ಶಿಕ್ಷಕರಿಗೆ ಉಪಯುಕ್ತವಾಗುವ ಕೆಲವು ಕಲಿಕಾ ಮಾಹಿತಿಯನ್ನು (Information) ನಾವು ಇಲ್ಲಿ ನೀಡಿದ್ದೇವೆ ಇದು ನಿಮಗೆ ಸಹಾಯಮಾಡಬಹುದು. ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಠ (Lesson) ಮಾಡುವಾಗ ಈ ಟಿಪ್ಸ್ಗಳು ನಿಮಗೆ ತುಂಬಾ ಪ್ರಯೋಜನವಾಗಲಿದೆ. ಎಲ್ಲಾ ಮಕ್ಕಳಿಗಿಂತ (Students) ಈ ಮಕ್ಕಳಿಗೆ ಪಾಠ ಮಾಡುವುದು ಸೂಕ್ಷ್ಮ ಕೆಲಸವಾಗಿರುತ್ತದೆ. ನೀವು ಪರಿಣಾಮಕಾರಿಯಾಗಿ ಪಾಠ ಮಾಡಲು ಈ ವಿಧಾಗಳನ್ನು ಅನುಸರಿಸಿ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರವು ಡಿಜಿಟಲ್ (Digital) ಕ್ಷೇತ್ರವನ್ನು ಅವಲಂಬಿಸಿದೆ.
ಯಾವುದೇ ವಿಧಾನವನ್ನು ಕಾರ್ಯಗತಗೊಳಿಸುವುದು ತುಂಬಾ ಕಷ್ಟಕರವೆಂದು ತೋರುತ್ತದೆ. ಆದರೆ ನೀವು ಈಗ ಇಂದಿನ ವಿದ್ಯಾಮಾನಕ್ಕೆ ಅಪ್ಡೇಟ್ ಆಗಿರುವುದು ಮುಖ್ಯವಾಗುತ್ತದೆ. ಹಳೆಯ ಸಾಂಪ್ರದಾಯಿಕ ವಿಧಾನವನ್ನು ಅನುಸರಿಸುವುದೂ ಸಹ ಮುಖ್ಯವಾಗಿರುತ್ತದೆ. ಶಿಕ್ಷಕರು ತರಗತಿಯ ಉಸ್ತುವಾರಿ ಮತ್ತು ಎಲ್ಲಾ ಚಟುವಟಿಕೆಗಳನ್ನು ನಿರ್ದೇಶಿಸಬೇಕಾಗುತ್ತದೆ. ಶಿಕ್ಷಕರ ಮುಖ್ಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಹಲವಾರು ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ಸಂದರ್ಭದಲ್ಲಿ ವೈಯಕ್ತಿಕ ಗಮನಕೊಡಲು ಸಾಧ್ಯವಾಗದೇ ಇರಬಹುದು ಅಂತಹ ಸಂದರ್ಭದಲ್ಲಿ ನೀವು ತರಗತಿ ಮುಗಿದ ನಂತರವೂ ವಿದ್ಯಾರ್ಥಿಗಳನ್ನು ಗಮನಿಸಿ.
ಮಕ್ಕಳನ್ನು ಎಂದಿಗೂ ಅವಮಾನ ಮಾಡಬೇಡಿ, ಅದು ಅವರ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಒಂದೇ ತರಗತಿಯಲ್ಲಿ ಹಲವಾರು ರೀತಿಯ ಬುದ್ಧಿಮತ್ತೆ ಹೊಂದಿರುವ ಮಕ್ಕಳಿರುತ್ತಾರೆ. ಆದರೆ ಎಲ್ಲರಿಗೂ ಸಮಾನವಾಗಿ ಕಲಿಯುವ ಸಾಮರ್ಥ್ಯವಿರುವುದಿಲ್ಲ. ಆದ್ದರಿಂದ ಎಲ್ಲರನ್ನೂ ಸಮಾನವಾಗಿ ನೋಡಿ. ನಿಧಾನವಾಗಿ ತಿಳುವಳಿಕೆ ನೀಡಿ
ಇದನ್ನೂ ಓದಿ: Blind Students: ವಿಶೇಷ ಚೇತನ ಮಕ್ಕಳಿಗೆ ಈ ರೀತಿ ಪಾಠಮಾಡಿ, ಅವರಿಗೂ ಅನುಕೂಲವಾಗುತ್ತೆ
ಹೊಡೆಯುವುದು ಅಥವಾ ಜೋರಾಗಿ ಗದರುವುದು ಮಾಡಬೇಡಿ. ಹಾಗಂತ ಅವರ ತಪ್ಪುಗಳನ್ನು ಸರಿಪಡಿಸದೇ ಇರಬೇಡಿ ಅವರ ಮನಸ್ಸಿಗೆ ಧನಾತ್ಮಕವಾಗಿ ಸರಿಯಾದ ರೀತಿಯಲ್ಲಿ ಪರಿವರ್ಥನೆಯಾಗಲು ಏನು ಬೇಕೋ ಅದನ್ನು ನೀಡಿ. 95% ಅಂಕಗಳಿಸುವುದು ಕೆಟ್ಟದಲ್ಲ ಹಾಗೆ ಗಳಿಸದೆ ಇರುವುದು ಕೂಡ ಕೆಟ್ಟದಲ್ಲ. ಕೆಲವೊಮ್ಮೆ ಆ ಹೇರಿಕೆಯನ್ನು ಹೇರಿದಾಗ ಅವರು ಒತ್ತಡಕ್ಕೆ ಒಳಗಾಗುತ್ತಾರೆ. ಆ ಕಾರಣದಿಂದ ಜೀವನ ಶಿಕ್ಷಣ ನೀಡಿ. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ.
ನೀನು ಗೆಲ್ಲುತ್ತಿಯೋ ಅಥವಾ ಸೋಲುತ್ತಿಯೋ ಅದು ಬೇಡವಾದ ವಿಷಯ. ನಿನ್ನ ಪರಿಶ್ರಮ ನಿನ್ನ ಕೈಯಲ್ಲಿ ಏನು ಸಾಧಿಸಲು ಸಾಧ್ಯವೋ ಅದನ್ನು ಸಾಧಿಸು ಎಂದು ಹೇಳಬೇಕು. ಪ್ರತಿ ಮಕ್ಕಳಿಗೂ ಅವರದೇ ಆದ ಕೆಲವು ಸಾಮರ್ಥ್ಯ ಮತ್ತು ವಿಶೇಷ ಆಸಕ್ತಿಯ ಕ್ಷೇತ್ರವಿರುತ್ತದೆ ಅದನ್ನು ಶಿಕ್ಷಕರು ಗುರುತಿಸಬೇಕು. ಆ ಕ್ಷೇತ್ರದಲ್ಲೇ ಮುಂದುವರೆಯಲು ಅನುವು ಮಾಡಿ ಕೊಡಬೇಕು. ಹಾಗಾದಾಗ ಮಾತ್ರ ವಿದ್ಯಾರ್ಥಿಗಳಿಗೂ ಸಹಾಯವಾಗುತ್ತದೆ.
ಸಮಯಪ್ರಜ್ಞೆ
ಪ್ರತಿಬಾರಿ ಸರಿಯಾದ ಸಮಯಕ್ಕೆ ಶಾಲೆಗೆ ಬರಬೇಕು. ಶಿಸ್ತಿನ ಸಮಯಪಾಲನೆ ಮಾಡಬೇಕು ಹಾಗೆ ಮಾಡಿದರೆ ಮಾತ್ರ ಮಕ್ಕಳು ನಿಮಗೆ ಬೆಲೆ ಕೊಡುತ್ತಾರೆ. ನಿಗದಿತ ಸಮಯದಂತೆ ಪಾಠ ಶುರು ಮಾಡಿ ಕೊನೆ ಗೊಳಿಸುತ್ತಾರೆ. ಎಂಬ ಭರವಸೆ ಮಕ್ಕಳಿಗೆ ಬಂದರೆ ಅವರೂ ಸಹ ಸರಿಯಾದ ರೀತಿಯಲ್ಲಿ ಸಮಯ ಪಾಲನೆ ಮಾಡುತ್ತಾರೆ. ನಿಮ್ಮಲ್ಲಿ ಕೆಲವು ನೆಗಟಿವ್ ಅಭ್ಯಾಸಗಳಿದ್ದರೂ ಸಹ ಅದನ್ನು ಬಿಟ್ಟು ಬಿಡಬೇಕು. ಮಾದರಿಯಾಗಬೇಕು.
ಶಿಕ್ಷರಲ್ಲಿ ಉತ್ಸಾಹ ಮುಖ್ಯ
ನೀವು ಕಲಿಸುವಾಗ ಎಷ್ಟು ಆಸಕ್ತಿ ಹಾಗೂ ಉತ್ಸಾಹ ಹೊಂದಿರುತ್ತೀರೋ ನಿಮ್ಮ ತರಗತಿಯ ಮಕ್ಕಳು ಸಹ ಅಷ್ಟೇ ಖುಷಿಯಲ್ಲಿರುತ್ತಾರೆ. ಹಾಗಾಗಿ ಒಬ್ಬ ವಿದ್ಯಾರ್ಥಿಯ ಜೀವನ ರೂಪಿಸುವ ಕಾರ್ಯ ಒಬ್ಬ ಶಿಕ್ಷಕನದ್ದೇ ಆಗಿರುತ್ತದೆ. ತರಗತಿಗೆ ತೆರಳುವ ಮುನ್ನ ಕೆಲವು ಮುನ್ತಯಾರಿಯನ್ನು ನೀವೂ ಸಹ ಮಾಡಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ