• Home
  • »
  • News
  • »
  • jobs
  • »
  • Shivamogga: ಶಿಕ್ಷಕನನ್ನು ವರ್ಗಾವಣೆ ಮಾಡಿದ್ದಕ್ಕೆ ಪ್ರತಿಭಟನೆ! ಮಕ್ಕಳನ್ನು ಶಾಲೆಗೆ ಕಳಿಸಲ್ಲ ಎಂದ ಪಾಲಕರು

Shivamogga: ಶಿಕ್ಷಕನನ್ನು ವರ್ಗಾವಣೆ ಮಾಡಿದ್ದಕ್ಕೆ ಪ್ರತಿಭಟನೆ! ಮಕ್ಕಳನ್ನು ಶಾಲೆಗೆ ಕಳಿಸಲ್ಲ ಎಂದ ಪಾಲಕರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ಕೆಲವು ದಿನಗಳ‌ ಹಿಂದೆಯಷ್ಟೇ ವರ್ಗಾವಣೆಗೊಂಡಿರುವ ಶಿಕ್ಷಕ ಶಿವಪ್ಪ ಎನ್ನುವವರನ್ನು ಬೇರೆ ಶಾಲೆಗೆ ವರ್ಗಾವಣೆಯಾಗಿ ಹೋಗದಂತೆ ಒತ್ತಾಯಿಸಲಾಗುತ್ತಿದೆ. ಒಬ್ಬ ಮಾದರಿ ಶಿಕ್ಷಕರಾಗಿ ಇವರು ತೋರುತ್ತಿದ್ದಾರೆ

  • News18 Kannada
  • 2-MIN READ
  • Last Updated :
  • Karnataka, India
  • Share this:

ಶಿವಮೊಗ್ಗ: ಶಿಕ್ಷಕರು ಮತ್ತು ಮಕ್ಕಳ ನಡುವೆ ಅದೆಷ್ಟು ಪ್ರೀತಿ ಇತ್ತು ನೋಡಿ. ಶಿಕ್ಷಕರನ್ನು (Teacher) ಬೇರೆಡೆ ವರ್ಗಾವಣೆ ಮಾಡುತ್ತೇವೆ ಎಂದು ಹೇಳಿದ ತಕ್ಷಣ ಶಿವಮೊಗ್ಗ ಜಿಲ್ಲೆಯ ಸಾಗರ (Sagara) ತಾಲೂಕಿನ ಬರೂರು ಗ್ರಾಮದ ಶಾಲಾ ಮಕ್ಕಳು (School Students) ತಮಗೆ ಅದೇ ಶಿಕ್ಷಕ ಬೇಕು ಎಂದು ಪ್ರತಿಭಟನೆ ಮಾಡಿದ ಘಟನೆ ಜರುಗಿದೆ. ಇತ್ತೀಚಿಗಷ್ಟೇ ಇನ್ನೊಂದು ಸುದ್ಧಿಯಾಗಿತ್ತು ಅದೇನೆಂದರೆ ಮಕ್ಕಳ (Students) ವರ್ತನೆಯನ್ನು ಸಹಿಸಲಾರದೇ ಶಿಕ್ಷಕರೇ ರಾಜಿನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಅಂಥಹ ಪರಿಸ್ಥಿತಿಯೂ ಇರುತ್ತದೆ.


ಈ ಘಟನೆಯಿಂದಲೇ ತಿಳಿದುಬರುತ್ತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಹೇಗಿತ್ತು ಎಂಬುದಾಗಿ. ಶಿಕ್ಷಕರು ಉತ್ತಮ ರೀತಿಯಲ್ಲಿ ಮಕ್ಕಳಿಗೆ ಸಹಾಯವಾಗುವ ಮತ್ತು ಪ್ರೋತ್ಸಾಹ ನೀಡುವ ದೃಷ್ಟಿಯಿಂದ ನಡೆದುಕೊಂಡರೆ ಇಂತಹ ಪ್ರೀತಿ ಮಕ್ಕಳಿಂದ ಶಿಕ್ಷಕರಿಗೆ ಲಭಿಸುತ್ತದೆ ಎನ್ನುವುದಕ್ಕೆ ಇವರೇ ಸಾಕ್ಷಿ. ಶಾಲೆಯ ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿದ ತಕ್ಷಣವೇ ವಿದ್ಯಾರ್ಥಿಗಳೆಲ್ಲಾ ಇದನ್ನು ವಿರೋಧಿಸಿದ್ದಾರೆ. ಶಿಕ್ಷಕರನ್ನು ತಮ್ಮ ಶಾಲೆಯಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.


ಶಾಲಾ ಶಿಕ್ಷಕ ಶಿವಪ್ಪ ಅವರನ್ನು ಮರಳಿ ಪಡೆಯಲು ಪಾಲಕರ ಒತ್ತಾಯ
ಮಕ್ಕಳಷ್ಟೇ ಅಲ್ಲ ಇವರೊಟ್ಟಿಗೆ ಮಕ್ಕಳ ಪಾಲಕರು ಹಾಗೂ ಪೋಷಕರೂ ಸಹ ಈ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಇದರಿಂದ ತಿಳಿಯುವುದೇನೆಂದರೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಲ್ಲಿ ಶಿಕ್ಷಕರ ಪಾತ್ರ ಎಷ್ಟಿತ್ತು ಎಂಬುದಾಗಿ. ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ ಪಾಲಕರೂ ಇದರಲ್ಲಿ ಭಾಗಿಯಾಗಿರುವುದು ವಿಶೇಷ ಎನಿಸುತ್ತಿದೆ.


ಇದನ್ನೂ ಓದಿ: Paper Science: ಪೇಪರ್​ ಸೈನ್ಸ್​ ಇಂಜಿನಿಯರಿಂಗ್​ ಎಂದರೇನು? ಈ ಕೋರ್ಸ್​ ಮಾಡಿದರೆ ಏನು ಲಾಭ ಇದೆ ನೋಡಿ


ಕಳೆದ ಕೆಲವು ದಿನಗಳ‌ ಹಿಂದೆಯಷ್ಟೇ ವರ್ಗಾವಣೆಗೊಂಡಿರುವ ಶಿಕ್ಷಕ ಶಿವಪ್ಪ ಎನ್ನುವವರನ್ನು ಬೇರೆ ಶಾಲೆಗೆ ವರ್ಗಾವಣೆಯಾಗಿ ಹೋಗದಂತೆ ಒತ್ತಾಯಿಸಲಾಗುತ್ತಿದೆ. ಒಬ್ಬ ಮಾದರಿ ಶಿಕ್ಷಕರಾಗಿ ಇವರು ತೋರುತ್ತಿದ್ದಾರೆ. ಇಷ್ಟೋಂದು ಜನರ ಪ್ರೀತಿ ಹಾಗೂ ವಿಶ್ವಾಸವನ್ನು ಶಿಕ್ಷಕರು ಪಡೆದುಕೊಂಡಿದ್ದಾರೆ ಎಂದು ಇದರಲ್ಲಿ ತಿಳಿದು ಬರುತ್ತದೆ. ಇವರಿಗೆ ಈ ಶಾಲೆಯಲ್ಲಿ ಸೇವೆ ಸಲ್ಲಿಸುವ ಕುರಿತು ಯಾವ ರೀತಿ ಮನಸ್ಸಿತ್ತು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.


ಶಾಲಾ ಆವರಣದಲ್ಲಿ ಪ್ರತಿಭಟನೆ ಮಾಡಿದ ಮಕ್ಕಳು
ಶಾಲಾ ಮಕ್ಕಳೆಲ್ಲ ಸೇರಿ ತರಗತಿಗೂ ಹೋಗದಂತೆ ಶಾಲೆಯ ಆವರಣದಲ್ಲಿ ಕೂತು ಪ್ರತಿಭಟನೆ ಮಾಡುತ್ತಿದ್ದಾರೆ. ಇವರು ಮರಳಿ ಶಾಲೆಗೆ ಬರಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆವರಣದಲ್ಲೇ ಪಾಲಕರೂ ಸಹ ಇದ್ದಾರೆ ಎಂದು ತಿಳಿದು ಬಂದಿದೆ. ವರ್ಗಾವಣೆಗೊಂಡಿರುವ ಶಿಕ್ಷಕ ಶಿವಪ್ಪರನ್ನು ಮರಳಿ ನಿಯೋಜಿಸುವಂತೆ ಪೋಷಕರ ಒತ್ತಾಯ ಕೇಳಿಬರುತ್ತಿದೆ.


ನಾಳೆಯಿಂದ ಮಕ್ಕಳನ್ನು ಶಾಲೆಗೇ ಕಳಿಸಲ್ಲ
ಶಿಕ್ಷಕರ ನಿಯೋಜಿಸದಿದ್ದರೇ ನಾಳೆಯಿಂದ ಶಾಲೆಗೆ ಮಕ್ಕಳನ್ನು ಕಳುಹಿಸಲ್ಲ ಎಂದು ಪೋಷಕರು ಎಚ್ಚರಿಕೆ ನೀಡಿದ್ದಾರೆ. ತಮ್ಮ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಅಂಶಗಳನ್ನು ನೀಡುತ್ತಿದ್ದ ಈ ಶಿಕ್ಷಕರೇ ಇಲ್ಲದಿದ್ದರೆ ನಮ್ಮ ಮಕ್ಕಳನ್ನು ನಾವು ಶಾಲೆಗೆ ಕಳಿಸುವುದಿಲ್ಲ ಎಂದು ಎಚ್ಚರಿಕೆಯ ಕರೆ ನೀಡಿದ್ದಾರೆ.


ಮಕ್ಕಳೂ ಸಹ ಶಿಕ್ಷಕರನ್ನು ತುಂಬಾ ಇಷ್ಟಪಡುತ್ತಿದ್ದರು ಶಿವಪ್ಪ ಸರ್​ ಇಲ್ಲದಿದ್ದರೆ ನಾವು ಶಾಲೆಗೆ ಬಂದರೂ ಸಹ ಅವರ ಒಳ್ಳೆ ಪಾಠಗಳನ್ನು ಕೇಳಲಾಗುವುದಿಲ್ಲ. ನಮಗೇ ಅವರೇ ಪಾಠ ಮಾಡಬೇಕು ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪಾಲಕರು ಈ ಶಿಕ್ಷಕ ಶಿವಪ್ಪ ಅವರನ್ನು ಮರಳಿ ಇದೇ ಶಾಲೆಗೆ ಕರೆಸಿಕೊಳ್ಳಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

First published: