• ಹೋಂ
  • »
  • ನ್ಯೂಸ್
  • »
  • Jobs
  • »
  • Education News: ಕಲಿಕೆಯಲ್ಲಿ ಕುಂದಿದ ಆಸಕ್ತಿ, 634 ವಿದ್ಯಾರ್ಥಿಗಳು ಶಾಲೆಯಿಂದ ಹೊರಕ್ಕೆ

Education News: ಕಲಿಕೆಯಲ್ಲಿ ಕುಂದಿದ ಆಸಕ್ತಿ, 634 ವಿದ್ಯಾರ್ಥಿಗಳು ಶಾಲೆಯಿಂದ ಹೊರಕ್ಕೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ಶಾಲೆಯಿಂದ ಹೊರಗುಳಿಯಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿದೆ. ಅನಾರೋಗ್ಯ, ಪೋಷಕರ ನಿರಾಸಕ್ತಿ, ಮಕ್ಕಳ ನಿರಾಸಕ್ತಿ, ಸಾರಿಗೆ ವ್ಯವಸ್ಥೆ ಇಲ್ಲದಿರುವುದು, ಶಾಲೆ ದೂರ ಇರುವುದು, ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಒಟ್ಟು 16 ಕಾರಣಗಳನ್ನು ಇಲಾಖೆ ಪಟ್ಟಿ ಮಾಡಿದೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Karnataka, India
  • Share this:

ಶಾಲೆ ಬಿಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಎಲ್ಲಾ ವಿದ್ಯಾರ್ಥಿಗಳು (Students) ಕಡ್ಡಾಯ ಶಿಕ್ಷಣ ಪದ್ದತಿ ಇರುವುದರಿಂದ ಶಾಲೆಗೆ ಹೋಗುತ್ತಿದ್ದಾರೆ. ಆದರೆ ಈ ವರ್ಷ ಹಲವಾರು ಕಾರಣದಿಂದ ಶಾಲೆ (School) ಬಿಟ್ಟ ವಿದ್ಯಾರ್ಥಿಗಳ ಸಂಖ್ಯೆ ಒಟ್ಟು 634 ಕ್ಕೆ ತಲುಪಿರುವುದು ಬೇಸರದ ಸಂಗತಿ.  ಇವರಲ್ಲಿ 403 ಬಾಲಕರು ಹಾಗೂ 231 ಬಾಲಕಿಯರು ಎಂದು ಗುರುತಿಸಲಾಗಿದೆ.  2023 –24ನೇ ಸಾಲಿಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು () ಇತ್ತೀಚೆಗಷ್ಟೆ ಮುಗಿಸಿದ್ದು ಈಗ ಆ ವರದಿಯಲ್ಲಿ ಈ ಸಂಗತಿ ತಿಳಿದುಬಂದಿದೆ. ಅದರಲ್ಲೂ ಬಾಲಕರ ಸಂಖ್ಯೆ ಹೆಚ್ಚಿದೆ. 


ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ಶಾಲೆಯಿಂದ ಹೊರಗುಳಿಯಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿದೆ. ಅನಾರೋಗ್ಯ, ಪೋಷಕರ ನಿರಾಸಕ್ತಿ, ಮಕ್ಕಳ ನಿರಾಸಕ್ತಿ, ಸಾರಿಗೆ ವ್ಯವಸ್ಥೆ ಇಲ್ಲದಿರುವುದು, ಶಾಲೆ ದೂರ ಇರುವುದು, ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಒಟ್ಟು 16 ಕಾರಣಗಳನ್ನು ಇಲಾಖೆ ಪಟ್ಟಿ ಮಾಡಿದೆ.


ಕಳೆದ ವರ್ಷ ಪಂಚಾಯತ್‌ ರಾಜ್‌ ಇಲಾಖೆ ಈ ಸಮೀಕ್ಷೆ ನಡೆಸಿತ್ತು. ಜಿಲ್ಲೆಯಲ್ಲಿ 750 ಮಕ್ಕಳು ಹೊರಗುಳಿದಿರುವುದು ಪತ್ತೆಯಾಗಿತ್ತು. ಅವರಲ್ಲಿ 16 ವರ್ಷದ ಕೆಳಗಿನ ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ಪಾಲಕರೇ ಹಿಂಜರಿಯುತ್ತಿರುವುದು ಬೇಸರದ ಸಂಗತಿ.


ಇದನ್ನೂ ಓದಿ: Union Budget 2023 LIVE: ಸಂಸತ್ ಭವನಕ್ಕೆ ಬಂದ ಹಣಕಾಸು ಸಚಿವೆ, ಕೆಲವೇ ಕ್ಷಣಗಳಲ್ಲಿ ಸಂಪುಟ ಸಭೆ


ಪೋಷಕರ ನಿರಾಸಕ್ತಿಯಿಂದ ಶಾಲೆ ಬಿಟ್ಟ ವಿದ್ಯಾರ್ಥಿಗಳು
ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಲ್ಲಿ ಇರುವ ನಿರಾಸಕ್ತಿಯಿಂದಾಗಿ 166 ಗಂಡು ಮಕ್ಕಳು, 87 ಹೆಣ್ಣುಮಕ್ಕಳು ಸೇರಿದಂತೆ 253 ಮಕ್ಕಳು ಶಾಲೆಗೆ ಹೋಗಿಲ್ಲ. ‌ ಮಕ್ಕಳಲ್ಲಿರುವ ನಿರಾಸಕ್ತಿಯಿಂದಾಗಿ 181 ಮಕ್ಕಳು ಶಾಲೆಗಳಿಗೆ ದಾಖಲಾಗಿಲ್ಲ. ಇವರಲ್ಲಿ 126 ಮಂದಿ ಬಾಲಕರಾದರೆ ಉಳಿದ 55 ಮಂದಿ ಬಾಲಕಿಯರಾಗಿದ್ದಾರೆ. ಕೆಲವರ ಪಾಲಕರು ನಿರಾಸಕ್ತಿ ತೋರಿದರೆ ಇನ್ನು ಕೆಲವು ವಿದ್ಯಾರ್ಥಿಗಳಿಗೇ ಶಾಲೆಗೆ ತೆರಳಲು ಆಸಕ್ತಿ ಇಲ್ಲ. ಈ ಕಾರಣದಿಂದಲೇ ಹಲವಾರು ವಿದ್ಯಾರ್ಥಿಗಳು ಶಾಲೆ ಬಿಟ್ಟಿರುವುದು ತಿಳಿದು ಬಂದಿದೆ.




ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಸಮಸ್ಯೆ


ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಕಾರಣಗಳಿಂದ 33 ಬಾಲಕಿಯರು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ವರದಿ ಹೇಳಿದೆ. ಅನಾರೋಗ್ಯ ಹಾಗೂ ಇತರೆ ಪಿರಿಯಡ್ಸ್​​ ಸಂಬಂಧಿತ ಕಾರಣದಿಂದ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನು ಮುಂದುವರಿಸಿಲ್ಲ ಎಂದು ತಿಳಿದು ಬಂದಿದೆ. ಇನ್ನು ಕೆಲ ಮಕ್ಕಳಿಗೆ ಶಾಲೆ ದೂರ ಇದೆ. ಓಡಾಡಲು ಸರಿಯಾದ ಯಾವ ಸೌಲಭ್ಯವೂ ಇಲ್ಲದ ಕಾರಣ ಈ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಂದರ್ಭ ಎದುರಾಗಿದೆ. ಈ ಸಮಸ್ಯೆಯಿಂದಾಗಿ ಒಟ್ಟು 28 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ. ಈ ಪೈಕಿ ಹನೂರು ತಾಲ್ಲೂಕೊಂದರಲ್ಲೇ 27 ಮಕ್ಕಳಿದ್ದಾರೆ. ಇನ್ನೊಬ್ಬ ಬಾಲಕ ಚಾಮರಾಜನಗರದವನಾಗಿದ್ದಾನೆ ಎಂದು ಪ್ರಜಾವಾಣಿ ವರದಿ ಮಾಡಿದೆ. 23 ಬಾಲಕರು ಶಾಲೆಗೆ ಹೋಗದೆ ದುಡಿಮೆಯಲ್ಲಿ ತೊಡಗಿರುವುದು ಸಮೀಕ್ಷೆಯ ವೇಳೆ ತಿಳಿದು ಬಂದಿದೆ.


16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಲಾಗುತ್ತದೆ


ಬುಡಕಟ್ಟು ಸಮುದಾಯದ 18 ಬಾಲಕರು ಹಾಗೂ ನಾಲ್ವರು ಬಾಲಕಿಯರು ಸೇರಿದಂತೆ 24 ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ವಲಸೆಯ ಕಾರಣಕ್ಕೆ ತಲಾ 12 ಹೆಣ್ಣು ಹಾಗೂ ಗಂಡು ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಪ್ರೌಢಾವಸ್ಥೆ ತಲುಪಿರುವ ಕಾರಣಕ್ಕೆ ಐವರು ಹೆಣ್ಣುಮಕ್ಕಳು, ನಾಲ್ವರು ಬಾಲಕಾರ್ಮಿಕರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ತಿಳಿದು ಬಂದಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿ, ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುವುದು ಎಂದು  ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎನ್‌.ಮಂಜುನಾಥ್‌ ತಿಳಿಸಿದ್ಧಾರೆ. ಪೋಷಕರೇ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿರುವುದು ನಿಜಕ್ಕೂ ಬೇಸರ ಉಂಟುಮಾಡಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು