• ಹೋಂ
  • »
  • ನ್ಯೂಸ್
  • »
  • jobs
  • »
  • ChatGPT ಬಳಸಿಕೊಂಡು 20 ನಿಮಿಷಗಳಲ್ಲಿ 2,000 ಪದಗಳ ಪ್ರಬಂಧ ಸಿದ್ಧಪಡಿಸಿದ ವಿದ್ಯಾರ್ಥಿ; ಪ್ರಾಧ್ಯಾಪಕರ ಮುಂದೆ ಬಯಲಾಯ್ತು ಗುಟ್ಟು!

ChatGPT ಬಳಸಿಕೊಂಡು 20 ನಿಮಿಷಗಳಲ್ಲಿ 2,000 ಪದಗಳ ಪ್ರಬಂಧ ಸಿದ್ಧಪಡಿಸಿದ ವಿದ್ಯಾರ್ಥಿ; ಪ್ರಾಧ್ಯಾಪಕರ ಮುಂದೆ ಬಯಲಾಯ್ತು ಗುಟ್ಟು!

ಪೀಟರ್​

ಪೀಟರ್​

ಪೀಟರ್‌ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ ಸಾಫ್ಟ್‌ವೇರ್ 20 ನಿಮಿಷದಲ್ಲಿ ಅತ್ಯುತ್ತಮ ಪ್ರಬಂಧವನ್ನು ಸಿದ್ಧಪಡಿಸಿದೆ. ಪ್ರಬಂಧ ಬರೆಯುವ ಪ್ರಯೋಗವನ್ನು ಮಾತ್ರವೇ ತಾನು ಮಾಡಿರುವುದಾಗಿ ಹೇಳಿಕೊಂಡಿರುವ ಪೀಟರ್ ಅದಕ್ಕಾಗಿಯೇ ಹಿಂದಿನ ವರ್ಷದ ಮೌಲ್ಯಮಾಪನವನ್ನು ಪ್ರಾಧ್ಯಾಪಕರಿಂದ ಪಡೆದುಕೊಂಡಿದ್ದೆ ಎಂದು ತಿಳಿಸಿದ್ದಾನೆ.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

ಆರ್ಟಿಫಿಶಿಯಲ್ ಇಂಟೆಲಿಜನ್ಸ್ (Artificial Intelligence)ಮೂಲಕ ಕಾರ್ಯನಿರ್ವಹಿಸುವ ಚಾಟ್‌ಜಿಪಿಟಿಯನ್ನು ಬಳಸಿಕೊಂಡು 2,000 ಪದಗಳ ಪ್ರಬಂಧವನ್ನು ಪೀಟರ್ ಸ್ನೆಪ್‌ವಾಂಜರ್ಸ್ ಎಂಬ ವಿದ್ಯಾರ್ಥಿ ಸಿದ್ಧಪಡಿಸಿದ್ದು, ವಿದ್ಯಾರ್ಥಿ ತಾನು ಕೈಗೊಂಡ ಪ್ರಯೋಗದಲ್ಲಿ ಸಫಲನಾಗಿದ್ದಾನೆ ಎಂದು ವರದಿಗಳಿಗೆ ತಿಳಿಸಿದ್ದಾರೆ. ಕೋರ್ಸ್ (Course) ಭಾಗವಾಗಿ ವಿಶ್ವವಿದ್ಯಾನಿಲಯ ನಿರ್ದಿಷ್ಟ ವಿಷಯದ ಮೇಲೆ ಪ್ರಬಂಧ ಮಂಡಿಸಲು ತಿಳಿಸಿತ್ತು. ಆದರೆ ಪೀಟರ್ ಲೈಬ್ರರಿ ಹಾಗೂ ಪುಸ್ತಕಗಳ (Book) ನೆರವನ್ನು ಪಡೆಯುವ ಬದಲಿಗೆ ನೇರವಾಗಿ ಚಾಟ್‌ಜಿಪಿಟಿಯ ಸಹಾಯವನ್ನು ಪಡೆದುಕೊಂಡು ಬರೇ 20 ನಿಮಿಷಗಳಲ್ಲಿ 2,000 ಪದಗಳ ಪ್ರಬಂಧ ಸಿದ್ಧಪಡಿಸಿದ್ದಾನೆ.


ಚಾಟ್‌ಜಿಪಿಟಿ ಸಹಾಯ ಪಡೆದು ಪ್ರಬಂಧ ರಚನೆ


ಮೊದಲೆಲ್ಲಾ ಪ್ರಬಂಧ ಸಿದ್ಧಪಡಿಸಲು ಸಾಕಷ್ಟು ಪುಸ್ತಕಗಳು ಹಾಗೂ ಲೈಬ್ರರಿಗಳಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸಬೇಕಾಗಿತ್ತು. ಇಂಟರ್ನೆಟ್ ಬಂದ ನಂತರ ಈ ಕಷ್ಟ ಸಾಕಷ್ಟು ಪರಿಹಾರವಾಗಿ ಸುಲಭವಾಗಿದೆ. ವಿಷಯಗಳನ್ನು ಸಂಗ್ರಹಿಸಲು ಇಂಟರ್ನೆಟ್‌ನ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಪೀಟರ್ ಪ್ರಬಂಧ ಸಿದ್ಧಪಡಿಸಲು ಚಾಟ್‌ಜಿಪಿಟಿಯ ಸಹಾಯ ಪಡೆಯಲು ಮುಂದಾಗಿದ್ದರು.


ಪ್ರಯೋಗ ಮಾಡಲು ನಿರ್ಧರಿಸಿದ ವಿದ್ಯಾರ್ಥಿ


ಚಾಟ್‌ಜಿಪಿಟಿ ಮಾಡುವ ಅದ್ಭುತ ಕೆಲಸಗಳನ್ನು ಕಂಡುಕೊಂಡಿದ್ದ ಪೀಟರ್ ತನ್ನ ಪ್ರಬಂಧಕ್ಕೆ ಚಾಟ್‌ಜಿಪಿಟಿಯನ್ನು ಬಳಸಿಕೊಳ್ಳಬಹುದೇ ಎಂಬ ಪ್ರಯೋಗವನ್ನು ಮಾಡಲು ನಿರ್ಧರಿಸಿದರು. ಅದಕ್ಕಾಗಿಯೇ ಅಂತಿಮ ವರ್ಷದ ವಿಶ್ಲೇಷಣೆಯನ್ನು ಆಧಾರವಾಗಿ ಪರಿಗಣಿಸಬಹುದೇ ಎಂದು ಪೀಟರ್ ರಸೆಲ್ ಗ್ರೂಪ್ ವಿಶ್ವವಿದ್ಯಾಲಯದ ಅಧ್ಯಾಪಕರಲ್ಲಿ ಕೇಳಿದರು.


ಇದನ್ನೂ ಓದಿ: Letter Writing: ಪರೀಕ್ಷೆಯಲ್ಲಿ ಈ ರೀತಿ ಪತ್ರಲೇಖನ ಬರೆದರೆ ಹತ್ತಕ್ಕೆ 10 ಅಂಕ ಫಿಕ್ಸ್​​!


20 ನಿಮಿಷಗಳಲ್ಲಿ ಪ್ರಬಂಧ ರಚನೆ


ಪೀಟರ್ ಪುಸ್ತಕಗಳಿಂದ ತನ್ನ ಪ್ರಬಂಧಕ್ಕೆ ಬೇಕಾಗಿರುವ ನೆರವನ್ನು ಪಡೆಯುವ ಬದಲಿಗೆ, ಓಪನ್ ಸೋರ್ಸ್ ಚಾಟ್‌ಜಿಪಿಟಿ ಸಾಫ್ಟ್‌ವೇರ್‌ಗೆ 2000 ಪದಗಳ ಪ್ರಬಂಧದ ಟಾಸ್ಕ್ ಅನ್ನು ನೀಡಿದರು. ಬರೇ 20 ನಿಮಿಷಗಳಲ್ಲಿ ಚಾಟ್‌ಜಿಪಿಟಿ ಪೀಟರ್‌ಗೆ ಪ್ರಬಂಧ ಸಿದ್ಧಪಡಿಸಿ ಕೊಟ್ಟಿದೆ. ಪೀಟರ್ ಕೃತಕವಾಗಿ ಪ್ರಬಂಧ ಸಿದ್ಧಪಡಿಸಿರುವುದು ಪ್ರಾಧ್ಯಾಪಕರ ಗಮನಕ್ಕೆ ಬಂದಿದ್ದು, ಯಾವುದೇ ಶ್ರಮವಹಿಸದೇ ಪ್ರಬಂಧ ಸಿದ್ಧಪಡಿಸಿದ್ದಾರೆ ಎಂಬುದನ್ನು ಕಂಡುಕೊಂಡಿದ್ದಾರೆ.




ಪೀಟರ್‌ಗೆ ಪ್ರಾಧ್ಯಾಪಕರು ನೀಡಿದ ಅಂಕ ಜಸ್ಟ್ ಪಾಸ್ ಮಾತ್ರ


ಆದರೆ ಪೀಟರ್‌ಗೆ ಆತನ ಪ್ರಾಧ್ಯಾಪಕರು 53 ರಲ್ಲಿ ಬರೇ ತೇರ್ಗಡೆ ಅಂಕವನ್ನು ನೀಡಿದ್ದು ಪೀಟರ್ ಕೆಲಸವನ್ನು ಸೋಮಾರಿತನ ಎಂದು ಉಲ್ಲೇಖಿಸಿದ್ದು, ಮೋಸದಿಂದ ರೊಬೋಟ್‌ನ ಸಹಾಯದಿಂದ ಪ್ರಬಂಧ ಸಿದ್ಧಪಡಿಸಿರುವುದಕ್ಕೆ ಪೀಟರ್ ಛೀಮಾರಿ ಹಾಕಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.


ಪೀಟರ್‌ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ ಸಾಫ್ಟ್‌ವೇರ್ 20 ನಿಮಿಷದಲ್ಲಿ ಅತ್ಯುತ್ತಮ ಪ್ರಬಂಧವನ್ನು ಸಿದ್ಧಪಡಿಸಿದೆ. ಪ್ರಬಂಧ ಬರೆಯುವ ಪ್ರಯೋಗವನ್ನು ಮಾತ್ರವೇ ತಾನು ಮಾಡಿರುವುದಾಗಿ ಹೇಳಿಕೊಂಡಿರುವ ಪೀಟರ್ ಅದಕ್ಕಾಗಿಯೇ ಹಿಂದಿನ ವರ್ಷದ ಮೌಲ್ಯಮಾಪನವನ್ನು ಪ್ರಾಧ್ಯಾಪಕರಿಂದ ಪಡೆದುಕೊಂಡಿದ್ದೆ ಎಂದು ತಿಳಿಸಿದ್ದಾನೆ.


ತನ್ನಲ್ಲಿರುವ ಸಂದೇಹಗಳನ್ನು ನಿವಾರಿಸಿಕೊಂಡೆ


ಮೆಶೀನ್‌ನಿಂದ ಸಿದ್ಧಪಡಿಸಿದ ಪ್ರಬಂಧಕ್ಕೆ ತನಗೆ ಎಷ್ಟು ಅಂಕ ದೊರೆಯಬಹುದೆಂಬ ಕುತೂಹಲ ತನಗಿತ್ತು ಎಂದು ತಿಳಿಸಿರುವ ಪೀಟರ್, ಪ್ರಾಧ್ಯಾಪಕರು ಪ್ರಬಂಧವನ್ನು ನಾನೇ ಸ್ವಂತ ಬರೆದಿಲ್ಲ ಎಂಬುದನ್ನು ಪತ್ತೆಮಾಡುತ್ತಾರೆಯೇ ಎಂಬ ಅನುಮಾನಕ್ಕೆ ಕೂಡ ಉತ್ತರ ಕಂಡುಕೊಳ್ಳುವ ಸನ್ನಾಹದಲ್ಲಿದ್ದೆ ಎಂದು ತಿಳಿಸಿದ್ದಾರೆ.


ರೊಬೋಟ್ ಮೂಲಕ ಪ್ರಬಂಧ ರಚನೆ ಬಹುಕಷ್ಟ


ರೊಬೋಟ್ ಬಳಸಿ ಸಿದ್ಧಪಡಿಸಿರುವ ಪ್ರಬಂಧ ಕೈಯಲ್ಲಿ ಬರೆದ ಪ್ರಬಂಧಕ್ಕಿಂತ ಹೆಚ್ಚು ಕಷ್ಟಕರವಾಗಿದ್ದು, ರೊಬೋಟ್‌ಗೆ ಬೇಕಾದ ಸಲಕರಣೆಗಳನ್ನು ಒದಗಿಸುವುದು ಅದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು ಸವಾಲಿನ ಕೆಲಸವಾಗಿತ್ತು ಎಂಬ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಾಧ್ಯಾಪಕರ ಮುಂದೆ ಪ್ರಬಂಧ ಮಂಡಿಸುವ ಮುನ್ನ ಸಾಕಷ್ಟು ಎಡಿಟ್ ಮಾಡಿರುವೆ ಎಂಬುದು ಪೀಟರ್ ಮಾತಾಗಿದೆ.


20 ನಿಮಿಷದಲ್ಲಿ ರೆಡಿಯಾಯ್ತು ಪ್ರಬಂಧ


12 ವಾರಗಳಿಂದ ಕಲಿತ ವಿಷಯದ ಮೇಲೆ ಪ್ರಬಂಧ ತಯಾರಿಸಲು ತೆಗೆದುಕೊಂಡಿದ್ದು ಬರೇ 20 ನಿಮಿಷವಾದರೂ ಇದು ಕೆಟ್ಟ ಅನುಭವವಾಗಿರಲಿಲ್ಲ. ಬೇಕೆಂದೇ ಚಾಟ್‌ಜಿಪಿಟಿ ತಯಾರಿಸಿದ ಪ್ರಬಂಧವನ್ನು ಪ್ರಾಧ್ಯಾಪಕರಿಗೆ ನೀಡಿದ್ದೆ ಎಂದು ತಿಳಿಸಿರುವ ಪೀಟರ್ ತನ್ನಲ್ಲಿದ್ದ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಳ್ಳಲು ಹೀಗೆ ಮಾಡಿದೆ ಎಂದು ತಿಳಿಸಿದ್ದಾನೆ.

First published: