• ಹೋಂ
  • »
  • ನ್ಯೂಸ್
  • »
  • Jobs
  • »
  • Teacher: ಪ್ರತಿಭಟನೆ ವೇಳೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ!

Teacher: ಪ್ರತಿಭಟನೆ ವೇಳೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ!

ಸಿದ್ದಯ್ಯ ಹಿರೇಮಠ

ಸಿದ್ದಯ್ಯ ಹಿರೇಮಠ

ರಾತ್ರಿಯೆ ನಿವೃತ್ತ ಶಿಕ್ಷಕ ಸಿದ್ಧಯ್ಯ ಹಿರೇಮಠ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಿನ್ನೆ ಅಂದರೆ ಫೆಬ್ರವರಿ 24 ರಂದು ಈ ಘಟನೆ ಜರುಗಿದೆ.  ವಿಕ್ಟೋರಿಯಾ ಅಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಇವರು ವಿಷ ಕುಡಿದಿರುವುದು ಖಾತ್ರಿಯಾಗಿದೆ.

  • News18 Kannada
  • 3-MIN READ
  • Last Updated :
  • Karnataka, India
  • Share this:

ಶಿಕ್ಷಕರು ತಮ್ಮ ಪಿಂಚಣಿಗಾಗಿ, ಸಂಬಳಕ್ಕಾಗಿ, (Salary) ಕೆಲಸದ ಭದ್ರತೆಗಾಗಿ ಹೀಗೆ ಹಲವಾರು ಕಾರಣಗಳಿಗಾಗಿ ಪ್ರತಿಭಟನೆ ಮಾಡುತ್ತಲೇ ಇರುತ್ತಾರೆ. ಆದರೆ ಅದೇ ಪ್ರತಿಭಟನೆಯಲ್ಲಿ ತಮ್ಮ ಜೀವವನ್ನೇ ಕಳೆದುಕೊಂಡ ಶಿಕ್ಷಕರೊಬ್ಬರ ಬಗ್ಗೆ ಇಲ್ಲಿದೆ ಮಾಹಿತಿ. ಇವರು ಜೀವ ಕಳೆದುಕೊಳ್ಳಲು ಕಾರಣ ಏನು? ಇವರು ಎಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಕುರಿತು ಸಂಪೂರ್ಣ ಮಾಹಿತಿ (Information) ಇಲ್ಲಿದೆ ನೋಡಿ.  ಆತ್ಮಹತ್ಯೆಗೆ ಯತ್ನಿಸಿದ್ದ ನಿವೃತ್ತ ಶಿಕ್ಷಕರ (Teacher) ಹೆಸರು ಸಿದ್ದಯ್ಯ ಹೀರೆಮಠ ಅಂತ. ಇವರು ತಮಗೆ ಪಿಂಚಣಿ ಸೌಲಭ್ಯಕ್ಕಾಗಿ ಬೇಡಿಕೆ ಇಟ್ಟು ಪ್ರತಿಭಟನೆ ಮಾಡುತ್ತಿದ್ದರು. 


ಬಾಗಲಕೋಟೆ ಮೂಲದ ಸಿದ್ದಯ್ಯ ಹೀರೆಮಠ ಪಿಂಚಣಿಗಾಗಿ ಫ್ರೀಡಂ ಪಾರ್ಕ್​ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದಾರೆ. ವಿಷ ಕುಡಿದ ಇವರನ್ನು ರಕ್ಷಿಸುವ ಸಲುವಾಗಿ ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದಾರೆ.  ಸಿದ್ಧಯ್ಯ ಹಿರೇಮಠ ಚಿಕಿತ್ಸೆ ಫಲಕಾರಿಯಾಗದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.


ರಾತ್ರಿಯೆ ನಿವೃತ್ತ ಶಿಕ್ಷಕ ಸಿದ್ಧಯ್ಯ ಹಿರೇಮಠ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಿನ್ನೆ ಅಂದರೆ ಫೆಬ್ರವರಿ 24 ರಂದು ಈ ಘಟನೆ ಜರುಗಿದೆ.  ವಿಕ್ಟೋರಿಯಾ ಅಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಇವರು ವಿಷ ಕುಡಿದಿರುವುದು ಖಾತ್ರಿಯಾಗಿದೆ.


ಇದನ್ನೂ ಓದಿ: JNTUH Announcements: ಬಿಟೆಕ್ ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನಿಮಗೆಂದೇ ಆರಂಭವಾಗಲಿದೆ ಹೊಸ ಕೋರ್ಸ್​​


ಬಳಿಕ ಕುಟುಂಬದವರಿಗೆ ಮೃತದೇಹವನ್ನು ವೈದ್ಯರು  ಹಸ್ತಾಂತರ ಮಾಡಿದ್ದಾರೆ.
ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರು ಈ ಘಟನೆಯಿಂದ ತೀವೃವಾಗಿ ನೊಂದಿದ್ದಾರೆ. ಈ ಘಟನೆಗೆ ಸರ್ಕಾರ ಹೇಗೆ ಸ್ಪಂದಿಸಲಿದೆ ಎಂದು ತಿಳಿದಿಲ್ಲ. ಸಿದ್ದಯ್ಯ ಹಿರೇಮಠ  ಕುಟುಂಬಸ್ಥರು ಮೃತದೇಹವನ್ನು ಬಾಗಲಕೋಟೆಗೆ ಕೊಂಡೊಯ್ದಿದ್ದಾರೆ.




ಇದೇ ಸಂದರ್ಭದಲ್ಲಿ ಇನ್ನೂ ಇಬ್ಬರು ಆತ್ಮಹತ್ಯೆಗೆ ಯತ್ನಿಸಿರುವುದು ತಿಳಿದು ಬಂದಿದೆ. ಆತ್ಮಹತ್ಯೆ ಗೆ ಯತ್ನಿಸಿದ್ದ ನಿವೃತ್ತ ಶಿಕ್ಷಕ ಸಾವನ್ನೊಪ್ಪಿರುವುದು ಹಲವಾರು ಜನರಿಗೆ ನೋವುಂಟಾಗಿದೆ. ಸಂತಾಪವನ್ನು ಸೂಚಿಸಲಾಗಿದೆ.  ಸಿದ್ದಯ್ಯ ಹೀರೆಮಠ ಇವರೊಬ್ಬ ನಿವೃತ್ತ ಶಿಕ್ಷಕರಾಗಿದ್ದರು. ತಮ್ಮ ಪಿಂಚಣಿ ಹಣಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದರು.


ಎರಡು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ್ದ ಶಿಕ್ಷಕ


ಮೂಲತಃ ಬಾಗಲಕೋಟೆಯವರಾದ ಇವರು ವಿಷ ಕುಡಿದಿರುವ ಸಂಗತಿ ತಿಳಿದ ತಕ್ಷಣವೇ ಆಸ್ಪತ್ರೆಗೆ ಸೇರಿಸುವ ಕಾರ್ಯ ಮಾಡಲಾಗಿದೆ ಆದರೂ ಸಹ ಇವರು ಬದುಕಿ ಉಳಿಯಲಿಲ್ಲ. ಇನ್ನೂ ಇಬ್ಬರು ಇದೇ ರೀತಿ ಮಾಡಿಕೊಂಡಿದ್ದಾರೆ. ಈಗಾಗಲೇ 2 ದಿನಗಳ ಹಿಂದೆ ಕೂಡಾ ಇವರು ಆತ್ಮಹತ್ಯೆಗೆ ಯತ್ನ ಮಾಡಿದ್ದರು ಎಂಬ ವಿಷಯ ತಿಳಿದು ಬಂದಿದೆ.  ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವು ಸಂಭವಿಸಿದೆ.


ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದ ಆತ್ಮಹತ್ಯೆ ಗೆ ಯತ್ನಸಿದ್ದ ಶಿಕ್ಷಕನ ಜೊತೆ ಇನ್ನೂ ಹಲವು ಶಿಕ್ಷಕರು ಪ್ರತಿಭಟನೆ ಮಾಡುತ್ತಿದ್ದಾರೆ. ಪಿಂಚಣಿಗಾಗಿ ಹೋರಾಟ ಮಾಡುತ್ತಿರೋ ಶಿಕ್ಷಕರ ಸಂಖ್ಯೆ ಹೆಚ್ಚಿದೆ. ಹಿರೇಮಠ ಸೇರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಾತ್ರಿ 8:45 ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.


ಪಿಂಚಣಿಗಾಗಿ ಮುಷ್ಕರದಲ್ಲಿ ನಿರತರಾಗಿದ್ದ ಸಿದ್ದಯ್ಯ ಹಿರೇಮಠ


ಪಿಂಚಣಿಗಾಗಿ ಮುಷ್ಕರದಲ್ಲಿ ನಿರತರಾಗಿದ್ದ ಸಿದ್ದಯ್ಯ ಹಿರೇಮಠ ಕಳೆದ 141 ದಿನಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ನಡೆಸ್ತಿದ್ದರು ಅನುದಾನಿತ ಶಾಲೆ ಶಿಕ್ಷಕರ ಸರ್ಕಾರ ಸ್ಪಂದಿಸಿದ ಹಿನ್ನಲೆ ಆತಹತ್ಯೆ ಹಾದಿ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

First published: