ಶಾಲೆ ಆರಂಭವಾಗಿ 9 ದಿನವಾದ್ರು ಕಾಫಿನಾಡಿನ ಈ ಶಾಲೆಗೆ (School) ಮಾತ್ರ ಮಕ್ಕಳನ್ನ ಕಳುಹಿಸುವುದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿರುವ ಓರ್ವ ಶಿಕ್ಷಕನ (Teacher) ವರ್ತನೆಗೆ ಇಲ್ಲಿನ ಜನ ಬೇಸತ್ತು ಹೋಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಗೋಳ ಸರ್ಕಾರಿ ಶಾಲೆಯ ಶಿಕ್ಷಕನ ವಿರುದ್ಧ ಪೋಷಕರು (Parents) ಕಿಡಿಕಾರಿದ್ದಾರೆ. ಕನ್ನಡ, ಹಿಂದಿ, ಇಂಗ್ಲೀಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಎಲ್ಲಾ ವಿಷಯಕ್ಕೂ (Subject) ಒಬ್ಬನೇ ಶಿಕ್ಷಕ. ಹಾಗಾದರೆ ಇದರ ಹಿಂದಿನ ಅಸಲಿಯತ್ತು ಏನಿದೆ ಎಂದು ತಿಳಿಯಲು ಮುಂದೆ ಓದಿ.
ಇನ್ನು ಈ ಶಾಲೆಯಲ್ಲಿ ಇರುವುದು ಒಂದೇ ಒಂದು ಕೊಠಡಿ. ಒಂದರಿಂದ ಐದನೇ ತರಗತಿಯ 9 ಜನ ಮಕ್ಕಳು ಇದೊಂದೇ ಕೊಠಡಿಯಲ್ಲಿ ಪಾಠ ಕೇಳಬೇಕು. ಇರೋದು ಒಬ್ಬನೇ ಶಿಕ್ಷಕ. ಆತ ಯಾರಿಗೆ ಯಾವ ಸಮಯದಲ್ಲಿ ಹೇಗೆ ಪಾಠ ಮಾಡಬಹುದು ನೀವೇ ಊಹಿಸಿ. ಯಾವ ತರಗತಿಯ ಯಾವ ಪಾಠವನ್ನು ಯಾವ ಮಕ್ಕಳು ಕೇಳುತ್ತಾರೆ ಎಂದು ಪಾಠ ಮಾಡುವ ಶಿಕ್ಷಕರಿಗೂ ಗೊತ್ತಿಲ್ಲ. ಕೇಳುವ ಮಕ್ಕಳಿಗೆ ಮೊದಲೇ ಗೊತ್ತಿಲ್ಲ.
ಶಾಲೆಗೆ ಸೂಕ್ತ ಕೊಠಡಿ ಹಾಗೂ ಶಿಕ್ಷಕರಿಗಾಗಿ ಸ್ಥಳೀಯರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ನೋಡ್ತೀವಿ, ಮಾಡ್ತೀವಿ, ಕಳಿಸ್ತೀವಿ ಅನ್ನೋ ಮೇಲಾಧಿಕಾರಿಗಳಿಂದ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಕಾರಣದಿಂದಲೂ 30 ಮಕ್ಕಳಿದ್ದ ಕಾಡಂಚಿನ ಕುಗ್ರಾಮದ ಶಾಲೆಯಲ್ಲಿ ಇಂದು ಇರುವುದು ಕೇವಲ ಒಂಬತ್ತು ಮಕ್ಕಳು ಮಾತ್ರ.
ಇದನ್ನೂ ಓದಿ: Madhu Bangarappa: ಶಿಕ್ಷಣ ಸಚಿವರು ಡೈನಾಮಿಕ್ ಆಗಿದ್ದಾರೆ, ಅವರು ಮತ್ತೊಬ್ಬ ಬಂಗಾರಪ್ಪ ಆಗಬೇಕು: ನಾರಾಯಣ ಸ್ವಾಮಿ
ಸರ್ಕಾರಕ್ಕೆ ಮನವಿ ಮಾಡಿ ಮಾಡಿ ಸಾಕಾಗಿದೆ ಅಂತಾರೆ ಸ್ಥಳೀಯರು. ಈ ಶಾಲೆಯಲ್ಲಿ ಸಮಸ್ಯೆ ಇಲ್ಲ. ಶಾಲೆಯೇ ಸಮಸ್ಯೆಯಲ್ಲಿ ಇದೆ. ಈ ಶಾಲೆಯ ಪರಿಸ್ಥಿತಿ ಹೀಗಿರುವಾಗ ಇಲ್ಲಿನ ಶಿಕ್ಷಕರದ್ದು ಮತ್ತೊಂದು ಸಮಸ್ಯೆ. ಶಾಲೆ ಆರಂಭವಾಗಿ ವಾರವಾದರೂ ಮಕ್ಕಳು ಮನೆಯಲ್ಲಿ ಆಟವಾಡುತ್ತಿದ್ದಾರೋ ವಿನಃ ಶಾಲೆಗೆ ಬರುತ್ತಿಲ್ಲ. ಕಾರಣ ಇಲ್ಲಿನ ಮೇಷ್ಟ್ರು. ಇಡೀ ಶಾಲೆಗೆ ಇರುವುದು ಒಬ್ಬರೇ ಶಿಕ್ಷಕರು. ಅವರು ಬೆಳಗ್ಗೆ 11.30ಕ್ಕೆ ಬಂದರೆ 2.30ಕ್ಕೆ ಮನೆ ಸೇರುತ್ತಾರೆ.
ಸಂಜೆ ಮಕ್ಕಳೇ ಶಾಲೆಯ ಬೀಗ ಹಾಕಿಕೊಂಡು ಮನೆಗೆ ಹೋಗಬೇಕು
ಸಂಜೆ ಮಕ್ಕಳೇ ಶಾಲೆಯ ಬೀಗ ಹಾಕಿಕೊಂಡು ಮನೆಗೆ ಹೋಗಬೇಕು. ಇದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯೂ ಇಳಿಮುಖವಾಗಿ ಇಂದು ಒಂಬತ್ತಕ್ಕೆ ಬಂದು ನಿಂತಿದೆ. ಹಾಗಾಗಿ, ಇಲ್ಲಿನ ಪೋಷಕರು ಹೀಗಿರುವ ಶಿಕ್ಷಕ ಚಂದ್ರೇಗೌಡ ಇಲ್ಲಿಂದ ಬೇರೆಡೆಗೆ ಸ್ಥಳಾಂತರಗೊಂಡು ಬೇರೆ ಶಿಕ್ಷಕರು ಬರುವವರೆಗೂ ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ ಎಂದು ಶಿಕ್ಷಕರು ಮಕ್ಕಳನ್ನ ಶಾಲೆಗೆ ಕಳುಹಿಸುತ್ತಿಲ್ಲ. ಇಲ್ಲಿನಾ ಶಿಕ್ಷಕರನ್ನ ಬೇರೆ ಕಡೆ ವರ್ಗಾವಣೆ ಮಾಡಿದರೆ ಶಾಲೆಗೆ ಮಕ್ಕಳ ಸಂಖ್ಯೆಯು ಹೆಚ್ಚುತ್ತದೆ ಶಾಲೆಯು ಉಳಿಯುತ್ತೆ ಎನ್ನುತ್ತಿದ್ದಾರೆ ಸ್ಥಳೀಯರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ