• ಹೋಂ
 • »
 • ನ್ಯೂಸ್
 • »
 • jobs
 • »
 • English Grammar Book: ವಿದ್ಯಾರ್ಥಿಗಳೇ ಇಂಗ್ಲಿಷ್ ಗ್ರಾಮರ್‌ ಬುಕ್‌ಗಾಗಿ ಸರ್ಚ್ ಮಾಡ್ತಿದ್ದೀರಾ? ಇಲ್ಲಿವೆ ನೋಡಿ ಅತ್ಯುತ್ತಮ ಪುಸ್ತಕ

English Grammar Book: ವಿದ್ಯಾರ್ಥಿಗಳೇ ಇಂಗ್ಲಿಷ್ ಗ್ರಾಮರ್‌ ಬುಕ್‌ಗಾಗಿ ಸರ್ಚ್ ಮಾಡ್ತಿದ್ದೀರಾ? ಇಲ್ಲಿವೆ ನೋಡಿ ಅತ್ಯುತ್ತಮ ಪುಸ್ತಕ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಶಾಲಾ ಮತ್ತು ಕಾಲೇಜು ವಿದ್ಯಾರ್ಧಿಗಳಿಗೆ ಇಂಗ್ಲಿಷ್‌ ಗ್ರಾಮರ್‌ ಸುಧಾರಿಸಲು ಅನುವು ಮಾಡಿಕೊಡುವ ಕೆಲ ಪುಸ್ತಕಗಳು ಹೀಗಿವೆ.

 • Share this:

  ಒಂದು ಭಾಷೆ ಅಂದರೆ ಅಲ್ಲಿ ಗ್ರಾಮರ್‌ (Grammar ) ತುಂಬಾ ಮುಖ್ಯ. ಕನ್ನಡ, ಇಂಗ್ಲಿಷ್‌ (Kannada, English) ಯಾವುದೇ ಭಾಷೆ ತೆಗೆದುಕೊಂಡರೂ ವಿದ್ಯಾರ್ಥಿಗಳಿಗೆ (Students) ಮೊದಲಿಗೆ ಅದರ ವ್ಯಾಕರಣದ ಬಗ್ಗೆ ಅರಿವಿರಬೇಕು. ಒಂದು ಭಾಷೆಯ ಮೇಲೆ ಹಿಡಿತ ಸಾಧಿಸಲು, ಸುಧಾರಿಸಲು ವ್ಯಾಕರಣ ಸಹಕಾರಿ. ಇಂಗ್ಲಿಷ್‌ ಭಾಷೆಗೂ ಗ್ರಾಮರ್‌ ಅತ್ಯವಶ್ಯವಾಗಿದೆ. ಒಂದು ಕ್ರಿಯಾಪದ (Verb) ಅತ್ತಿತ್ತವಾದರೂ ವಾಕ್ಯದ ಅರ್ಥನೆ ಬದಲಾಗಿ ಇನ್ನೇನೋ ಅವಾಂತರವಾಗಿ ಬಿಡುತ್ತದೆ. ಇಂಗ್ಲಿಷ್ ಅತ್ಯಂತ ಸುಲಭವಾದ ಭಾಷೆ (Language) ಎಂದು ಎಷ್ಟೇ ಹೇಳಿದರೂ ಅದರ ವ್ಯಾಕರಣ, ಸ್ಪೆಲ್ಲಿಂಗ್ ರೂಲ್ (Spelling), ವಾಕ್ಯಗಳನ್ನು ರಚಿಸುವಾಗ ಆಗುವ ತಪ್ಪುಗಳು ಆ ಭಾಷೆಯನ್ನು ಕಬ್ಬಿಣದ ಕಡಲೆಯನ್ನಾಗಿಸಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಈ ಇಂಗ್ಲಿಷ್‌ ಗ್ರಾಮರ್‌ ಬಗ್ಗೆ ತಿಳಿದುಕೊಂಡರೆ ಮುಂದೆ ಹೋಗುತ್ತಿದ್ದಂತೆ ಇದು ಸುಲಭವಾಗುತ್ತದೆ.


  ಹಾಗಾದರೆ ಶಾಲಾ ಮತ್ತು ಕಾಲೇಜು ವಿದ್ಯಾರ್ಧಿಗಳಿಗೆ ಇಂಗ್ಲಿಷ್‌ ಗ್ರಾಮರ್‌ ಸುಧಾರಿಸಲು ಅನುವು ಮಾಡಿಕೊಡುವ ಕೆಲ ಪುಸ್ತಕಗಳು ಹೀಗಿವೆ.


  ವಿದ್ಯಾರ್ಥಿಗಳಿಗಾಗಿ ಜನಪ್ರಿಯ ಇಂಗ್ಲಿಷ್ ವ್ಯಾಕರಣ ಪುಸ್ತಕಗಳು
  * ರೆನ್ & ಮಾರ್ಟಿನ್ ಹೈ ಸ್ಕೂಲ್ ಇಂಗ್ಲೀಷ್ ಗ್ರಾಮರ್ ‌ ಎಂಡ್‌ ಕಂಪೋಸಿಶನ್‌ (ಅಮೆಜಾನ್‌ - ₹270 )
  ಶಾಲಾ ವಿದ್ಯಾರ್ಥಿಗಳಿಗೆ ವ್ಯಾಕರಣ ಪುಸ್ತಕಗಳು ಅಥವಾ ಇಂಗ್ಲಿಷ್ ಉಲ್ಲೇಖ ಪುಸ್ತಕಗಳ ವಿಷಯಕ್ಕೆ ಬಂದಾಗ ಈ ಪುಸ್ತಕ ಜನಪ್ರಿಯವಾಗಿದೆ. ವಿದ್ಯಾರ್ಥಿಗಳನ್ನು ಅವರ ಮೂಲಭೂತ ವಿಷಯಗಳೊಂದಿಗೆ ಬಲಗೊಳಿಸುವುದರ ಜೊತೆಗೆ, ಪುಸ್ತಕವು ವಿಷಯದ ವಿವಿಧ ವಿಷಯಗಳ ವಿವರವಾದ ತಿಳುವಳಿಕೆಯನ್ನು ನೀಡುತ್ತದೆ.
  ಪುಸ್ತಕದಲ್ಲಿ ಕಲಿತಿರುವ ವಿಷಯದ ಬಗ್ಗೆ ಪ್ರಶ್ನೆಗಳನ್ನು ಬಿಡಿಸಬಹುದಾದ ಆಯ್ಕೆ ಕೂಡ ಇದೆ. ಇದನ್ನು ಬಿಡಿಸಿದ ನಂತರ ಸರಿಯಾದ ಉತ್ತರ ನೀಡಿದ್ದೀರಾ ಎಂದು ಪರಿಶೀಲಿಸಲು ಉತ್ತರ ಪ್ರತಿಯನ್ನು ಸಹ ಪಡೆಯಬಹುದು.


  Students Searching for English Grammar Book? Check out the best book here
  ಪ್ರಾತಿನಿಧಿಕ ಚಿತ್ರ


  * ಇಂಟರ್‌ಮಿಡಿಯೇಟ್ ಇಂಗ್ಲಿಷ್ ಗ್ರಾಮರ್‌ - ರೇಮಂಡ್ ಮರ್ಫಿ (ಅಮೆಜಾನ್‌ - ₹250 )
  ಇಂಗ್ಲಿಷ್ ವ್ಯಾಕರಣದಲ್ಲಿ ವಿವಿಧ ಪ್ರಮುಖ ನಿಯಮಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮತ್ತೊಂದು ಉತ್ತಮ ವ್ಯಾಕರಣ ಪುಸ್ತಕ ಇದು. ಈ ಪುಸ್ತಕವು ಉತ್ತರಗಳೊಂದಿಗೆ ಬರುತ್ತದೆ ಅದು ನೀವು ವಿವಿಧ ಪ್ರಶ್ನೆಗಳನ್ನು ಅಭ್ಯಾಸ ಮಾಡಿದ ನಂತರ ನಿಮ್ಮ ತಿಳುವಳಿಕೆಯನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಈ ಪುಸ್ತಕವನ್ನು ದಕ್ಷಿಣ ಏಷ್ಯಾದ ವಿದ್ಯಾರ್ಥಿಗಳಿಗೆ ರಚಿಸಲಾಗಿರುವುದರಿಂದ, ಮೂಲಭೂತ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ.
  ಪುಸ್ತಕವು ಕೇವಲ 350 ಪುಟಗಳನ್ನು ಹೊಂದಿದೆ ಮತ್ತು ಆನ್‌ಲೈನ್‌ನಲ್ಲಿ ಖರೀದಿಸಲು ಕೈಗೆಟುಕುವ ಆಯ್ಕೆಯಾಗಿದೆ. ಇದು ತುಂಬಾ ದಪ್ಪವಾಗಿರದ ಕಾರಣ, ವಿದ್ಯಾರ್ಥಿಗಳು ಅದನ್ನು ತಮ್ಮ ಬ್ಯಾಗ್‌ನಲ್ಲಿ ಸುಲಭವಾಗಿ ಕೊಂಡೊಯ್ಯಬಹುದು.


  * ಇಂಗ್ಲಿಷ್ ಗ್ರಾಮರ್‌ ಎಂಡ್‌ ಕಾಂಪೋಸಿಶನ್‌ - ಎಸ್.ಸಿ.ಗುಪ್ತಾ. ಅಮೆಜಾನ್‌ - ₹230 
  ಇಂಗ್ಲಿಷ್ ವ್ಯಾಕರಣವನ್ನು ಸುಧಾರಿಸಲು ಬಯಸುವವರಿಗೆ ಕೈಗೆಟಕುವ ದರದಲ್ಲಿ ಸುಗುವ ಮತ್ತೊಂದು ಆಯ್ಕೆ ಇದು. ಈ ಪುಸ್ತಕವು ಸರಿಸುಮಾರು 10000 ವಾಕ್ಯಗಳು, 7000 ಪರಿಹರಿಸಿದ ಪ್ರಶ್ನೆಗಳು, 7000 ಪದಗಳು ಮತ್ತು 550 ಬಿಡಿಸುವ ಕೆಲಸಗಳನ್ನು ಒಳಗೊಂಡಿದೆ.
  ಈ ಪುಸ್ತಕವು 900 ಪುಟಗಳನ್ನು ಹೊಂದಿದೆ ಮತ್ತು ಪೇಪರ್‌ಬ್ಯಾಕ್ ಮತ್ತು ಡಿಜಿಟಲ್ ಸ್ವರೂಪಗಳಲ್ಲು ಲಭ್ಯವಿದೆ. ಆದ್ದರಿಂದ ನೀವು ಎಲ್ಲಿಗಾದರೂ ಹೋಗುವಾಗ ಕೊಂಡೊಯ್ಯಬಹುದು.


  ಇದನ್ನೂ ಓದಿ:Students Problems: ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಕಷ್ಟ, ಎರಡು ಹೊತ್ತಿನ ಊಟವೂ ಸಿಗದೇ ಪರದಾಟ!


  * ಅಡ್ವಾನ್ಸ್ ಇಂಗ್ಲಿಷ್ ‌ ಗ್ರಾಮರ್‌, ಮಾರ್ಟಿನ್ ಹೆವಿಂಗ್ಸ್ ( ಅಮೆಜಾನ್‌ - ₹200 )
  ಇಂಗ್ಲಿಷ್‌ ಭಾಷೆಯಲ್ಲಿ ವ್ಯಾಕರಣವೇ ಹೃದಯವಾಗಿದ್ದರಿಂದ, ಮೂಲ ವ್ಯಾಕರಣ ನಿಯಮಗಳನ್ನು ತಿಳಿಯುವುದು ಅತ್ಯವಶು. ಈ ಮೂಲ ವ್ಯಾಕರಣ ನಿಯಮಗಳಿಗೆ ಹೇಳಿಮಾಡಿಸಿದ ಪುಸ್ತಕ ಅಂದರೆ ಅದು ಮಾರ್ಟಿನ್ ಹೆವಿಂಗ್ಸ್ ಅವರ ಈ ಬುಕ್.


  ನೀವು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಅಥವಾ ಉತ್ತಮ ಪ್ರಬಂಧಗಳನ್ನು ಬರೆಯಲು ಬಯಸುವ ವಿದ್ಯಾರ್ಥಿಯಾಗಿದ್ದರೆ, ಈ ವ್ಯಾಕರಣ ಪುಸ್ತಕವು ನಿಮಗೆ ಸಹಕಾರಿಯಾಗುತ್ತದೆ. ಸಂಬಂಧಿತ ಉದಾಹರಣೆಗಳೊಂದಿಗೆ ನಿಯಮಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡಲು ಈ ಪುಸ್ತಕವು ಪ್ರತಿಯೊಂದಕ್ಕೂ 2 ಪುಟಗಳೊಂದಿಗೆ ವಿವಿಧ ವಿಷಯಗಳ ಮೇಲೆ 100 ಕ್ಕೂ ಹೆಚ್ಚು ಘಟಕಗಳನ್ನು ಹೊಂದಿದೆ.
  ಪುಸ್ತಕವು 350 ಪುಟಗಳನ್ನು ಹೊಂದಿದ್ದು, ಕಲಿಕೆಗೆ ಬೇಕಾದ ಎಲ್ಲಾ ಸಾಮಾಗ್ರಿಯನ್ನು ಹೊಂದಿದೆ.


  Students Searching for English Grammar Book? Check out the best book here
  ಪ್ರಾತಿನಿಧಿಕ ಚಿತ್ರ


  * ಆಕ್ಸ್‌ಫರ್ಡ್ ಮಾಡರ್ನ್ ಇಂಗ್ಲಿಷ್ ಗ್ರಾಮರ್ ( ಅಮೆಜಾನ್‌ - ₹350)
  ಶೀರ್ಷಿಕೆಯೇ ಸೂಚಿಸುವಂತೆ, ಆಧುನಿಕ ಇಂಗ್ಲಿಷ್ ಅನ್ನು ಬರೆಯುವಾಗ ಅಥವಾ ಓದುವಾಗ ನೀವು ತಿಳಿದಿರಬೇಕಾದ ಎಲ್ಲಾ ಮೂಲಭೂತ ಮತ್ತು ಪ್ರಮುಖ ವ್ಯಾಕರಣ ನಿಯಮಗಳನ್ನು ತಿಳಿಯಲು ಈ ವ್ಯಾಕರಣ ಪುಸ್ತಕವು ನಿಮಗೆ ಸಹಾಯ ಮಾಡುತ್ತದೆ.


  ವಿದ್ಯಾರ್ಥಿಗಳಿಗೆ ಅಥವಾ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಈ ಪುಸ್ತಕ ಸೂಕ್ತವಾಗಿದೆ. 4 ಭಾಗಗಳಾಗಿ ವಿಂಗಡಿಸಲಾಗಿರುವ ಈ ಪುಸ್ತಕವು ಕೆಲವೇ ದಿನಗಳಲ್ಲಿ ನಿಮ್ಮ ಇಂಗ್ಲಿಷ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪುಸ್ತಕದ ಬದಲಿಗೆ ಡಿಜಿಟಲ್‌ ಕಾಫಿಯನ್ನು ಸಹ ಪಡೆಯಬಹುದು.


  * ನೇಚರ್‌ ಇಂಗ್ಲಿಷ್‌ ಗ್ರಾಮರ್‌ ಎಂಡ್‌ ಕಂಪೋಸಿಶನ್‌ ಬುಕ್ಸ್‌ ಫಾರ್‌ ಕಿಡ್ಸ್‌ (ಅಮೆಜಾನ್‌ - ₹450 )


  ಚಿಕ್ಕ ಮಕ್ಕಳಿಗೆ ವ್ಯಾಕರಣ ಹೇಳಿಕೊಡಲು ಬಯಸುವವರಿಗೆ ಇದು ಹೇಳಿಮಾಡಿದ ಪುಸ್ತಕ. 5-10 ವರ್ಷ ವಯಸ್ಸಿನ ಮಕ್ಕಳಿಗೆ ಸೂಕ್ತವಾಗಿದ್ದು, ನಿಮ್ಮ ಮಗುವಿಗೆ ಇಂಗ್ಲಿಷ್ ವ್ಯಾಕರಣವನ್ನು ಸಮಗ್ರವಾಗಿ ತಿಳಿಸುತ್ತದೆ. ವರ್ಣರಂಜಿತ ಚಿತ್ರಗಳೊಂದಿಗೆ ಬರುವ ಈ ಪುಸ್ತಕ ಮಕ್ಕಳ ಗಮನ ಹಿಡಿದಿಟ್ಟುಕೊಳ್ಳಲು ಉತ್ತಮವಾಗಿದೆ.
  ಶಾಲಾ ಹಂತದಲ್ಲಿಯೇ ನಿಮ್ಮ ಮಕ್ಕಳಿಗೆ ಸಾಕಷ್ಟು ಜ್ಞಾನವನ್ನು ನೀಡಲು ನೀವು ಈ 300 ಪುಟಗಳ ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳಬಹುದು.


  ಇದನ್ನೂ ಓದಿ: Kannada Medium Students: ಓದಿನಲ್ಲಿ ಹಿಂದೆ ಬಿದ್ದ ಕನ್ನಡ ಮಾಧ್ಯಮದ ಶೇ.60ರಷ್ಟು ಮಕ್ಕಳು; ವರದಿಯಲ್ಲಿ ಬಹಿರಂಗ


  * ಇಂಗ್ಲಿಷ್ ಗ್ರಾಮರ್‌ ಇನ್‌ ಯೂಸ್‌ ಬುಕ್‌ ವಿತ್‌ ಆನ್ಸಾರ್‌, ರೇಮಂಡ್ ಮರ್ಫಿ ( ಅಮೆಜಾನ್‌ - ₹790)
  ನೀವು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತವಾದ ವ್ಯಾಕರಣ ಪುಸ್ತಕವನ್ನು ಹುಡುಕುತ್ತಿದ್ದರೆ, ಆನ್‌ಲೈನ್‌ನಲ್ಲಿ ಖರೀದಿಸಲು ಇದು ಉತ್ತಮ ಆಯ್ಕೆಯಾಗಿದೆ. ಈ ಪುಸ್ತಕವು ಸ್ವಲ್ಪ ಇಂಗ್ಲಿಷ್‌ ಭಾಷೆಯ ಬಗ್ಗೆ ತಿಳಿದವರಿಗೆ ಮತ್ತಷ್ಟು ತಿಳಿಯಲು ಎಲ್ಲಾ ವ್ಯಾಕರಣ ಪಾಠಗಳನ್ನು ಒಳಗೊಂಡಿದೆ.
  ಈ ಪುಸ್ತಕವು ಸುಮಾರು 400 ಪುಟಗಳನ್ನು ಹೊಂದಿದೆ ಮತ್ತು ಹೆಚ್ಚಿನ ವ್ಯಾಕರಣ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ನಿಯಮಿತ ತರಗತಿಯ ಪುಸ್ತಕದೊಂದಿಗೆ ಪೂರಕ ಪುಸ್ತಕವಾಗಿಯೂ ಸಹ ಬಳಸಬಹುದು.
  * ಮೈ ಬುಕ್ ಆಫ್ ಟೆನ್ಸ್, ಸ್ಕಾಲರ್ಸ್ ಹಬ್ ಎಡಿಟೋರಿಯಲ್‌ ಟೀಮ್‌ ( ₹ 199)
  ವಾಕ್ಯಗಳನ್ನು ರೂಪಿಸಲು ಮತ್ತು ಪರಿವರ್ತಿಸಲು ಕಷ್ಟಪಡುವ ಶಾಲಾ ವಿದ್ಯಾರ್ಥಿಗಳಿಗೆ ಈ ಬುಕ್ ಸೂಕ್ತವಾಗಿದೆ.‌ ಬೇರೆಯವರ ಜೊತೆ ಸಂವಹನ ಮಾಡುವ ಶೈಲಿ, ಘಟನೆಗಳ ಅನುಕ್ರಮವನ್ನು ಅರ್ಥಮಾಡಿಕೊಳ್ಳಲು ಈ ಪುಸ್ತಕ ಸೂಕ್ತವಾಗಿದೆ.‌

  Published by:Gowtham K
  First published: