ಹಾವೇರಿ: ಹಾವೇರಿ ಶಾಲೆಗಳು ಈಗ ಬಣ್ಣದಿಂದ ಸಿಂಗಾರಗೊಳ್ಳುವ ಸಮಯ ಹತ್ತಿರ ಬಂದಿದೆ. ಕನ್ನಡ ಶಾಲೆಗೆ (School) ಬಣ್ಣದ ಕಲರವ ಎಂಬ ಅಭಿಯಾನದ ಮೂಲಕ ಶತಮಾನೋತ್ಸವದ ಸಂಭ್ರಮದಲ್ಲಿರುವ ಸರ್ಕಾರಿ ಶಾಲೆಗಳಿಗೆ (Government schools) ಸುಣ್ಣ ಬಣ್ಣ ಬಳಿದು ಅಲಂಕಾರ ಮಾಡುತ್ತಿದ್ದಾರೆ. ಈ ಕಾರ್ಯ ಮಾಡುತ್ತಿರುವವರು ಮತ್ಯಾರು ಅಲ್ಲ ರಾಜ್ಯೋತ್ಸವ ಪುರಸ್ಕಾರ ಪಡೆದ ಸುಮನಾ ಫೌಂಡೇಷನ್ (Sumana Foundation). ಈ ಫೌಂಡೇಷನ್ ವತಿಯಿಂದ ಈ ಸಾಮಾಜಿಕ ಕಾರ್ಯವಾಗಿ ಶಾಲೆಗೆ ಬಣ್ಣ ಹಚ್ಚಲಾಗುತ್ತಿದೆ.
ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ಗೆ ಬಣ್ಣ
ಖ್ಯಾತ ಸಾಹಿತಿಗಳಾದ ಪಾಟೀಲ್ ಪುಟ್ಟಪ್ಪ, ಚಂಪಾ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು ಓದಿದ್ದ ಶಾಲೆ ಇದಾಗಿದ್ದು ಹಲವು ಐತಿಹಾಸಿಕ ದಾಖಲೆಗಳು ಈ ಶಾಲೆಯಲ್ಲಿ ನಡೆದಿದೆ. ಸಮಾಜದ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಈ ಶಾಲೆಯು ಮಹತ್ವದ ಪಾತ್ರ ವಹಿಸಿದೆ. ಹಾವೇರಿಯ ಮುನ್ಸಿಪಲ್ ಶಾಲೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ವಚ್ಚತೆಗೆ ಆದ್ಯತೆ ನೀಡಿದೆ. ಈ ಶಾಲೆ ಇದೀಗ ಮತ್ತೆ ಹೊಸ ರೂಪ ಪಡೆದುಕೊಂಡಿದೆ.
ಹಲವರ ಪುಣ್ಯಪಾದ ಸ್ಪರ್ಷಿಸಿದ ಶಾಲೆ
ಮಹತ್ಮಾಗಾಂಧಿ, ಸುಭಾಷಚಂದ್ರ ಬೋಸ್,ನೆಹರು ಸೇರಿದಂತೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರೂ ಸಹ ಈ ಶಾಲೆಗೆ ಭೇಟಿ ನೀಡಿದ್ದರು ಅದೆಷ್ಟೋ ಮಹಾನ್ ವ್ಯಕ್ತಿಗಳ ಪುಣ್ಯಪಾದ ಸ್ಪರ್ಷಿಸಿದ ಅಂಗಳ ಈ ಶಾಲೆಯದ್ದಾಗಿದೆ. ಈ ಶಾಲೆಯಲ್ಲಿ ಅಪಾರ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: UPSC Toppers: ಯುಪಿಎಸ್ಸಿ 1st Rank ಸಾಧಕರು ಇವರು, ಒಟ್ಟಾರೆ ಗಳಿಸಿದ ಮಾರ್ಕ್ಸ್ ಎಷ್ಟು ಗೊತ್ತೇ?
ರಾಜ್ಯಾದ್ಯಂತ ಸಂಚರಿಸುತ್ತಿರುವ ಈ ತಂಡ ಸರ್ಕಾರಿ ಶಾಲೆಗೆ ಬಣ್ಣದ ಕಲರವ ಎಂಬ ಅಭಿಯಾನದಡಿ ಸಾಮಾಜಿಕ ಕಾರ್ಯ ಮಾಡುತ್ತಿದೆ. ಈಗಾಗಲೇ 50 ಶಾಲೆಗಳಿಗೆ ಬಣ್ಣ ಹಚ್ಚಿ ಮುಗಿಸಿದೆ. 51 ನೇ ಶಾಲೆಯನ್ನಾಗಿ ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಅನ್ನು ಆಯ್ಕೆ ಮಾಡಿಕೊಂಡಿದೆ. ಶಿಥಿಲಾವಸ್ಥೆ ಗೊಂಡಿರುವ ಶಾಲೆಯನ್ನು ಕಳೆದ ಮೂರು ದಿನಗಳಿಂದ 72ಜನರ ತಂಡ ಈ ಶಾಲೆಯನ್ನು ಸಿದ್ಧಗೊಳಿಸುತ್ತಿದೆ.
ಕಲರ್ ಫುಲ್ ಆದ ಶಾಲಾ ಕೊಠಡಿ
ಕಲರ್ ಫುಲ್ ಆದ ಶಾಲೆಯ ಕೊಠಡಿಗಳನ್ನ ಕಂಡು ವಿದ್ಯಾರ್ಥಿಗಳು ಫುಲ್ ಖುಷ್ ಆಗಿದ್ದಾರೆ. ನಮ್ಮ ಪೌಂಡೆಷನ್ ನ ಸಾಮಾಜಿಕ ಕಾರ್ಯ ಇದಾಗಿದ್ದು, ಸರ್ಕಾರಿ ಶಾಲೆಗಳನ್ನ ಉಳಿಸುವಂತಹ ಉದ್ದೇಶ ಹೊಂದಿದೆ ದಾರ್ಶನಿಕರು,ಸಾಹಿತಿಗಳು,ಹೋರಾಟಗಾರರು ಓದಿರುವ ಈ ಶಾಲೆ ಅಭಿವೃದ್ಧಿ ಪಡಿಸಿದ್ದು ಖುಷಿಯಾಗಿದೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಖುಷಿಯಾಗಿದ್ದಾರೆ ಎಂದು ಸುಮನ ಪೌಂಡೆಷನ್ ಸಂಸ್ಥಾಪಕಿ ಸುನಿತಾ ಸಂತಸ ವ್ಯಕ್ತಪಡಿಸಿದರು.
ಏಕ ಮನೋಭಾವದ 72 ಜನರ ತಂಡ
ಈ ರೀತಿಯ ಸಾಮಾಜಿಕ ಕಾರ್ಯ ಮಾಡುವ ಹಲವಾರು ಸಂಸ್ಥೆಗಳು ಸ್ಥಾಪನೆಯಾದರೆ ಅದು ವಿದ್ಯಾರ್ಥಿಗಳಿಗೆ ಹಾಗು ಹಲವಾರು ಶಾಲೆಗಳಿಗೆ ತುಂಬಾ ಸಹಾಯವಾಗುತ್ತದೆ. ಇನ್ನೂ ಹಲವು ಶಾಲೆಗಳಿಗೆ ಬಣ್ಣ ಹಚ್ಚುವುದರ ಮೂಲಕ ಇವರು ತಮ್ಮ ಕಾರ್ಯವನ್ನು ಮುಂದಿವರಿಸಲಿರುವುದು ಖುಷಿಯ ಸಂಗತಿ. ಇವರ ತಂಡದಲ್ಲಿ 72ಕ್ಕೂ ಹೆಚ್ಚು ಜನ ಇರುವುದು ತುಂಬಾ ಸಂತೋಷದಾಯಕ ಸಂಗತಿ. ಇಂತಹ ಪ್ರಾಮಾಣಿಕ ಪ್ರಯತ್ನಗಳಿಗೆ ಹಲವಾರು ಧನಾತ್ಮಕ ಸಹಾಯ ನೀಡುವುದು ಕೂಡಾ ಒಂದು ರೀತಿಯ ಬೆಂಬಲವಾಗಿರುತ್ತದೆ.
ಉತ್ತರ ಕನ್ನಡದಲ್ಲೂ ಇಂತದ್ದೇ ಕಾರ್ಯ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲಕರಡಿ ಕಿರಿಯ ಪ್ರಾಥಮಿಕ ಶಾಲೆಯನ್ನ ಇಲ್ಲಿನ ವಾಯುಪುತ್ರ ಯುವಕರ ತಂಡ ತಮ್ಮ ಸ್ವಂತ ವೆಚ್ಛದಲ್ಲಿ ಶಾಲೆಗೆ ಸುಣ್ಣ- ಬಣ್ಣ ಬಳಿದು ಶಾಲೆಯ ಅಂದ ಚಂದ ಹೆಚ್ಚಿಸಿ ಶಾಲೆಯನ್ನ ಶೃಂಗಾರಗೊಳಿಸಿದ್ದಾರೆ. ಕಲಕರಡಿ ಗ್ರಾಮದ ಸುಮಾರು ಹತ್ತಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಯುವಕರ ತಂಡ ಈ ಉತ್ತಮ ಕಾರ್ಯದಲ್ಲಿ ಭಾಗಿಯಾಗಿ ಸಮಾಜಸೇವೆ ಮೆರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ