• Home
  • »
  • News
  • »
  • jobs
  • »
  • Medical Students: ಪ್ರಾದೇಶಿಕ ಭಾಷೆಯಲ್ಲಿ ಕಲಿತರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತಾ? ಇಲ್ಲಿದೆ ಮಾಹಿತಿ

Medical Students: ಪ್ರಾದೇಶಿಕ ಭಾಷೆಯಲ್ಲಿ ಕಲಿತರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತಾ? ಇಲ್ಲಿದೆ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆಯಲ್ಲಿ ತರಬೇತಿ ಪಡೆದಿದ್ದರೆ, ಜ್ಞಾನ ಹಾಗೂ ಕೌಶಲ್ಯಗಳನ್ನು ಅಧ್ಯಯನ ನಡೆಸಲು ಹಾಗೂ ತಮ್ಮನ್ನು ತಾವು ನವೀಕರಿಸಿಕೊಳ್ಳಲು ವಿದೇಶಗಳಿಗೆ ಹೋಗಿ ಉದ್ಯೋಗ ಮಾಡಲು ಕಷ್ಟವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

  • Share this:

ಹಿಂದಿಯಲ್ಲಿ ವೈದ್ಯಕೀಯ (Medical) ಶಿಕ್ಷಣವನ್ನು ನೀಡುವ ಮಧ್ಯಪ್ರದೇಶ ಸರಕಾರದ ನಿರ್ಧಾರವು ಆರಂಭದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ (Rural Students) ಸಹಾಯ ಮಾಡಬಹುದಾದರೂ ಅವರ ಬೆಳವಣಿಗೆ ಮತ್ತು ಜ್ಞಾನದ ವ್ಯಾಪ್ತಿಯನ್ನು ಗಂಭೀರವಾಗಿ ಮಿತಿಗೊಳಿಸುತ್ತದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿಯೇ ಮೊದಲ ಬಾರಿಗೆ ಮಧ್ಯಪ್ರದೇಶ (Madhya Pradesh) ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಎಂಬಿಬಿಎಸ್ ಕೋರ್ಸ್‌ನ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ (Hindi) ಮೂರು ವಿಷಯಗಳ ಪಠ್ಯಪುಸ್ತಕಗಳನ್ನು ಅಕ್ಟೋಬರ್‌ನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದಾರೆ.


ದೇಶದ ಇತರ ಎಂಟು ಭಾಷೆಗಳಲ್ಲಿ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣವನ್ನು ಪ್ರಾರಂಭಿಸುವ ಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ಶಾ ತಿಳಿಸಿದ್ದಾರೆ.


ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಏಕೆ?
ದೇಶಾದ್ಯಂತ ವಿದ್ಯಾರ್ಥಿಗಳು ತಮ್ಮ ಭಾಷಾ ಕೀಳರಿಮೆಯನ್ನು ಬದಿಗೊತ್ತಿ ತಮ್ಮ ತಮ್ಮ ಭಾಷೆಗಳಲ್ಲಿಯೇ ಸಾಮರ್ಥ್ಯವನ್ನು ಪ್ರದರ್ಶಿಸಬೇಕು ಎಂಬುದು ಇದರ ಉದ್ದೇಶವಾಗಿದೆ. ಆದರೆ, ಭಾರತೀಯ ವೈದ್ಯಕೀಯ ಸಂಘದ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಜೆ.ಎ.ಜಯಲಾಲ್ ಪ್ರಕಾರ, ಭಾಷೆಗಳಲ್ಲಿ ವೈದ್ಯಕೀಯ ವಿಷಯಗಳನ್ನು ಕಲಿಯುವುದು ಸಾಮರ್ಥ್ಯವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಉಚಿತವಾಗಿದ್ದರೂ ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯನ್ನುಂಟು ಮಾಡಬಹುದು ಹಾಗೂ ಅವರ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು ಎಂದು ತಿಳಿಸಿದ್ದಾರೆ.


ಇಂಗ್ಲಿಷ್ ಭಾಷೆಯ ಪಾಂಡಿತ್ಯ ಬೇಕು
ಆಧುನಿಕ ಔಷಧ ಪದ್ಧತಿಯ ಬಗ್ಗೆ ಮಾತನಾಡುವಾಗ ಈ ಪದ್ಧತಿ ಸಾರ್ವತ್ರಿಕ ಔಷಧವಾಗಿದೆ. ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಆಚರಣೆಯಲ್ಲಿದೆ ಎಂದು ತಿಳಿಸಿದ ಜಯಲಾಲ್, ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆಯಲ್ಲಿ ತರಬೇತಿ ಪಡೆದಿದ್ದರೆ, ಜ್ಞಾನ ಹಾಗೂ ಕೌಶಲ್ಯಗಳನ್ನು ಅಧ್ಯಯನ ನಡೆಸಲು ಹಾಗೂ ತಮ್ಮನ್ನು ತಾವು ನವೀಕರಿಸಿಕೊಳ್ಳಲು ವಿದೇಶಗಳಿಗೆ ಹೋಗಲಾರರು ಎಂದು ಹೇಳಲಾಗುವುದಿಲ್ಲ ಈ ಸಮಯದಲ್ಲಿ ಇಂಗ್ಲಿಷ್‌ನಂತಹ ಭಾಷಾ ಪಾಂಡಿತ್ಯ ಅವರಿಗೆ ಅಗತ್ಯವಿರುತ್ತದೆ ಎಂದು ಜಯಲಾಲ್ ತಿಳಿಸಿದ್ದಾರೆ.


ಇದನ್ನೂ ಓದಿ: ಕಲಿಕೆಗೆ ಇದೆ ಹಲವಾರು ಆಯಾಮ, ನೀವೂ ಈ ರೀತಿ ಅಭ್ಯಾಸ ಮಾಡಿ ನೋಡಿ


ಪಠ್ಯಪುಸ್ತಕಗಳ ಮೂಲಕ ವೈದ್ಯಕೀಯ ಶಿಕ್ಷಣವನ್ನು ಕಲಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದು, ಇಂಗ್ಲಿಷ್‌ನಲ್ಲಿ ಬರೆಯಲಾದ ಅಂತರರಾಷ್ಟ್ರೀಯ ಸಂಶೋಧನಾ ಪ್ರಬಂಧಗಳು, ಜರ್ನಲ್‌ಗಳು ಮತ್ತು ಲೇಖನಗಳನ್ನು ಆಗಾಗ್ಗೆ ಓದುವ ಅಗತ್ಯವಿರುತ್ತದೆ ಎಂಬುದು ಜಯಲಾಲ್ ಅಭಿಪ್ರಾಯವಾಗಿದೆ. ಪ್ರಾದೇಶಿಕ ಭಾಷೆಯಲ್ಲಿ ಮೂಲಭೂತ ತಿಳುವಳಿಕೆಯನ್ನು ನೀಡಬಹುದು ಆದರೆ ಇದು ಕೌಶಲ್ಯಗಳನ್ನು ನವೀಕರಿಸಲು ಸಹಾಯ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.


ಉತ್ತರಾಖಂಡ ಸರಕಾರ, ತಮಿಳುನಾಡು ಸರಕಾರದ ಕ್ರಮ
ಮೊದಲ ಹಂತದಲ್ಲಿ ವೈದ್ಯಕೀಯ ಜೀವರಸಾಯನಶಾಸ್ತ್ರ, ಅಂಗರಚನಾಶಾಸ್ತ್ರ ಮತ್ತು ವೈದ್ಯಕೀಯ ಶರೀರಶಾಸ್ತ್ರದ ಹಿಂದಿ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ಮಧ್ಯಪ್ರದೇಶದ ಮುನ್ನಡೆಯನ್ನು ಅನುಸರಿಸಿ, ಉತ್ತರಾಖಂಡ ಸರ್ಕಾರವು ಮುಂದಿನ ಶೈಕ್ಷಣಿಕ ಅವಧಿಗಳಿಂದ ಜಾರಿಗೆ ತರಲು ಇದೇ ರೀತಿಯ ಕ್ರಮಗಳನ್ನು ಘೋಷಿಸಿದೆ.


ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರ ಅಭಿಪ್ರಾರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಪ್ರಕಾರ, ಮಧ್ಯಪ್ರದೇಶದ ಸರಕಾರಿ ಕಾಲೇಜುಗಳಲ್ಲಿ ಎಂಬಿಬಿಎಸ್ ಹಿಂದಿ ಪಠ್ಯಕ್ರಮವನ್ನು ಅಳವಡಿಸಿದ್ದು ಇದರ ಕುರಿತು ಅಧ್ಯಯನ ಕೈಗೊಂಡ ನಂತರ ಸಮಿತಿಯು ಕಾಲೇಜುಗಳಿಗೆ ಹೊಸ ಪಠ್ಯಕ್ರಮದ ಕರಡನ್ನು ಸಿದ್ಧಪಡಿಸುತ್ತದೆ ಎಂದು ತಿಳಿಸಿದ್ದಾರೆ. ಕಳೆದ ವಾರ, ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಕೂಡ ರಾಜ್ಯ ಸರಕಾರವು ಇದೀಗ ತಮಿಳಿನಲ್ಲಿ ಎಂಬಿಬಿಎಸ್ ಕೋರ್ಸ್‌ಗಳನ್ನು ಪರಿಚಯಿಸಲು ತೊಡಗಿದೆ ಮತ್ತು ಆ ನಿಟ್ಟಿನಲ್ಲಿ ಮೂವರು ಪ್ರಾಧ್ಯಾಪಕರ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.


ವಿದ್ಯಾರ್ಥಿಗಳಿಗೆ ಉತ್ತಮ ಶಾಲಾ ಶಿಕ್ಷಣ ಒದಗಿಸಿ
ಎಂಬಿಬಿಎಸ್ ವೈದ್ಯ ಹಾಗೂ IMA-ಜೂನಿಯರ್ ಡಾಕ್ಟರ್ಸ್ ನೆಟ್‌ವರ್ಕ್‌ನ ರಾಷ್ಟ್ರೀಯ ಕಾರ್ಯದರ್ಶಿ ಕರಣ್ ಜುನೇಜಾ ಮಾತನಾಡಿ, ಪ್ರಾದೇಶಿಕ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ಬದಲು ಮೂಲಸೌಕರ್ಯ ಮತ್ತು ಶಾಲಾ ಶಿಕ್ಷಣವನ್ನು ಸುಧಾರಿಸುವತ್ತ ಸರಕಾರ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಭಾಷೆ ಎಂದಿಗೂ ತೊಡಕಾಗುವುದಿಲ್ಲ ಎಂದು ತಿಳಿಸಿದ ಜುನೇಜಾ ಇಂಗ್ಲಿಷ್ ಹಿನ್ನಲೆ ಇಲ್ಲದೆ ವಿಷಯಗಳು ಹಾಗೂ ಭಾಷೆಯೊಂದಿಗೆ ವಿದ್ಯಾರ್ಥಿಗಳು ಉತ್ತಮವಾಗಿ ನಿರ್ವಹಿಸುವುದನ್ನು ತಾವು ಕಂಡಿರುವುದಾಗಿ ತಿಳಿಸಿದ್ದಾರೆ.


ಪರಿಸರಕ್ಕೆ ವಿದ್ಯಾರ್ಥಿಗಳು ಹೊಂದಿಕೊಳ್ಳುತ್ತಾರೆ ಹಾಗೂ ತಮ್ಮನ್ನು ಸುಧಾರಿಸಿಕೊಳ್ಳುತ್ತಾರೆ, ಹಾಗಾಗಿ ಹಿಂದಿ ಅಥವಾ ಇನ್ನಾವುದೇ ಭಾಷೆಗಳಲ್ಲಿ ಉನ್ನತ ಶಿಕ್ಷಣವನ್ನು ನೀಡುವುದು ವಿದ್ಯಾರ್ಥಿಗಳ ಬೆಳವಣಿಗೆಗೆ ಹಾನಿಕಾರಕ ಎಂದು ಜುನೇಜಾ ಅಭಿಪ್ರಾಯಪಟ್ಟಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಉತ್ತಮ ಶಿಕ್ಷಣವನ್ನು ನೀಡಿದರೆ ಅವರಿಗೆ ಭಾಷೆ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಭಾರತೀಯ ಭಾಷೆಯಲ್ಲಿ ತರಬೇತಿ ಪಡೆದ ವೈದ್ಯರಿಗೆ ತಮ್ಮನ್ನು ತಾವು ಉನ್ನತೀಕರಿಸಲು ಸಾಧ್ಯವಾಗುವುದಿಲ್ಲ ಎಂಬ ಕಿವಿಮಾತು ನೀಡಿದ್ದಾರೆ.

First published: