• Home
  • »
  • News
  • »
  • jobs
  • »
  • Scholarships: 30 ಸಾವಿರ ಸ್ಕಾಲರ್​ ಶಿಪ್​! ಡಿಸೆಂಬರ್ ಒಳಗೆ ಅಪ್ಲೈ ಮಾಡಿ

Scholarships: 30 ಸಾವಿರ ಸ್ಕಾಲರ್​ ಶಿಪ್​! ಡಿಸೆಂಬರ್ ಒಳಗೆ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಈ ಸ್ಕಾಲರ್​ ಶಿಪ್​ಗೆ ಅಪ್ಲೈ ಮಾಡಿದರೆ​ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಹವಾಗುತ್ತದೆ. ವರ್ಷಕ್ಕೆ 30 ಸಾವಿರ ಧನ ಸಹಾಯ ದೊರೆಯುತ್ತದೆ.

  • Share this:

ಟೆಕ್ನಿಪ್ ಎನರ್ಜಿಸ್ ಇಂಡಿಯಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2022-23 STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಕ್ಷೇತ್ರದಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಬೆಂಬಲಿಸಲು ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ವಿದ್ಯಾರ್ಥಿವೇತನ ದೆಹಲಿ NCR, ಬಿಹಾರ, ಅಸ್ಸಾಂ, ರಾಜಸ್ಥಾನ, ಚೆನ್ನೈ ಮತ್ತು ಮುಂಬೈನ ಮಹಿಳಾ ವಿದ್ಯಾರ್ಥಿಗಳು BE/B.Tech ಮೊದಲ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದರೆ ಅವರಿಗೆ ಸಿಗುತ್ತದೆ. (ಕೆಮಿಕಲ್, ಎಲೆಕ್ಟ್ರಿಕಲ್, ಸಿವಿಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್) ಕೋರ್ಸ್‌ಗಳಿಗೆ ಅವರ ಶೈಕ್ಷಣಿಕ (Education) ವೆಚ್ಚಗಳನ್ನು ತುಂಬಲು ವಾರ್ಷಿಕ 30,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ವಿದ್ಯಾರ್ಥಿವೇತನ ಕಾರ್ಯಕ್ರಮದ ಹೆಸರುಟೆಕ್ನಿಪ್ ಎನರ್ಜಿಸ್ ಇಂಡಿಯಾ ಸ್ಕಾಲರ್‌ಶಿಪ್ 2022-23
ನಿರ್ವಾಹಕ ಪ್ರಾಧಿಕಾರದ ಹೆಸರುಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ ಟೆಕ್ನಿಪ್ ಎನರ್ಜಿಸ್ ಇಂಡಿಯಾ
ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಪ್ರಕ್ರಿಯೆಯ ವಿಧಾನಆನ್ಲೈನ್
ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ31 ಡಿಸೆಂಬರ್ 2022
ವಿದ್ಯಾರ್ಥಿವೇತನದ ಮೊತ್ತ30,000 INR

ವಿದ್ಯಾರ್ಥಿ ವೇತನ ಪಡೆಯಲು ಇರಬೇಕಾದ ಅರ್ಹತೆ
1. ದೆಹಲಿ NCR, ಬಿಹಾರ, ಅಸ್ಸಾಂ, ರಾಜಸ್ಥಾನ, ಚೆನ್ನೈ ಮತ್ತು ಮುಂಬೈನಿಂದ ಮಹಿಳಾ ವಿದ್ಯಾರ್ಥಿಗಳಾಗಿರಬೇಕು.
2. ಅರ್ಜಿದಾರರು ಪ್ರಸ್ತುತ BE/B.Tech ನ ಮೊದಲ ವರ್ಷಕ್ಕೆ ದಾಖಲಾಗಿರಬೇಕು.
3. ಕೆಮಿಕಲ್, ಎಲೆಕ್ಟ್ರಿಕಲ್, ಸಿವಿಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್ ತೆಗೆದುಕೊಂಡಿರಬೇಕು.
4. ಅರ್ಜಿದಾರರು 12 ನೇ ತರಗತಿಯಲ್ಲಿ 70% ಅಂಕಗಳನ್ನು ಗಳಿಸಿರಬೇಕು.
5. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ INR 4,00,000 ಗಿಂತ ಹೆಚ್ಚಿರಬಾರದು.


ಪ್ರಯೋಜನಗಳು:
ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಹಕಾರಿ. ವರ್ಷಕ್ಕೆ 30 ಸಾವಿರ ಧನ ಸಹಾಯ ದೊರೆಯುತ್ತದೆ.


ಸೂಚನೆ
ಬೋಧನಾ ಶುಲ್ಕಗಳು, ಹಾಸ್ಟೆಲ್ ಶುಲ್ಕಗಳು, ಆಹಾರ, ಪ್ರಯಾಣ, ಇಂಟರ್ನೆಟ್, ಸಾಧನ, ಪುಸ್ತಕಗಳು, ಲೇಖನ ಸಾಮಗ್ರಿಗಳು ಇತ್ಯಾದಿಗಳನ್ನು ಒಳಗೊಂಡಿರುವ ಶೈಕ್ಷಣಿಕ ವೆಚ್ಚದ ಉದ್ದೇಶಗಳಿಗಾಗಿ ಮಾತ್ರ ವಿದ್ಯಾರ್ಥಿವೇತನ ನಿಧಿಯನ್ನು ಬಳಸಿಕೊಳ್ಳಬಹುದು.


ದಾಖಲೆಗಳು
ಅರ್ಜಿದಾರರು ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ಕೆಳಗಿನ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ ಅದೇನೆಂದರೆ.


ಇದನ್ನೂ ಓದಿ:  ಖಾಸಗಿ ಶಾಲೆಗಳಿಗೆ ಬೇಕಂತೆ ಸಪರೇಟ್​ ಟೆಕ್ಸ್ಟ್​ಬುಕ್​! ಕಾರಣವಾದ್ರೂ ಏನು?


1. 12 ನೇ ತರಗತಿ ಅಂಕ ಪಟ್ಟಿ
2. ಸರ್ಕಾರ ನೀಡಿದ ಗುರುತಿನ ಪುರಾವೆ (ಆಧಾರ್ ಕಾರ್ಡ್/ವೋಟರ್ ಐಡಿ ಕಾರ್ಡ್/ಚಾಲನಾ ಪರವಾನಗಿ/ಪ್ಯಾನ್ ಕಾರ್ಡ್)
3. ಪ್ರಸಕ್ತ ವರ್ಷದ ಪ್ರವೇಶ ಪುರಾವೆ (ಶುಲ್ಕ ರಸೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/ಬನಫೈಡ್ ಪ್ರಮಾಣಪತ್ರ)
4. ಕುಟುಂಬದ ಆದಾಯ ಪುರಾವೆ (ಐಟಿಆರ್ ಫಾರ್ಮ್-16/ಸಕ್ಷಮ ಸರ್ಕಾರಿ ಪ್ರಾಧಿಕಾರದಿಂದ ಆದಾಯ ಪ್ರಮಾಣಪತ್ರ/ಸಂಬಳ ಚೀಟಿಗಳು)
5. ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು
ಅರ್ಜಿದಾರರ ಭಾವಚಿತ್ರ


ಇದನ್ನೂ ಓದಿ: ಬಿ.ಟೆಕ್ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ಇಲ್ಲಿದೆ


ನೀವು ಹೇಗೆ ಅರ್ಜಿ ಸಲ್ಲಿಸಬಹುದು?
1. ಅಧಿಕೃತ ವೆಬ್​ಸೈಟ್​ನಲ್ಲಿ ನೀವು ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
2. ನಿಮ್ಮ ಇಮೇಲ್/ಮೊಬೈಲ್/ಜಿಮೇಲ್ ಖಾತೆಯೊಂದಿಗೆ ನೋಂದಾಯಿಸಿ.
ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ


4. ಈಗ ನಿಮ್ಮನ್ನು 'ಟೆಕ್ನಿಪ್ ಎನರ್ಜಿಸ್ ಇಂಡಿಯಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2022-23' ಅರ್ಜಿ ನಮೂನೆಯ ಪುಟಕ್ಕೆ ಹೋಗುತ್ತದೆ.
5. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು 'ಅಪ್ಲಿಕೇಶನ್ ಪ್ರಾರಂಭಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ.
6. ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
ಸಂಬಂಧಿತ ದಾಖಲೆಗಳನ್ನು ಅಪ್ಲೋಡ್ ಮಾಡಿ.
7. ನಿಯಮಗಳು ಮತ್ತು ಷರತ್ತುಗಳನ್ನು' ಒಪ್ಪಿಕೊಳ್ಳಿ ಮತ್ತು 'ಪೂರ್ವವೀಕ್ಷಣೆ' ಮೇಲೆ ಕ್ಲಿಕ್ ಮಾಡಿ.
6.ಅರ್ಜಿದಾರರು ಭರ್ತಿ ಮಾಡಿದ ಎಲ್ಲಾ ವಿವರಗಳು ಪೂರ್ವವೀಕ್ಷಣೆ ಪರದೆಯಲ್ಲಿ ಸರಿಯಾಗಿ ತೋರಿಸುತ್ತಿದ್ದರೆ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 'ಸೇವ್​' ಬಟನ್ ಕ್ಲಿಕ್ ಮಾಡಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು