ನೇ ತರಗತಿಯ ವಿದ್ಯಾರ್ಥಿ ನವೀನ್ ಕಳೆದ 10 ದಿನಗಳಿಂದ ತರಗತಿಗೆ ಹಾಜರಾಗುತ್ತಿರಲಿಲ್ಲ. ಇದೇ ವೇಳೆ 10ನೇ ತರಗತಿಯ ವಿದ್ಯಾರ್ಥಿ ನವೀನ್ ಕಳೆದ 10 ದಿನಗಳಿಂದ ತರಗತಿಗೆ ಹಾಜರಾಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಕ ಮೊದಲು ಕರೆ ಮಾಡಿ ಮಗನನ್ನು ಶಾಲೆಗೆ ಕಳಿಸುವಂತೆ ಪಾಲಕರ ಮನವೊಲಿಸುವ ಪ್ರಯತ್ನ ಮಾಡಿದರು.


ಇಂಗ್ಲಿಷ್ ಶಿಕ್ಷಕ ಪ್ರವೀಣ್ ಕುಮಾರ್ ಪಾಲಕರಿಗೆ ಕರೆ ಮಾಡಿ ವಿದ್ಯಾರ್ಥಿಯ ಮನೆಗೆ ತೆರಳಿ ಪೋಷಕರ ಮನವೊಲಿಸಿ ಶಾಲೆಗೆ ಕರೆತರುವಂತೆ ತಿಳಿಸಿದರು. ಆದರೆ ಅವರಿಗೆ ಈ ರೀತಿ ಮನವಲಿಕೆ ಮಾಡಿದರೂ ಸಹ ವಿದ್ಯಾರ್ಥಿ ಶಾಲೆಗೆ ಬಂದಿರಲಿಲ್ಲ ಆ ಕಾರಣ ಇವರೇ ಸ್ವತಃ ವಿದ್ಯಾರ್ಥಿಯ ಮನೆಗೆ ತೆರಳಿ ಆ ಹತ್ತನೇ ತರಗತಿ ವಿದ್ಯಾರ್ಥಿ ನವೀನ್​ ಅವರನ್ನು ಮರಳಿ ಶಾಲೆಗೆ ಕರೆತಂದಿದ್ದಾರೆ.


ಮನೆ ಮುಂದೆ ಧರಣಿ ಕುಳಿತ ಶಿಕ್ಷಕ


ಶಿಕ್ಷಕ ಪ್ರವೀಣ್​  ಆ ವಿದ್ಯಾರ್ಥಿ ಮನೆ ಮುಂದೆ ಧರಣಿ ಕುಳಿತಿದ್ದರು. ಇದನ್ನು ಕಂಡು ಮನೆಯ ಅಕ್ಕ ಪಕ್ಕ ಇದ್ದ ಎಲ್ಲರಿಗೂ ಈ ಸಂಗತಿ ಆಶ್ಚರ್ಯ ಉಂಟು ಮಾಡಿತು. ಇದನ್ನು ನೋಡಿದ ಪೋಷಕರು ಮನೆಯಿಂದ ಹೊರಬಂದು ಅವರ ಮನೆ ಮುಂದೆ ಧರಣಿ ಕುಳಿತಿರುವುದಕ್ಕೆ ಕಾರಣ ಕೇಳಿದರು. ಕಳೆದ 10 ದಿನಗಳಿಂದ ತಮ್ಮ ಮಗ ತರಗತಿಗೆ ಹಾಜರಾಗುತ್ತಿಲ್ಲ ಎಂದು ತಿಳಿಸಿದರು. ಪ್ರವೀಣ್ ಕುಮಾರ್ ಮಾತನಾಡಿ, 10ನೇ ತರಗತಿಯು ಯಾವುದೇ ವಿದ್ಯಾರ್ಥಿಯ ಮುಂದಿನ ಶಿಕ್ಷಣಕ್ಕೆ ಮೆಟ್ಟಿಲಾಗಿದ್ದು, ಉದ್ಯೋಗ ಪಡೆಯಲು 10ನೇ ತರಗತಿ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು. ಎಂದು ತಿಳಿ ಹೇಳಿದರು. ವಿದ್ಯಾರ್ಥಿಯ ಪೋಷಕರಿಗೆ ಮನವರಿಕೆಯಾದ ನಂತರ ಆ ವಿದ್ಯಾರ್ಥಿಯನ್ನು ಕರೆದುಕೊಂಡು ಶಾಲೆಗೆ ತೆರಳಿದರು.

First published: