• Home
  • »
  • News
  • »
  • jobs
  • »
  • Course For Prisoners: ಖೈದಿಗಳಿಗೆ ಜೈಲೇ ಕಾಲೇಜು! ಆರಂಭವಾಗಲಿದೆ ಹೋಟೆಲ್ ಮ್ಯಾನೇಜ್ಮೆಂಟ್ ಕ್ಲಾಸ್

Course For Prisoners: ಖೈದಿಗಳಿಗೆ ಜೈಲೇ ಕಾಲೇಜು! ಆರಂಭವಾಗಲಿದೆ ಹೋಟೆಲ್ ಮ್ಯಾನೇಜ್ಮೆಂಟ್ ಕ್ಲಾಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದೀಗ ಕಾರಾಗೃಹದಲ್ಲಿ ಖೈದಿಗಳಿಗೆ ತರಬೇತಿ ನೀಡುವ ಹೊಸ ಯೋಜನೆಯಲ್ಲಿ ಎಲ್ಲಾ ಖೈದಿಗಳಿಗೂ ಸಹ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ ಕಲಿಸಲಾಗುತ್ತದೆ. ಕರ್ನಾಟಕ ಕಾರಾಗೃಹ ಇಲಾಖೆಯು ತನ್ನ ಸುಧಾರಣಾ ಮತ್ತು ಪುನರ್ವಸತಿ ಉಪಕ್ರಮಗಳ ಭಾಗವಾಗಿ ರಾಜ್ಯದಲ್ಲಿ ಜೈಲಿನ ಆವರಣದೊಳಗೆ ಕೈದಿಗಳಿಗಾಗಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ಪ್ರಾರಂಭಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Karnataka, India
  • Share this:

ಯಾವುದೋ ಅಪರಾಧ ಮಾಡಿ ಜೈಲಿಗೆ ಸೇರಿ ಶಿಕ್ಷೆ ಅನುಭವಿಸುತ್ತಿರುವ ಎಷ್ಟೋ ಜನ ಖೈದಿಗಳಿರ್ತಾರೆ (Prisoners). ಅವರೆಲ್ಲರಿಗೂ ಸಹ ಪ್ರತಿನಿತ್ಯ ಅವರದೇ ಆದ ಕೆಲವು ಕೆಲಸಗಳಿರುತ್ತವೆ. ಅದಕ್ಕೆ ತಕ್ಕಂತೆ ಅವರಿಗೆ ವೇತನವನ್ನೂ ಸಹ ನೀಡಲಾಗುತ್ತದೆ. ಆದರೆ ಅವರು ಬಿಡುಗಡೆಯಾಗಿ ಮುಂದೆ ತಮ್ಮ ಬದುಕನ್ನು (Life) ಸಾಗಿಸಬೇಕು ಎಂದಾಗ ಸ್ವಲ್ಪ ಕಷ್ಟ ಅನುಭವಿಸುತ್ತಾರೆ. ಹೀಗಿರುವಾಗ ಅವರ ಜೀವನವನ್ನು ಸರಳವಾಗಿ ರೂಪಿಸಿಕೊಳ್ಳಲು ಜೈಲಿನಲ್ಲೇ (Jail) ಕೆಲವು ತರಬೇತಿ (Training) ನೀಡಲಾಗುತ್ತದೆ. ಇನ್ನು ಮುಂದೆ ಕಾರಾಗೃಹದಲ್ಲಿ ಏನೆಲ್ಲಾ ಕಲಿಸುತ್ತಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ. 


ಕೈದಿಗಳಿಗೆ 'ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌'
ಹೌದು ಇದೀಗ ಕಾರಾಗೃಹದಲ್ಲಿ ಖೈದಿಗಳಿಗೆ ತರಬೇತಿ ನೀಡುವ ಹೊಸ ಯೋಜನೆಯಲ್ಲಿ ಎಲ್ಲಾ ಖೈದಿಗಳಿಗೂ ಸಹ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ ಕಲಿಸಲಾಗುತ್ತದೆ. ಕರ್ನಾಟಕ ಕಾರಾಗೃಹ ಇಲಾಖೆಯು ತನ್ನ ಸುಧಾರಣಾ ಮತ್ತು ಪುನರ್ವಸತಿ ಉಪಕ್ರಮಗಳ ಭಾಗವಾಗಿ ರಾಜ್ಯದಲ್ಲಿ ಜೈಲಿನ ಆವರಣದೊಳಗೆ ಕೈದಿಗಳಿಗಾಗಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ಪ್ರಾರಂಭಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.


ಕರ್ನಾಟಕ ಕಾರಾಗೃಹ ಇಲಾಖೆಯು ತನ್ನ ಸುಧಾರಣಾ ಮತ್ತು ಪುನರ್ವಸತಿ ಉಪಕ್ರಮಗಳ ಭಾಗವಾಗಿ ರಾಜ್ಯದಲ್ಲಿ ಜೈಲಿನ ಆವರಣದೊಳಗೆ ಕೈದಿಗಳಿಗಾಗಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಮೂಲಕ ಖೈದಿಗಳ ಮುಂದಿನ ಜೀವನ ಸುಧಾರಣೆಗೆ ಸಹಕಾರ ನೀಡುತ್ತಿದೆ.


ಇದನ್ನೂ ಓದಿ: Post Office Jobs: ಅಂಚೆ ಇಲಾಖೆಯಲ್ಲಿ 98,083 ಹುದ್ದೆಗಳ ನೇಮಕಾತಿ-10th, PU ಪಾಸಾದವರು ಅಪ್ಲೈ ಮಾಡಿ


ಈ ಕುರಿತು ಯೋಜನೆ ತರುವ ಮುನ್ನ ಹಲವು ಹೋಟೆಲ್ ನಿರ್ವಹಣಾ ಸಂಸ್ಥೆಗಳು ಇಲಾಖೆಯನ್ನು ಸಂಪರ್ಕಿಸಿತ್ತು. ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಕೆಲವು ಹೋಟೆಲ್ ನಿರ್ವಹಣಾ ಸಂಸ್ಥೆಗಳು ಈ ಸಂಬಂಧ ನಮ್ಮನ್ನು ಸಂಪರ್ಕಿಸಿವೆ. ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.


ಅಲ್ಪಾವಧಿಯ ಕೋರ್ಸ್‌ಗಳನ್ನು ಜೈಲಿನ ಆವರಣದಲ್ಲಿ ನಡೆಸಲಾಗುತ್ತದೆ. ಕೈದಿಗಳು ಜೈಲಿನಿಂದ ಹೊರಬಂದ ನಂತರ ಉತ್ತಮ ಜೀವನವನ್ನು ರೂಢಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಸ್ವಯಂ ಉದ್ಯೋಗ ಮಾಡಬಹುದು ಅಥವಾ ಎಲ್ಲಾದರೂ ಕೆಲಸಕ್ಕೆ ಸೇರಿಕೊಳ್ಳಬಹುದು ಈ ಮೂಲಕ ಅವರೂ ಸಹ ತಮ್ಮ ಮುಂದಿನ ಬದುಕಿಗೆ ಹಣ ಸಂಪಾಧನೆ ಮಾಡಿಕೊಳ್ಳಬಹುದು.


ಕೋರ್ಸ್ ಬಳಿಕ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದ್ದಾರೆ
ಈ ಕೋರ್ಸ್​ ಮುಗಿಸಿದ ನಂತರ ಎಲ್ಲರಿಗೂ ಸಹ ಅರ್ಹತಾ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಇದು ಅವರ ಮುಂದಿನ ಜೀವನದಲ್ಲಿ ಸಹಕಾರಿಯಾಗುತ್ತದೆ. ಈ ಪ್ರಮಾಣ ಪತ್ರದ ಮೂಲಕ ಅವರು ಸ್ವ ಉದ್ಯೋಗ ಆರಂಭಿಸಬಹುದು. ಆ ಕಾರಣದಿಂದ  ಈ ರೀತಿಯ ಕೋರ್ಸ್​ ಮಾಡಿಸಲಾಗುತ್ತಿದೆ.


ಸ್ವಾಲಂಭಿ ಜೀವನಕ್ಕೆ ಬುನಾದಿ


ಪ್ರಸ್ತುತ, ನಾವು ವಯಸ್ಕರ ಸಾಕ್ಷರತೆಯಿಂದ ದೂರ ಶಿಕ್ಷಣದವರೆಗೆ ಅನೇಕ ಶಿಕ್ಷಣ-ಸಂಬಂಧಿತ ಕೋರ್ಸ್‌ಗಳನ್ನು ನೀಡುತ್ತಿದ್ದೇವೆ. ಅನಕ್ಷರಸ್ಥರಾಗಿ ಬರುವ ಖೈದಿಗಳು ಸಾಕ್ಷರರಾಗಿ ಹೊರಬರಲು ಸಹಾಯ ಮಾಡಲಾಗುತ್ತಿದೆ, ಇದು ಅವರಿಗೆ ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ" ಎಂದಿದ್ದಾರೆ.


ಆಸಕ್ತರಿಗೆ ಮಾತ್ರ ಈ ಕೋರ್ಸ್


ಕೋರ್ಸ್‌ಗಳು ದಕ್ಷಿಣ ಭಾರತದಿಂದ ಉತ್ತರ ಭಾರತದವರೆಗೆ ವಿವಿಧ ಭಕ್ಷ್ಯಗಳ ಸಿದ್ಧ ಪಡಿಸುವುದು ಮತ್ತು ಅತಿಥಿಗಳಿಗೆ ಹೇಗೆ ಬಡಿಬಬೇಕು ಎನ್ನುವ ತರಬೇತಿಯನ್ನು ಇದರಲ್ಲಿ ನೀಡಲಾಗುತ್ತದೆ ಇದರಿಂದ ಜೈಲಿನಿಂದ ಹೊರಹೋದ ಬಳಿಕ ಅವರು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು ಅಥವಾ ದೊಡ್ಡ ಹೋಟೆಲ್‌ಗಳಲ್ಲಿ ಕೆಲಸ ಮಾಡಲು ಸೇರಿಕೊಳ್ಳಬಹುದು. ಯಾರಿಗೆ ಕಲಿಯಲು ಆಸಕ್ತಿ ಇರುತ್ತದೆಯೋ ಅವರಿಗೆ ಮಾತ್ರ  ಈ ಕೋರ್ಸ್‌ಗಳ ಲಭ್ಯವಿರಲಿದೆ ಎಂದು ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

First published: