ಶಾಲಾ ಕಾಲೇಜುಗಳಲ್ಲಿ (College) ವಿವಿಧ ರೀತಿಯ ವಿದ್ಯಾರ್ಥಿಗಳು ಕಂಡುಬರುತ್ತಾರೆ. ಕೆಲವರು ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ಹೊಂದಿರುವವರಿದ್ದಾರೆ ಇನ್ನು ಕೆಲವರು ಮನೆಯವರ (Home) ಒತ್ತಾಯಕ್ಕಾಗಿ ಇಷ್ಟ ಇಲ್ಲದೇ ಬರುತ್ತಾರೆ. ಇನ್ನು ಕೆಲವರು ಆಕಡೆಯೂ ಇಲ್ಲಾ ಈ ಕಡೆಯೂ ಇಲ್ಲಾ. ಆದರೆ ಕೆಲವು ವಿದ್ಯಾರ್ಥಿಗಳು ತುಂಬಾ ಅತಿ ಬುದ್ದಿವಂತರಂತೆ ವರ್ತಿಸುತ್ತಾರೆ. ಇನ್ನು ಕೆಲವು ಸಮಯದಲ್ಲಿ ಅವರು ತುಂಬಾ ತುಂಟರಾಗಿರುತ್ತಾರೆ. ಇಲ್ಲೊಬ್ಬ ವಿದ್ಯಾರ್ಥಿಯ (Student) ಧೈರ್ಯ ನೋಡಿ. ಆನ್ಸರ್ ಪೇಪರ್ನಲ್ಲಿ (Answer Paper) ಈತ ಹಾಡೊಂದನ್ನು ಬರೆದಿದ್ದಾನೆ. ಇದು ತುಂಬಾ ವೈರಲ್ ಆಗಿದೆ. ಹಾಗಾದ್ರೆ ಈತ ಬರೆದದ್ದೇನು ನೋಡಿ.
ಮೂರನೇ ಪ್ರಶ್ನೆಗೆ ಉತ್ತರವಾಗಿ, ಪಿಕೆ ಚಿತ್ರದ ಹಾಡು - ಭಗವಾನ್ ಹೈ ಕಹಾನ್ ರೇ ತೂ? ಎಂದು ಅದೇ ಸಮಯದಲ್ಲಿ ವಿದ್ಯಾರ್ಥಿ ಇನ್ನೊಂದು ಪ್ರಶ್ನೆಗೆ ಉತ್ತರ ಬರೆದಿದ್ದಾನೆ. ಇನ್ನೊಂದು ಪ್ರಶ್ನೆಗೆ ನೀವು ಒಳ್ಳೆ ಟೀಚರ್ ಆದ್ರೆ ನಾನೇ ಓದಿಲ್ಲ ಕ್ಷಮಿಸಿ ಎಂದು ಬರೆದಿದ್ದಾನೆ. ಈ ಎಲ್ಲಾ ಸಾಲುಗಳಿಂದ ಶಿಕ್ಷಕ ಚಕತರಾಗಿ ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ಆದ ನಕಲು ಉತ್ತರ ಪತ್ರಿಕೆಯನ್ನು
ಇದನ್ನು ಓದಿದ ನಂತರ ಶಿಕ್ಷಕರು ತಮಾಷೆಯ ಹೇಳಿಕೆಯನ್ನು ನೀಡಿದ್ದಾರೆ. ನೀನು ಇನ್ನಷ್ಟು ಉತ್ತರ ಬರೆಯಬೇಕಿತ್ತು. ನಿನ್ನ ಕ್ರಿಯೇಟಿವಿಟಿ ತುಂಬಾ ಚೆನ್ನಾಗಿದೆ. ಆದರೆ ಇಲ್ಲಿ ಪ್ರಯೋಜನ ಆಗುವುದಿಲ್ಲ ಎಂಬ ಕ್ಯಾಪ್ಶನ್ ಬರೆದು ಇದನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ Instagram ನಲ್ಲಿ cu_memes_cuians ಹೆಸರಿನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ