• ಹೋಂ
  • »
  • ನ್ಯೂಸ್
  • »
  • jobs
  • »
  • 7th Pay Commission: 5 ದಿನ ಶಾಲೆ, ಸಂಬಳ ಮಾತ್ರ ಡಬಲ್​! 7ನೇ ವೇತನ ಆಯೋಗಕ್ಕೆ ಶಿಕ್ಷಕರ ಮನವಿ

7th Pay Commission: 5 ದಿನ ಶಾಲೆ, ಸಂಬಳ ಮಾತ್ರ ಡಬಲ್​! 7ನೇ ವೇತನ ಆಯೋಗಕ್ಕೆ ಶಿಕ್ಷಕರ ಮನವಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಆರಂಭಿಕ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಪಡಿಸಬೇಕು. 10 ವರ್ಷಗಳು ಕಳೆದ ನಂತರ ಈ ವೇತನ ಶ್ರೇಣಿ ಬದಲಾಗಬೇಕು ಎಂಬ ಬೇಡಿಕೆಯನ್ನೂ ಸೇರಿ ಇನ್ನೂ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

  • News18 Kannada
  • 4-MIN READ
  • Last Updated :
  • Karnataka, India
  • Share this:

ಶಿಕ್ಷಕರು ತಮ್ಮ ಸಂಬಳವನ್ನು (Salary) ಡಬಲ್​ ಮಾಡಬೇಕು ಎಂದು ಏಳನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಪ್ರತಿ ತರಗತಿಗೊಬ್ಬ ಶಿಕ್ಷಕರನ್ನು (Teachers) ನೇಮಕ ಮಾಡಬೇಕು ಹಾಗೂ ಐದು ದಿನ ಮಾತ್ರ ಶಾಲೆಗಳು (School) ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಎಲ್ಲ ಸರ್ಕಾರಿ ಶಾಲೆಗಳಲ್ಲಿಯೂ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು ಮುಂತಾದ ಬೇಡಿಕೆಗಳನ್ನು ಏಳನೇ ವೇತನ ಆಯೋಗದ (7th Pay Commission) ಮುಂದಿಟ್ಟಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ಮಂಡಿಸಿದೆ. 


ಶಿಕ್ಷಕರ ವೇತನ ದ್ವಿಗುಣಗೊಳಿಸಬೇಕು. ಸರಕಾರಿ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ಸೇರಿದಂತೆ ಹಲವು ಬೇಡಿಕೆಗಳ ಪಟ್ಟಿಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ 7ನೇ ವೇತನ ಆಯೋಗಕ್ಕೆ ಸಲ್ಲಿಸಿದೆ. ಈ ಬೇಡಿಕೆ ಅನುಸಾರ ಮುಂದೆ ಯಾವೆಲ್ಲ ಆಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ತಿಳಿದುಬಂದಿಲ್ಲ.


ಇದನ್ನೂ ಓದಿ: TNOU TEE 2023 ಪರೀಕ್ಷಾ ದಿನಾಂಕ ಬದಲು, 2 ತಿಂಗಳು ಮುಂದೂಡಲ್ಪಟ್ಟ ಪರೀಕ್ಷೆ


ಪ್ರಸ್ತುತ ಶಿಕ್ಷಕರ ವೇತನ ಶ್ರೇಣಿ 25,800 - 51,400 ಇಷ್ಟಿದೆ ಇದನ್ನು ದ್ವಿಗುಣಗೊಳಿಸಿ 51,600-1,02,800 ಏರಿಸಬೇಕು ಎಂದು ಹೇಳುತ್ತಿದ್ದಾರೆ. ಆರಂಭಿಕ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಪಡಿಸಬೇಕು ಎಂದೂ ಸಹ ತಿಳಿಸಿದ್ದಾರೆ.




ಆರಂಭಿಕ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಪಡಿಸಬೇಕು. 10 ವರ್ಷಗಳು ಕಳೆದ ನಂತರ ಈ ವೇತನ ಶ್ರೇಣಿ ಬದಲಾಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದರೊಟ್ಟಿಗೆ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಕಾಲಮಿತಿ ಬಡ್ತಿ ವೇತನ ನೀಡಲಾಗಿದೆ. ಗ್ರೇಡ್ ಮತ್ತು ಪ್ರತ್ಯೇಕ ವೇತನ ಶ್ರೇಣಿಯನ್ನು ದ್ವಿಗುಣಗೊಳಿಸಿ ಎಂದು ಕೇಳಿಕೊಂಡಿದ್ದಾರೆ.


ಶಾಲೆಗಳಿಗೆ ಹೊಸ ಶಿಕ್ಷಕರನ್ನು ನೇಮಿಸಿಕೊಳ್ಳಲು ಮನವಿ


ಶಾಲೆಗಳಿಗೆ ಹೊಸ ಶಿಕ್ಷಕರನ್ನು ನೇಮಿಸಿಕೊಳ್ಳುವುದು ಸಹ ಇದರಲ್ಲೇ  ಆಗಬೇಕು. ಪ್ರತಿ ತರಗತಿಗೊಬ್ಬರಂತೆ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. 15 ವರ್ಷ ಸೇವೆ ಪೂರೈಸಿದವರಿಗೆ ನೀಡುತ್ತಿರುವ ಸ್ವಯಂಚಾಲಿತ ಬಡ್ತಿ ವೇತನ ಶ್ರೇಣಿಯನ್ನು ದ್ವಿಗುಣಗೊಳಿಸಿ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸಲು ಕೋರಲಾಗಿದೆ. ಪದವೀಧರ ಶಿಕ್ಷಕರ ಹಾಲಿ ವೇತನಕ್ಕೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ.


ಡಿ ಗ್ರೂಪ್​​​ ಕೆಲಸಗಾರರ ನೇಮಕಾತಿ


ಸೇವೆ ಮಾಡಿದ ಆಧಾರದ ಮೇಲೆ ಸಂಬಳವನ್ನೂ ಏರಿಕೆ ಮಾಡಬೇಕು ಎಂದು ಹೇಳಿದ್ದಾರೆ. ಡಿ ಗ್ರೂಪ್​​​ ಕೆಲಸಗಾರರ ನೇಮಕಾತಿಗೂ ಒತ್ತಾಯಿಸಲಾಗಿದೆ. ಪ್ರತೀ ಶಾಲೆಗೂ ಒಬ್ಬರಂತೆ ಡಿ ಗ್ರೂಪ್​ ಕೆಲಸಗಾರರನ್ನು ನೇಮಕ ಮಾಡಿ ಎಂದು ಕೇಳಿದ್ದಾರೆ. ​ ವಾರಕ್ಕೆ ಐದು ದಿನ ಮಾತ್ರ ಶಾಲೆ ಗೆ ಬಂದು ಕೆಲಸ ಮಾಡುವಂತಾಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.


ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ನ್ಯೂಸ್
ಮಾಧ್ಯಮ ವರದಿಗಳ ಪ್ರಕಾರ, ಬಜೆಟ್ 2023 ರ ನಂತರ, ಸರ್ಕಾರಿ ನೌಕರರ ವೇತನದ ಫಿಟ್‌ಮೆಂಟ್ ಅಂಶದಲ್ಲಿ ಪರಿಷ್ಕರಣೆಯಾಗಬಹುದು.ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಬಹುಮಾನ ನೀಡಲಾಗುವುದು. ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಲು ಸರ್ಕಾರ ಶೀಘ್ರದಲ್ಲೇ ಅನುಮೋದನೆ ನೀಡುವ ಸಾಧ್ಯತೆಯಿದೆ. ಮಾಧ್ಯಮ ವರದಿಗಳ ಪ್ರಕಾರ, ಬಜೆಟ್ 2023 ರ ನಂತರ, ಸರ್ಕಾರಿ ನೌಕರರ ವೇತನದ ಫಿಟ್‌ಮೆಂಟ್ ಅಂಶದಲ್ಲಿ ಪರಿಷ್ಕರಣೆಯಾಗಬಹುದು.


ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರ ಇದನ್ನು ಅನುಮೋದಿಸಿದರೆ, ನೌಕರರು ತಮ್ಮ ಸಂಬಳದಲ್ಲಿ ದೊಡ್ಡ ಹೆಚ್ಚಳವನ್ನು ನೋಡುತ್ತಾರೆ. ನೌಕರರ ಕನಿಷ್ಠ ವೇತನ ರೂ.18 ಸಾವಿರದಿಂದ ರೂ.26 ಸಾವಿರಕ್ಕೆ ಏರಿಕೆಯಾಗಲಿದೆ. ಈ ಮೂಲಕ ಮೂಲ ವೇತನದಲ್ಲಿ ತಿಂಗಳಿಗೆ ರೂ.8 ಸಾವಿರ ಹಾಗೂ ವಾರ್ಷಿಕ ರೂ.96 ಸಾವಿರ ಹೆಚ್ಚಳವಾಗಲಿದೆ.

First published: