2nd PUC Result: ತಾಯಿ ಮಗಳು ಇಬ್ಬರು ಒಂದೇ ಬಾರಿ ಪಿಯುಸಿ ಪಾಸ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಿಂದಿನ ಬಾರಿ ಅರ್ಥಶಾಸ್ತ್ರದಲ್ಲಿ ಇವರು ಫೇಲ್ ಆಗಿದ್ದರಂತೆ. ಆದರೆ ಈ ಬಾರಿ ಎಲ್ಲಾ ವಿಷಯಗಳಲ್ಲೂ ಪಾಸ್​ ಆಗಿದ್ದಾರೆ. ಅವರಿಗೆ ಓದಲು ಸಮಯ ಇಲ್ಲದಿದ್ದರೂ ಸಹ ಕೆಲವು ಸಂದರ್ಭದಲ್ಲಿ ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಂಡು ಓದಿ ಪಾಸ್​ ಆಗಿದ್ದಾರೆ. ಪಾಸ್​ ಆಗುವಲ್ಲಿ ಯಶಸ್ವಿಯಾಗಿದ್ದೇನೆ ಎಂದು 249 ಅಂಕಗಳನ್ನು ಗಳಿಸಿದ ಗೀತಾ ಹೇಳಿದರು.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Dakshina Kannada, India
  • Share this:

ಮಂಗಳೂರು: ಎರಡು ವರ್ಷಗಳ ಹಿಂದೆ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಒಟ್ಟಿಗೆ ತೇರ್ಗಡೆಯಾಗಿದ್ದ ಸುಳ್ಯದ ತಾಯಿ ಮತ್ತು ಮಗಳು ಈ ಬಾರಿ ಪಿಯು ಪರೀಕ್ಷೆಯಲ್ಲಿ ಪಾಸ್​ ಆಗಿದ್ದಾರೆ. ತಾಯಿ (Mother) ಮಗಳು ಇಬ್ಬರೂ ಒಂದೇ ಬಾರಿ ಪಾಸ್​ ಆಗುವುದು ನಿಜಕ್ಕೂ ಒಂದು ಕುತೂಹಲಕಾರಿ ಸಂಗತಿ. ಅದರೆ ಮಂಗಳೂರಿನ ಸುಳ್ಯದಲ್ಲಿ ತಾಯಿ ಹಾಗೂ ಮಗಳು ಇಬ್ಬರೂ ಸಹ ಒಂದೇ ಬಾರಿ ಪಾಸ್ (Pass)​ ಆಗಿರುವ ಘಟನೆ (Incident) ಜರುಗಿದೆ. ತಾಯಿ ಹಾಗೂ ಮಗಳು ಇಬ್ಬರೂ ಈ ವಿಚಾರವಾಗಿ ತುಂಬಾ ಸಂತಸದಿಂದಿದ್ದಾರೆ. 


ಪಿಯು ಪರೀಕ್ಷೆಯಲ್ಲಿ ಈಗ ಪಾಸ್​ ಆದ ಇವರು ಎರಡು ವರ್ಷಗಳ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟಿಗೆ ತೇರ್ಗಡೆಯಾಗಿದ್ದ ಸುಳ್ಯದ ತಾಯಿ-ಮಗಳು ಈ ಬಾರಿ ಪಿಯು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಸುಳ್ಯ ತಾಲೂಕಿನ ಜಯನಗರ ನಿವಾಸಿಗಳಾದ ಗೃಹರಕ್ಷಕ ದಳದ ಗೀತಾ ಎನ್ ಮತ್ತು ಅವರ ಪುತ್ರಿ ತ್ರಿಶಾ ಕೆ.ಆರ್ ಕ್ರಮವಾಗಿ ಕಲಾ ಮತ್ತು ವಾಣಿಜ್ಯ ವಿಷಯದಲ್ಲಿ ಪಿಯು ತೇರ್ಗಡೆಯಾಗಿದ್ದಾರೆ.


ಇದನ್ನೂ ಓದಿ: 2nd PUC Result: ಪ್ರತಿನಿತ್ಯ 50 ಕಿಲೋ ಮೀಟರ್​ ಪ್ರಯಾಣಿಸಿ ಕಲಿತ ಈ ಹುಡುಗಿ ರಾಜ್ಯಕ್ಕೆ ದ್ವಿತೀಯ


ಶುಕ್ರವಾರ ಫಲಿತಾಂಶ ಪ್ರಕಟವಾಗಿದೆ. 1993-94ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಅಲ್ಲಿಗೇ ನಿಲ್ಲಿಸಿ ಬಿಟ್ಟಿದ್ದರು. ನಂತರ ತಾನು ಯಾಕೆ ಶಿಕ್ಷಣ ಮುಂದುವರೆಸಬಾರದು? ಎಂಬ ಪ್ರಶ್ನೆಯನ್ನು ಅವರಿಗವರೇ ಕೇಳಿಕೊಂಡು ತಾನೂ ಪರೀಕ್ಷೆ ಬರೆಯುತ್ತೇನೆ ಎಂದು ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಕಟ್ಟಿ ಪಾಸ್​ ಮಾಡಲು ಆಲೋಚಿಸುತ್ತಾರೆ.


ಇವರು ಹಿಂದಿನ ವರ್ಷವೂ ಪರೀಕ್ಷೆ ಬರೆದಿದ್ದರಂತೆ ಆದರೆ ಒಂದು ವಿಷಯದಲ್ಲಿ ಫೇಲ್ ಆಗಿದ್ದರಂತೆ. ಆದರೆ ನಂತರ ಅಂದರೆ ಈ ವರ್ಷ ಮತ್ತೆ ಪ್ರಯತ್ನಪಟ್ಟು ಪರೀಕ್ಷೆ ಬರೆದಿದ್ದಾರೆ ಇದರಿಂದಾಗಿ ಮಗಳು ಮತ್ತು ತಾಯಿ ಇಬ್ಬರೂ ಸಹ ಒಂದೇ ಬಾರಿ ಪರಿಕ್ಷೆಯಲ್ಲಿ ಪಾಸ್​ ಆಗಿದ್ದಾರೆ.



ಹಿಂದಿನ ಬಾರಿ ಅರ್ಥಶಾಸ್ತ್ರದಲ್ಲಿ ಇವರು ಫೇಲ್ ಆಗಿದ್ದರಂತೆ. ಆದರೆ ಈ ಬಾರಿ ಎಲ್ಲಾ ವಿಷಯಗಳಲ್ಲೂ ಪಾಸ್​ ಆಗಿದ್ದಾರೆ. ಅವರಿಗೆ ಓದಲು ಸಮಯ ಇಲ್ಲದಿದ್ದರೂ ಸಹ ಕೆಲವು ಸಂದರ್ಭದಲ್ಲಿ ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಂಡು ಓದು ಪಾಸ್​ ಆಗಿದ್ದಾರೆ. ಪಾಸ್​ ಆಗುವಲ್ಲಿ ಯಶಸ್ವಿಯಾಗಿದ್ದೇನೆ ಎಂದು 249 ಅಂಕಗಳನ್ನು ಗಳಿಸಿದ ಗೀತಾ ಹೇಳಿದರು.


ಇನ್ನು ಮುಂದೆ ಓದುವುದನ್ನು ಮುಂದುವರಿಸುತ್ತೀರಾ ಎಂಬ ಪ್ರಶ್ನೆಗೆ ಗೀತಾ ಅವರಿಗೆ ಕಷ್ಟವಾಗುತ್ತದೆ ಎಂದು ಹೇಳಿದರು. ಅವಳು ಐದು ಮಕ್ಕಳ ತಾಯಿ-ಮೂರು ಹುಡುಗಿಯರು ಮತ್ತು ಇಬ್ಬರು ಗಂಡುಮಕ್ಕಳಿದ್ದಾರೆ ಎಂದು. “ನನ್ನ ಹಿರಿಯ ಮಗಳು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ, ಎರಡನೆಯವಳು ಕಂಪ್ಯೂಟರ್ ಕೋರ್ಸ್ ಓದುತ್ತಿದ್ದಾಳೆ ಮತ್ತು ಮೂರನೆಯ ಮಗಳು ನನ್ನೊಂದಿಗೆ ಪಿಯುಸಿ ಪಾಸಾಗಿದ್ದಾಳೆ. ಇಬ್ಬರು ಪುತ್ರರು ಎಸ್‌ಎಸ್‌ಎಲ್‌ಸಿ ಮತ್ತು ಒಂಬತ್ತನೇ ತರಗತಿ ಓದುತ್ತಿದ್ದಾರೆ ಅವರು ಹೇಳಿದ್ದಾರೆ. ಇವರ ಪತಿ ಕೂಲಿ ಕೆಲಸ ಮಾಡುತ್ತಾರೆ.


ಬಡತನದಲ್ಲಿ ಅರಳಿದ ಪ್ರತಿಭೆಗಳು


ನಿನ್ನೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳ ಸಾಧನೆಯಿಂದ ಪಾಲಕರು ತುಂಬಾ ಸಂತೋಷದಿಂದಿದ್ದಾರೆ. ಹಲವಾರು ಬಡ ಮಕ್ಕಳು ಕಷ್ಟಪಟ್ಟು ಓದಿ ತಮ್ಮ ಶಾಲೆಗೆ ಹಾಗೂ ಶಿಕ್ಷಕರಿಗೆ ಹೆಮ್ಮೆ ತಂದಿದ್ದಾರೆ. ಅಂತಹ ಒಂದು ಉದಾಹರಣೆ ಇಲ್ಲಿದೆ ನೋಡಿ. ಎಂದಿನಂತೆ ಈ ವರ್ಷವೂ ಕೂಡಾ ಅಂಕ ಗಳಿಕೆಯಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ. ಈ ವಿದ್ಯಾರ್ಥಿನಿಯರು ಮಾಡಿದ ಸಾಧನೆ  ನೋಡಿ. ಮನೆಯಲ್ಲಿ ಕಷ್ಟ ಹಾಗೂ ಬಡತನ ಇದ್ದರೂ ಈ ವಿದ್ಯಾರ್ಥಿನಿಯರು ಎಷ್ಟು ಅಂಕ ಗಳಿಸಿದ್ದಾರೆ ನೋಡಿ.

First published: