• ಹೋಂ
 • »
 • ನ್ಯೂಸ್
 • »
 • Jobs
 • »
 • Ministry of Education: ಬಿಹಾರ, ಅರುಣಾಚಲ ಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿದೆಯಂತೆ ಕಡಿಮೆ ಸಾಕ್ಷರತಾ ಪ್ರಮಾಣ

Ministry of Education: ಬಿಹಾರ, ಅರುಣಾಚಲ ಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿದೆಯಂತೆ ಕಡಿಮೆ ಸಾಕ್ಷರತಾ ಪ್ರಮಾಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಡೀ ದೇಶದಲ್ಲೇ ಬಿಹಾರವು ಕಡಿಮೆ ಸಾಕ್ಷರತಾ ಪ್ರಮಾಣ ಹೊಂದಿದ್ದು, ನಂತರದ ಸ್ಥಾನದಲ್ಲಿ ಕ್ರಮವಾಗಿ ಅರುಣಾಚಲಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಿವೆ ಎಂಬುದಾಗಿ ಶಿಕ್ಷಣ ಸಚಿವಾಲಯ ತಿಳಿಸಿದೆ.

 • Share this:

  ಇಡೀ ದೇಶದಲ್ಲೇ ಬಿಹಾರವು (Bihar) ಕಡಿಮೆ ಸಾಕ್ಷರತಾ ಪ್ರಮಾಣ ಹೊಂದಿದ್ದು, ನಂತರದ ಸ್ಥಾನದಲ್ಲಿ ಕ್ರಮವಾಗಿ ಅರುಣಾಚಲಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಿವೆ ಎಂಬುದಾಗಿ ಶಿಕ್ಷಣ ಸಚಿವಾಲಯ (Ministry of Education) ತಿಳಿಸಿದೆ. ಗ್ರಾಮೀಣ ಭಾರತದಲ್ಲಿ ಸಾಕ್ಷರತೆಯ ಪ್ರಮಾಣವು ಶೇಕಡಾ 67.77 ರಷ್ಟಿದ್ದು, ನಗರ ಭಾರತದಲ್ಲಿ ಶೇಕಡಾ 84.11 ರಷ್ಟಿದೆ ಎಂದು ಶಿಕ್ಷಣ ಸಚಿವಾಲಯ ಹೇಳಿದೆ. ಲೋಕಸಭೆಯಲ್ಲಿ ಈ ಕುರಿತಾದ ಲಿಖಿತ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಶಿಕ್ಷಣ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


  "ಸಮಗ್ರ ಶಿಕ್ಷಾ ಯೋಜನೆಯು ಶಾಲೆಯನ್ನು ಪ್ರಿ ಸ್ಕೂಲ್‌, ಪ್ರೈಮರಿ ಸ್ಕೂಲ್‌, ಹೈಸ್ಕೂಲ್‌ ಹಾಗೂ ಪಿಯುಸಿ ಹಂತಗಳಲ್ಲಿ ನಿರಂತರವಾಗಿ ಜಾರಿಗೆ ತರಲಾಗಿದೆ. ಸಮಗ್ರ ಶಿಕ್ಷಾ ಯೋಜನೆಯನ್ನು ಜಾರಿಗೆ ತರಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಸಹಾಯ ಮಾಡುತ್ತದೆ.


  ಶಿಕ್ಷಣದಲ್ಲಿ ಲಿಂಗ ಮತ್ತು ಸಾಮಾಜಿಕ ವರ್ಗಗಳ ಅಂತರವನ್ನು ಕಡಿಮೆ ಮಾಡುತ್ತದೆ. ಇದು ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅನ್ನಪೂರ್ಣ ದೇವಿ ತಿಳಿಸಿದರು.


  ಇದನ್ನೂ ಓದಿ: ಬೆಂಗಳೂರಿನ ಶಿಕ್ಷಣ ಸಂಸ್ಥೆಗೆ ಪ್ರಥಮ ಸ್ಥಾನ; ದೇಶದ ಅತ್ಯುನ್ನತ ಕಾನೂನು ಕಾಲೇಜುಗಳ ಲಿಸ್ಟ್ ರಿಲೀಸ್


  ಹೆಚ್ಚು ಸಾಕ್ಷರತೆ ಹೊಂದಿದ ರಾಜ್ಯ ಕೇರಳ


  ಶಿಕ್ಷಣ ಸಚಿವಾಲಯವು ಹಂಚಿಕೊಂಡ ಮಾಹಿತಿಯ ಪ್ರಕಾರ, ಬಿಹಾರ (61.8%) ಕಡಿಮೆ ಸಾಕ್ಷರತೆಯನ್ನು ಹೊಂದಿದೆ. ಅರುಣಾಚಲ ಪ್ರದೇಶ (65.3%) ಮತ್ತು ರಾಜಸ್ಥಾನ (66.1%) ನಂತರದ ಸ್ಥಾನದಲ್ಲಿದೆ.


  ಇನ್ನು ಎಂದಿನಂತೆ ಕೇರಳ ರಾಜ್ಯವು ಅತಿ ಹೆಚ್ಚು ಸಾಕ್ಷರತೆಯನ್ನು (94%) ಹೊಂದಿದೆ. ನಂತರ ಲಕ್ಷದ್ವೀಪ (91.85%) ಮತ್ತು ಮಿಜೋರಾಂ (91.33%) ಎಂದು ಸಚಿವಾಲಯ ಅಂಕಿ ಅಂಶ ನೀಡಿದೆ.


  ವಯಸ್ಕ ಶಿಕ್ಷಣದ "ಸಾಕ್ಷರ್ ಭಾರತ್" ಯೋಜನೆ


  ಇನ್ನು, ವಯಸ್ಕ ಶಿಕ್ಷಣದ ಕೇಂದ್ರ ಪ್ರಾಯೋಜಿತ ಯೋಜನೆ “ಸಾಕ್ಷರ್ ಭಾರತ್” ಮೂಲಕ ದೇಶದಲ್ಲಿ ವಯಸ್ಕರ ಸಾಕ್ಷರತೆಯ ಪ್ರಮಾಣ ಸುಧಾರಿಸುತ್ತಿದೆ ಎಂದು ಸಚಿವಾಲಯವು ಹೇಳಿದೆ.


  ಸಾಂದರ್ಭಿಕ ಚಿತ್ರ


  ಎಡಪಂಥೀಯ ಉಗ್ರಗಾಮಿ ಪೀಡಿತ ಜಿಲ್ಲೆಗಳು ಸೇರಿದಂತೆ 2001 ರ ಜನಗಣತಿಯ ಪ್ರಕಾರ ವಯಸ್ಕ ಮಹಿಳಾ ಸಾಕ್ಷರತೆ ಪ್ರಮಾಣ 50 ಪ್ರತಿಶತ ಮತ್ತು ಅದಕ್ಕಿಂತ ಕಡಿಮೆ ಇರುವ 26 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆ ರಾಜ್ಯಗಳ 404 ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಸಾಕ್ಷರ್‌ ಭಾರತ್‌ ಜಾರಿಯಲ್ಲಿದೆ ಎಂಬುದಾಗಿ ಸಚಿವಾಲಯ ಮಾಹಿತಿ ನೀಡಿದೆ.


  “XII ಪಂಚವಾರ್ಷಿಕ ಯೋಜನೆಯ ಅಂತ್ಯದ ವೇಳೆಗೆ ದೇಶದ ಒಟ್ಟಾರೆ ಸಾಕ್ಷರತೆಯ ಪ್ರಮಾಣವನ್ನು 80 ಪ್ರತಿಶತಕ್ಕೆ ಏರಿಸುವುದು ಮತ್ತು ಲಿಂಗ ಅಂತರವನ್ನು 10 ಪ್ರತಿಶತಕ್ಕೆ ಇಳಿಸುವುದು ಗುರಿಯಾಗಿತ್ತು. ಈ ಯೋಜನೆಯನ್ನು ಮಾರ್ಚ್ 31, 2018 ರವರೆಗೆ ವಿಸ್ತರಿಸಲಾಯಿತು" ಎಂದು ಅನ್ನಪೂರ್ಣ ದೇವಿ ಹೇಳಿದ್ದಾರೆ.


  ಅಲ್ಲದೇ ಸಾಕ್ಷರ್‌ ಭಾರತ್ ಯೋಜನೆಯ ಅನುಷ್ಠಾನದ ಸಮಯದಲ್ಲಿ, ನ್ಯಾಷನಲ್‌ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS)ನಡೆಸಿದ ಸಾಕ್ಷರತಾ ಮೌಲ್ಯಮಾಪನ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಸುಮಾರು 7.64 ಕೋಟಿ ವಿದ್ಯಾರ್ಥಿಗಳು (ಆಗಸ್ಟ್, 2010 ರಿಂದ ಮಾರ್ಚ್, 2018 ರ ನಡುವೆ) ಸಾಕ್ಷರರು ಎಂದು ಪ್ರಮಾಣೀಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
  ಒಟ್ಟಾರೆ ಶಿಕ್ಷಣ ಎಂಬುದು ಅತ್ಯಗತ್ಯ. ಸಾಕ್ಷರರ ಪ್ರಮಾಣ ಹೆಚ್ಚಾದಂತೆ ಮಾತ್ರ ದೇಶ ಅಭಿವೃದ್ಧಿಯಾಗುತ್ತ ಸಾಗುತ್ತದೆ. ಶಿಕ್ಷಣವಂತರಾದರೆ ಪ್ರತಿಯೊಬ್ಬರ ಜೀವನವೂ ಏಳಿಗೆಯಾಗುತ್ತದೆ. ಈ ನಿಟ್ಟಿನಲ್ಲಿ ಜನರು ಹೆಚ್ಚು ಹೆಚ್ಚು ಶಿಕ್ಷಣವಂತರಾಗುವತ್ತ ಕಾಳಜಿ ವಹಿಸಬೇಕಿದೆ. ಈ ಕುರಿತು ಸರ್ಕಾರಗಳು ಎಷ್ಟು ಪ್ರಯತ್ನ ಪಡುತ್ತವೆಯೋ ಅದಕ್ಕಿಂತ ಹೆಚ್ಚು ನಾವು ಪ್ರಯತ್ನ ಪಡಬೇಕಿದೆ. ಪ್ರತಿ ಮನೆಯಲ್ಲೂ ಮಕ್ಕಳು ಓದುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂಬುದನ್ನು ಎಲ್ಲರೂ ಅರಿಯಬೇಕು.

  Published by:Prajwal B
  First published: