• ಹೋಂ
  • »
  • ನ್ಯೂಸ್
  • »
  • Jobs
  • »
  • Environmental Education: ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೂ ಬೇಕು ಪರಿಸರ ಪಾಠ

Environmental Education: ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೂ ಬೇಕು ಪರಿಸರ ಪಾಠ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗುರುತ್ವಾಕರ್ಷಣೆಯಿಂದಾಗಿ ನೀರು ಕೆಳಮುಖವಾಗಿ ಹರಿಯುತ್ತದೆ ಮತ್ತು ಜಲಾಶಯಗಳಲ್ಲಿ ಸಂಗ್ರಹವಾಗುತ್ತದೆ ಅಥವಾ ಅದನ್ನು ಬಳಸಲು ಸಾಧ್ಯವಾಗುವಂತೆ ತಡೆಹಿಡಿಯಲಾಗುತ್ತದೆ. ನೀರಿನ ಸಂಗ್ರಹಣೆ ಮತ್ತು ವಿತರಣೆಯು ಸಾಮಾಜಿಕ ಮತ್ತು ಸಾಂಸ್ಥಿಕ ಸವಾಲುಗಳಿಂದ ಕೂಡಿದೆ.

  • Share this:

ಮಕ್ಕಳಾದ ನಮಗೆಲ್ಲರಿಗೂ ಶಾಲೆಗಳಲ್ಲಿ (School) ನೀರಿನ ಚಕ್ರದ ಬಗ್ಗೆ ಕಲಿಸಲಾಗಿದೆ. ಜೈವಿಕ ಭೌತಿಕ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಇನ್ನು ಮುಂದಿನ ಪೀಳಿಗೆ ಮಕ್ಕಳಿಗೆ ಈ ಕುರಿತು ಹೆಚ್ಚಿನ ಮಾಹಿತಿ ನೀಡುವ ಸಲುವಾಗೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಉನ್ನತ ಶಿಕ್ಷಣಕ್ಕೆ (Education) ಹೋದಂತೆ ಮಾನವ ಚಟುವಟಿಕೆಗಳು ಪರಿಸರದ ಮೇಲೆ ಬೀರುವ ಪ್ರಭಾವದ ಸಮಗ್ರ ತಿಳುವಳಿಕೆ ಕ್ರಮೇಣ ಕಡಿಮೆಯಾಗುತ್ತದೆ. ಆದರೆ ತಿಳುವಳಿಕೆ ಹೆಚ್ಚಿಸುವಂತ ಪಾಠಗಳನ್ನು (Lesson) ಪಠ್ಯದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 


ಕೆಲವು ಉನ್ನತ ಶಿಕ್ಷಣ ಸಂಸ್ಥೆಗಳು ನೈಸರ್ಗಿಕ ಮತ್ತು ಸಾಮಾಜಿಕ ವಿಜ್ಞಾನಗಳೆರಡರ ಮೇಲೆ ಸಮಗ್ರ ರೀತಿಯಲ್ಲಿ ನೀರನ ಬಗ್ಗೆ ಮಾಹಿತಿ ನೀಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಬದಲಾವಣೆಯನ್ನು ತರಲು ಅವಕಾಶವನ್ನು ಒದಗಿಸುತ್ತಿದೆ.ಎನ್‌ಇಪಿ 2020 ರಲ್ಲಿ ಕಲ್ಪಿಸಲಾದ ಬದಲಾವಣೆಗಳಲ್ಲಿ ಪರಿಸರ ಸಂರಕ್ಷಣೆ ಸೇರಿದಂತೆ ಪ್ರಸ್ತುತ ಸಮಯಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಒತ್ತು ನೀಡುತ್ತಿದೆ.


ಇದನ್ನೂ ಓದಿ: UTSAH: ಪ್ರಾಧ್ಯಾಪಕರ ನೇಮಕಾತಿಗೆ UGC ಹೊಸ ಪೋರ್ಟಲ್​​ ಆರಂಭ


ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (UGC) ಸ್ನಾತಕಪೂರ್ವ ಅಧ್ಯಯನಕ್ಕಾಗಿ ಬಿಡುಗಡೆ ಮಾಡಿರುವ ಪರಿಸರ ಶಿಕ್ಷಣಕ್ಕಾಗಿ ಪರಿಷ್ಕೃತ ಪಠ್ಯಕ್ರಮದ ಚೌಕಟ್ಟು NEP 2020ಯಿಂದ ಸ್ಫೂರ್ತಿ ಪಡೆಯುತ್ತಿದೆ. ಭಾರತದಲ್ಲಿ ಜಲ ಸಂಪನ್ಮೂಲ ನಿರ್ವಹಣೆ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲು ಮತ್ತು ಕಲಿಸುವ ವಿಧಾನವು ಈ ಸಂದರ್ಭದಲ್ಲಿ ಆಸಕ್ತಿದಾಯಕವಾಗುವಂತೆ ನೋಡಿಕೊಳ್ಳಲಾಗುತ್ತಿದೆ.


ಪರಿಸರದ ಮೇಲೆ ಮಾನವ ಚಟುವಟಿಕೆಗಳ ಪ್ರಭಾವವನ್ನು ಕಡಿಮೆ ಮಾಡುವುದು ಹೇಗೆ ಎಂಬುದು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿನ ದೊಡ್ಡ ಸವಾಲಾಗಿದೆ. ಮಣ್ಣು ಅಥವಾ ಗಾಳಿಯಂತಹ ಇತರ ಸಂಪನ್ಮೂಲಗಳಿಗೆ ಹೋಲಿಸಿದರೆ ನೀರು ಕಡಿಮೆಯಾಗುತ್ತಿದೆ.




ಗುರುತ್ವಾಕರ್ಷಣೆಯಿಂದಾಗಿ ನೀರು ಕೆಳಮುಖವಾಗಿ ಹರಿಯುತ್ತದೆ ಮತ್ತು ಜಲಾಶಯಗಳಲ್ಲಿ ಸಂಗ್ರಹವಾಗುತ್ತದೆ ಅಥವಾ ಅದನ್ನು ಬಳಸಲು ಸಾಧ್ಯವಾಗುವಂತೆ ತಡೆಹಿಡಿಯಲಾಗುತ್ತದೆ. ನೀರಿನ ಸಂಗ್ರಹಣೆ ಮತ್ತು ವಿತರಣೆಯು ಸಾಮಾಜಿಕ ಮತ್ತು ಸಾಂಸ್ಥಿಕ ಸವಾಲುಗಳಿಂದ ಕೂಡಿದೆ. ಅಪ್‌ಸ್ಟ್ರೀಮ್ ಮತ್ತು ಡೌನ್‌ಸ್ಟ್ರೀಮ್ ಬಳಕೆದಾರರ ನಡುವೆ ವಿತರಣೆಯಲ್ಲಿ ಅಸಮಾನತೆಗಳಿವೆ. ಕೃಷಿ ನಡುವೆ ಮಾನವ ಬಳಕೆಗೆ ಹಂಚಿಕೆ, ಕೈಗಾರಿಕೆ ಮತ್ತು ದೇಶೀಯ ಬಳಕೆಯು ಜಲಚರಗಳಿಗೆ ಸ್ವಲ್ಪ ನೀರನ್ನು ಮಿಸಲಿಡುವುದು ಬಹು ಮುಖ್ಯವಾಗಿದೆ.


ಮಾನವನ ಚಟುವಟಿಕೆಯಿಂದ ಪರಿಸರ ಹಾನಿ


ಮಾನವ ಚಟುವಟಿಕೆಗಳು ಮತ್ತು ಹವಾಮಾನ ಬದಲಾವಣೆಯು ನೈಸರ್ಗಿಕ ನೀರಿನ ಚಕ್ರವನ್ನು ಬದಲಾಯಿಸಿದೆ ಎಂಬುದಕ್ಕೆ ಹೆಚ್ಚಿನ ಪುರಾವೆಗಳಿವೆ. ಪರಿಸರದಲ್ಲಾಗುತ್ತಿರುವ ಅಸಮತೋಲನ ಎಲ್ಲರಿಗೂ ಗೋಚರಿಸುತ್ತಿದ್ದರೂ ಸಾಮಾಜಿಕ ಮುಖ್ಯವಾಹಿನಿಗೆ ಇನ್ನೂ ಅಷ್ಟಾಗಿ ಬಂದಿಲ್ಲ. ಇದರ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡುವಂತಾಗಬೇಕು ಎಂಬುದು ಇದರ ಉದ್ದೇಶವಾಗಿದೆ.


ಉನ್ನತ ಶಿಕ್ಷಣದಲ್ಲಿ ಪರಿಸರ ಪಾಠ
ಕೇವಲ ಪ್ರಾಥಮಿಕ ಹಂತದಲ್ಲಿ ಮಾತ್ರ ನೀರಿನ ಕುರಿತು ಶಿಕ್ಷಣವನ್ನು ನೀಡಲಾಗುತ್ತಿತ್ತು. ನಂತರದ ದಿನಗಳಲ್ಲಿ ಅದು ಕ್ರಮೇಣವಾಘಿ ಪಠ್ಯ ವಿಚಾರದಲ್ಲಿ ಕಡಿಮೆಯಾಗುತ್ತಾ ಬರುತ್ತಿತ್ತು. ಆದರೆ ಉನ್ನತ ಶಿಕ್ಷಣದ ಹಂತಕ್ಕೆ ಬಂದಂತೆ ನೀರಿನ ಪ್ರಾಮುಖ್ಯತೆಯ ಬಗ್ಗೆ ಹೆಚ್ಚಿನ ಅಂಶಗಳನ್ನು ಪಠ್ಯದಲ್ಲೇ ನೀಡಲು ಈಗ ಚಿಂತನೆ ನಡೆಸಲಾಗುತ್ತಿದೆ. ಇದಕ್ಕೆ ಹೆಚ್ಚಿ ಆದ್ಯತೆ ನೀಡಲಾಗುತ್ತದೆ. ಮುಖ್ಯವಾಗಿ ಇಂಜಿನಿಯರ್​ಗಳಿಗೆ ನೀರಿನ ಪ್ರಾಮುಖ್ಯತೆಯ ಪಾಠ ಆಗಲೇಬೇಕಾಗಿದೆ.


ಸಂರಕ್ಷಣೆಯ ಸವಾಲು


ಕೆಲವು ಉನ್ನತ ಶಿಕ್ಷಣ ಸಂಸ್ಥೆಗಳು ನೈಸರ್ಗಿಕ ಮತ್ತು ಸಾಮಾಜಿಕ ವಿಜ್ಞಾನಗಳೆರಡರ ಮೇಲೆ ಸಮಗ್ರ ರೀತಿಯಲ್ಲಿ ನೀರನ ಬಗ್ಗೆ ಮಾಹಿತಿ ನೀಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಬದಲಾವಣೆಯನ್ನು ತರಲು ಅವಕಾಶವನ್ನು ಒದಗಿಸುತ್ತಿದೆ.ಪರಿಸರದ ಮೇಲೆ ಮಾನವ ಚಟುವಟಿಕೆಗಳ ಪ್ರಭಾವವನ್ನು ಕಡಿಮೆ ಮಾಡುವುದು ಹೇಗೆ ಎಂಬುದು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿನ ದೊಡ್ಡ ಸವಾಲಾಗಿದೆ

First published: