• ಹೋಂ
  • »
  • ನ್ಯೂಸ್
  • »
  • Jobs
  • »
  • Teachers Protest: ಪರೀಕ್ಷಾ ಸಮಯದಲ್ಲಿ ಪ್ರತಿಭಟನೆ, ಶಿಕ್ಷಕರಿಗೆ ಮಕ್ಕಳ ಭವಿಷ್ಯಕ್ಕಿಂತ ತಮ್ಮ ಬೇಡಿಕೆಯೇ ಹೆಚ್ಚಾಯ್ತಾ?

Teachers Protest: ಪರೀಕ್ಷಾ ಸಮಯದಲ್ಲಿ ಪ್ರತಿಭಟನೆ, ಶಿಕ್ಷಕರಿಗೆ ಮಕ್ಕಳ ಭವಿಷ್ಯಕ್ಕಿಂತ ತಮ್ಮ ಬೇಡಿಕೆಯೇ ಹೆಚ್ಚಾಯ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ರಾಜ್ಯದ 46 ಸಾವಿರ ಶಾಲೆಗಳನ್ನು ಬಂದ ಮಾಡಿ ಮಾರ್ಚ್ ಒಂದರಿಂದ ಕರ್ತವ್ಯಕ್ಕೆ ಗೈರಗಲು ಮುಂದಾದ ಶಿಕ್ಷಕರು ಈ ಕುರಿತು ಮಾಹಿತಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಪರೀಕ್ಷೆ ತೀರಾ ಹತ್ತಿರವಿರುವ ಈ ದಿನಗಳಲ್ಲಿ ಶಿಕ್ಷಕರಿಗೆ ಇದೆಲ್ಲಾ ಮಾಡುವ ಅವಶ್ಯಕಥೆ ಇತ್ತಾ? ಎಂಬ ಪ್ರಶ್ನೆ ಎದುರಾಗುತ್ತದೆ.

ಮುಂದೆ ಓದಿ ...
  • Share this:

ವಿದ್ಯಾರ್ಥಿಗಳ ಪರೀಕ್ಷಾ ದಿನಾಂಕ ಹತ್ತಿರ ಬರುತ್ತಿದೆ ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು, ಪಾಲಕರು ಹಾಗೂ ಇನ್ನು ಕೆಲವು ಶಿಕ್ಷಕರು ಮಾತ್ರ ಸರಿಯಾಗಿ ಗಮನ ಹರಿಸಿ ಆ ಕುರಿತು ಆಲೋಚನೆ ಮಾಡುತ್ತಾ, ಹೆಚ್ಚಿನ ಅಂಕಗಳಿಕೆಗೆ ಬೇಕಾದ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಇನ್ನು ಕೆಲವು ಶಾಲಾ ಮಕ್ಕಳಿಗೆ ಈ ಸಂದರ್ಭದಲ್ಲಿ ಬಂದ ಅನುಮಾನವನ್ನು ಬಗೆ ಹರಿಸಲು ಕೂಡಾ ಶಿಕ್ಷಕರಿಲ್ಲ ಎಂಬ ಪರಿಸ್ಥಿತಿ ಎದುರಾಗಿದೆ. ಆ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.


ಮುಂದಿನ ತಿಂಗಳಿನಿಂದಲೇ ಪರೀಕ್ಷೆಗಳು ಆರಂಭವಾಗುತ್ತದೆ ಎಂದು ಈಗಾಗಲೇ ವೇಳಾಪಟ್ಟಿ ಪ್ರಕಟವಾಗಿದ್ದು ದಿನಾಂಕವೂ ಈಗಾಗಲೇ ವಿದ್ಯಾರ್ಥಿಗಳಿಗೆ ತಿಳಿದಿದೆ. ಆದರೆ ಈಗ ಮುಂಬರುವ ಸಾಲು ಸಾಲು ಪರೀಕ್ಷೆಗಳ ನಡುವೆ ಶುರುವಾಯ್ತು ಬಿಗ್ ಟೆನ್ಷನ್ ಅದೇನೆಂದರೆ ಶಿಕ್ಷಕರೇ ಶಾಲೆಗೆ ಬರುತ್ತಿಲ್ಲ! ಪರೀಕ್ಷಾ ಸಮಯದಲ್ಲಿ ಮುಂದೆ ನಿಂತು ವಿದ್ಯಾರ್ಥಿಗಳ ಅನುಮಾನವನ್ನು ಬಗೆ ಹರಿಸಿ ಅವರಿಗೆ ಹುಮ್ಮಸ್ಸು ನೀಡಬೇಕಿದ್ದ ಶಿಕ್ಷಕರೇ ಈ ರೀತಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.


ಶಿಕ್ಷಕರಿಗೆ ಮಕ್ಕಳ ಭವಿಷ್ಯಕ್ಕಿಂತ ತಮ್ಮ ಬೇಡಿಕೆಯೇ ಹೆಚ್ಚಾಯ್ತಾ?


ಶಿಕ್ಷಕರಿಗೆ ಮಕ್ಕಳ ಭವಿಷ್ಯಕ್ಕಿಂತ ತಮ್ಮ ಬೇಡಿಕೆಯೇ ಹೆಚ್ಚಾಯ್ತಾ?
ಶಿಕ್ಷಕರು ತಮ್ಮದೇ ಆದ ಕೆಲವು ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಸರ್ಕಾರದ ವಿರುದ್ದ ಅದನ್ನು ನೆರವೇರಿಸಿಕೊಡುವಂತೆ ಹಿಂದೆ ಬಿದ್ದಿದ್ದಾರೆ. ರಾಂಗ್ ಟೈಂನಲ್ಲಿ ಹೋರಾಟಕ್ಕೆ ಮುಂದಾಗಿರೋ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಸರ್ಕಾರಿ ಶಾಲೆ ಬಂದ್ ಎಕ್ಸಾಂ ಕೆಲಸಕ್ಕೆ ರಜೆ ಹಾಕಲು ಮುಂದಾದ ಸರ್ಕಾರಿ ಶಾಲಾ ಶಿಕ್ಷಕರು ಮಕ್ಕಳಿಗೆ ಲಭ್ಯವಾಗುತ್ತಿಲ್ಲ.


ಇದನ್ನೂ ಓದಿ: AISSEE ಫಲಿತಾಂಶ ಪ್ರಕಟ, ಈ ಲಿಂಕ್​ ಕ್ಲಿಕ್ ಮಾಡಿ ಪರಿಶೀಲಿಸಿ


ರಾಜ್ಯದ 46 ಸಾವಿರ ಶಾಲೆಗಳನ್ನು ಬಂದ ಮಾಡಿ ಮಾರ್ಚ್ ಒಂದರಿಂದ ಕರ್ತವ್ಯಕ್ಕೆ ಗೈರಗಲು ಮುಂದಾದ ಶಿಕ್ಷಕರು ಈ ಕುರಿತು ಮಾಹಿತಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಪರೀಕ್ಷೆ ತೀರಾ ಹತ್ತಿರವಿರುವ ಈ ದಿನಗಳಲ್ಲಿ ಶಿಕ್ಷಕರಿಗೆ ಇದೆಲ್ಲಾ ಮಾಡುವ ಅವಶ್ಯಕಥೆ ಇತ್ತಾ? ಎಂಬ ಪ್ರಶ್ನೆ ಎದುರಾಗುತ್ತದೆ.




ಪರೀಕ್ಷೆಗಳ ಟೈಮ್ ನಲ್ಲಿ ಎಡವಟ್ಟ ನಿರ್ಧಾರಕ್ಕೆ ಮುಂದಾದ ಸರ್ಕಾರಿ ಶಾಲಾ ಶಿಕ್ಷಕರು ಆತಂಕ ತಂದಿಟ್ಟಿದ್ದಾರೆ. ಪಿಯುಸಿ, ಎಸ್ಎಸ್ಎಲ್ ಸಿ ಹಾಗೂ 5&8 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ನಡುವೆ ಶಾಲೆಗಳಿಂದ ಹೊರಗೂಳಿಯಲು ಮುಂದಾದ ಇವರನ್ನು ಹೇಗೆ ನಿಭಾಯಿಸುವುದು ಹಾಗೂ ಮನವಲಿಸುವುದು ಎಂದು ಯಾರಿಗೂ ತಿಳಿಯದಾಗಿದೆ.


ಎಕ್ಸಾಂಗಳಿಂದ ಹೊರಗೆ ಉಳಿಯಲು ಮುಂದಾದ ಸರ್ಕಾರಿ ಶಾಲಾ ಶಿಕ್ಷಕರು


ಎಕ್ಸಾಂ ಟೈಮ್ ನಲ್ಲಿ ಸರ್ಕಾರಿ ಶಾಲಾ ತರಗತಿ ಹಾಗೂ ಎಕ್ಸಾಂಗಳಿಂದ ಹೊರಗೆ ಉಳಿಯಲು ಮುಂದಾದ ಸರ್ಕಾರಿ ಶಾಲಾ ಶಿಕ್ಷಕರು ಮಾರ್ಚ್ 1 ರಿಂದ ತರಗತಿ ಹಾಗೂ ಎಕ್ಸಾಂ ಬಹಿಸ್ಕರಿಸಲು ಮುಂದಾಗಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಇದಕ್ಕೆ ಬೆಂಬಲವಾಗಿ ನಿಂತಿದೆ. ರಾಜ್ಯದ 2 ಲಕ್ಷ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಬಂದ್‌ಗೆ ಬೆಂಬಲ ಸೂಚಿಸಿ ಕರೆ ನೀಡಿದೆ. ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಏಳನೇ ವೇತನ ಆಯೋಗ ಜಾರಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.
ಜೊತೆಗೆ NPS ರದ್ದುಗೊಳಿಸಿ OPS ಜಾರಿಗೆ ಒತ್ತಾಯಿಸಿ ಸರ್ಕಾರಿ ಶಾಲೆಗಳನ್ನ ಬಂದ್ ಮಾಡಿ ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ.


ಪ್ರತಿಭಟನೆ ವೇಳೆ ಶಿಕ್ಷಕನ ಆತ್ಮಹತ್ಯೆ


ಬಾಗಲಕೋಟೆ ಮೂಲದ ಸಿದ್ದಯ್ಯ ಹೀರೆಮಠ ಪಿಂಚಣಿಗಾಗಿ ಫ್ರೀಡಂ ಪಾರ್ಕ್​ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದಾರೆ. ವಿಷ ಕುಡಿದ ಇವರನ್ನು ರಕ್ಷಿಸುವ ಸಲುವಾಗಿ ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದಾರೆ.  ಸಿದ್ಧಯ್ಯ ಹಿರೇಮಠ ಚಿಕಿತ್ಸೆ ಫಲಕಾರಿಯಾಗದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.


 

First published: