ಶುಲ್ಕ ಪಾವತಿಸದ 12 ವರ್ಷದ ಬಾಲಕನನ್ನು ತರಗತಿಯ ಹೊರಗೆ ಕುಳಿತುಕೊಳ್ಳುವಂತೆ ಮಾಡಿದ ಆರೋಪದ ಮೇಲೆ ಶಿಕ್ಷಕರ ವಿರುದ್ಧ ಬಾಲಕನ ತಾಯಿ ಪೊಲೀಸ್ (Police) ಕಂಪ್ಲೇಂಟ್ ನೀಡಿದ್ದಾರೆ. ಎಷ್ಟು ದಿನದಿಂದ ಈ ವಿದ್ಯಾರ್ಥಿಯನ್ನು ಹೊರಗೆ ಕೂರಿಸಲಾಗಿತ್ತು ಎಂದು ನೀವು ಕೇಳಿದರೆ ನಿಮಗೂ ಖಂಡಿತ ಬೇಸರ ಆಗುತ್ತೆ. ಒಬ್ಬ ವಿದ್ಯಾರ್ಥಿಯನ್ನು (Students) ಈ ರೀತಿ ಅವಮಾನಿಸುವುದು ನಿಜಕ್ಕೂ ಸರಿಯಲ್ಲ ಎಂದು ನಿಮಗೆ ಅನಿಸಿಯೇ ಅನಿಸುತ್ತೆ. ಇಲ್ಲಿನ ಶಾಲೆಯೊಂದರ (School) ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಹಾಗಾದರೆ ಆಗಿದ್ದೇನು ಎಂಬ ಮಾಹಿತಿಗಾಗಿ ಇದನ್ನು ಸಂಪೂರ್ಣವಾಗಿ ಓದಿ.
ಬಾಲಕನ ತಾಯಿ ಮಂಗಳವಾರ ಉಪನಗರ ವಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಶಾಲೆಯ ಅಧಿಕಾರಿಗಳು ತನ್ನ ಇಬ್ಬರು ಪುತ್ರರು, 8 ನೇ ತರಗತಿಯಲ್ಲಿ ಓದುತ್ತಿರುವ 12 ವರ್ಷದ ಮತ್ತು ಅವನ ಕಿರಿಯ ಸಹೋದರನಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಲವು ಹಣಕಾಸಿನ ಸಮಸ್ಯೆಗಳಿಂದ ಕುಟುಂಬವು ತನ್ನ 12 ವರ್ಷದ ಮಗನ ವಾರ್ಷಿಕ ಶುಲ್ಕ 7,500 ರೂ.ಗಳನ್ನು ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಸ್ಕೂಲ್ ಫೀಸ್ ಕಟ್ಟಲು ಕಷ್ಟವಾದ ಕಾರಣ ಕೆಲ ಸಮಯಗಳು ಹಾಗೇ ಕಳೆಯಬೇಕಾಗಿ ಬಂದಿದೆ. ಆ ಬಾಲಕನ ತಂದೆಯ ಆರೋಗ್ಯ ಸರಿ ಇಲ್ಲದ ಕಾರಣ ಅವರಿಗೆ ಶುಲ್ಕ ಕಟ್ಟಲು ತೊಂದರೆ ಉಂಟಾಗಿದೆ.
ಇದನ್ನೂ ಓದಿ: SSLC ವಿಜ್ಞಾನ ಪರೀಕ್ಷೆಗೆ 14 ಸಾವಿರ ವಿದ್ಯಾರ್ಥಿಗಳು ಗೈರು!
ಅವರ ಪತಿ ಕ್ಷಯ ರೋಗಿಗಳಾಗಿದ್ದು, ಕೆಲಸ ಮಾಡಲು ಸಾಧ್ಯವಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಪ್ರಸಕ್ತ ಶೈಕ್ಷಣಿಕ ವರ್ಷದ ಶುಲ್ಕ ಪಾವತಿಸದ ಕಾರಣ ಬಾಲಕನನ್ನು ತರಗತಿಯ ಹೊರಗೆ ಕೂರಿಸಲಾಗುತ್ತಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಹುಡುಗನು ತಾನು ಎದುರಿಸಿದ ಅವಮಾನದ ಕಾರಣ ಅಳುತ್ತಾ ಮನೆಗೆ ಹಿಂದಿರುಗುತ್ತಿದ್ದನು ಎಂದು ಅವರು ಹೇಳಿದರು. ಜನವರಿಯಲ್ಲಿ ನಡೆದ ಯುನಿಟ್ ಪರೀಕ್ಷೆಗೂ ಹಾಜರಾಗಲು ಅವಕಾಶ ನೀಡಿರಲಿಲ್ಲ.
2000ನೇ ಇಸವಿಯ ಬಾಲನ್ಯಾಯ ಕಾಯ್ದೆಯ ಸೆಕ್ಷನ್ 23 (ಮಗುವಿನ ಮೇಲಿನ ಕ್ರೌರ್ಯ) ಅಡಿಯಲ್ಲಿ ಇಬ್ಬರು ಶಿಕ್ಷಕರು ಮತ್ತು ಶಾಲಾ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ, ಪ್ರಕರಣದಲ್ಲಿ ಯಾವುದೇ ಬಂಧನವಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಆದರೂ ಒಂದು ವಿದ್ಯಾರ್ಥಿಯನ್ನು ಅವನದಲ್ಲದ ತಪ್ಪಿಗಾಗಿ ಈ ರೀತಿ ಶಿಕ್ಷೆಗೆ ಒಡ್ಡುವುದು ಅಷ್ಟು ಸರಿಯಲ್ಲ. ಆ ಬಾಲಕ ಅನುಭವಿಸಿದ ಅವಮಾನಕ್ಕೆ ಈ ಶಿಕ್ಷಕರು ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬ ಮಾತು ಜನರಿಂದ ಕೇಳಿ ಬರುತ್ತಿದೆ. ಒಂದು ಶಾಲೆಯಲ್ಲಿ ಶುಲ್ಕಕ್ಕಾಗಿ ಈ ರೀತಿಯೆಲ್ಲಾ ಮಾಡುತ್ತಾರಾ? ಎಂಬ ಪ್ರಶ್ನೆ ಎಂಥವರಿಗಾದರೂ ಉದ್ಭವವಾಗುವ ರೀತಿಯಲ್ಲಿ ಈ ಘಟನೆ ನಡೆದಿದೆ.
ಈ ವರ್ಷ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ
ಈ ವರ್ಷ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡಿರುವುದು ಪಾಲಕರಿಗೆ ದೊಡ್ಡ ಹೊಣೆಯಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಪಾಲಕರಿಗೆ ಕಬ್ಬಿಣದ ಕಡಲೆಯಾಗುತ್ತಿದೆ. ಹಿಂದಿನ ವರ್ಷಕ್ಕಿಂತ ಈ ವರ್ಷ 30 ರಿಂದ 40 ಪ್ರತಿಶತ ಶುಲ್ಕ ಹೆಚ್ಚಳ ಮಾಡಿದ ಕುರಿತು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಈ ರೀತಿ ಶುಲ್ಕ ಹೆಚ್ಚಳ ಮಾಡಿರುವುದು ಅಸಂವಿಧಾನಿಕ ಎಂದು ಹೇಳಿದ್ದಾರೆ. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಇದನ್ನು ಪೂರ್ತಿ ಓದಿ. ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದರೆ ಈ ಕುರಿತು ಯೋಚಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ