• ಹೋಂ
  • »
  • ನ್ಯೂಸ್
  • »
  • Jobs
  • »
  • Mysuru: ಚಿರತೆ ದಾಳಿಗೆ ಹೆದರಿ ಶಾಲೆಗೆ ಗೈರಾಗುತ್ತಿರುವ ವಿದ್ಯಾರ್ಥಿಗಳು

Mysuru: ಚಿರತೆ ದಾಳಿಗೆ ಹೆದರಿ ಶಾಲೆಗೆ ಗೈರಾಗುತ್ತಿರುವ ವಿದ್ಯಾರ್ಥಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಕ್ಕಳು ಗುಂಪಾಗಿ ತೆರಳುವಾಗ  ಯಾವುದಾದರೂ ಪೊದೆಯಲ್ಲಿ ಚಿರತೆ ಇದ್ದರೆ ಈ ಸದ್ದಿಗೆ ಓಡಿಹೋಗುತ್ತದೆ ಎಂಬುದು ಇದಕ್ಕೆ ಕಾರಣ. ಇನ್ನು ಶಿಕ್ಷಣ ಇಲಾಖೆ ಚಿರತೆ ಭೀತಿ ಇರುವ ಹಳ್ಳಿಗಳ ಮಕ್ಕಳಿಗೆ ಅಕ್ಕಪಕ್ಕದ ಊರಿನ ಶಾಲೆಯಲ್ಲಿ ಪಾಠ ಹೇಳಿಕೊಡುವ ವ್ಯವಸ್ಥೆ ಮಾಡಿಕೊಂಡಿದೆ. ಈಗ ಪರೀಕ್ಷೆ ಸಮಯವಾಗಿರುವುದರಿಂದ ಮಕ್ಕಳ ಹಾಜರಿ ಕಡಿಮೆ ಆಗದಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆ ಹರಸಾಹಸಪಡುತ್ತಿದೆ.

ಮುಂದೆ ಓದಿ ...
  • News18
  • 5-MIN READ
  • Last Updated :
  • Share this:

ಮೈಸೂರು: ಬೆಂಗಳೂರಿನಲ್ಲಿ (Bengaluru) ಇಷ್ಟು ದಿನ ಇದ್ದ ಚಿರತೆ ಹಾವಳಿ ಈಗ ಮೈಸೂರಿನಲ್ಲೂ ಆರಂಭವಾಗಿದೆ. ಇದರಿಂದಾ ವಿದ್ಯಾರ್ಥಿಗಳು ಶಾಲೆಗೆ (School) ಬರಲು ಹಿಂದೇಟು ಹಾಕುತ್ತಿದ್ದಾರೆ. ಪಾಲಕರೂ ಸಹ ಆತಂಕಕ್ಕೆ ಒಳಗಾಗಿದ್ದಾರೆ. ಮೈಸೂರು ಟಿ ನರಸೀಪುರದ ಬಹುತೇಕ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಚಿರತೆ ಭೀತಿ ಎದುರಾಗಿದೆ. ಈಗಾಗಲೇ ಚಿರತೆಯು (Leopard) ಇಬ್ಬರು ಮಕ್ಕಳನ್ನು ಕೊಂದಿದೆ. ವಿಷಯ ಹೀಗಿರುವಾಗ ಪಾಲಕರು ಹೆದರಲೇ ಬೇಕಾದ ಪರಿಸ್ಥಿತಿ ನಿಜಕ್ಕೂ (True) ಇದೆ. 30% ಶಾಲೆಗೆ ಮಕ್ಕಳ ಹಾಜರಾತಿಯೂ ಕಡಿಮೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 


ಚಿರತೆ ದಾಳಿಯಿಂದ ಭಯಭೀತರಾಗಿರುವ ತಿ.ನರಸೀಪುರ ತಾಲೂಕಿನ ಕೆಲ ಗ್ರಾಮಗಳ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ ಹರಸಾಹಸ ಪಡುವಂತಾಗಿದೆ. ಕಳೆದ ತಿಂಗಳು ತಿ.ನರಸೀಪುರ ತಾಲೂಕಿನ ಹೊರಳಹಳ್ಳಿಯಲ್ಲಿ ಚಿರತೆಯೊಂದು ಇಬ್ಬರನ್ನು ಕೊಂದಿತ್ತು ಈ ಘಟನೆ ಬಳಿಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕ ಪಡುತ್ತಿದ್ದಾರೆ.


ಇನ್ನು ಕೆಲ ಪಾಲಕರು ತಮ್ಮ ಮಕ್ಕಳನ್ನು ಆಟೋದಲ್ಲಿ ಕಳಿಸುತ್ತಿದ್ದಾರೆ ಮತ್ತೆ ಕೆಲವರು ತಾವೇ ಖುದ್ದಾಗಿ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ವಾಹನದಲ್ಲಿ ಶಾಲೆಗೆ ತಂದು ಬಿಟ್ಟು ಹೋಗುತ್ತಿದ್ದಾರೆ. ಆ ನಂತರ ಶಾಲೆ ಬಿಟ್ಟು ಮನೆಗೆ ತೆರಳುವಾಗಲೂ ಅಷ್ಟೇ ತಮ್ಮದೇ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಇನ್ನು ಕೆಲ ಮಕ್ಕಳು ಗುಂಪು ಗುಂಪಾಗಿ ಮನೆಗೆ ತೆರಳುತ್ತಿದ್ದು ಜೋರಾಗಿ ತಟ್ಟೆ ಬಡಿದುಕೊಂಡು ಮನೆಗೆ ಹೋಗುವಂತೆ ಶಿಕ್ಷಕರು ಸಲಹೆ ನೀಡಿದ್ದಾರೆ.


ಇದನ್ನೂ ಓದಿ: New Courses: ಕಾಲೇಜು ವಿದ್ಯಾರ್ಥಿಗಳಿಗಾಗಿ 4 ಹೊಸ ಆನ್​​ಲೈನ್​ ಕೋರ್ಸ್​ಗಳನ್ನು ಪರಿಚಯಿಸಿದ UGC


ಮಕ್ಕಳು ಗುಂಪಾಗಿ ತೆರಳುವಾಗ  ಯಾವುದಾದರೂ ಪೊದೆಯಲ್ಲಿ ಚಿರತೆ ಇದ್ದರೆ ಈ ಸದ್ದಿಗೆ ಓಡಿಹೋಗುತ್ತದೆ ಎಂಬುದು ಇದಕ್ಕೆ ಕಾರಣ. ಇನ್ನು ಶಿಕ್ಷಣ ಇಲಾಖೆ ಚಿರತೆ ಭೀತಿ ಇರುವ ಹಳ್ಳಿಗಳ ಮಕ್ಕಳಿಗೆ ಅಕ್ಕಪಕ್ಕದ ಊರಿನ ಶಾಲೆಯಲ್ಲಿ ಪಾಠ ಹೇಳಿಕೊಡುವ ವ್ಯವಸ್ಥೆ ಮಾಡಿಕೊಂಡಿದೆ. ಈಗ ಪರೀಕ್ಷೆ ಸಮಯವಾಗಿರುವುದರಿಂದ ಮಕ್ಕಳ ಹಾಜರಿ ಕಡಿಮೆ ಆಗದಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆ ಹರಸಾಹಸ ಪಡುತ್ತಿದೆ.


ದೂರದಿಂದ ನಡೆದು ಬರುವ ಮಕ್ಕಳು


ತಿ.ನರಸೀಪುರದ ಕೆಲವು ಗ್ರಾಮಗಳಲ್ಲಿ ಮಕ್ಕಳು ಒಂದೂವರೆ ಎರಡು ಕಿ.ಮೀ ದೂರ ಕಬ್ಬಿನ ಗದ್ದೆ ಹಾದು ಶಾಲೆಗೆ ಬರಬೇಕು. ಕೆಲವು ಕಡೆ ಪೋಷಕರು ಕೂಲಿ ಕೆಲಸಕ್ಕೆ ಹೋಗುವುದರಿಂದ ಮಕ್ಕಳು ಒಂಟಿಯಾಗಿಯೇ ಶಾಲೆಗೆ ಬರುತ್ತಾರೆ. ಆ ಸಮಯದಲ್ಲಿ ಚಿರತೆ ಎಲ್ಲಿಂದ ದಾಳಿ ಮಾಡುತ್ತದೆ ಎಂದು ತಿಳಿಯುವುದಿಲ್ಲ ಏಕೆಂದರೆ ಇದು ಗ್ರಾಮೀಣ ಭಾಗವಾಗಿರುವುದರಿಂದ ಗದ್ದೆ, ಕಾಡು ಮತ್ತು ಪೊದೆ ಜಾಸ್ತಿ ಇರುವುದರಿಂದ ಭಯ ಪಡುತ್ತಿರುವುದು ಸಹಜವಾಗಿದೆ.




36 ಗ್ರಾಮ ಪಂಚಾಯಿತಿ ಬರುತ್ತವೆ

ತಿ.ನರಸೀಪುರ ತಾಲೂಕಿನಲ್ಲಿ 36 ಗ್ರಾಮ ಪಂಚಾಯಿತಿ ಬರುತ್ತವೆ. ಅದರಲ್ಲಿ ಸೋಸಲೆ ಹೋಬಳಿ, ದೊಡ್ಡೆಬಾಗಿಲು, ಮುಸುಳವಾಡಿ, ಕನ್ನಾಯಕನಹಳ್ಳಿ, ಹೊರಳಹಳ್ಳಿ, ಚಿದರವಳ್ಳಿ, ನೆರಗ್ಯಾತನಹಳ್ಳಿ, ವಡ್ಡಗಾಮಿಸ್ವಾಮಿ ಬೆಟ್ಟ, ಎಸ್‌ಕೆಬಿ ಹುಂಡಿ, ಸಿದ್ದನಹುಂಡಿ, ವ್ಯಾಸರಾಜಪುರ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಿದೆ. ಸೋಸಲೆ, ಮುತ್ತಲುವಾಡಿ, ದೊಡ್ಡೆಬಾಗಿಲು ಹಾಗೂ ಹುಕ್ಕುಳಗೆರೆ ಗ್ರಾಪಂ ವ್ಯಾಪ್ತಿಗೆ ಈ ಹಳ್ಳಿಗಳು ಈ ಸ್ಥಳಕ್ಕೆ ಸೇರುತ್ತವೆ ಎಂದು ವಿಜಯಕರ್ನಾಟಕ ವರದಿ ಮಾಡಿದೆ. ಹೊರಳಹಳ್ಳಿಯಲ್ಲಿ ಚಿರತೆ ಬಾಲಕನನ್ನು ಕೊಂದ ಬಳಿಕ ಎಲ್ಲರೂ ಆತಂಕಗೊಂಡಿದ್ದು ತಮ್ಮ ಮಕ್ಕಳಿಗೂ ಇದೇ ಸ್ಥಿತಿ ಎದುರಾದರೆ ಎಂಬ ಆತಂಕದಿಂದ ಮಕ್ಕಳನ್ನು ಶಾಲಗೆ ಕಳಿಸುತ್ತಿಲ್ಲ ಎಂದು ವರದಿಯಾಗಿದೆ. ಈ ಸಮಸ್ಯೆಗೆ ಪರಿಹಾರ ಯಾವಾಗ ಸಿಗುತ್ತದೆ ಎಂಬುದು ತಿಳಿಯದಾಗಿದೆ.

First published: