• ಹೋಂ
  • »
  • ನ್ಯೂಸ್
  • »
  • Jobs
  • »
  • Vijayanagara: ಶಾಲೆಗೆ ಹೋಗುತ್ತಿದ್ದ 4 ವಿದ್ಯಾರ್ಥಿಗಳಿಗೆ ಕಚ್ಚಿದ ಹುಚ್ಚುನಾಯಿ!

Vijayanagara: ಶಾಲೆಗೆ ಹೋಗುತ್ತಿದ್ದ 4 ವಿದ್ಯಾರ್ಥಿಗಳಿಗೆ ಕಚ್ಚಿದ ಹುಚ್ಚುನಾಯಿ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನಾಲ್ವರು ಮಕ್ಕಳು ಸೇರಿದಂತೆ ಹಲವು ಜನರ ಮೇಲೆ ಹುಚ್ಚು ನಾಯಿ ಏಕಾಏಕಿ ದಾಳಿಮಾಡಿದ ಘಟನೆ ಇಂದು ಬೆಳಕಿಗೆ ಬಂದಿದೆ. ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ 12ನೇ ವಾರ್ಡಿನಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಇನ್ನೂ ಕೆಲವು ದಿನ ರಜೆ ನೀಡಬೇಕಾಗಿ ಬಂದಿದೆ. 

  • Share this:

ವಿಜಯನಗರ: ಮಕ್ಕಳ ಮೇಲೆ ಏಕಾಏಕಿ ನಾಯಿ ದಾಳಿ (Dog Attack) ಮಾಡಿರುವ ಸಂಗತಿ ನಡೆದಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಈ ರೀತಿ ಸಂಕಷ್ಟ ಎದುರಾದರೆ ಮಕ್ಕಳನ್ನು ಶಾಲೆಗೆ (School) ಕಳಿಸುವುದಾದರೂ ಹೇಗೆ ಎಂದು ಪಾಲಕರು ಪ್ರಶ್ನೆ ಮಾಡುತ್ತಿದ್ದಾರೆ. ಮಕ್ಕಳ ಮೇಲೆ ಹುಚ್ಚು (Mad) ನಾಯಿ ಏಕಾಏಕಿ ದಾಳಿ ಮಾಡಿರುವುದರಿಂದ ವಿದ್ಯಾರ್ಥಿಗಳಿಗೆ ತೀವೃ ಗಾಯವಾಗಿದೆ ಭಯವೂ ಸೃಷ್ಟಿಯಾಗಿದೆ. ಮಕ್ಕಳು ಶಾಲೆಗ ಬರಲು ಹೆದರುವಂತಾಗಿದೆ. ಅದೂ ಬರಿ ಬೀದಿನಾಯಿಯಲ್ಲ ಅದೊಂದು ಹುಚ್ಚು ನಾಯಿ (Dog) ಎಂದು ತಿಳಿದುಬಂದಿದೆ.


ಬೆಂಗಳೂರಿನಲ್ಲಿ ಬೀದಿ ನಾಯಿ  ಹಾವಳಿ ಮಾತ್ರ ನಿಲ್ಲುತ್ತಿಲ್ಲ. ನಿರ್ಜನ ಪ್ರದೇಶದಲ್ಲಿ ಒಬ್ಬೊಬ್ಬರೇ ತಿರುಗಾಡುವಾಗ ದಿಢೀರ್ ಎದುರಿಗೆ ಬರುವ ಬೀದಿನಾಯಿಗಳು ದಾಳಿ ಮಾಡುತ್ತಿವೆ. ಮಕ್ಕಳ ಮೇಲೆಯೂ ಬೀದಿನಾಯಿಗಳು ದಾಳಿ ನಡೆದಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ.


ಶಾಲಾ ಮಕ್ಕಳ ಮೇಲೆ ದಾಳಿ ಮಾಡಿದ ಹುಚ್ಚ ನಾಯಿ
ನಾಲ್ವರು ಮಕ್ಕಳು ಸೇರಿದಂತೆ ಹಲವು ಜನರ ಮೇಲೆ ಹುಚ್ಚು ನಾಯಿ ಏಕಾಏಕಿ ದಾಳಿಮಾಡಿದ ಘಟನೆ ಇಂದು ಬೆಳಕಿಗೆ ಬಂದಿದೆ. ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ 12ನೇ ವಾರ್ಡಿನಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಇನ್ನೂ ಕೆಲವು ದಿನ ರಜೆ ನೀಡಬೇಕಾಗಿ ಬಂದಿದೆ.


ಮಕ್ಕಳಿಗೆ ಬೆನ್ನು, ಕೈ, ಕಾಲು, ಮುಖದ ಭಾಗಕ್ಕೆ ಕಚ್ಚಿದ ಹುಚ್ಚು ನಾಯಿ
ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ ಒಂದೇ ಒಂದು ಹುಚ್ಚು ನಾಯಿ ಸರಣಿಯಲ್ಲಿ ನಾಲ್ಕು ಮಕ್ಕಳಿಗೆ ಕಚ್ಚಿದೆ. ಇನ್ನು ವಿದ್ಯಾರ್ಥಿಗಳಿಗೆ ಚುಚ್ಚು ಮದ್ದು ಹಾಕಿಸಿ ಅವರ ಆರೈಕೆ ಮಾಡುವುದು ಒಂದೆಡೆಯಾದರೆ. ಅವರು ಶಾಲೆಗೆ ಹಾಜರಾಗಲು ತೊಂದರೆ ಉಂಟಾಗುತ್ತಿದೆ. ವಿದ್ಯಾರ್ಥಿಗಳ ಬೆನ್ನು, ಕೈ, ಕಾಲು, ಮುಖದ ಭಾಗಕ್ಕೆ ಕಚ್ಚಿದ್ದು ನೋವಿನಿಂದ ಮಕ್ಕಳು ಬಳಲುತ್ತಿದ್ದಾರೆ.


ಇದನ್ನೂ ಓದಿ: Exam Paper Leak: ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ! ಪರೀಕ್ಷೆ ಮುಂದೂಡಿಕೆ


ಫಾರನ್ ಎನ್ನುವ ಬಾಲಕನಿಗೆ ತೀವೃ ಗಾಯ


ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಫಾರನ್ ಎನ್ನುವ ಬಾಲಕನಿಗೆ ಹೆಚ್ಚಿನ ಚಿಕಿತ್ಸೆ ಗಾಗಿ ಬಳ್ಳಾರಿಗೆ ರವಾನೆ ಮಾಡಲಾಗಿದೆ. ಮೂರು ಜನ ವಿದ್ಯಾರ್ಥಿಗಳಿಗೆ ಅಷ್ಟೇನು ತೊಂದರೆಯಾಗಿಲ್ಲ. ಆದರೆ ಫಾರನ್ ಎನ್ನುವ ಬಾಲಕನಿಗೆ ತೀವೃವಾಗಿ ತೊಂದರೆ ಉಂಟಾಗಿದೆ. ಹೆಚ್ಚಿನ ಚಿಕಿತ್ಸೆ ನೀಡುವ ಅಗತ್ಯತೆ ಎದುರಾಗಿದೆ. ಆ ಸಲುವಾಗಿ ಆ ಬಾಲಕನನ್ನು ಬಳ್ಳಾರಿಯ ಇನ್ನೊಂದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.




ಶಾಲೆಗೆ ಹೋಗುವ ಮಕ್ಕಳಿಗೆ ಸಾರ್ವಜನಿಕರಿಗೆ ಎಲ್ಲರಿಗೂ ಹುಚ್ಚುನಾಯಿ ಕಡಿತ ಒಂದು ದೊಡ್ಡ ಗಂಡಾಂತರವೇ ಸರಿ ಯಾಕೆಂದರೆ ಹುಚ್ಚು ನಾಯಿ ಕಡಿತದಿಂದ ಮಾರಣಾಂತಿಕ ಖಾಯಿಲೆ ಕೂಡಾ ಉಂಟಾಗುತ್ತದೆ. ಸಾರ್ವಜನಿಕರ ಮೇಲೂ ಈ ನಾಯಿ ದಾಳಿ ಮಾಡಿದೆ. ನಾಯಿಯನ್ನು ಸೆರೆ ಹಿಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ.


ಈ ಹಿಂದೆಯೂ ನಡೆದಿತ್ತು ಇದೇ ರೀತಿ ಘಟನೆ


ಬಿಬಿಎಂಪಿ ವ್ಯಾಪ್ತಿಯ ಲಕ್ಷ್ಮಿದೇವಿ ನಗರದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ದಾಳಿ ನಡೆದಿತ್ತು. ಭಾನುವಾರ ರಾತ್ರಿ ತಂದೆ ಜೊತೆ ತೆರಳುತ್ತಿದ್ದ ಮಗು ಮೇಲೆ ದಾಳಿ ನಡೆದಿತ್ತು. ಮಗಳ ರಕ್ಷಣೆಗೆ ಮುಂದಾದ ತಂದೆಗೂ ನಾಯಿ ಕಚ್ಚಿತ್ತು. ದಾಳಿಯಲ್ಲಿ ಮಗುವಿನ ಕತ್ತು ಮತ್ತು ಮುಖದ ಭಾಗದಲ್ಲಿ ಗಾಯಗಳಾಗಿದ್ದು, ಹೊಲಿಗೆಗಳು ಬಿದ್ದಿದ್ದವು. ಆದರೆ ಈ ಸಮಸ್ಯೆಗಳಿಗೆ ಮುಕ್ತಿ ಮಾತ್ರ ಸಿಗುತ್ತಿಲ್ಲ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು