ಸರ್ಕಾರ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಸ್ಥಾಪಿಸಿದ ಸ್ಕಾಲರ್ಶಿಪ್ (Scholarship) SSP ಯಾಗಿದ್ದು. ಪ್ರತಿ ವರ್ಷ ಹಲವಾರು ವಿದ್ಯಾರ್ಥಿಗಳು ಇದರಿಂದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. SSP ವಿದ್ಯಾರ್ಥಿವೇತನ 2023ರಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ (Application) ಆಹ್ವಾನಿಸಿದ್ದು ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಯೋಜನೆ ಮೂಲತಃ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪ್ರಾರಂಭಿಸಲ್ಪಟ್ಟಿದೆ. ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ.
ವಿದ್ಯಾರ್ಥಿ ವೇತನ | SSP ವಿದ್ಯಾರ್ಥಿ ವೇತನ |
ಸ್ಥಾಪನೆ | ಕರ್ನಾಟಕ ಸರ್ಕಾರ |
ಫಲಾನುಭವಿಗಳು | ಕರ್ನಾಟಕದ ವಿದ್ಯಾರ್ಥಿಗಳು |
ಉದ್ದೇಶ | ಆರ್ಥಿಕ ನೆರವು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ವರ್ಷ | 2023 |
ಅಪ್ಲಿಕೇಶನ್ ವಿಧಾನ | ಆನ್ಲೈನ್/ ಆಪ್ಲೈನ್ |
ಇದನ್ನೂ ಓದಿ: SBI PO Admit Card 2022: ಎಸ್ಬಿಐ ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಕೆಲವೇ ದಿನ ಬಾಕಿ
ಅಗತ್ಯವಿರುವ ದಾಖಲೆಗಳ ಪಟ್ಟಿ
1. ಅರ್ಜಿದಾರರ ಮತ್ತು ಅವರ ಪೋಷಕರ ಆಧಾರ್ ಕಾರ್ಡ್
2. ಕಾಲೇಜು ಶುಲ್ಕ ರಶೀದಿ
3. ಖಾಸಗಿ ಅಥವಾ ಸರ್ಕಾರಿ ಹಾಸ್ಟೆಲ್ ಐಡಿ
4. ಮೊಬೈಲ್ ಸಂಖ್ಯೆ
5. ಕಾಲೇಜು ಅಥವಾ ಸಂಸ್ಥೆ ನೋಂದಣಿ ಸಂಖ್ಯೆ
6. ಪಡಿತರ ಚೀಟಿ ಸಂಖ್ಯೆ
7. ಯುಡಿಐಡಿ
8. ಜಾತಿ/ಇಡಬ್ಲ್ಯೂಎಸ್ ಪ್ರಮಾಣಪತ್ರ
9. ಆದಾಯ ಪ್ರಮಾಣಪತ್ರ
10. ಅಂಗವಿಕಲರ ಕಾರ್ಡ್ ಸಂಖ್ಯೆ ಇದನ್ನು ಭಾರತೀಯ ಸರ್ಕಾರವು ಅನುಮೋದಿಸಬೇಕು.
ಅರ್ಜಿದಾರರು ಶಾಲಾ ಶಿಕ್ಷಣಕ್ಕೆ ದಾಖಲಾಗಬೇಕು.
1. SC, ST, OBC, ಮತ್ತು ಅಲ್ಪಸಂಖ್ಯಾತ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಮಾತ್ರ 2023ರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
2. ಎಸ್ಎಸ್, ಪ್ರಿ-ಮೆಟ್ರಿಕ್ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
3. SSP ಪ್ರಿ-ಮೆಟ್ರಿಕ್ಯುಲೇಷನ್ ವಿದ್ಯಾರ್ಥಿವೇತನ 2023 ರ ಕೊನೆಯ ದಿನಾಂಕವನ್ನು ಪ್ರಕಟಿಸಲಾಗುತ್ತದೆ.
4. ಎಸ್ಎಸ್ಪಿ ಪ್ರಿ-ಮೆಟ್ರಿಕ್ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು, ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
5. ನೀವು ಅಧಿಕೃತ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕು.
6. ಅರ್ಜಿ ಸಲ್ಲಿಸಿದ ನಂತರ ಪರಿಶೀಲನೆ ನಡೆಯುತ್ತದೆ
ಇಲಾಖೆ ಅರ್ಹತೆಯ ಮಾನದಂಡ
1. ತಾಂತ್ರಿಕ ಶಿಕ್ಷಣ ಇಲಾಖೆ ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
2. ಅರ್ಜಿದಾರರ ವಾರ್ಷಿಕ ಕುಟುಂಬದ ಆದಾಯವು 2.5 ಲಕ್ಷದಿಂದ 10 ಲಕ್ಷದ ನಡುವೆ ಇರಬೇಕು.
3. ರಕ್ಷಣಾ ವಿದ್ಯಾರ್ಥಿವೇತನಕ್ಕೆ ಅಪ್ಲೈ ಮಾಡುವವರು: ST/SC ಅರ್ಜಿದಾರರ ಪೋಷಕರು ಸೇನೆ, ನೌಕಾಪಡೆ ಅಥವಾ ವಾಯುಪಡೆಯಲ್ಲಿರಬೇಕು ಅಥವಾ JCO/NCO ಆಗಿ ಕೆಲಸ ಮಾಡಬೇಕು.
ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಅಗತ್ಯಗಳನ್ನು ಪೂರೈಸಲು SSP ಸ್ಕಾಲರ್ಶಿಪ್ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮದೊಂದಿಗೆ ಹಲವು ಪ್ರಯೋಜನಗಳೂ ಸಹ ಇದೆ. ಹಣ ಖಾತೆಗೆ ನೇರ ವರ್ಗಾವಣೆಯಾಗುತ್ತದೆ. ಈ ವಿದ್ಯಾರ್ಥಿ ವೇತನದ ಇನ್ನಿರ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆದಷ್ಟು ಬೇಗ ಅರ್ಜಿ ಸಲ್ಲಿಸಿ.
ಮಕ್ಕಳ ವಿದ್ಯಾಭ್ಯಾಕ್ಕೆ ಪ್ರೋತ್ಸಾಹ
ಸರ್ಕಾರ ನೀಡುತ್ತಿರುವ ಈ ಯೋಜನೆಯ ಸದುಪಯೋ ಪಡಿಸಿಕೊಳ್ಳಿ ನೀವೂ ಫಲಾಭವಿಗಳಾಗಿ. ಇದರಿಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯವಾಗುತ್ತದೆ. ಅಷ್ಟೇ ಅಲ್ಲ ಮಕ್ಕಳ ವಿದ್ಯಾಭ್ಯಾಕ್ಕೆ ಪ್ರೋತ್ಸಾಹ ದೊರೆಯುತ್ತದೆ. ಅರ್ಜಿ ಸಲ್ಲಿಕೆ ದಿನಾಂಕವನ್ನು ಇನ್ನೂ ಬಡುಗಡೆ ಮಾಡಿಲ್ಲ. ಆದರ ಇಲ್ಲಿ ನೀಡಿರುವ ಲಿಂಕ್ ಪರಿಶೀಲಿಸಿದರೆ ಅಧಿಕೃತ ಮಾಹಿತಿ ದೊರೆಯುತ್ತದೆ. ಮೇ 31 ಹಿಂದಿನ ವರ್ಷದ ಅರ್ಜಿ ಸಲ್ಲಿಕೆಯ ಕೊನೆ ದಿನಾಂಕವಾಗಿತ್ತು ಈ ವರ್ಷವೂ ನಾವು ದಿನಾಂಕವನ್ನು ಇದರ ಆಧಾರದ ಮೇಲೆ ಅಂದಾಜಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ