ಧಾರವಾಡ : ವಿದ್ಯಾಕಾಶಿ ಧಾರವಾಡ (Dharwad) ನಗರಕ್ಕೆ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಫಾರೆನಸಿಕ್ ವಿವಿ ಕ್ಯಾಂಪಸ್ ಬಂದಿದೆ. ಆಗಲೇ ಇಲ್ಲಿ ಅಡ್ಮಿಷನ್ ಕೂಡಾ ಆರಂಭವಾಗಿವೆ. ಆದರೆ ಧಾರವಾಡದ ಕರ್ನಾಟಕ ವಿವಿ (Karnataka University) ಹಾಗೂ ಕಲಬುರ್ಗಿ ವಿವಿಯ ಹೊಸ ಬ್ಯಾಚಿನ್ ಪದವಿ ವಿದ್ಯಾರ್ಥಿಗಳಿಗೆ ಇದರ ಅವಕಾಶ ಸಿಗುವ ಸಾದ್ಯತೆ ಕಡಿಮೆ. ಆದರೆ ಅದು ಯಾಕೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ವಿದ್ಯಾರ್ಥಿಗಳು ಧಾರವಾಡ ಕರ್ನಾಟಕ ವಿವಿ ಹಾಗೂ ಕಲಬುರಗಿ ವಿವಿ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಈಗಾಗಲೇ ಧಾರವಾಡದಲ್ಲಿ ನೂತನವಾಗಿ ಆರಂವಾಗಿರೊ ಫಾರೆನ್ಸಿಕ್ ವಿವಿ ಬಿಎಸ್ ಸಿ, ಎಂಎಸ್ ಸಿ, ಕ್ರೈಮ್ ಸಿನ್ ಮ್ಯಾನೇಜ್ಮೆಂಟ್ ನಲ್ಲಿ ಪಿಜಿ ಡಿಪ್ಲೋಮಾ, ಫಾರೆನ್ಸಿಕ್ ಫಾರ್ಮಸಿಯಲ್ಲಿ ಎಂ ಫಾರ್ಮಾ, ಎನ್ವಿರಾನ್ಮೆಂಟ್ ಸೈನ್ಸ್ ನಲ್ಲಿ ಎಂಎಸ್ ಸಿ, ಬೊಟೆಕ್ ಹಾಗೂ ಎಂ ಟೆಕ್ ಕೋರ್ಸ್ ಗಳು ಆರಂಭವಾಗಲಿದೆ. ಇದರಿಂದ ಉತ್ತರ ಕರ್ನಾಟಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಧಾರವಾಡ ಫಾರೆನ್ಸಿಕ್ ವಿವಿ ಯಲ್ಲಿ ಮೊದಲ ಅಡ್ಮಿಷನ್ ಆರಂಭವಾಗಿವೆ. ಆದರೆ ಬಹುತೇಕ ಕೊರ್ಸ್ ಗಳಿಗೆ ಅಡ್ಮಿಷನ್ ಪಡೆಯಬೇಕಾದರೆ ಪದವಿ ಮುಗಿಸಿರಬೇಕು.
ಧಾರವಾಡ ಹಾಗೂ ಕಲ್ಬುರ್ಗಿ ವಿವಿ ಪದವಿ ವಿದ್ಯಾರ್ಥಿಗಳಿಗೆ ಅಡ್ಮಿಷನ್ ಡೌಟ್
ಎರಡು ವಿವಿಯ ಬಿಎಸ್ ಸಿ ಅಂತಿಮ ಸೆಮೆಸ್ಟರ್ ಈಗಷ್ಟೇ ಆರಂಭವಾಗಿವೆ
ಅಲ್ಲದೆ ಪರೀಕ್ಷೆ ಕೂಡಾ ನಡೆಯಬೇಕು. ಇದೆಲ್ಲ ಮುಗಿಯಬೇಕಾದರೆ ಅಗಸ್ಟ್ ವರೆಗೆ ಸಮಯ ಬೇಕು. ಆದರೆ ಫಾರೆನ್ಸಿಕ್ ವಿವಿ ಅಡ್ಮಿಷನ್ ಗೆ ಮೇ29 ಕೊನೆಯ ದಿನಾಂಕ ನಿಗದಿಯಾಗಿದೆ. ಇದರಿಂದ ಫಾರೆನ್ಸಿಕ್ ವಿವಿಯ ಹಲವು ಕೋರ್ಸ್ ಗಳಿಗೆ ಪ್ರವೇಶಕ್ಕೆ ವಂಚಿತರಾಗುತ್ತಾರೆ.
ಹೊಸ ಶಿಕ್ಷಣ ನೀತಿ ಜಾರಿಗೆ ತಂದ ಬಳಿಕ ಗೊಂದಲ್ಲಕ್ಕೆ ಸಿಲುಕಿರೊ ವಿವಿಗಳು
ಕಳೆದ ಎರಡು ವರ್ಷಗದ ಸರಿಯಾದ ಸಮಯಕ್ಕೆ ಪರೀಕ್ಷೆ ನಡೆಸುತ್ತಿಲ್ಲ
ಇದರಿಂದ ವಿದ್ಯಾರ್ಥಿಗಳು ಫಾರೆನ್ಸಿಕ್ ವಿವಿ ಅಡ್ಮಿಷನ್ ನಿಂದವಂಚಿತರಾಗುತ್ತಾರೆ.
ಕೂಡಲೇ ಸಂಬಂಧಿಸಿದ ವಿವಿ ಅವರು ಪ್ರವೇಶ ಸಿಗಯವಂತೆ ಅನುಕೂಲ ಮಾಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: AP POLYCET Results ಬಿಡುಗಡೆಯಾಗಿದೆ; ಈ ಲಿಂಕ್ ಬಳಸಿ ಚೆಕ್ ಮಾಡಿ
ವಿದ್ಯಾಕಾಶಿ ಧಾರವಾಡ ನಗರದಲ್ಲಿ ಈಗಾಗಲೇ ಮೂರು ವಿಶ್ವವಿದ್ಯಾಲಯಗಳಿವೆ. ಅದರ ಜೊತೆಗೆ ಮೂರು ತಿಂಗಳ ಹಿಂದೆಯಷ್ಟೇ ಫಾರೆನ್ಸಿಕ್ ವಿವಿ ಕ್ಯಾಂಪಸ್ ಕೂಡಾ ಕಾಲಿಟ್ಟಿದೆ ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಇಲ್ಲಿ ಅಡ್ಮಿಷನ್ ಪಡೆಯಬಹುದು ಎಂದು ಆಸೆಯಿಂದ ಇದ್ದರು. ಆದರೆ ಈಗ ಯಾರದೋ ತಪ್ಪಿಗೆ, ಯಾರೋ ಶಿಕ್ಷೆ ಅನುಭವಿಸುವಂತೆ ಆಗಿದೆ.
ಒಟ್ಟಿನಲ್ಲಿ ನಮ್ಮ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಮೊದಲ ಬ್ಯಾಚ್ ನಲ್ಲೇ ನಮ್ಮ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, ಫಾರೆನ್ಸಿಕ್ ಕಲಿತುಷ ನಮ್ಮ ರಾಜ್ಯದ ಪೊಲೀಸ್ ಇಲಾಖೆಗೆ ಸೇರಬಹುದಿತ್ತು. ಆದರೆ ಈಗ ನಿರಾಸೆಯಿಂದ ಇರುವಂತೆ ಆಗಿದೆ ಅಷ್ಟೇ.
ವರದಿ: ಮಂಜುನಾಥ ಯಡಳ್ಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ