• Home
  • »
  • News
  • »
  • jobs
  • »
  • Education: ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ತಾಲಿಬಾನ್​ ಅಡ್ಡಿ, ನಿಜಕ್ಕೂ ಆಗಿದ್ದೇನು? ಇಲ್ಲಿದೆ ಮಾಹಿತಿ

Education: ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ತಾಲಿಬಾನ್​ ಅಡ್ಡಿ, ನಿಜಕ್ಕೂ ಆಗಿದ್ದೇನು? ಇಲ್ಲಿದೆ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶಿಕ್ಷಣದಿಂದ ವಂಚಿತರಾಗುತ್ತಿರುವವರು ವಿದ್ಯಾರ್ಥಿನಿಯರು ಇಷ್ಟು ವರ್ಷ ಕಷ್ಟಪಟ್ಟು ಅಭ್ಯಾಸ ಮಾಡಿ ಶಿಕ್ಷಣ ಪಡೆದುಕೊಳ್ಳುತ್ತಿದ್ದವರಿಗೆ ಏಕಾ ಏಕಿ ಈ ರೀತಿಯಾಗಿ ಶಿಕ್ಷಣವನ್ನು ತಕ್ಷಣ ನಿಲ್ಲಿಸಿವಂತೆ ಸೂಚಿಸಿದಾಗ ಪ್ರತಿಯೊಬ್ಬರ ಕಣ್ಣಲ್ಲೂ ನೀರು ಕಾಣಿಸಿಕೊಂಡಿರುವುದು ನಿಜ.

  • Share this:

ಜಹ್ರಾ ಎಂಬ ಮಹಿಳೆ (Women) ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಕಲಾ (Arts) ಪದವಿಯನ್ನು ಪೂರ್ಣಗೊಳಿಸಲು ಅಂತಿಮ ಪರೀಕ್ಷೆಗಳನ್ನು ಬರೆಯಲು ತಯಾರಿ ನಡೆಸುತ್ತಿದ್ದಳು. ಆದರೆ ಸಂಜೆ ಹೊತ್ತಿಗೆ ಅವಳಿಗೆ ತಿಳಿದುಬಂತು ಅವಳನ್ನು ಪರೀಕ್ಷೆಗೆ (Exam) ಹಾಜರಾಗಲು ಕಾಲೇಜು ಒಪ್ಪುತ್ತಿಲ್ಲ ಎಣದು. ಇದಕ್ಕೆ ಕಾರಣ ಏನೆಂದರೆ ಅವಳು ಹೆಣ್ಣು ಎಂಬುದಾಗಿತ್ತು. ಹೌದು ಈಗ ಅಫ್ಘಾನಿಸ್ತಾನ ವಿದ್ಯಾರ್ಥಿನಿಯರಿಗೆ ಶಿಕ್ಷಣ (Education) ನೀಡುವುದಿಲ್ಲ ಎಂಬ ನಿರ್ಧಾರವನ್ನು ತೆಗೆದುಕೊಂಡಿದೆಯಂತೆ.


ತಾಲಿಬಾನ್ ಸರ್ಕಾರವು ಎಲ್ಲಾ ಮಹಿಳೆಯರನ್ನು ವಿಶ್ವವಿದ್ಯಾನಿಲಯಕ್ಕೆ ಹಾಜರಾಗದಂತೆ ಅಮಾನತುಗೊಳಿಸಿ ಹೇಳಿಕೆಯನ್ನು ನೀಡಿತದೆ. ಹೆಚ್ಚಿನ ಅಫ್ಘಾನ್ ಹುಡುಗಿಯರು ಉನ್ನತ ಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದೇ ಕೇವಲ ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದು ಸುಮ್ಮನಾಗುವ ಪರಿಸ್ಥಿತಿ ಅಲ್ಲಿ ಎದುರಾಗಿದೆ.


ಉನ್ನತ ಶಿಕ್ಷಣ ಸಚಿವಾಲಯದಿಂದಲೇ ಬಂದಿದೆ ಮಾಹಿತಿ


ಉನ್ನತ ಶಿಕ್ಷಣ ಸಚಿವಾಲಯದ ವಕ್ತಾರ ಜಿಯಾವುಲ್ಲಾ ಹಶ್ಮಿ ಅವರು ಈ ಕುರಿತಾದ ಪ್ರಕಟಣೆಯನ್ನು ಸ್ವತಃ ಟ್ವೀಟ್ ಮಾಡಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳು ದ್ವನಿ ಸಂದೇಶದ ಮೂಲಕ ಇನ್ಯಾರದೋ ಹೆಸರಿನಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಅಸಹಾಯಕರಾಗಿದ್ದಾರೆ.
ವಿದ್ಯಾರ್ಥಿನಿಯರ ಪರೀಕ್ಷೆ ಹತ್ತಿರವಿರುವ ಸಂದರ್ಭದಲ್ಲೇ ಈ ರೀತಿ ಮಾಡಿರುವುದು ಎಲ್ಲರಿಗೂ ಬೇಸರ ತಂದಿದೆ. ತಾಲಿಬಾನ್ ವಿಶ್ವವಿದ್ಯಾಲಯಗಳ ಗೇಟ್​ ಮುಚ್ಚಿದ್ದು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದಂತೆ ಮಾಡಲಾಗಿದೆ.


ಇದನ್ನೂ ಓದಿ: Kabul Bomb Attack: ಕಾಬೂಲ್‌ನ ಶಾಲೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, 100 ಮಕ್ಕಳು ಸಾವನ್ನಪ್ಪಿರುವ ಶಂಕೆ!


ಮಹಿಳೆಯರ ಆಸೆ ಕನಸುಗಳನ್ನು ಹತ್ತಿಕುವ ಕಾರ್ಯವನ್ನು ತಾಲಿಬಾನ್​ ಮಾಡುತ್ತಿದೆ. ವೈದ್ಯ ಹಾಗೂ ಎಂಜಿನಿಯರ್​ ಆಗಲು ಬಯಸುವ ವಿದ್ಯಾರ್ಥಿನಿಯರ ಆಸೆಗೆ ನಿರೆರೆಚಿದಂತಾಗಿದೆ. ಸಾರ್ವಜನಿಕ ಹಾಗೂ ಖಾಸಗಿ ಶಾಲೆಗಳೆರಡಕ್ಕೂ ಅಧಿಕಾರಿಗಳು ಪತ್ರ ಬರೆದು ವಿದ್ಯಾರ್ಥಿನಿಯರನ್ನು ಪರೀಕ್ಷೆಗೆ ಸೇರಿಸದಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.


ಸಾವಿರಾರು ವಿದ್ಯಾರ್ಥಿನಿಯರಿಗೆ ಶಿಕ್ಷಣವಿಲ್ಲ


ನೇದಾ ಮೊಹಮದ್​ ನದೀಮ್​ ಅವರು ಸಹಿ ಹಾಕಿರುವ ಈ ಪತ್ರದಲ್ಲಿ ಸ್ಪಷ್ಟವಾಗಿ ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ. ತಾಲಿಬಾನ್​ ದೇಶದಾತ್ಯಂತ ಹಲವಾರು ಅಂದರೆ ಸಾವಿರ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣವನ್ನು ಪೂರೈಸುತ್ತಿದ್ದರು. ಈಗ ಒಂದೇ ಬಾರಿ ಈ ರೀತಿಯಾಗಿರುವುದರಿಂದ ಅವರೆಲ್ಲರಿಗೂ ದುಃಖವಾಗಿದೆ.


ಈ ಹಿಂದೆ ಇನ್ನೊಂದು ಘಟನೆ ಜರುಗಿತ್ತು
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಮಹಿಳೆಯರ ಶಿಕ್ಷಣ ವ್ಯವಸ್ಥೆ ಕುಗ್ಗಿ ಹೋಗಿದೆ. ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಂಡಿರುವ ತಾಲಿಬಾನಿಗಳು ಯಾವ ಪ್ರತಿಭಟನೆಗಳಿಗೂ ಬಗ್ಗುತ್ತಿಲ್ಲ ಎಂಬುದು ತಿಳಿದು ಬಂದಿದೆ. ಯಾರ ಒತ್ತಡಕ್ಕೂ ತಲೆ ಬಾಗುತ್ತಿಲ್ಲ. ಇತ್ತೀಚೆಗೆ ಅಂಥಹದ್ದೇ ಘಟನೆ ಬೆಳಕಿಗೆ ಬಂದಿದೆ. ಬುರ್ಖಾ ಧರಿಸದ ಕಾರಣ ವಿಶ್ವವಿದ್ಯಾಲಯಕ್ಕೆ ಪ್ರವೇಶ ನಿರಾಕರಿಸಿದ ತಾಲಿಬಾನ್ ಅಧಿಕಾರಿಯೊಬ್ಬ ತಮ್ಮ ಶಿಕ್ಷಣದ ಹಕ್ಕಿಗಾಗಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿನಿಯರನ್ನು ಥಳಿಸುವ ಆಘಾತಕಾರಿ ದೃಶ್ಯಗಳು ಹೊರಬಂದಿದೆ. 


ಕರ್ನಾಟಕದಲ್ಲಿ ಹಿಜಾಬ್​ ವಿರುದ್ಧ ನಡೆದ ವಾದ ಪ್ರತಿವಾದಗಳಂತೆ ಅಲ್ಲಿ ವಾದಕ್ಕೂ ಅವಕಾಶ ನೀಡದೆ ವಿದ್ಯಾರ್ಥಿನಿಯರನ್ನು ಪರೀಕ್ಷೆ ಬರೆಯಲು ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ. ಈ ಘಟನೆಯು ಈಶಾನ್ಯ ಅಫ್ಘಾನಿಸ್ತಾನದ ಬಡಾಕ್ಷನ್ ವಿಶ್ವವಿದ್ಯಾಲಯದ ಗೇಟ್‌ಗಳ ಹೊರಗೆ ಭಾನುವಾರ ನಡೆದಿದೆ.


ಅಸಹಾಯಕ ವಿದ್ಯಾರ್ಥಿನಿಯರು


ಈ ಎಲ್ಲಾ ಕಾರಣದಿಂದ ಇಲ್ಲಿ ವಂಚಿತರಾಗುತ್ತಿರುವವರು ವಿದ್ಯಾರ್ಥಿನಿಯರು ಇಷ್ಟು ವರ್ಷ ಕಷ್ಟಪಟ್ಟು ಅಭ್ಯಾಸ ಮಾಡಿ ಶಿಕ್ಷಣ ಪಡೆದುಕೊಳ್ಳುತ್ತಿದ್ದವರಿಗೆ ಏಕಾ ಏಕಿ ಈ ರೀತಿಯಾಗಿ ಶಿಕ್ಷಣವನ್ನು ತಕ್ಷಣ ನಿಲ್ಲಿಸಿವಂತೆ ಸೂಚಿಸಿದಾಗ ಪ್ರತಿಯೊಬ್ಬರ ಕಣ್ಣಲ್ಲೂ ನೀರು ಕಾಣಿಸಿಕೊಂಡಿರುವುದು ನಿಜ. ಮತ್ತು ಈ ರೀತಿಯ ನಿಲುವಿನಿಂದಾಗಿ ವಿದ್ಯಾರ್ಥಿನಿಯರು ಅಸಹಾಯಕರಾಗಿದ್ದಾರೆ

First published: