ಇಷ್ಟು ದಿನ ಶಿಕ್ಷಕರು ಮಕ್ಕಳಿಗೆ ಶಿಕ್ಷೆ ನೀಡ್ತಿದ್ರು ಆದ್ರೆ ಈ ಮಕ್ಕಳೇ ಶಿಕ್ಷಕರಿಗೆ ಕಾಟ ಕೊಡ್ತಿದ್ದಾರಂತೆ. ಈ ಘಟನೆ ನಡೆದಿರೋದು ಬೆಂಗಳೂರಿನ (Bengaluru) ಶಾಲೆಯಲ್ಲಿ. ತಮಗೆ ಪಾಠ ಮಾಡೋ ಶಿಕ್ಷಕರೊಟ್ಟಿಗೆ ಹೇಗೆ ವರ್ತನೆ ಮಾಡಬೇಕು ಎಂದು ಮಕ್ಕಳಿಗೆ (Students) ತಿಳಿಯದಂತಾಗಿದೆ. ಮೊದಲೆಲ್ಲಾ ಗುರುಗಳು (Teacher) ಎಂದರೆ ಅಪಾರ ಗೌರವ ಹಾಗೂ ಸ್ವಲ್ಪ ಮಟ್ಟಿನ ಭಯ (Fear) ಕೂಡಾ ಇರ್ತಾ ಇತ್ತು ಆದರೆ ಈಗ ಅದ್ಯಾವುದೂ ಇಲ್ಲ. ಕಿಂಚಿತ್ತು ಪ್ರಜ್ಞೆ ಇದ್ದರೂ ಸಾಕಿತ್ತು ಇಂಥಹ ಘಟನೆಗಳು ಜರುಗುತ್ತಿರಲಿಲ್ಲ ಹಾಗಾದ್ರೆ ಇಲ್ಲಿ ಆಗಿದ್ದೇನು ಎಂದು ತಿಳಿಯಲು ಈ ಸುದ್ದಿ ಪೂರ್ತಿಯಾಗಿ ಓದಿ.
ಇಷ್ಟು ದಿನ ಮಕ್ಕಳಿಗೆ ಶಿಕ್ಷಕರು ಶಿಕ್ಷೆ ಕೊಡ್ತಿದ್ರು ಮಕ್ಕಳು ಅದನ್ನು ಸ್ವೀಕರಿಸುತ್ತಿದ್ದರು. ಶಿಕ್ಷಕರಿಗೆ ಎದುರು ಮಾತನಾಡದೇ ಸುಮ್ಮನಿರುತ್ತಿದ್ದರು ಆದರೆ ಈಗ ಮಕ್ಕಳಿಗೆ ಶಿಕ್ಷಕರೇ ಹೆದರಬೇಕಾದ ಪರಿಸ್ಥಿತಿ ಎದುರಾಗಿದೆ. ಮಕ್ಕಳೇ ಶಿಕ್ಷಕರಿಗೆ ಕಿರುಕುಳ ಕೊಡುತ್ತಿದ್ದಾರೆಂದು ಆರೋಪ ಕೇಳಿಬರ್ತಿದೆ.
ಮಕ್ಕಳ ಕಿರುಕುಳಕ್ಕೆ ಬೇಸತ್ತು ಶಿಕ್ಷಕರೇ ರಾಜೀನಾಮೆ ನೀಡೋ ಸ್ಥಿತಿ!
ಹೌದು ಮಕ್ಕಳು ನೀಡುತ್ತಿರುವ ಕಾಟಕ್ಕೆ ಶಿಕ್ಷಕರೇ ಹೆದರಿ ಕಂಗಾಲಾಗಿ ಹೋಗಿದ್ದಾರೆ. ಶಾಲೆಯಲ್ಲಿ ಕೆಲ ಮಕ್ಕಳ ದುರ್ವರ್ತನೆಯಿಂದ ಶಿಕ್ಷಕರು ಬೇಸತ್ತು ಹೋಗಿದ್ದಾರೆ ಅಷ್ಟೇ ಅಲ್ಲ ಇವರ ವರ್ತನೆ ಅಸಭ್ಯ ನಡುವಳಿಕೆಗಳು ಶಿಕ್ಷಕರಿಗೆ ಸಂಕಷ್ಟವಾಗಿ ಪರಿಣಮಿಸಿದೆ. ಇತರೆ ಮಕ್ಕಳ ಶಿಕ್ಷಣ ಹಕ್ಕು ಉಲ್ಲಂಘನೆ ಆಗ್ತಿದೆಯೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರನ್ನೇ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆಂದು ಆರೋಪ
ಹೌದು ಶಿಕ್ಷಕರನ್ನು ಬಹುವಚನದಲ್ಲಿ ಮಾತನಾಡಿಸುವುದು ಅವರಿಗೆ ತಕ್ಕ ಗೌರವ ನೀಡುವುದು ಮೊದಲಿನಿಂದಲೂ ನಡೆದುಕೊಂಡು ಬಂದ ರೂಢಿ. ಆದರೀಗ ಬಹುವಚನ ಬಿಡಿ, ಏಕವಚನವೂ ಅಲ್ಲ, ಬದಲಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿದೆ. ಗುಂಪುಗಾರಿಕೆ, ಹೊಡೆದಾಟ, ಬಡಿದಾಟವನ್ನ ಇವರು ಶಾಲೆಗಳಲ್ಲೇ ಆರಂಭಿಸಿ ಬಿಟ್ಟಿದ್ದಾರಂತೆ ಹೀಗೆಂದು ಶಿಕ್ಷಕರೇ ಹೇಳಿದ್ದಾರೆ.
ಮಾದಕ ದ್ರವ್ಯ ಸೇವನೆ, ಧೂಮಪಾನ, ಮದ್ಯಪಾನ ಮಾಡುವ ಆರೋಪ
ಶಾಲೆಯನ್ನು ದೇಗುಲವೆಂದು ಬಿಂಬಿಸುವ ನಮ್ಮ ಆಚಾರ ವಿಚಾರದ ನಡುವೆ ಕಲಿಯಲೆಂದು ಬರುವ ಮಕ್ಕಳು ಮೋಜು ಮಸ್ತಿಗಾಗಿ ಶಾಲೆ, ಕಾಲೇಜುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಮಾದಕ ದ್ರವ್ಯ ಸೇವನೆ ಮಾಡೋದು, ಧೂಮಪಾನ, ಮದ್ಯಪಾನ ಮಾಡುವ ಆರೋಪ ಕೇಳಿ ಬರ್ತಿದೆ.
ಇದನ್ನೂ ಓದಿ: ಪಾಠ ಮಾಡುವ ಶಿಕ್ಷಕರಿಗೂ ಬೇಕು ಈ ವಿಷಯಗಳ ಮೇಲೆ ಗಮನ
ಮಕ್ಕಳ ಹಕ್ಕುಗಳ ಆಯೋಗಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ದೂರು
ಇತರೆ ಮಕ್ಕಳ ಹಕ್ಕಿನ ಬಗ್ಗೆಯೂ ಆಯೋಗ ನೋಡಿಕೊಳ್ಳಬೇಕು ಆ ಮಕ್ಕಳಿಗೆ ಈ ರೀತಿ ವರ್ತನೆ ಮಾಡುತ್ತಿರುವ ಮಕ್ಕಳಿಂದ ತೊಂದರೆಯಾಗಬಾರದು ಎಂದು ಶಿಕ್ಷಕರು ಕಾಳಜಿ ವಹಿಸಿದ್ದಾರೆ. ಕೆಲ ಆದೇಶಗಳು ಬದಲಾವಣೆ ಆಗಬೇಕು ಎಂದು ಕ್ಯಾಮ್ಸ್ ಆಗ್ರಹ ವ್ಯಕ್ತಪಡಿಸಿದೆ.
ಹೈಸ್ಕೂಲ್ ವಿದ್ಯಾರ್ಥಿಗಳ ಆಟಾಟೋಪ
ವಯಸ್ಸಿಗೆ ಮೀರಿದ ವರ್ತನೆಯನ್ನ ತಮ್ಮ ಹೈಸ್ಕೂಲ್ ದಿನಗಳಲ್ಲಿ ತೋರುತ್ತಿರುವ ಆತಂಕಕಾರಿ ಸಂಗತಿ. ಈ ವಯಸ್ಸಿನಲ್ಲೇ ಅನೈತಿಕ ಚಟುವಟಿಕೆಗಳು ಹಾಗೂ ಪ್ರೀತಿ, ಪ್ರೇಮದಲ್ಲಿ ತೊಡಗುತ್ತಾರೆ ಗುಂಪುಗಾರಿಕೆ, ಹೊಡೆದಾಟ, ಬಡಿದಾಟ ಸಾಮಾನ್ಯವಾಗಿದೆ. ಮಾದಕ ದ್ರವ್ಯ ಸೇವನೆ ಮಾಡುತ್ತಾರೆ ಧೂಮಪಾನ, ಮದ್ಯಪಾನ ಮಾಡುತ್ತಾರೆ. ಅಷ್ಟೇ ಅಲ್ಲ ಡ್ರೈವಿಂಗ್, ರೈಡಿಂಗ್ ಮಾಡುತ್ತಾರೆ. ಇದಕ್ಕೆಲ್ಲಾ ಪಾಲಕರೂ ಸಹ ಕಡಿವಾಣ ಹಾಕಬೇಕು. ಇಷ್ಟೊಂದು ಸ್ವಾತಂತ್ರ್ಯವನ್ನು ಮಕ್ಕಳಿಗೆ ನೀಡಬಾರದು.
ಈ ವಯಸ್ಸಿಗೆ ಇದು ಅತಿಯಾಯ್ತು
ಈ ವಯಸ್ಸಿಗೆ ಇದು ಅತಿಯಾಯ್ತು
ಮಕ್ಕಳ ನಡುವೆ ದ್ವೇಷ, ಅಸೂಯೆ ಹೆಚ್ಚುತ್ತಿದೆ. ಇತ್ತ ಶಿಕ್ಷಕರ ಮಾತನ್ನು ಕೇಳುತ್ತಿಲ್ಲ, ಅತ್ತ ಪೋಷಕರ ಮಾತನ್ನೂ ಕೇಳುತ್ತಿಲ್ಲ, ಸಾಲದೆಂಬಂತೆ ಶಿಕ್ಷಕರ ಜೊತೆ ಅನುಚಿತವಾಗಿ ವರ್ತಿಸಿ ಅಗೌರವ ತೋರುತ್ತಿದ್ದಾರೆ. ಶಿಕ್ಷಕರ ದೇಹದ ಬಗ್ಗೆ ಅವಾಚ್ಯವಾಗಿ ಮಾತಾಡುತ್ತಾರೆ. ಹಿಂದಿನಿಂದ ಶಿಕ್ಷಕರಿಗೆ ಬೈಯುತ್ತಾರೆ. ಶಿಕ್ಷಕರನ್ನ ಅವಹೇಳನ ಮಾಡುತ್ತಾರೆ. ಪಾಠ ಮಾಡುವಾಗ ಒಂದಕ್ಷರವನ್ನೂ ಗಮನವಿಟ್ಟು ಕೇಳುವುದಿಲ್ಲ. ಇದು ಇತರ ಮಕ್ಕಳಿಗೂ ತೊಂದರೆಯುಂಟು ಮಾಡುತ್ತಿದೆ. ಪಾಠ ಮಾಡುವಾಗ ಗಲಾಟೆ ಮಾಡುತ್ತಾರೆ.
ಈ ಕಾರಣದಿಂದ ಶಿಕ್ಷಕರೇ ರಾಜಿನಾಮೆ ಕೊಡುವ ಸ್ಥಿತಿಗೆ ತಲುಪಿದ್ದಾರೆ. ಮಕ್ಕಳ ಈ ವರ್ತನೆಯಿಂದ ಬೇಸತ್ತು ಹೋಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ